ಚಂದ್ರವಳ್ಳಿ ನ್ಯೂಸ್, ಹಿರಿಯೂರು :
ಕುಂಚಿಟಿಗರ ಪ್ರತಿಭಾ ಪುರಸ್ಕಾರ ಮತ್ತು ಬನುಮಯ್ಯ ಜಯಂತಿ ಕಾರ್ಯಕ್ರಮವನ್ನು ಜುಲೈ -6 ರಂದು ಭಾನುವಾರ ಬೆಳಿಗ್ಗೆ 10 -30 ಕ್ಕೆ ಹಿರಿಯೂರಿನ ತನ್ಯಾಸಿ ಗೌಂಡರ್ ಕಲ್ಯಾಣ ಮಂಟಪದಲ್ಲಿ ನಡೆಸಲಾಗುವುದು ಎಂದು ಕುಂಚಿಟಿಗರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಮೈಸೂರು ಶಿವಣ್ಣ ತಿಳಿಸಿದ್ದಾರೆ.
ಮಂಗಳವಾರ ಪ್ರವಾಸಿ ಮಂದಿರದಲ್ಲಿ ನಡೆದ ಸಂಘದ ಸರ್ವ ಸದಸ್ಯರ ಸಭೆ ಉದ್ದೇಶಿಸಿ ಮಾತನಾಡಿದ ಅವರು ಈಗಾಗಲೆ ಚಿತ್ರದುರ್ಗ ಜಿಲ್ಲೆಯಲ್ಲಿ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಯಲ್ಲಿ ಅತಿ ಹೆಚ್ಚಿನ ಅಂಕ ಪಡೆದು ಆಯ್ಕೆಯಾದ ಅಭ್ಯರ್ಥಿಗಳು ಮತ್ತು ಪೋಷಕರು ಹಾಗೂ ಕುಂಚಿಟಿಗ ಸಮಾಜದವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿ ಗೊಳಿಸಬೇಕೆಂದು ಮನವಿ ಮಾಡಿದರು.
ಕರ್ನಾಟಕ ರಾಜ್ಯ ಕುಂಚಿಟಿಗರ ಒಕ್ಕೂಟದ ಅಧ್ಯಕ್ಷ ರಮೇಶ್, ಎಸ್ ವಿ ರಂಗನಾಥ್, ಉಪಾಧ್ಯಕ್ಷ ಜೋಗೇಶ, ಖಜಾಂಚಿ ಪೆಪ್ಸಿ ಹನುಮಂತರಾಯ, ಕೆ.ಜಿ. ಹನುಮಂತರಾಯ, ಕಾರ್ಯದರ್ಶಿ ಕುಬೇರಪ್ಪ, ವಕೀಲ ಲಕ್ಷ್ಮಣ್ ಗೌಡ್ರು, ಬಾಬು ಕಾಮ್ಟೆ, ಮಂಜುನಾಥ್ ಕಾತ್ರಿಕೇನಳ್ಳಿ, ದಿಂಡಾವರ ಚಂದ್ರಗಿರಿ, ಜಯಪ್ರಕಾಶ್ ಕೆಕೆ. ಹಟ್ಟಿ, ಕುಮಾರಸ್ವಾಮಿ ಬಬ್ಬೂರು, ಚೇತನ್ ಯಳನಾಡು, ಶಶಿಕಲಾ ಹುಲಗಲ ಕುಂಟೆ, ವಾಣಿ ಮಹಾಲಿಂಗಪ್ಪ, ರಮ್ಯ ರಾಜುಗೌಡ, ಭಾರತಿ ಸಲ ಬೊಮ್ಮನಹಳ್ಳಿ, ಯು ವಿ ಗೌಡ, ಚಿಲ್ಲಹಳ್ಳಿ ಶ್ರೀನಾಥ್, ಕಸವನಹಳ್ಳಿ ಚಂದ್ರಶೇಖರ್ ಮಾಸ್ತಿಕಟ್ಟೆ, ರಾಜೇಶ್ ಆಪ್ಟಿಕಲ್ಸ್, ಕುರುಬರಹಳ್ಳಿ ದೇವರಾಜ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ಧರು.