ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ದೊಡ್ಡಬಳ್ಳಾಪುರ ತಾಲೂಕು ಇವರ ವತಿಯಿಂದ ಸಾಸಲು ಹೋಬಳಿಯ ಆರೂಡಿ ಗ್ರಾಮದ ಶ್ರೀ ವಡಸಲಮ್ಮ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಧರ್ಮಸ್ಥಳ ಕ್ಷೇತ್ರದ ವತಿಯಿಂದ
ಡಾ.ವೀರೇಂದ್ರ ಹೆಗ್ಗಡೆಯವರು ಎರಡು ಲಕ್ಷ ಮಂಜೂರಾತಿ ನೀಡಿದ್ದು ಇಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾ ನಿರ್ದೇಶಕರಾದ ಉಮರಬ್ಬ ರವರು 2 ಲಕ್ಷ ಡಿಡಿಯನ್ನು ದೇವಸ್ಥಾನ ಸಮಿತಿ ಯವರಿಗೆ ಹಸ್ತಾಂತರಿಸಿದರು,
ಈ ಸಂದರ್ಭದಲ್ಲಿ ತಾಲೂಕು ಯೋಜನಾಧಿಕಾರಿಗಳಾದ ದಿನೇಶ್ ಎನ್ ಆರ್ ಗ್ರಾಮದ ಮುಖಂಡರಾದ ಮಹೇಶ್, ರೇಣುಗೋಪಾಲ್, ನಾಗಣ್ಣ, ತಿಮ್ಮರಾಜು ,ರವಿ ಗಂಗಾಂಬಿಕೆ, ಭಾರತಿ ಆರೋಡಿ ವಲಯದ ಮೇಲ್ವಿಚಾರಕರಾದ ವಿಜಯಕುಮಾರ್ ಸೇವಾ ಪ್ರತಿನಿಧಿ ನವೀನ್ ಹಾಗೂ ಸ್ವಸಹಾಯ ಸಂಘದ ಸದಸ್ಯರು ಭಾಗವಹಿಸಿದ್ದರು.




