ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಕೊಡಿಗೇಹಳ್ಳಿ ಪಂಚಾಯಿತಿ ವ್ಯಾಪ್ತಿಯ ಪಾಲನ ಜೋಗಿಹಳ್ಳಿ ಕೆರೆಯನ್ನು ಖಾಸಗಿ ಯವರು ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ಬಡಾವಣೆ ನಿರ್ಮಾಣ ಮಾಡಿ ರಸ್ತೆಯನ್ನು ಮಾಡುತ್ತಿದ್ದಾರೆಂದು ಆರೋಪಿಸಿ ಕರವೇ ಪ್ರವೀಣ್ ಕುಮಾರ್ ಶೆಟ್ಟಿ ಬಣದ ಕಾರ್ಯಕರ್ತರು ನಗರದ ತಾಲೂಕು ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು.
ಕರವೇ ಪ್ರವೀಣ್ ಕುಮಾರ್ ಶೆಟ್ಟಿ ಬಣದ ದೊಡ್ಡಬಳ್ಳಾಪುರ ತಾಲೂಕು ಗೌರವಾಧ್ಯಕ್ಷ ಪು.ಮಹೇಶ್ ಮಾತನಾಡಿ ಪಾಲನಜೋಗಿಹಳ್ಳಿ ಕೆರೆಗೆ ಹೊಂದಿಕೊಂಡಂತೆ ಖಾಸಗಿಯವರು ಬಡಾವಣೆ ಮಾಡುತ್ತಿದ್ದು, ಕೆರೆಯ ಅಂಗಳವನ್ನು ಮುಚ್ಚಿ ಸುಮಾರು 60 ಅಡಿ ಉದ್ದದ ರಸ್ತೆಯನ್ನು ನಿರ್ಮಾಣ ಮಾಡಲು ಮುಂದಾಗಿದ್ದಾರೆಂದು ಆರೋಪಿಸಿದರು.
ಕರವೇ ಪ್ರವೀಣ್ ಕುಮಾರ್ ಶೆಟ್ಟಿ ಬಣದ ದೊಡ್ಡಬಳ್ಳಾಪುರ ತಾಲೂಕು ಘಟಕದ ಉಪಾಧ್ಯಕ್ಷ ಪಾಲನ ಜೋಗಿಹಳ್ಳಿ ಅಮ್ಮು, ನಗರಾಧ್ಯಕ್ಷ ಶ್ರೀನಗರ ಬಶೀರ್, ಪಾಲನಜೋಗಿಹಳ್ಳಿ ಕೆರೆ ಒತ್ತುವರಿ ಮಾಡಿತ್ತಿರುವ ಬಗ್ಗೆ ಕಂದಾಯ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದರು ಯಾವುದೇ ಪ್ರಯೋಜನವಾಗಿಲ್ಲ ವೆಂದು ದೂರಿದರು.
ದೊಡ್ಡಬಳ್ಳಾಪುರ ಬೆಂಗಳೂರು ನಗರಕ್ಕೆ ಅಂಟಿ ಕೊಂಡಂತೆ ಇದ್ದು ಪ್ರಪಂಚದಲ್ಲಿಯೇ ದೊಡ್ಡ ಕಾರ್ಖಾನೆಯ ಪ್ರದೇಶವಾಗಿದ್ದು ಅತಿ ವೇಗವಾಗಿ ಬೆಳೆಯುತ್ತಿದ್ದು, ಕೆಲವು ಖಾಸಗಿಯವರು ಇದನ್ನು ತಿಳಿದು, ಯಾವುದೇ ಸರಿಯಾದ ಅನುಮತಿ ಗಳಿಲ್ಲದೆ ಬಡಾವಣೆಗಳನ್ನು ಮಾಡಿ ಗ್ರಾಹಕರಿಗೆ ಟೋಪಿ ಹಾಕಿ ಮೋಸ ಮಾಡುತ್ತಿದ್ದಾರೆಂದು ದೂರಿದರು.
ಅಂತರ್ ರಾಜ್ಯ ಹೆದ್ದಾರಿಯಲ್ಲಿ ಪಾಲನ ಜೋಗಳ್ಳಿಯ ಸರ್ವೇ ನಂಬರ್ 21 ರಲ್ಲಿ ಸುಮಾರು 13 ಎಕರೆಯಲ್ಲಿ ಕೆರೆ ಇದ್ದು, ಖಾಸಗಿಯವರು ಕೆರೆಯನ್ನು ಸಂಪೂರ್ಣವಾಗಿ ಮುಚ್ಚುತ್ತಿರುವುದು ಕಂಡುಬಂದಿದೆ.
ಈ ಖಾಸಗಿ ಬಡಾವಣೆ ಯಾವುದೇ ಪೂರ್ಣ ಅನುಮತಿಯನ್ನು ಪಡೆದಿರುವುದಿಲ್ಲ, ಅಲ್ಲದೆ ಕೆರೆಯನ್ನು ಮುಚ್ಚಿ ರಸ್ತೆಯನ್ನು ನಿರ್ಮಾಣ ಮಾಡುತ್ತಿದ್ದಾರೆ. ಈ ಕುರಿತು ಕ್ರಮ ಕೈಗೊಳ್ಳಬೇಕಾದ ಕಂದಾಯ ಅಧಿಕಾರಿಗಳು ಇದನ್ನು ನೋಡಿ ನೋಡದಂತೆ ವರ್ತಿಸುತ್ತಿದ್ದು, ಬಡಾವಣೆ ಅಧಿಕಾರಿಗಳಿಗೆ ಯಾವುದೇ ನೋಟಿಸ್ ಅನ್ನು ನೀಡಿರುವುದಿಲ್ಲ ಎಂದು ಗಂಭೀರ ಆರೋಪ ಮಾಡಿದರು.
ಈ ಕೂಡಲೇ ಸ್ಥಳ ಪರಿಶೀಲಿಸಿ, ಕೆರೆಯ ಸಂರಕ್ಷಣೆಯನ್ನು ಮಾಡಲು ಒತ್ತಾಯಿಸಿದ್ದು, ಅಧಿಕಾರಿಗಳು ಸ್ಪಂದಿಸದೆ ಇದ್ದರೆ ಕೆರೆಯ ಸ್ಥಳದಲ್ಲೇ ಗ್ರಾಮಸ್ಥರೊಂದಿಗೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.
ಈ ಸಂದರ್ಭದಲ್ಲಿ ಕರವೇ ಪ್ರವೀಣ್ ಕುಮಾರ್ ಶೆಟ್ಟಿ ಬಣದ ದೊಡ್ಡಬಳ್ಳಾಪುರ ತಾಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಎಸ್.ಎಲ್‌ಎನ್ ವೇಣು, ಕಾನೂನು ಸಲಹೆಗಾರ ನ್ಯಾಯವಾದಿ ಆನಂದ್,ಪ್ರಧಾನ ಕಾರ್ಯದರ್ಶಿ ರಘುನಂದನ್
ಕಾರ್ಯದರ್ಶಿಗಳಾದ ಮಂಜು, ಮುಕ್ಕೇನಹಳ್ಳಿ ರವಿ, ಖಜಾಂಚಿ ಆನಂದ್, ಸೂರಿ, ಸಿರಾಜ್, ಶ್ರೀನಿವಾಸ್, ನೂರುಲ್ಲಾ, ಪಂಚಾಯಿತಿ ಸದಸ್ಯರಾದ ಯಾಕೋಬ್ ಬೇಗ್, ಮುನಿರಾಜು, ಉಮೇಶ್, ಮಂಜುನಾಥ್, ಮುಖಂಡರಾದ ಮುನಿಕೃಷ್ಣ, ರಾಜಣ್ಣ, ಇಮ್ತಿಯಾಜ್, ಮೋಹನ್ ಮತ್ತಿತರರಿದ್ದರು.