ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ :
ಮಾನಸ ನರ್ಸಿಂಗ್ ಹೋಂ, ಮನಃಸ್ಪೂರ್ತಿ ಕಲಿಕಾ ತರಬೇತಿ ಕೇಂದ್ರ ಮತ್ತು ಮನಃಸ್ಪೂರ್ತಿ ವಿಶೇಷ ಶಾಲೆಯ ಮಕ್ಕಳಿಂದ ವಿಶೇಷವಾಗಿ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.
ಕಂದು ಮಿಶ್ರಿತ ಗುಲಾಬಿ ಬಣ್ಣಗಳಿಂದ ಕೂಡಿದ ಒಳಾಂಗಣ ಗಿಡಗಳನ್ನು ವಿದ್ಯಾರ್ಥಿಗಳು ಶಾಲೆಯ ಶಿಕ್ಷಕರು ಮತ್ತು ಸಂಯೋಜಕರೊಂದಿಗೆ ಹೋಗಿ ಮಾನಸ ಸಂಸ್ಥೆಯ ವೈದ್ಯರಿಗೆ ಗಿಡಗಳನ್ನು ನೀಡುವುದರ ಮೂಲಕ ಪರಿಸರ ದಿನಾಚರಣೆಯ ಶುಭಾಶಯಗಳು ಕೋರಿದರು.
ಪರಿಸರ ದಿನಾಚರಣೆ ಹಾಗೂ ಪರಿಸರ ರಕ್ಷಣೆಯ ವಿಷಯದ ಬಗ್ಗೆ ಚಿತ್ರಕಲಾ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ವಿಜೇತರಾದ ವಿದ್ಯಾರ್ಥಿಗಳಿಗೆ ಗಿಡಗಳನ್ನು ನೀಡುವುದರ ಮೂಲಕ ಪರಿಸರ ರಕ್ಷಣೆಯ ಬಗ್ಗೆ ಅರಿವನ್ನು ಮೂಡಿಸಿ ವಿಭಿನ್ನ ರೀತಿಯಲ್ಲಿ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.