ವಿವಿಧ ಬೆಳೆಗಳಿಗೆ ಪ್ರೋತ್ಸಾಹಧನಕ್ಕಾಗಿ ಅರ್ಜಿ ಆಹ್ವಾನ

News Desk

ಚಂದ್ರವಳ್ಳಿ ನ್ಯೂಸ್, ಬೆಂ.ಗ್ರಾಂ.ಜಿಲ್ಲೆ:
2025-26 ನೇ ಸಾಲಿನ ರಾಷ್ಟ್ರೀಯ ತೋಟಗಾರಿಕೆ ಮಿಷನ್, ಸಮಗ್ರ ತೋಟಗಾರಿಕೆ ಅಧಿವೃದ್ದಿ ಮತ್ತು ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ನೆಲಮಂಗಲ ತಾಲ್ಲೂಕಿನಲ್ಲಿ ವಿವಿಧ ಬೆಳೆಗಳನ್ನು ಬೆಳೆಯಲು ತೋಟಗಾರಿಕಾ ಇಲಾಖೆ ವತಿಯಿಂದ ರೈತರಿಗೆ ಪ್ರೋತ್ಸಾಹಧನ ನೀಡಲಾಗುತ್ತಿದೆ.

- Advertisement - 

ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆ(NHM) ಹಾಗೂ ಸಮಗ್ರ ತೋಟಗಾರಿಕೆ ಅಧಿವೃದ್ದಿ ಯೋಜನೆಯಡಿ(CHD) ರೈತರು ಬಾಳೆ, ಮಾವು, ಪಪ್ಪಾಯ ಹೈಬ್ರಿಡ್ ತರಕಾರಿ ಮತ್ತು ಹೂವಿನ ಬೆಳೆ ಬೆಳೆಯಬಹುದು. ಹಾಗೇ ರೋಗ ಮತ್ತು ಕೀಟ ನಿಯಂತ್ರಣ, ಪ್ಲಾಸ್ಟಿಕ್ ಹೊದಿಕೆ, ಪ್ರಾಥಮಿಕ ಸಂಸ್ಕರಣ ಘಟಕಗಳು, ಸಂರಕ್ಷಿತ ಬೇಸಾಯ, ವೈಯಕ್ತಿಕ ಕೃಷಿಹೊಂಡ, ಫಾರಂ ಗೇಟ್ ಪ್ಯಾಕ್ ಹೌಸ್ ನಿರ್ಮಾಣ, ಜೇನುಸಾಕಾಣಿಕೆ, ಮೊಬೈಲ್ ವೆಂಡಿಂಗ್ ಕಾರ್ಟ್ ಹಾಗೂ ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯಡಿ ಹೊಸ ಪ್ರದೇಶ ಕಾರ್ಯಕ್ರಮದಡಿ ದಾಳಿಂಬೆ, ಡ್ರ್ಯಾಗನ್ ಪ್ರೂಟ್ ಗಳಿಗೆ ಫಲಾನುಭವಿಗಳು  ತೋಟಗಾರಿಕೆ ಇಲಾಖೆಯಿಂದ  ಸಹಾಯಧನವನ್ನು ಪಡೆಯಬಹುದಾಗಿದೆ.

- Advertisement - 

ಅರ್ಜಿಯನ್ನು ಮೇ 31ರ ಒಳಗೆ ಅಗತ್ಯ ದಾಖಲೆಗಳೊಂದಿಗೆ ತಾಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಛೇರಿಗೆ ಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗಾಗಿ ಸಹಾಯಕ ತೋಟಗಾರಿಕೆ ಅಧಿಕಾರಿ, ಕಸಬಾ ಹೋಬಳಿ, ದೂರವಾಣಿ ಸಂಖ್ಯೆ: 7337866626. ಸಹಾಯಕ ತೋಟಗಾರಿಕೆ ಅಧಿಕಾರಿ, ಸೋಂಪುರ ಹೋಬಳಿ, ದೂರವಾಣಿ ಸಂಖ್ಯೆ: 8884829971. ಸಹಾಯಕ ತೋಟಗಾರಿಕೆ ಅಧಿಕಾರಿ,

- Advertisement - 

ತ್ಯಾಮಗೊಂಡ್ಲು ಹೋಬಳಿ, ದೂರವಾಣಿ ಸಂಖ್ಯೆ: 8197655732.  ಸಹಾಯಕ ತೋಟಗಾರಿಕೆ ನಿರ್ದೇಶಕರು ನೆಲಮಂಗಲ, ದೂರವಾಣಿ ಸಂಖ್ಯೆ: 9902581832. ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ನೆಲಮಂಗಲ, ದೂರವಾಣಿ ಸಂಖ್ಯೆ: 9880461607 ಸಂಪರ್ಕಿಸುವುದು ಎಂದು ನೆಲಮಂಗಲ ತಾಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

Share This Article
error: Content is protected !!
";