ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಚಿತ್ರದುರ್ಗ ನಗರದ ಬೃಹನಠದ ಅನುಭವ ಮಂಟಪದಲ್ಲಿ ಜ. ೧೮ ಮತ್ತು ೧೯ ರಂದು ನಡೆಯಲಿರುವ ೧೩ನೇ ಅಖಿಲ ಭಾರತ ಶರಣ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ನಿಯೋಜನೆಗೊಂಡಿರುವ ಶ್ರೀಸಿದ್ದರಾಮ ಬೆಲ್ದಾಳ ಶರಣರನ್ನು ಇಂದು ಬೆಂಗಳೂರಿನ ಕೇಂದ್ರ ಕಚೇರಿಯಲ್ಲಿ ಸ್ವಾಗತಿಸಿ ಸಮ್ಮೇಳನಕ್ಕೆ ಆಮಂತ್ರಣವನ್ನು ಅ.ಭಾ.ಶ.ಸಾ.ಪರಿಷತ್ತಿನ ಅಧ್ಯಕ್ಷ ಡಾ.ಸಿ.ಸೋಮಶೇಖರ್ ಅಧಿಕೃತ ಆಮಂತ್ರಣ ಪತ್ರ ನೀಡಿದರು.
ಈ ವೇಳೆ ಜಿಲ್ಲಾಧ್ಯಕ್ಷ ಕೆ.ಎಂ.ವೀರೇಶ್, ಜಿಲ್ಲಾ ವೀರಶೈವ ಮಹಾಸಭಾ ಅಧ್ಯಕ್ಷ ಎಂ ವಿ ಶಿವಮೂರ್ತಿ, ಯೋಗಗುರು ಚನ್ನಬಸವಣ್ಣ, ಎಸ್ ಷಣ್ಮುಖಪ್ಪ, ರುದ್ರೇಶ್ ಮತ್ತಿತರರು ಉಪಸ್ಥಿತರಿದ್ದರು.