ಕೊಡವ ಕಥೆ ಜೊಪ್ಪೆ ಸೂಕ್ತ ಕತೆಗಳ ಆಹ್ವಾನ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ಕೊಡವ ಕಥೆ ಜೊಪ್ಪೆಯನ್ನು ಹೊರತರಲು ಸೂಕ್ತ ಕತೆಗಳನ್ನು ಆಹ್ವಾನಿಸಿದೆ. ಸುಮಾರು 25 ರಿಂದ 30ರಷ್ಟು ಕತೆಗಳನ್ನು ಒಂದೇ ಪುಸ್ತಕದಲ್ಲಿ ಪ್ರಕಟಿಸಲಾಗುವುದು. ಕತೆಗಳನ್ನು ಎ 4 ಅಳತೆಯ ಕಾಗದದಲ್ಲಿ ಸ್ಪುಟವಾಗಿ ಬರೆದಿದ್ದು 5-6 ಪುಠಗಳನ್ನು ಮೀರುವಂತಿಲ್ಲ. ಕಥಾವಸ್ತು ಕಥೆಗಾರರ ಕಲ್ಪನೆಗೆ ಬಿಟ್ಟಿದ್ದು. ಕತೆಗಳು ಪ್ರತ್ಯಕ್ಷ-ಪರೋಕ್ಷವಾಗಿ ಯಾರದ್ದು ತೇಜೋವಧೆಯಾಗಲಿ, ಜಾತಿ-ಧರ್ಮಗಳ ಭಾವನೆಗಳಿಗೆ ಘಾಸಿ ಉಂಟು ಮಾಡುವುದಾಗಿರಬಾರದು. ಅಂತಿದ್ದಲ್ಲಿ ಅದರ ಸಾಧಕ-ಭಾದಕಗಳಿಗೆ ಕಥೆಗಾರರೇ ಭಾದ್ಯಸ್ಥರಾಗುವುದು.

- Advertisement - 

ಕಥೆಗಳು ಸಾಧ್ಯವಾದಷ್ಟು ಕೊಡವ ಸಂಸ್ಕøತಿ-ಪದ್ಧತಿ, ಮೂಲತನಕ್ಕೆ ಒತ್ತುಕೊಡುವಂತಿದ್ದು ಸಾರ್ವಕಾಲಿಕವಾಗಿರಲಿ. ಪ್ರಕಟಿತ ಕಥೆಗಳಿಗೆ ಅಕಾಡೆಮಿ ಗೊತ್ತು ಪಡಿಸಿರುವಂತೆ ಸಂಭಾವನೆ ನೀಡಲಾಗುವುದು. ಕಥೆಗಾರರು ತಮ್ಮ ಸ್ವಪರಿಚಯವನ್ನು 4-5 ವಾಕ್ಯಗಳಿಗೆ ವೀರದಂತೆ ಬರೆದು ಕೊಡುವುದು. ಪ್ರತಿಯೊಬ್ಬ ಕಥೆಗಾರರು ತಮ್ಮ ಇತ್ತೀಚಿನ ಭಾವಚಿತ್ರದೊಂದಿಗೆ ಬ್ಯಾಂಕ್ ಪಾಸ್ ಪುಸ್ತಕದ ಜೆರಾಕ್ಸ್ ಲಗತ್ತಿಸುವುದು.

- Advertisement - 

ಕಥೆಗಳನ್ನು ಕಳುಹಿಸಿಕೊಡಲು 2025 ಡಿಸೆಂಬರ್ 05 ರಂದು ಅಂತಿಮ ದಿನಾಂಕವಾಗಿದೆ. ಕಥೆಯನ್ನು ಪ್ರಕಟಿಸುವ ಅಂತಿಮ ತೀರ್ಮಾನ ಅಕಾಡೆಮಿಯದ್ದಾಗಿರುತ್ತದೆ. ಕೊಡವ ಕಥೆ ಜೊಪ್ಪೆಗೆ ನಿಮ್ಮ ಕಥೆಗಳನ್ನು
ಅಧ್ಯಕ್ಷರು / ರಿಜಿಸ್ಟ್ರಾರ್, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ, ಜೂನಿಯರ್ ಕಾಲೇಜು ರಸ್ತೆ, ಸ್ಕೌಟ್ಸ್ ಭವನ, ಮ್ಯಾನ್ಸ್ ಕಾಂಪೌಂಡ್, ಮಡಿಕೇರಿ ಈ ವಿಳಾಸಕ್ಕೆ ಕಳುಹಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

 

- Advertisement - 

 

 

Share This Article
error: Content is protected !!
";