ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ದೊಡ್ಡಬಳ್ಳಾಪುರ ನಗರ ಸರ್ಕಾರಿ ಅಧಿಕಾರಿಗಳು ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸಿ ರೈತರಿಂದ ಪಡೆದ ಅಹವಾಲುಗಳನ್ನು ಸ್ಥಳದಲ್ಲಿಯೇ ಬಗೆಹರಿಸಿದ್ದರೆ ರೈತರು ಹಾಗು ಸಾರ್ವಜನಿಕರ ಕಛೇರಿಯಿಂದ ಕಛೇರಿಗೆ ಅಲೆಯುವುದು ತಪ್ಪುತ್ತದೆ ಎಂದು ಭಾರತೀಯ ಕಿಸಾನ್ ಸಂಘದ ಜಿಲ್ಲಾ ಪದಾಧಿಕಾರಿ ಜೈ ರಾಮಣ್ಣ ತಿಳಿಸಿದರು.
ತಾಲ್ಲೂಕು ಉಪವಿಭಾಗ ಅಧಿಕಾರಿಯ ಕಛೇರಿಯಲ್ಲಿ ಭಾರತೀಯ ಕಿಸಾನ್ ಸಂಘದ ಪದಾಧಿಕಾರಿ ಮತ್ತು ಸದಸ್ಯರ ಸಭೆಯಲ್ಲಿ ಜಯರಾಮಣ್ಣ ಮಾತನಾಡಿ ಗ್ರಾಮಗಳಲ್ಲಿ ಸರ್ಕಾರಿ ಜಮೀನುಗಳು ಬಲಾಢ್ಯರು ಒತ್ತುವರಿ ಮಾಡಿ ಸ್ಮಶಾನ
ಗುಂಡು ತೋಪು ಜಾಗಗಳು ಎಲ್ಲಿದೆ ಎಂದು ಅಳತೆ ಮಾಡಿ ಅ ಜಾಗಗಳಿಗೆ ತಂತಿ ಬೇಲಿ ಹಾಕಿ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.
ಹಾಗು ಕಾಡು ಪ್ರಾಣಿಗಳು ಊರುಗಳಿಗೆ ಲಗ್ಗೆ ಇಟ್ಟು ಸಾಕು ಪ್ರಾಣಿಗಳನ್ನು ಬಲಿ ಪಡೆಯುತ್ತಿರುವುದು ಕೂಡಲೆ ಕಾಡು ಪ್ರಾಣಿಗಳು ಊರಿಗೆ ಬರುವುದನ್ನು ಕಡಿವಾಣ ಹಾಕಬೇಕು ಹಾಗು ಗ್ರಾಮ ಲೆಕ್ಕಾಧಿಕಾರಿಗಳು ಯಾವ ವೃತ್ತದಲ್ಲಿ ಕೆಲಸ ಮಾಡುತ್ತಾರೆ ಯಾವ ಸಮಯದಲ್ಲಿ ರೈತರಿಗೆ ಸಿಗುತ್ತಾರೆ ಎಂದು ವೃತ್ತಗಳಲ್ಲಿ ಸಮಯವನ್ನು ನಿಗದಿಪಡಿಸಬೇಕು ಎಂದು ಮನವಿ ಮಾಡಿದರು.
ಈ ಸಮಯದಲ್ಲಿ ಭಾರತೀಯ ಕಿಸಾನ್ ಸಂಘದ ದೊಡ್ಡಬಳ್ಳಾಪುರ ದೇವನಹಳ್ಳಿ ಹೊಸಕೋಟೆ ನೆಲಮಂಗಲದ ಜಿಲ್ಲಾ ಹಾಗು ತಾಲ್ಲೂಕು ಪದಾಧಿಕಾರಿಗಳು ಹಾಗು ಉಪವಿಭಾಗಾಧಿಕಾರಿ ಕಛೇರಿಯ ಸಿಬ್ಬಂದಿ ವರ್ಗದವರು ಭಾರತೀಯ ಕಿಸಾನ್ ಸಂಘದ ಸದಸ್ಯರು ಹಾಜರಿದ್ದರು.
ಭಾರತೀಯ ಕಿಸಾನ್ ಸಂಘದಿಂದ ರೈತರ ತೊಂದರೆ ಸಮಯದಲ್ಲಿ ಪಾಣಿ. ಸಮಸ್ಯೆ ರಸ್ತೆ ಮತ್ತು ರಾಜಕಾಲುವೆ ಒತ್ತುವರಿಯನ್ನು ತೆರವುಗೊಳಿಸುವುದು ಸರ್ಕಾರದಿಂದ ಬರುವಂತ ಸೌಲಭ್ಯ ಬಗ್ಗೆ ಅರಿವು ಹಾಗು ರೈತರು ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆ ನೀಡುವಂತೆ ಸರ್ಕಾರಕ್ಕೆ ಒತ್ತಡ ಹಾಕುವುದು ಮತ್ತು ರೈತರು ಸಮಸ್ಯೆ ಬಂದ ಸಮಯದಲ್ಲಿ ನಿಸ್ವಾರ್ಥ ಸೇವೆಯೇ ಭಾರತೀಯ ಕಿಸಾನ್ ಸಂಘ ಉದ್ದೇಶವಾಗಿದೆ ಎಂದು ಭಾರತೀಯ ಕಿಸಾನ್ ಸಂಘದ ಜಿಲ್ಲಾಧ್ಯಕ್ಷ ನಾಗರಾಜಯ್ಯ ತಿಳಿಸಿದ್ದಾರೆ.
ಸರ್ಕಾರ ಅಧಿಕಾರಿಗಳು ರೈತರಿಗೆ ಸಮಸ್ಯೆಗೆ ಸ್ಪಂದಿಸದೆ ಎಂದರೆ ನಮ್ಮ ಭಾರತೀಯ ಕಿಸಾನ್ ಸಂಘ ಹೋರಾಟ ಹಾದಿ ಹಿಡಿಯಬೇಕಾಗುತ್ತದೆ ಎಂದು ಭಾರತೀಯ ಕಿಸಾನ್ ಸಂಘ ತಾಲೂಕು ಅಧ್ಯಕ್ಷ ಸಂಪತ್ತು ಕುಮಾರ್ ಒತ್ತಾಯಿಸಿದ್ದಾರೆ.
ಈಗಾಗಲೆ ಸರ್ಕಾರ ಆದೇಶದಂತೆ ಸ್ಮಶಾನ ಗುಂಡು ತೋಪು ದೇವರ ಮಾನ್ಯ ಕೆರೆ ಕುಂಟೆ ರಾಜ ಕಾಲುವೆಗಳ ಒತ್ತುವರಿ ಮಾಡಿದವರು ಬಗ್ಗೆ ಕ್ರಮ ಜರುಗಿಸಿ ತೆರವು ಮಾಡಲಾಗುವುದು ಯಾವ ಇಲಾಖೆ ಯಿಂದ ಸಮಸ್ಯೆ ಇದೆ ಅಂತಹ ಇಲಾಖೆ ಬಗ್ಗೆ ಮಾಹಿತಿ ಕೊಡಿ ಅಂತಹ ಇಲಾಖೆ ಬಗ್ಗೆ ಚರ್ಚಿಸಿ ಸಮಸ್ಯೆಯನ್ನು ಬಗೆ ಹರಿಸಲಾಗುವುದು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲೆ ಉಪವಿಭಾಗಾಧಿಕಾರಿ ದುರ್ಗಾಶ್ರೀ ಭರವಸೆ ನೀಡಿದ್ದಾರೆ.