ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ತಾಲ್ಲೂಕಿನ ದೇವಮರಿಕುಂಟೆ ಗ್ರಾಮಪಂಚಾಯಿತಿ ವ್ಯಾಪ್ತಿಯ ಬೊಂಬೇರಹಳ್ಳಿ ಗ್ರಾಮದಲ್ಲಿ ಭಾನುವಾರ ಬೆಳಗಿನ ಜಾವ ೪.೩೦ಕ್ಕೆ ವಿದ್ಯುತ್ ಶಾರ್ಟ್‌ಸಕ್ಯೂರ್ಟ್‌ನಿಂದ ನಾಗಮ್ಮ ಎಂಬುವವರ ಮನೆಯ ಚಪ್ಪರಕ್ಕೆ ಬೆಂಕಿಹೊತ್ತಿಕೊಂಡು ಕ್ಷಣಮಾತ್ರದಲ್ಲಿ ಇಡೀ ಮನೆ ಆವರಿಸಿ ಮನೆಯಲ್ಲಿದ್ದ ಎಲ್ಲಾ ಆಹಾರ ಪದಾರ್ಥ, ಬಟ್ಟೆ, ದಾಖಲಾತಿ ಹಾಗೂ ನಗದು ಹಣ ಸುಟ್ಟುಹೋಗಿ ಇಡೀ ಕುಟುಂಬ ಕಂಗಲಾಗಿದೆ.
ಘಟನೆ ನಡೆದ ಸ್ಥಳಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಬೇಕಿದೆ. ಸುಮಾರು ಒಂದು ಲಕ್ಷಕ್ಕೂ ಹೆಚ್ಚು ನಷ್ಟ ಸಂಭವಿಸಿದೆ. ಸ್ಥಳಕ್ಕೆ ಭೇಟಿ ನೀಡಿದ ಅಗ್ನಿಶಾಮಕ ಪಡೆ ಬೆಂಕಿನಿಯಂತ್ರಿಸುವಲ್ಲಿ ಯಶಸ್ವಿಯಾಗಿದೆ. ಅಗ್ನಿಶಾಮಕ ಅಧಿಕಾರಿ ನಿಜಗುಣ, ಸಿಬ್ಬಂದಿ ಪ್ರವೀಣ್, ಖಂಡೋಜಿ, ಬಸವನಗೌಡ, ಚೇತನ್ ಬೆಂಕಿನಂದಿಸುವಲ್ಲಿ ಯಶಸ್ವಿಯಾಗಿದ್ಧಾರೆ.