ಮಾಲ್ಗುಡಿ ಡೇಸ್ ಮರೆಯಲಾಗದ ಧಾರವಾಹಿ- ನಟ ಅನಂತ್‌ನಾಗ್

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಹಿರಿಯ ನಟ ಅನಂತ್ ನಾಗ್ ಅವರಿಗೆ ಪದ್ಮಭೂಷಣ ಪ್ರಶಸ್ತಿ ಬಂದ ಹಿನ್ನೆಲೆಯಲ್ಲಿ ನೆಲಮಂಗಲ ಸಮೀಪದ ಗುಬ್ಬಿಗೂಡು ರೆಸಾರ್ಟ್‌ನಲ್ಲಿ ಚಿತ್ರ ಸಮೂಹ ಮತ್ತು ಆಪ್ ಸರ್ಕಲ್ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅನಂತ್ ನಾಗ್ ಮತ್ತು ಗಾಯತ್ರಿ ದಂಪತಿಗಳನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.

- Advertisement - 

ಇದೇ ಸಂದರ್ಭದಲ್ಲಿ ಅನಂತ್‌ನಾಗ್ ಅವರ ಸಿನಿಮಾದ ಹಾಡುಗಳನ್ನು ಹಾಡುವ ಮೂಲಕ ಇಡೀ ಕಾರ್ಯಕ್ರಮ ರಸಮಯವಾಗುವಂತೆ ಆಯೋಜಿಸಲಾಗಿತ್ತು. ಅವರೊಂದಿಗೆ ನಡೆದ ಸಂವಾದದಲ್ಲಿ 76 ವಸಂತಗಳ ಅನುಭವಗಳನ್ನು ಅವರು ಹಂಚಿಕೊಂಡರು.
ಪದ್ಮಭೂಷಣ ಪ್ರಶಸ್ತಿ ಬಂದಿದ್ದು ಕನ್ನಡಿಗರಿಗೆ. ಕನ್ನಡಿಗರು ನನಗೆ ಕೊಟ್ಟಿರುವ ಪ್ರೀತಿಯನ್ನು ಎಂದೂ ಮರೆಯಲಾಗದು ಎಂದು ತಮ್ಮ ಹಲವು ಅನುಭವಗಳನ್ನು ಅನಂತ್ ನಾಗ್ ಮೆಲುಕು ಹಾಕಿದರು.

- Advertisement - 

ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ಅನಂತ್ ನಾಗ್ ಅವರ ನಟನೆಗೆ ಯಾರೂ ಸಾಟಿ ಇಲ್ಲ. ಅಷ್ಟು ಮನೋಜ್ಞ ಅಭಿನಯ ಅವರದು. ಎಂಬತ್ತರ ಕಾಲಘಟ್ಟದಲ್ಲಿ ಹಿಂದಿ ಮತ್ತು ಇಂಗ್ಲೀಷ್‌ನಲ್ಲಿ ಮೂಡಿ ಬಂದ ಮಾಲ್ಗುಡಿ ಡೇಸ್ ಧಾರವಾಹಿಯನ್ನು ಮರೆಯಲು ಸಾಧ್ಯವೇ ಇಲ್ಲ. ಚಿತ್ರರಂಗದಲ್ಲಿ ಅನಂತ್‌ನಾಗ್ ಮತ್ತು ಶಂಕರ್ ನಾಗ್ ಜೋಡಿ ಹೊಸ ಮೋಡಿಯನ್ನು ಮಾಡಿತು. ಆ ಮೂಲಕ ಚಿತ್ರರಂಗಕ್ಕೆ ಹೊಸ ಸಂಚಲನ ತಂದಿತು ಎಂದರು.

ಈ ಸಂದರ್ಭದಲ್ಲಿ ಚಿತ್ರ ನಟಿ ಜಯಮಾಲ, ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್, ಲಿಂಗದೇವರು, ಶೇಷಾದ್ರಿ, ವಿಜಯವಾಣಿ ಸಂಪಾದಕ ಕೆ.ಎನ್.ಚನ್ನೇಗೌಡ, ಕನ್ನಡ ಪ್ರಭ ಸಂಪಾದಕ ರವಿಹೆಗಡೆ, ಸಪ್ತಾಹಿಕ ಸಂಪಾದಕ ಜೋಗಿ, ಗುಬ್ಬಿಗೂಡು ರಮೇಶ್ ಅವರುಗಳು ಅಭಿನಂದಿಸಿ ಮಾತನಾಡಿದರು. ವಿಜಯಕರ್ನಾಟಕ ಸಂಪಾದಕ ಸುದರ್ಶನ ಚನ್ನಂಗಿಹಳ್ಳಿ, ಉದಯವಾಣಿ ಸಂಪಾದಕ ರವಿಶಂಕರ ಭಟ್, ಸಂಯುಕ್ತ ಕರ್ನಾಟಕ ಸಂಪಾದಕ ಮಹಾಬಲ ಸೀತಾಳಬಾವಿ, ಯೋಗರಾಜ್ ಭಟ್ ಮತ್ತಿತರರು ಹಾಜರಿದ್ದರು .

- Advertisement - 

Share This Article
error: Content is protected !!
";