ಪತ್ರಿಕಾ ಭವನ ನಾಮಫಲಕ ಅಳವಡಿಸಲು ಸೂಚನೆ

News Desk

ಚಂದ್ರವಳ್ಳಿ ನ್ಯೂಸ್, ಹರಿಹರ :
ನಗರಸಭೆ ವ್ಯಾಪ್ತಿಯಲ್ಲಿ ಬರುವ ಹರಿಹರ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘ ಎಂದಿರುವ ಕಟ್ಟಡದ ನಾಮಫಲಕವನ್ನು
ಪತ್ರಿಕಾ ಭವನಎಂದು ಬದಲಾಯಿಸುವಂತೆ ಹರಿಹರ ನಗರಸಭೆ ಪೌರಾಯುಕ್ತರು ಕಾರ್ಯನಿರತ ಪತ್ರಕರ್ತರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷರಿಗೆ ಜೂ.23 ರಂದು ಸೂಚನೆ ನೀಡಿದ್ದಾರೆ.

- Advertisement - 

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಸ್ಥಾಪಕ ಅಧ್ಯಕ್ಷ ಬಂಗ್ಲೆ ಮಲ್ಲಿಕಾರ್ಜುನ ಅವರು ನಗರಸಭೆಗೆ ಮನವಿ ಸಲ್ಲಿಸಿ, ನಗರಸಭೆಯಿಂದ ಮಂಜೂರಾದ ಪತ್ರಿಕಾ ಭವನ ಹೆಸರನ್ನು ಪ್ರದರ್ಶಿಸದೆ, ಕಟ್ಟಡದ ಹೊರ ಮತ್ತು ಒಳಭಾಗದಲ್ಲಿ ಸುದ್ದಿಗೋಷ್ಠಿ ನಡೆಯುವ ಸ್ಥಳದಲ್ಲಿಯೂ ಕಾರ್ಯನಿರತ ಪತ್ರಕರ್ತರ ಸಂಘ ಎಂದು ಬರೆದುಕೊಂಡಿದ್ದಾರೆ. ಇದರಿಂದ ಬೇರೆ ಬೇರೆ ಡಿಜಿಟಲ್ ಮಾಧ್ಯಮ-ಪತ್ರಿಕಾದಾರರಿಗೆ ಸುದ್ದಿಗೋಷ್ಠಿ ನಡೆಸಲು ಅವಕಾಶ ನೀಡುತ್ತಿಲ್ಲ.

- Advertisement - 

ಈ ಹಿಂದೆ ನಡವಳಿಯಲ್ಲಿ ತೀರ್ಮಾನಿಸಿರುವಂತೆ ಪತ್ರಿಕಾ ಭವನ ಎಂದು ನಾಮಫಲಕ ಅಳವಡಿಸಬೇಕು, ಇದುವರೆವಿಗೂ ಸಂಘದಲ್ಲಿ ನಡೆದಿರುವ ಲೆಕ್ಕಪತ್ರಗಳ ವರದಿ ನೀಡಬೇಕೆಂದು ಕೋರಿದ್ದಾರೆ. ಅವರ ಮನವಿಯಂತೆ

ಎಲ್ಲಾ ಡಿಜಿಟಲ್ ಮಾಧ್ಯಮ ಪತ್ರಿಕಾದಾರರಿಗೆ ಸುದ್ದಿಗೋಷ್ಠಿ ನಡೆಸಲು ಅನವು ಮಾಡಿಕೊಡುವಂತೆ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷೆ ಡಿ.ಎಂ.ಶಾಂಭವಿ ಅವರಿಗೆ ಸೂಚಿಸಿದ್ದಾರೆ.

- Advertisement - 

 

 

Share This Article
error: Content is protected !!
";