ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಶಾಸಕಾಂಗ ಪಕ್ಷದ ನಾಯಕರಾದ ಸುರೇಶ್ ಬಾಬು ಸಿ.ಬಿ. ಅವರು ಬುಧವಾರ ಬಳ್ಳಾರಿ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ, ಜಿಲ್ಲಾಸ್ಪತ್ರೆಯಲ್ಲಿ ಸಂಭವಿಸಿದ್ದ ಬಾಣಂತಿಯರ ಸರಣಿ ಸಾವಿನ ಕುರಿತು ವೈದ್ಯಾಧಿಕಾರಿಯಿಂದ ಮಾಹಿತಿ ಪಡೆದರು.
ಜೊತೆಗೆ ನೊಂದ ಕುಟುಂಬದವರಿಗೆ ಪಕ್ಷದ ವತಿಯಿಂದ ಪರಿಹಾರ ವಿತರಿಸಿದರು. ಬಳಿಕ ದಾಖಲಾಗಿರುವ ಬಾಣಂತಿಯರ ಆರೋಗ್ಯ ವಿಚಾರಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಮಹಾ ಪ್ರಧಾನ ಕಾರ್ಯದರ್ಶಿ ವೆಂಕಟರಾವ್ ನಾಡಗೌಡ, ಶಾಸಕರುಗಳಾದ ನೇಮಿರಾಜ್ ನಾಯಕ್, ಶಾಸಕಿ ಕರೆಮ್ಮ ಜಿ. ನಾಯಕ್, ಬಳ್ಳಾರಿ ಜಿಲ್ಲಾಧ್ಯಕ್ಷ ಮೀನಳ್ಳಿ ಬಿ. ತಾಯಣ್ಣ,
ಮುಖಂಡರಾದ ಸಂಡೂರು ಸೋಮಪ್ಪ, ಕೊಟ್ರೇಶ್ ಸೇರಿದಂತೆ ಹಲವರು ನಿಯೋಗದ ಜೊತೆಯಲ್ಲಿದ್ದರು.