ಹಿರಿಯೂರು ತಾಲ್ಲೂಕು ಕೃಷಿಕ ಸಮಾಜ ಚುನಾವಣೆ ಫಲಿತಾಂಶ

News Desk

ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರು ತಾಲ್ಲೂಕು ಕೃಷಿಕ ಸಮಾಜಕ್ಕೆ ೨೦೨೪-೨೫ ರಿಂದ ೨೦೨೯-೩೦ರ ವರಗೆ ಕಾರ್ಯಕಾರಿ ಸಮಿತಿಯ ಚುನಾವಣೆ ಘೋಷಣೆಯಾಗಿದ್ದು
, ತಾಲ್ಲೂಕು ಕೃಷಿಕ ಸಮಾಜದ ಕಾರ್ಯಕಾರಿ ಸಮಿತಿಗೆ ೧೫ ಜನ ಸದಸ್ಯರನ್ನು ಚುನಾವಣಾ ಮೂಲಕ ಆಯ್ಕೆ ಮಾಡಬೇಕಾಗಿದೆ.

- Advertisement - 

ತಾಲ್ಲೂಕು ಕೃಷಿಕ ಸಮಾಜದ ಅಜೀವ ಸದಸ್ಯರಿಂದ ೫೩ ಉಮೇದುವಾರಿಕೆ ಪತ್ರಗಳನ್ನು ಸ್ವೀಕರಿಸಲಾಗಿತ್ತು. ಡಿ.೦೭ರಂದು ನಾಮಪತ್ರ ಪರಿಶೀಲಿಸಿ ೧ ನಾಮಪತ್ರವು ತಿರಸ್ಕೃತಗೊಂಡು ೫೨ ಸದಸ್ಯರ ನಾಮಪತ್ರ್ರಗಳು ಅಂಗೀಕರವಾಗಿರುತ್ತದೆ. ಡಿ.೦೯ ೫೨ ಸದಸ್ಯರಲ್ಲಿ ೩೭ ಸದಸ್ಯರು ತಮ್ಮ ನಾಮಪತ್ರಗಳನ್ನು ವಾಪಸ್ಸು ಪಡೆದಿರುತ್ತಾರೆ.

- Advertisement - 

ಅಂತಿಮವಾಗಿ ೧೫ ಜನ ಸದಸ್ಯರು ಚುನಾವಣಾ ಕಣದಲ್ಲಿ ಉಳಿದಿರುತ್ತಾರೆ. ಡಿ.೧೫ರಂದು ಚುನಾವಣೆ ನಡೆಯಬೇಕಾಗಿದ್ದು, ಅಂತಿಮವಾಗಿ ೧೫ ಜನ ಚುನಾವಣಾ ಕಣದಲ್ಲಿ ಉಳಿದಿದ್ದು ಆ ಸದಸ್ಯರುಗಳನ್ನು ೨೦೨೪-೨೫ ರಿಂದ ೨೦೨೯-೩೦ರ ವರಗಿನ ತಾಲ್ಲೂಕು ಕೃಷಿಕ ಸಮಾಜದ ನೂತನ ಕಾರ್ಯಕಾರಿ ಸಮಿತಿಯ ಸದಸ್ಯರೆಂದು ಚುನಾವಣಾಧಿಕಾರಿ ಎಂ.ವಿ ಮಂಜುನಾಥ್ ಘೋಷಣೆ ಮಾಡಿರುತ್ತಾರೆ.

ಕೃಷಿಕ ಸಮಾಜದ ನೂತನ ಕಾರ್ಯಕಾರಿ ಸಮಿತಿಯ ಸದಸ್ಯರಾದ ಜೆ ಮಧುಸೂಧನ್, ಆರ್. ವಿಶ್ವನಾಥ, ಎನ್. ಕಾಮರಾಜ್, ಮಹಮದ್ ಫಕೃದ್ದೀನ್,

- Advertisement - 

ಎಂ.ಎ ಶ್ರೀನಿವಾಸ, ಸಿ.ಹೆಚ್ ಕಾಂತರಾಜ್, ಪಿ.ಎಸ್ ಪಾತಯ್ಯ, ಎಂ.ಡಿ ರವಿ, ನಾಗಮ್ಮ,  ಹೆಚ್.ಆರ್ ತಿಮ್ಮಯ್ಯ, ಹೆಚ್. ತಿಪ್ಪೇಸ್ವಾಮಿ, ಕೆ. ಜಗದೀಶ್ ಕಂದಿಕೆರೆ, ಎಂ. ಜಯರಾಮಪ,  ಬಿ. ಅನ್ನಪೂರ್ಣ, ಪಿ.ಎಂ ತಿಮ್ಮಯ್ಯ ಆಯ್ಕೆಯಾಗಿದ್ದಾರೆ.

 

Share This Article
error: Content is protected !!
";