ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಅಕ್ರಮ ಚಿನ್ನ ಸಾಗಾಣಿಕೆಯಲ್ಲಿ ತೊಡಗಿಸಿಕೊಂಡಿದ್ದ ರನ್ಯಾ ರಾವ್‌ಜೊತೆ ರಾಜ್ಯ ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರು ಅಕ್ರಮ ಹಣದ ವಹಿವಾಟು ನಡೆಸಿರುವುದನ್ನು ರಾಜ್ಯ ಸರ್ಕಾರ ಡಿಸಿಎಂ ಡಿ.ಕೆ ಶಿವಕುಮಾರ್ ಮೂಲಕ ಸ್ಪಷ್ಟಪಡಿಸಿದೆ ಎಂದು ಬಿಜೆಪಿ ತಿಳಿಸಿದೆ.
ರನ್ಯಾಳ ಚಿನ್ನ ಕಳ್ಳಸಾಗಾಣಿಕೆಯು ಸರ್ಕಾರದ ಸುಪರ್ದಿಯಲ್ಲೇ ನಡೆಯುತ್ತಿತ್ತು ಎನ್ನುವುದು ಈ ಮೂಲಕ ತಿಳಿದು ಬರುತ್ತಿದೆ. ಚಿನ್ನ ಸಾಗಾಣಿಕೆಯ ಮೂಲಕ ಸಂಗ್ರಹಿಸಲಾಗುತ್ತಿದ್ದ ಅಕ್ರಮ ಹಣದಲ್ಲಿ ಗೃಹ ಸಚಿವರ ಮೂಲಕ ಭಾರತೀಯ ಕಾಂಗ್ರೆಸ್ ವರಿಷ್ಠರಿಗೂ ತಲುಪಿಸಲಾಗುತ್ತಿತ್ತೇ? ಎಂದು ಬಿಜೆಪಿ ತೀಕ್ಷ್ಣವಾಗಿ ಪ್ರಶ್ನಿಸಿದೆ.
ಗೃಹಸಚಿವರು ಅಕ್ರಮ ಚಿನ್ನ ಸಾಗಾಣಿಕೆಯ ಆರೋಪಿಗೆ ಹಣಕಾಸಿನ ನೆರವು ಮತ್ತು ರಕ್ಷಣೆ ಒದಗಿಸುವ ಅಭಯ ನೀಡಿರುವುದು ಈಗ ಜಗಜ್ಜಾಹೀರಾಗಿದೆ, ಇಡೀ ಪ್ರಕರಣ ಕರ್ನಾಟಕ ಕಾಂಗ್ರೆಸ್ ಸರ್ಕಾರದ ಹಂತದಲ್ಲೇ ನಿರ್ವಹಣೆಯಾಗುತ್ತಿತ್ತು. 40%, 60%, 80% ಕಮಿಷನ್‌ಭ್ರಷ್ಟಾಚಾರ ನಡೆಸಿದ್ದ ಕಾಂಗ್ರೆಸ್‌ಸರ್ಕಾರ ಈಗ ಅಕ್ರಮ ಚಟುವಟಿಕೆಗಳ ಮೂಲಕವೂ ಹಣ ಕೊಳ್ಳೆ ಹೊಡೆಯುತ್ತಿರುವುದು ಖಂಡನೀಯ ಎಂದು ಬಿಜೆಪಿ ತರಾಟೆ ತೆಗೆದುಕೊಂಡಿದೆ.