ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಜಾಗತಿಕ ಮಾರುಕಟ್ಟೆಯಲ್ಲಿ ಕರ್ನಾಟಕದ ಐ ಪೋನ್ ಗಳು| ಉತ್ಪಾದನೆ ಆರಂಭಿಸಿದ ಫಾಕ್ಸ್ ಕಾನ್ ಎಂದು ಕೈಗಾರಿಕೆ ಸಚಿವ ಎಂ.ಬಿ ಪಾಟೀಲ್ ತಿಳಿಸಿದ್ದಾರೆ.
ಬೆಂಗಳೂರು ಸಮೀಪದ ದೇವನಹಳ್ಳಿಯ ಹೊಸ ಘಟಕದಲ್ಲಿ ಫಾಕ್ಸ್ ಕಾನ್ ತನ್ನ ಇತ್ತೀಚಿನ #iPhone17 ಉತ್ಪಾದನೆಯನ್ನು ಪ್ರಾರಂಭಿಸಿರುವುದನ್ನು ಹರ್ಷದಿಂದ ಹಂಚಿಕೊಳ್ಳುತ್ತಿದ್ದೇನೆ. ಇದು ಚೀನಾದ ಹೊರಗಿನ ಫಾಕ್ಸ್ ಕಾನ್ ನ ಎರಡನೇ ಅತಿದೊಡ್ಡ ಘಟಕವಾಗಿದೆ. $2.8 ಬಿಲಿಯನ್ (25,000 ಕೋಟಿ) ಹೂಡಿಕೆಯಿಂದ ನಿರ್ಮಿತವಾಗಿದೆ ಎಂದು ಸಚಿವ ಪಾಟೀಲ್ ತಿಳಿಸಿದ್ದಾರೆ.
ಈ ಸಾಧನೆ ಕೇವಲ ಸ್ಮಾರ್ಟ್ ಫೋನ್ ಗಳ ಅಸೆಂಬ್ಲಿ ಕುರಿತು ಮಾತ್ರವಲ್ಲ, ಕರ್ನಾಟಕವು ಜಾಗತಿಕ ಎಲೆಕ್ಟ್ರಾನಿಕ್ಸ್ ಉತ್ಪಾದನಾ ಕೇಂದ್ರವಾಗಿ ಹೊರಹೊಮ್ಮುತ್ತಿರುವುದಕ್ಕೆ ಮತ್ತೊಂದು ಮಹತ್ವದ ಸಾಕ್ಷಿಯಾಗಿದೆ. ಸಾವಿರಾರು ಉದ್ಯೋಗಗಳು ಸೃಷ್ಟಿಯಾಗುತ್ತಿದ್ದು, ಪೂರೈಕೆ ಸರಪಳಿಗಳು ಬಲವಾಗುತ್ತಿವೆ. ಭಾರತದ ರಫ್ತು ಗುರಿಗಳಿಗೆ ಹೊಸ ಶಕ್ತಿ ಸಿಗುತ್ತಿದೆ.
ಆಪಲ್ ಭಾರತದ ತನ್ನ ಉತ್ಪಾದನೆಯನ್ನು ವೇಗವಾಗಿ ವಿಸ್ತರಿಸುತ್ತಿದ್ದು, “ಭಾರತವೇ ವಿಶ್ವದ ಐಫೋನ್ ರಾಜಧಾನಿ” ಆಗುವ ಹಾದಿಯಲ್ಲಿ ನಮ್ಮಬೆಂಗಳೂರು ನಿರ್ಣಾಯಕ ಪಾತ್ರ ವಹಿಸಲಿದೆ.

ಆರಂಭಿಕ ಸವಾಲುಗಳಿದ್ದರೂ, ಫಾಕ್ಸ್ ಕಾನ್ ಕಾರ್ಯಾಚರಣೆಗಳು ಯಶಸ್ವಿಯಾಗಿ ಮುಂದುವರಿಯುತ್ತಿದೆ. ಇದರೊಂದಿಗೆ ಕರ್ನಾಟಕದ ಬಲಿಷ್ಠ ಕೈಗಾರಿಕಾ ಪರಿಸರದ ಮೇಲೆ ಹೂಡಿಕೆದಾರರ ವಿಶ್ವಾಸ ಮತ್ತಷ್ಟು ವೃದ್ಧಿಯಾಗುತ್ತಿದೆ ಎಂದು ಕೈಗಾರಿಕೆ ಸಚಿವ ಪಾಟೀಲ್ ಅಭಿಪ್ರಾಯಪಟ್ಟಿದ್ದಾರೆ.

