Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
National News

ಸಾಮಾಜಿಕ ಚೇತನದ ಹೊಸ ಅಧ್ಯಾಯ ಡಾ.ರಾಜು ಬೇತೂರು ಪಾಳ್ಯ

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸಾಮಾಜಿಕ ನೀತಿಯ ವರ್ತಮಾನದಲ್ಲಿ ಡಾ. ಜೆ. ರಾಜು ಬೇತೂರು ಪಾಳ್ಯ ಅವರ ನಡೆ ಒಂದು ವಿಭಿನ್ನ ದಿಕ್ಕನ್ನು ತೋರಿಸುತ್ತಿದೆ. ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರಾಗಿ ಪದಗ್ರಹಣ ಮಾಡಿದ ನಂತರ
, ರಾಜಕೀಯ ಮಾನದಂಡಗಳನ್ನು ಮೀರಿ, ಸೇವಾ ಮನೋಭಾವದಿಂದ ಸತತವಾಗಿ ದಂತ ವೈದ್ಯಕೀಯ ಕ್ಷೇತ್ರಕ್ಕೆ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿರುವುದು ಅವರ ಜಾಣ್ಮೆ ಮತ್ತು ನಾಯಕತ್ವದ ಸ್ಪಷ್ಟ ಗುರುತು.

ಚಿತ್ರದುರ್ಗ ಜಿಲ್ಲೆಯ ಗ್ರಾಮಾಂತರ ಭಾಗಗಳಲ್ಲಿ ನಾಡಪ್ರಭು ಕೆಂಪೇಗೌಡರ ಪ್ರತಿಮೆ ಅನಾವರಣದ ಕಾರ್ಯಗಳಲ್ಲಿ ತಾವು ತೊಡಗಿಸಿಕೊಂಡದ್ದು ಕೇವಲ ಒಂದು ಕಾರ್ಯಕ್ರಮವಲ್ಲ ಅದು ಸಮಾಜದ ಆತ್ಮಗೌರವವನ್ನು ಎತ್ತಿಹಿಡಿಯುವ ಮಹತ್ವದ ಹೆಜ್ಜೆ. ಪಾವಗಡ ತಾಲ್ಲೂಕು ಹಾಗೂ ಅಮರಪುರ ಮಂಡಲದ ಭಾಗಗಳಲ್ಲಿ ಶಂಕುಸ್ಥಾಪನೆಗೆ ಸಹಾಯ ಹಸ್ತ ಚಾಚಿದ ಕ್ರಮ, ಅವರ ಸಮಾಜಪರ ಬದ್ಧತೆಯ ಪ್ರತಿಬಿಂಬ.

ದೇವಾಲಯ ನಿರ್ಮಾಣದಂತಹ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಗಳಲ್ಲಿ ಭಾಗವಹಿಸಿ, ಗ್ರಾಮೀಣ ಪ್ರದೇಶದ ಒಕ್ಕಲಿಗ ಬಂಧುಗಳಿಗೆ ಬೆಂಬಲ ನೀಡಿರುವುದು, ಅವರ ಮನಸ್ಸಿನ ದೊಡ್ಡತನವನ್ನು ತೋರಿಸುತ್ತದೆ. ಬೆಂಗಳೂರಿನ ಸಂಘಕ್ಕೆ ಬಂದ ಜಿಲ್ಲೆಯ ಬಂಧುಗಳಿಗೆ ಆತಿಥ್ಯ ನೀಡುವುದು, ಮನೆ ಹಾಗೂ ಗ್ರಾಮ ದೇವರ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು. ಇವೆಲ್ಲವೂ ಒಬ್ಬ ನಿಜವಾದ ಸಮಾಜಮುಖಿ ನಾಯಕನ ಲಕ್ಷಣಗಳು.

ಜಿಲ್ಲಾ ಹಾಗೂ ತಾಲೂಕು ಮಟ್ಟದ ಸಂಘಗಳ ಅಭಿವೃದ್ಧಿ ವಿಚಾರಗಳಲ್ಲಿ ಸ್ಪಂದಿಸಿರುವುದು, ಕೇವಲ ಮಾತಿನಲ್ಲಿ ಅಲ್ಲ, ಕಾರ್ಯದಲ್ಲಿ ತೋರಿದ ನಿಷ್ಠೆ. ಈ ಎಲ್ಲಾ ಸೂಕ್ಷ್ಮ ಸೇವೆಗಳು ಇಂದು ಸಮಾಜದಲ್ಲಿ ಪ್ರಾಯೋಗಿಕ ಪ್ರಯೋಜನಗಳಾಗಿ ಮೂಡಿ ಬರುತ್ತಿವೆ.

ವಿಶೇಷವಾಗಿ ಗಮನಾರ್ಹವಾದ ಸಂಗತಿಗಳು-
ದೇವಸ್ಥಾನ ಹಾಗೂ ಸಮಾಜಮುಖಿ ಕಾರ್ಯಗಳಿಗೆ ಧನಸಹಾಯ ನೀಡಿ
, ಸೇವೆಯ ಪರಂಪರೆಯನ್ನು ಬಲಪಡಿಸುತ್ತಿದ್ದಾರೆ.

ಸಮಾಜದ ಕಟ್ಟಕಡೆಯ ವರ್ಗದವರ ಜೊತೆ ನಿರಂತರ ಸಂಪರ್ಕದಲ್ಲಿದ್ದು, ಅವರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದಾರೆ. ಕೆಂಪೇಗೌಡ ಆಸ್ಪತ್ರೆಯಲ್ಲಿ ಸಮಾಜದವರಿಗೆ ನಿರಂತರ ಸೇವೆಯನ್ನು ನೀಡುತ್ತಾ, ಆರೋಗ್ಯ ಕ್ಷೇತ್ರದಲ್ಲಿಯೂ ತಮ್ಮ ಕೊಡುಗೆಯನ್ನು ನೀಡುತ್ತಿದ್ದಾರೆ.

ಇದುವರೆಗೆ ಜಿಲ್ಲಾ ಒಕ್ಕಲಿಗರ ಸಂಘದ ನಿರ್ದೇಶಕರು ಕೈಗೊಂಡಿರದ ಹಲವು ಕಾರ್ಯಗಳನ್ನು ಕೈಗೆತ್ತಿಕೊಂಡು, ನೂತನ ದಾರಿಯನ್ನು ನಿರ್ಮಿಸುತ್ತಿದ್ದಾರೆ.

ಈ ಎಲ್ಲಾ ಕಾರ್ಯಗಳನ್ನು ಗಮನಿಸಿದಾಗ, ಡಾ. ಜೆ. ರಾಜು ಅವರ ಸಮಾಜಮುಖಿ ನಿಲುವು ನಿಜವಾಗಿಯೂ ಮೆಚ್ಚುವಂತಹದು ಮಾತ್ರವಲ್ಲ ಅದು ಅನುಕರಣೀಯವೂ ಆಗಿದೆ.

ಇದುವರೆಗೆ ಒಕ್ಕಲಿಗ ಸಂಘದ ನಿರ್ದೇಶಕರ ಸ್ಥಾನವು ಸೀಮಿತ ವಲಯದಲ್ಲೇ ಉಳಿದಿತ್ತು. ದಿವಂಗತ ಬಿ.ಎಲ್. ಗೌಡರವರ ಕುಟುಂಬದವರೇ ಪ್ರತಿನಿಧಿಸುತ್ತಿದ್ದ ಪರಿಸ್ಥಿತಿಯಲ್ಲಿ, ಬದಲಾವಣೆಯ ಕನಸು ದೂರವಾಗಿತ್ತು. ಆದರೆ ಕಳೆದ ಚುನಾವಣೆಯಲ್ಲಿ ನಡೆದ ವಿರೋಧಗಳು, ರಾಜಕೀಯ ತಂತ್ರಗಾರಿಕೆಗಳು, ಅತಿರಥ ಮಹಾರಥರ ಪ್ರಯತ್ನಗಳ ನಡುವೆಯೂ, ಡಾ. ಜೆ. ರಾಜು ಅವರ ಜಯವು ಸಾಮಾನ್ಯ ಘಟನೆ ಅಲ್ಲ ಅದು ಇತಿಹಾಸದಲ್ಲಿ ಅಚ್ಚಳಿಯದ ಸಾಧನೆ.

ಈ ಜಯವು ಕೇವಲ ವ್ಯಕ್ತಿಯ ಜಯವಲ್ಲ, ಸಮಾಜದ ಜಾಗೃತಿಯ ಪ್ರತಿಫಲ. ಒಕ್ಕಲಿಗ ಒಕ್ಕದೀರೆ ಬಿಕುವುದು ಜಗವೆಲ್ಲಎಂಬ ಮಾತಿಗೆ ನಿಜವಾದ ಅರ್ಥವನ್ನು ತುಂಬಿದ ಕ್ಷಣ ಇದು.


ಇನ್ನು ಮುಂದೆ
, ಈ ದಾರಿಯಲ್ಲೇ ಸಾಗೋಣ ವ್ಯಕ್ತಿಗತ ರಾಜಕೀಯಕ್ಕಿಂತ ಸಮಾಜಮುಖಿ ಸೇವೆಯನ್ನು ಹೆಚ್ಚಿಸೋಣ. ಒಗ್ಗಟ್ಟೇ ನಮ್ಮ ಶಕ್ತಿ, ಸೇವೆಯೇ ನಮ್ಮ ಗುರುತು. ನಾವು ಒಂದಾದರೆ ನಮ್ಮ ಶಕ್ತಿ ಅಜೇಯ!
ಲೇಖನ-ಶ್ರೀನಿವಾಸ್ ಕೆ.ಟಿ, ಬೆಂಗಳೂರು.

Advertisement

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಸಾಪ ಮಾಜಿ ಜಿಲ್ಲಾಧ್ಯಕ್ಷ, ಶಿಕ್ಷಣತಜ್ಞ ಡಾ. ಕೆ.ಎಂ. ವೀರೇಶ್ ಹೃದಯಾಘಾತದಿಂದ ನಿಧನದುರ್ಗಕ್ಕೆ ಹರಿದು ಬಂದ ಭದ್ರೆ- ಸೆ.24ರಂದು ಮುಖ್ಯಮಂತ್ರಿಗಳಿಂದ ಗಂಗಾಪೂಜೆ,  ಬೃಹತ್ ಸಾರ್ವಜನಿಕ ಸಮಾರಂಭಆರ್.ಎಲ್ ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ 22ನೇ ಘಟಿಕೋತ್ಸವ ಮತ್ತು ಪದವಿ ಪ್ರದಾನ ಕಾರ್ಯಕ್ರಮನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ ಬೈಕ್ ಸವಾರ ಸಾವುಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಸಭೆ ಹೋರಾಟಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಾತಿನಿಧ್ಯ ಕಡಿಮೆ- ಚಿಕ್ಕಪ್ಪನಹಳ್ಳಿ ಷಣ್ಮುಖಕುಂಚಿಟಿಗ ನೌಕರರ ಸಂಘಕ್ಕೆ ಸದಸ್ಯರಾಗಿ: ಎಸ್.ಕೆ ಲಕ್ಷ್ಮಣ್ಚಳವಳಿ ನೆನಪಾಗಿ ಉಳಿದ ‘ತೆಂಕ-ಬಡಗ’ಅಂತಾರಾಷ್ಟ್ರೀಯ ಶಾಂತಿ ದಿನ – ಮನದ ದ್ವೇಷ ಕರಗಿದಾಗಲೇ ಜಗದ ಶಾಂತಿ ಅರಳುವುದು!ಗಣಪತಿ ಮೆರವಣಿಗೆ ವೇಳೆ ಗಲಾಟೆ 7 ಯುವಕರ ವಿರುದ್ಧ ಸುಮೋಟೋ ಪ್ರಕರಣ ದಾಖಲು