ಭಕ್ತಿ ಶ್ರದ್ದೆಯಿಂದ ಬದುಕಿನಲ್ಲಿ ಆತ್ಮವಿಶ್ವಾಸ ವೃದ್ಧಿ: ಶಾಸಕ ರಘುಮೂರ್ತಿ

News Desk

ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ಇಲ್ಲಿನ ಗಾಯಿತ್ರಿ ಕಲ್ಯಾಣಮಂಟಪದಲ್ಲಿ ಗುರುವಾರ ರಾತ್ರಿ ಆಯೋಜಿಸಿದ್ದ ಹರಿಹರಸುತ ಸೇವಾ ಸಮಿತಿಯ ನಾಲ್ಕನೇ ವರ್ಷದ ಅಯ್ಯಪ್ಪಸ್ವಾಮಿ ಪೂಜೆ ಮತ್ತು ಪಡಿಪೂಜಾ ಕಾರ್ಯಕ್ರಮಕ್ಕೆ ಶಾಸಕ ಟಿ.ರಘುಮೂರ್ತಿ ಆಗಮಿಸಿ ಪೂಜಾ ಕಾರ್ಯದಲ್ಲಿ ಪಾಲ್ಗೊಂಡರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕಳೆದ ಹಲವಾರು ದಶಕಗಳಿಂದ ಅಯ್ಯಪ್ಪಸ್ವಾಮಿಯ ಪೂಜೆಯನ್ನು ನಡೆಸಿಕೊಂಡು ಬರುತ್ತಿದ್ದು, ಲಕ್ಷಾಂತರ ಭಕ್ತರು ಪ್ರತಿವರ್ಷವೂ ಶಬರಿಮಲೆಯ ಅಯ್ಯಪ್ಪಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ. ಈ ಭಾರಿ ವಿಶೇಷವಾಗಿ ಗುರುಸ್ವಾಮಿಗಳಾದ ಜಗ್ಗುಸ್ವಾಮಿ, ರೇಣುಕಾಸ್ವಾಮಿ ಶಿಷ್ಯವೃಂದ ಸಾವಿರಾರು ಅಯ್ಯಪ್ಪಸ್ವಾಮಿ ಮಾಲಾಧಾರಿಗಳಿಗೆ ವಿಶೇಷ ಪೂಜೆಯ ಸೌಕರ್ಯವನ್ನು ಕಲ್ಪಿಸಿಕೊಟ್ಟಿದೆ.

ಮಹಾಗಣಪತಿಹೋಮ, ನವಗ್ರಹಹೋಮ, ಗೋಪೂಜೆ, ಪಡಿಪೂಜೆ, ಪುಪ್ಪಾಭಿಷೇಕ, ಹರಿವರಾಸಹನಂ ಸೇರಿದಂತೆ ವಿವಿಧ ಕಾರ್ಯಕ್ರಮಗಳಲ್ಲಿ ಭಕ್ತಿಯಿಂದ ಪಾಲ್ಗೊಂಡಿದ್ದೀರಿ ನಿಮ್ಮೆಲ್ಲರಿಗೂ ಶ್ರೀಸ್ವಾಮಿಯ ಅನುಗ್ರಹ ಸಿಗಲಿ ಎಂದು ಶುಭಹಾರೈಸುವುದಾಗಿ ತಿಳಿಸಿದರು. ಈ ಭಾರಿ ಮತ್ತೊಮ್ಮೆ ಇಲ್ಲಿನ ಭಕ್ತಾಧಿಗಳಿಗೆ ಶಬರಿಮಲೆ ದೇವಸ್ಥಾನದ ಕೃತಕವಾಗಿ ನಿರ್ಮಿಸಿ ಶ್ರೀಅಯ್ಯಪ್ಪಸ್ವಾಮಿ ಪ್ರತಿಷ್ಠಾಪಿಸಿ ದರ್ಶನ ಮಾಡಿಸುವ ಮೂಲಕ ಈ ಸಮಿತಿ ಇಲ್ಲಿನ ಸಾವಿರಾರು ಭಕ್ತರಿಗೆ ಸ್ವಾಮಿಯ ದರ್ಶನ ಮಾಡಿಸಿದಂತಾಗಿದೆ ಎಂದರು.

ವ್ಯವಸ್ಥಾಪಕರಲ್ಲಿ ಒಬ್ಬರಾದ ಎ.ಕೀರ್ತಿಪ್ರಸಾದ್ ಮಾತನಾಡಿ, ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಸಹಕಾರದಿಂದ ಕಳೆದ ನಾಲ್ಕು ವರ್ಷಗಳಿಂದ ಈ ಕಾರ್ಯಕ್ರಮವನ್ನು ಎಲ್ಲರ ಸಹಕಾರದಿಂದ ಭಕ್ತಿ ಶ್ರದ್ದೆಯಿಂದ ಆಚರಣೆ ಮಾಡಲಾಗುತ್ತಿದೆ. ಈ ಬಾರಿ ಶಬರಿಮಲೆ ಸನ್ನಿಧಿಯ ಆರ್ಚಕರಾದ ಆನಂದನಂಬೂದರಿ, ದೇಶದ ವಿದೇಶಗಳಲ್ಲಿ ಅಯ್ಯಪ್ಪಸ್ವಾಮಿ ಭಕ್ತಿಗೀತೆ ಹಾಗೂ ಭಜನೆಗೆ ಹೆಸರಾದ ವೀರಮಣಿರಾಜು, ಕೇದಾರದಿಂದ ಶಬರಿಮಲೆಗೆ ಸುಮಾರು ನಾಲ್ಕುಸಾವಿರ ಕಿ.ಮೀ ಪಾದಯಾತ್ರೆ ನಡೆಸಿದ ಅಂಕುಶ್‌ಸ್ವಾಮಿ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ಸಂತಸ ತಂದಿದೆ. ನಿರೀಕ್ಷೆಗೂ ಮೀರಿ ಭಕ್ತರು ಆಗಮಿಸಿದ್ಧಾರೆ, ಭಜನೆಯಲ್ಲಿ ಭಾಗವಹಿಸಿದ್ದಾರೆ. ಸ್ವಾಮಿ ಅಯ್ಯಪ್ಪ ತಮ್ಮೆಲ್ಲರಿಗೂ ಸುಖ, ಶಾಂತಿ ನೆಮ್ಮದಿ ಪಾಲಿಸಲಿ ಎಂದು ಪ್ರಾರ್ಥಿಸುವುದಾಗಿ ತಿಳಿಸಿದರು.

ಮಂಜುನಾಥಕಂಚಿ, ಜಗದೀಶ್ವರಚಾರಿ, ಎಲ್.ರುದ್ರಮುನಿಯಪ್ಪ, ತಾಲ್ಲೂಕು ಬ್ರಾಹ್ಮಣ ಸಂಘದ ಅಧ್ಯಕ್ಷ ಡಾ.ಅನಂತರಾಮ್‌ಗೌತಮ್, ಕಾರ್ಯದರ್ಶಿ ಎಂ.ಸತ್ಯನಾರಾಯಣರಾವ್, ಖಜಾಂಚಿ ಬಿ.ಕೃಷ್ಣಮೂರ್ತಿ, ನಿರ್ದೇಶಕರಾದ ಸಿ.ಎಸ್.ಗೋಪಿನಾಥ, ನಾಮಸಾಧನ ಟ್ರಸ್ಟ್ ಕಾರ್ಯದರ್ಶಿ ಪ್ರಕಾಶ್ ಮುಂತಾದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

 

- Advertisement -  - Advertisement - 
Share This Article
error: Content is protected !!
";