Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
National News

ಬ್ಯಾಂಡ್ ಬಾಜಾ ಗ್ಯಾಂಗ್ ನಿಂದ 51 ಲಕ್ಷದ ಚಿನ್ನಾಭರಣ ವಶ

ಚಂದ್ರವಳ್ಳಿ ನ್ಯೂಸ್, ದಾವಣಗೆರೆ :
ಜಿಲ್ಲೆಯ ರೆಸಾರ್ಟ್​ ಒಂದರಲ್ಲಿ ನಡೆಯುತ್ತಿದ್ದ ರಿಸಪ್ಷನ್​​ನಲ್ಲಿ 67 ಲಕ್ಷ ಮೌಲ್ಯದ ಚಿನ್ನಾಭರಣ ಕದ್ದು ತಮ್ಮೂರಿಗೆ ಪರಾರಿಯಾಗಿದ್ದ ಮಧ್ಯಪ್ರದೇಶ ರಾಜ್ಯ ಮೂಲದ ಬ್ಯಾಂಡ್ ಬಾಜಾ ಗ್ಯಾಂಗ್ ಪೊಲೀಸರು ಚಿನ್ನಾಭರಣ ತಂದಿರುವ ಘಟನೆ ದಾವಣಗೆರೆ ಜಿಲ್ಲೆಯಲ್ಲಿ ಜರುಗಿದೆ.


ಚಿನ್ನಾಭರಣಗಳ ಕಳವು ಪ್ರಕರಣವನ್ನು ಬೆನ್ನತ್ತಿದ ದಾವಣಗೆರೆ ಪೊಲೀಸರು ಪ್ರಕರಣದ ಜಾಡು ಹಿಡಿದು ಮಧ್ಯಪ್ರದೇಶಕ್ಕೆ ತೆರಳಿ ಈ ಗ್ಯಾಂಗ್​​ನಿಂದ 51 ಲಕ್ಷ ಮೌಲ್ಯದ ಚಿನ್ನಾಭರಣವನ್ನು ವಶಕ್ಕೆ ಪಡೆದಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾಪ್ರಶಾಂತ್ ಮಾತನಾಡಿ, ನವೆಂಬರ್ 14 ರಂದು ಕಳ್ಳತನಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದೆ.‌ಖಾಸಗಿ ರೆಸಾರ್ಟ್​ವೊಂದರಲ್ಲಿ ಮದುವೆಯ ರಿಸಪ್ಷನ್ ನಡೆಯುತ್ತಿತ್ತು. ಈ ಸಂಭ್ರಮದ ವೇಳೆ ಮಗುವೊಂದು ಡ್ಯಾನ್ಸ್ ಮಾಡುತ್ತಿತ್ತು. ಆಗ ದೂರುದಾರರ ತಾಯಿ ಚಿನ್ನಾಭರಣ ಇರುವ ಬ್ಯಾಗ್​ನ್ನು ನೆಲದ ಮೇಲಿಟ್ಟು ಚಪ್ಪಾಳೆ ತಟ್ಟಿ ನಂತರ ನೋಡಿದಾಗ ಅಲ್ಲಿ ಬ್ಯಾಗ್ ಇರಲಿಲ್ಲ.


ಇಡೀ ರೆಸಾರ್ಟ್ ಹುಡುಕಿದರೂ ಸುಳಿವು ಸಿಗಲಿಲ್ಲ. ಆಗ ನಾವು ಸಿಸಿಟಿವಿ, ಟೋಲ್​ಗಳನ್ನು ಪರಿಶೀಲನೆ ನಡೆಸಿದೆವು. ನಂತರ ನಮ್ಮ ಸಿಬ್ಬಂದಿ ಮಧ್ಯಪ್ರದೇಶದ ಸಿಸೋಡಿಯಾ ಗ್ಯಾಂಗ್ ಕಳ್ಳತನ ಮಾಡಿದೆ ಅಂದುಕೊಂಡು ಅಲ್ಲಿಗೆ ಹೋದರು ಎಂದು ತಿಳಿಸಿದ್ದಾರೆ.


ನಮ್ಮ ಸಬ್​​ಇನ್​​ಸ್ಪೆಕ್ಟರ್​​ ಹಾಗೂ ಸಿಬ್ಬಂದಿ ಸುಮಾರು 15 ದಿನ ಅಲ್ಲಿಯೇ ಬೀಡುಬಿಟ್ಟಿದ್ದರು. ನಂತರ ಅವರಿಗೆ ಇದು ಬ್ಯಾಂಡ್ ಬಾಜಾ ಗ್ಯಾಂಗ್ ಎಂಬುದು ಗೊತ್ತಾಗುತ್ತೆ. ಮಧ್ಯಪ್ರದೇಶದಲ್ಲಿನ ಹುಲಿಖೇಡ್, ಕೇಡಿಯಾ ಹಾಗೂ ಝಾನ್ಸಿಯಲ್ಲಿ ಇಂತವರು ಇದ್ದಾರೆ. ಇವರು ಕಾನೂನಿನಡಿ ಹೆಚ್ಚಿನ ಶಿಕ್ಷೆಯಾಗುವುದಿಲ್ಲ ಎಂದು ಕಳ್ಳತನಕ್ಕೆ ಅಪ್ರಾಪ್ತರನ್ನು ನೇಮಿಸಿಕೊಳ್ಳುತ್ತಾರೆ. ನಮ್ಮ ಗಮನ ಬೇರೆಡೆ ಹೋದಾಗ ಕಳ್ಳತನ ಮಾಡಿ ಅಲ್ಲಿಂದ ಪರಾರಿಯಾಗುತ್ತಾರೆ ಎಂದು ಎಸ್ಪಿ ಅವರು ತಿಳಿಸಿದ್ದಾರೆ.

ಮಧ್ಯಪ್ರದೇಶದ ಪಚೋರಿ ತಾಲೂಕಿನ ಬುಡಾ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಇವರ ಊರು ಬರಲಿದೆ. ನಮ್ಮ ಸಿಬ್ಬಂದಿ ಅಲ್ಲಿಗೆ ತೆರಳಿ ಅವರ ಮನೆಯನ್ನು ರೈಡ್ ಮಾಡಿ 524 ಗ್ರಾಂ ಚಿನ್ನವನ್ನು ರಿಕವರಿ ಮಾಡಿದ್ದಾರೆ ಎಂದು ಹೇಳಿದ್ದಾರೆ.

ಈ ಗ್ಯಾಂಗ್ ಇದೇ ರೀತಿ ದೇಶದಲ್ಲಿ ಎಲ್ಲೆಲ್ಲಿ ಶ್ರೀಮಂತರ ಮದುವೆ ಕಾರ್ಯಕ್ರಮ ನಡೆಯುತ್ತದೆಯೋ ಅಲ್ಲಿಗೆ ತೆರಳುತ್ತಾರೆ. ನಂತರ ಅಲ್ಲಿರುವ ಮಹಿಳೆಯರನ್ನು ಗಮನಿಸಿ ಅವರ ಗಮನ ಬೇರೆಡೆ ಹೋದಾಗ ಕದಿಯುತ್ತಾರೆ. ಅವರು ಬೇರೆಯವರಂತೆಯೇ ಮದುವೆ ಬಟ್ಟೆಯನ್ನು ಧರಿಸಿ ಹೋಗಿರುತ್ತಾರೆ. ಬೇರೆ ಯಾರಿಗೂ ಡೌಟ್ ಬರುವುದಿಲ್ಲ. ನಂತರ ಗಮನ ಡೈವರ್ಟ್​ ಆದಾಗ ಅಲ್ಲಿಂದ ಕದ್ದು ಪರಾರಿಯಾಗುತ್ತಾರೆ ಎಂದು ಉಮಾ ಅವರು ತಿಳಿಸಿದರು.


ಕೆಲವೊಮ್ಮೆ ನಮ್ಮ ದಾರಿ ತಪ್ಪಿಸಲು ಅವರು ದಾರಿ ಬದಲಾಯಿಸುತ್ತಾರೆ. ತಕ್ಷಣವೇ ಅವರು ಹೋಗುವುದಿಲ್ಲ. ಏಳೆಂಟು ತಾಸುಗಳ ನಂತರ ಅವರು ಅಲ್ಲಿಂದ ಹೋಗುತ್ತಾರೆ. ಯಾವುದೇ ರೀತಿಯ ಸಾಕ್ಷಿ ಬಿಡುವುದಿಲ್ಲ. ಎಲ್ಲೂ ಕೂಡಾ ಟೋಲ್​​ಗಳನ್ನು ಬಳಸುವುದಿಲ್ಲ. ಇಷ್ಟೆಲ್ಲ ಕ್ಲಿಷ್ಟಕರ ಇದ್ದರೂ ಕೂಡಾ ನಮ್ಮ ತಂಡ 15 ದಿನ ಅಲ್ಲಿ ತೆರಳಿ ಬಹಳ ಒಳ್ಳೆಯ ಕೆಲಸ ಮಾಡಿದ್ದಾರೆ. ಹಾಗಾಗಿ, ಡಿಎಸ್​​ಪಿ ಬಸವರಾಜ್​, ಇನ್​ಸ್ಪೆಕ್ಟರ್ ಅಣ್ಣಯ್ಯ, ಸಿಬ್ಬಂದಿ ಪ್ರಭು ಅವರ ಕಾರ್ಯಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

 

 

 

Advertisement

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಸಾಪ ಮಾಜಿ ಜಿಲ್ಲಾಧ್ಯಕ್ಷ, ಶಿಕ್ಷಣತಜ್ಞ ಡಾ. ಕೆ.ಎಂ. ವೀರೇಶ್ ಹೃದಯಾಘಾತದಿಂದ ನಿಧನದುರ್ಗಕ್ಕೆ ಹರಿದು ಬಂದ ಭದ್ರೆ- ಸೆ.24ರಂದು ಮುಖ್ಯಮಂತ್ರಿಗಳಿಂದ ಗಂಗಾಪೂಜೆ,  ಬೃಹತ್ ಸಾರ್ವಜನಿಕ ಸಮಾರಂಭಆರ್.ಎಲ್ ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ 22ನೇ ಘಟಿಕೋತ್ಸವ ಮತ್ತು ಪದವಿ ಪ್ರದಾನ ಕಾರ್ಯಕ್ರಮನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ ಬೈಕ್ ಸವಾರ ಸಾವುಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಸಭೆ ಹೋರಾಟಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಾತಿನಿಧ್ಯ ಕಡಿಮೆ- ಚಿಕ್ಕಪ್ಪನಹಳ್ಳಿ ಷಣ್ಮುಖಕುಂಚಿಟಿಗ ನೌಕರರ ಸಂಘಕ್ಕೆ ಸದಸ್ಯರಾಗಿ: ಎಸ್.ಕೆ ಲಕ್ಷ್ಮಣ್ಚಳವಳಿ ನೆನಪಾಗಿ ಉಳಿದ ‘ತೆಂಕ-ಬಡಗ’ಅಂತಾರಾಷ್ಟ್ರೀಯ ಶಾಂತಿ ದಿನ – ಮನದ ದ್ವೇಷ ಕರಗಿದಾಗಲೇ ಜಗದ ಶಾಂತಿ ಅರಳುವುದು!ಗಣಪತಿ ಮೆರವಣಿಗೆ ವೇಳೆ ಗಲಾಟೆ 7 ಯುವಕರ ವಿರುದ್ಧ ಸುಮೋಟೋ ಪ್ರಕರಣ ದಾಖಲು