ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
GIM2025 ಸಂದರ್ಭದಲ್ಲಿ ಅಂಕಿತಗೊಂಡ MoU ತ್ವರಿತವಾಗಿ ಅನುಷ್ಠಾನಗೊಳಿಸುವುದಾಗಿ ವೋಲ್ವೊ ಘೋಷಣೆ! ಮಾಡಿದೆ ಎಂದು ಕೈಗಾರಿಕೆ ಸಚಿವ ಎಂ.ಬಿ ಪಾಟೀಲ್ ತಿಳಿಸಿದ್ದಾರೆ.
ಸ್ವೀಡನ್ ನ ಗೊಥೆನ್ಬರ್ಗ್ ನಲ್ಲಿ ವೋಲ್ವೊ ಗ್ರೂಪ್’ನ ಜಾಗತಿಕ CEO ಮಾರ್ಟಿನ್ ಲುಂಡ್’ಸ್ಟೆಡ್ ಅವರೊಂದಿಗೆ ಪರಿಣಾಮಕಾರಿ ಸಭೆ ನಡೆಯಿತು. ಇದು ಕರ್ನಾಟಕ-ವೋಲ್ವೊ ದೀರ್ಘಕಾಲಿಕ ಸಹಯೋಗಕ್ಕೆ ಮತ್ತೊಂದು ಬಲಿಷ್ಠ ಹೆಜ್ಜೆ! ಎಂದು ಸಚಿವರು ತಿಳಿಸಿದರು.
ಇದೇ ಫೆಬ್ರವರಿ 13ರಂದು ಬೆಂಗಳೂರಿನಲ್ಲಿ ಜರುಗಿದ ಜಾಗತಿಕ ಹೂಡಿಕೆದಾರರ ಸಮಾವೇಶ (GIM2025)ದ ಸಂದರ್ಭಧಲ್ಲಿ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸಮ್ಮುಖದಲ್ಲಿ ವೊಲ್ವೊ ಸಂಸ್ಥೆ ತನ್ನ ಹೊಸಕೋಟೆಯ ಕಾರ್ಖಾನೆಯನ್ನು ವಿಸ್ತರಿಸಲು 1,400 ಕೋಟಿ ಹೂಡಿಕೆ ಮಾಡುವುದಾಗಿ ತಿಳಿಸಿ MoUಗೆ ಅಂಕಿತ ಹಾಕಿತ್ತು. ಆ ಸಂಗತಿಯನ್ನು ನಾವು ನೆನಪು ಮಾಡಿಕೊಟ್ಟಾಗ ಈ ನಿರ್ಧಾರವನ್ನು ಯಥಾವತ್ ಶೀಘ್ರ ಜಾರಿಗೆ ತರಲಾಗುವುದು ಎಂದು ಲುಂಡ್’ಸ್ಟೆಡ್ ಅವರು ಖುದ್ದಾಗಿ ದೃಢಪಡಿಸಿದುದು ನಮ್ಮ ಪ್ರವಾಸದ ಯಶಸ್ಸಿಗೆ ದೊರೆತ ಮತ್ತೊಂದು ಉಜ್ವಲ ದಾಖಲೆ! ಎಂದು ಸಚಿವರು ಹೇಳಿದರು.
ಹೊಸಕೋಟೆ ಸ್ಥಾವರದ ವಿಸ್ತರಣೆಯಿಂದ ವರ್ಷಕ್ಕೆ 20 ಸಾವಿರ ಬಸ್/ಟ್ರಕ್ ತಯಾರಿಸಬಹುದು. ಈ ಸಾಮರ್ಥ್ಯ ವೃದ್ಧಿಯಿಂದ ಸಾವಿರಾರು ಉದ್ಯೋಗಗಳ ಸೃಷ್ಟಿಯಾಗಿ, ಸ್ಥಳೀಯ ಆರ್ಥಿಕ ಶಕ್ತಿಗೆ ಮತ್ತಷ್ಟು ಬಲ ಬರಲಿದೆ ಎಂದು ಸಚಿವ ಎಂ.ಬಿ ಪಾಟೀಲ್ ವಿಶ್ವಾಸ ವ್ಯಕ್ತಪಡಿಸಿದರು.