ಗೋದ್ರಾ ಹತ್ಯಾಕಾಂಡ ಘಟನೆಯ ಹೊಣೆಹೊತ್ತು ಮೋದಿ ರಾಜೀನಾಮೆ ನೀಡಿದ್ದಾರ?-ಸಿದ್ದರಾಮಯ್ಯ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ನರೇಂದ್ರ ಮೋದಿ ಅವರು ಗುಜರಾತ್‌ ಮುಖ್ಯಮಂತ್ರಿಯಾಗಿದ್ದಾಗ ಗೋದ್ರಾದಲ್ಲಿ ಹತ್ಯಾಕಾಂಡ ನಡೆದು, ಸಾವಿರಾರು ಅಮಾಯಕರು ಬಲಿಯಾಗಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದರು. 

- Advertisement - 

ವಿಮಾನ ಅಪಘಾತ, ರೈಲ್ವೇ ದುರಂತಗಳು ಸಾಲು ಸಾಲು ನಡೆದು ಎಷ್ಟೋ ಜನ ಬಲಿಯಾಗಿದ್ದಾರೆ, ಮಣಿಪುರ ಕಳೆದ ಕೆಲವು ವರ್ಷಗಳಿಂದ ಹೊತ್ತಿ ಉರಿಯುತ್ತಿದೆ, ಅಲ್ಲಿ ನಿತ್ಯವೂ ಜನ ಸಾಯುತ್ತಿದ್ದರೆ, ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಸೇತುವೆ ಕುಸಿದು ಜನ ಪ್ರಾಣ ಕಳೆದುಕೊಂಡಿದ್ದಾರೆ.

- Advertisement - 

ಆಗೆಲ್ಲ ಘಟನೆಯ ಹೊಣೆಹೊತ್ತು ಬಿಜೆಪಿಯವರು ರಾಜೀನಾಮೆ ನೀಡಿದ್ದಾರ? ಇದು ಸಮರ್ಥನೆ ಅಲ್ಲ, ವಾಸ್ತವಾಂಶ. ಸಾವು- ನೋವಿನಲ್ಲಿ ರಾಜಕೀಯ ಮಾಡುವುದು ಸರಿಯಲ್ಲ ಎನ್ನುವುದನ್ನು ಅವರು ಅರ್ಥ ಮಾಡಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

 

- Advertisement - 

 

Share This Article
error: Content is protected !!
";