ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಐತಿಹಾಸಿಕ 79ನೇ ಸ್ವಾತಂತ್ರ್ಯ ದಿನದಂದು ಉಕ್ಕು ಸಚಿವಾಲಯದ ಅಡಿಯಲ್ಲಿ ಕೆಲಸ ಮಾಡುತ್ತಿರುವ ಎರಡು CPSE (ಕೇಂದ್ರ ಸರಕಾರಿ ಸ್ವಾಮ್ಯದ ಕಂಪನಿ) ಗಳ ನಡುವಿನ ಸಹಯೋಗದ ಹೊಸ ಅಧ್ಯಾಯವು ಅತ್ಯಂತ ಯಶಸ್ವಿಯಾಗಿ ಶುಭಾರಂಭವಾಗಿದೆ ಎಂದು ತಿಳಿಸಲು ನನಗೆ ಅತೀವ ಸಂತೋಷವಾಗುತ್ತಿದೆ ಎಂದು ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವ ಹೆಚ್.ಡಿ ಕುಮಾರಸ್ವಾಮಿ ಹೇಳಿದರು.
ವಿಶಾಖಪಟ್ಟಣದಲ್ಲಿರುವ ರಾಷ್ಟ್ರೀಯ ಉಕ್ಕು ಸ್ಥಾವರಕ್ಕೆ (RINL) ಪೈಲೆಟ್ ಗಳನ್ನು ಪೂರೈಸಲು ಕುದುರೆಮುಖ ಕಬ್ಬಿಣ ಮತ್ತು ಅದಿರು ಸಂಸ್ಥೆ (KIOCL) ಯಲ್ಲಿ ಪೆಲೆಟ್‌ಗಳ ಲೋಡಿಂಗ್ ಆರಂಭವಾಗಿದೆ. ಇದು ದೇಶೀಯ ಉಕ್ಕು ವಲಯಕ್ಕೆ ಬಲಿಷ್ಠ ಪೂರಕ ವ್ಯವಸ್ಥೆಯನ್ನು ಬಲಪಡಿಸುವ ಪಾಲುದಾರಿಕೆಯ ಹೊಸ ಅಧ್ಯಾಯವಾಗಿದೆ. ಪ್ರತೀ ವರ್ಷ ಕುದುರೆಮುಖ ಕಂಪನಿಯು ವೈಜಾಗ್ ಸ್ಟೀಲ್ʼಗೆ 2 ದಶಲಕ್ಷ ಟನ್ ಪೈಲೆಟ್ ಗಳನ್ನು ಪೂರೈಸಲು ಯೋಜಿಸಿದೆ ಎಂದು ಕುಮಾರಸ್ವಾಮಿ ತಿಳಿಸಿದರು.
ಇದು ಉಕ್ಕು ಉತ್ಪಾದನೆ ಹೆಚ್ಚಿಸುವ ಹಾಗೂ ಕಚ್ಚಾ ವಸ್ತುಗಳ ಸುರಕ್ಷಿತ ಲಭ್ಯತೆಯನ್ನು ಖಚಿತಪಡಿಸುವ ಉದ್ದೇಶ ಹೊಂದಿದೆ. ಅಲ್ಲದೆ; ಸ್ವಾವಲಂಬಿ, ಸಶಕ್ತ ಉಕ್ಕು ವಲಯದ ನಮ್ಮ ದೃಷ್ಟಿಕೋನಕ್ಕೆ ಅನುಗುಣವಾಗಿ ಇಟ್ಟಿರುವ ದೃಢ ಹೆಜ್ಜೆ ಆಗಿದೆ. ಜಾಗತಿಕ ಗುಣಮಟ್ಟದ ಹಾಗೂ ಉತ್ಕೃಷ್ಟ ಪೈಲೆಟ್ ಗಳನ್ನು KIOCL ಉತ್ಪಾದಿಸುತ್ತದೆ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಹೇಳಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ನಾಯಕತ್ವದಲ್ಲಿ ಆತ್ಮನಿರ್ಭರ ಭಾರತ ಮತ್ತು ವಿಕಸಿತ ಭಾರತ 2047ರ ಕಡೆಗೆ ನಮ್ಮ CPSEಗಳ ವೇಗದ ಬೆಳವಣಿಗೆ ಹಾಗೂ ಬದ್ಧತೆಯನ್ನು ಈ ಉಪಕ್ರಮವು ಪ್ರತಿಬಿಂಬಿಸುತ್ತದೆ. ಒಟ್ಟಾರೆಯಾಗಿ ನಾವು ಬಲವಾದ, ಹೆಚ್ಚು ಸ್ಥಿರತೆಯುಳ್ಳ ಭಾರತದ ಉಕ್ಕು ವಲಯಕ್ಕೆ ಶಕ್ತಿ ತುಂಬುತ್ತಿದ್ದೇವೆ ಎಂದು ಸಚಿವ ಕುಮಾರಸ್ವಾಮಿ ತಿಳಿಸಿದರು.

