Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News

ಸಹಜ ಕೃಷಿಯಿಂದ ಸಂತೃಪ್ತ ಜೀವನಕ್ಕೆ ದಾರಿ

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಜಿಲ್ಲಾ ಕೃಷಿ ತರಬೇತಿ ಕೇಂದ್ರ ಹಾಗೂ ದಾವಣಗೆರೆ ಐಕಾಂತಿಕ ಸಮುದಾಯ ಸಹಯೋಗದಲ್ಲಿ ಹಿರಿಯೂರು ತಾಲ್ಲೂಕು ಬಬ್ಬೂರು ಫಾರಂನಲ್ಲಿ ಜಿಲ್ಲೆಯ ರೈತರಿಗೆ ಸಹಜ ಕೃಷಿ - ಸಂತೃಪ್ತ ಜೀವನಕ್ಕೆ ದಾರಿ’’ಎಂಬ ವಿಷಯದ ಕುರಿತು ಮೂರು ದಿನದ ತರಬೇತಿ ಕಾರ್ಯಗಾರವನ್ನು ಸೋಮವಾರ ಉದ್ಘಾಟನೆ ಮಾಡಲಾಯಿತು.

.15 ರಿಂದ .17 ವರೆಗೆ ನಡೆಯುವ ಕಾರ್ಯಗಾರದ ನಡೆಯಲಿದೆ. ಉದ್ಘಾಟನೆ ಕಾರ್ಯಕ್ರಮದಲ್ಲಿ ದಾವಣಗೆರೆಯ ಐಕಾಂತಿಕ ತೋಟದ ರಾಘವ ಅವರು ನಮ್ಮ ಸುತ್ತಲಿನ ಪ್ರಪಂಚದಲ್ಲಿ ಪ್ರಸ್ತುತ ಆಗು ಹೋಗುಗಳು - ಕುಟುಂಬದ ಆರ್ಥಿಕತೆ, ದೇಶ ಮತ್ತು ಪ್ರಪಂಚದ ಆರ್ಥಿಕತೆ ಕುರಿತು ವಿಷಯ ಮಂಡನೆ ಮಾಡನೆ ಮಾಡಿದರು.

ಸಹಜ ಜೀವನ ಶೈಲಿಯ ನಿಜವಾದ ಆಹಾರ, ನೈಸರ್ಗಿಕ ಆರೋಗ್ಯ ಚಿಕಿತ್ಸಾ ಪರಿಹಾರಗಳು, ನೈಸರ್ಗಿಕ ಕಟ್ಟಡ, ಸ್ವಚ್ಛತೆಯ ಸಹಜ ವಸ್ತುಗಳ ಕುರಿತು ರೈತಬಾಂಧವರಿಗೆ ಮನದಟ್ಟು ಮಾಡಿಕೊಟ್ಟರು. ಸಹಜ ಕೃಷಿ ಅಳವಡಿಸಿ ಯಶಸ್ವಿಯಾದ ಐಕಾಂತಿಕ ಸಮುದಾಯದ

ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ವಿವಿಧ ಭಾಗದ ಪ್ರಗತಿಪರ ಸಹಜ ಕೃಷಿಕರ ಯಶೋಗಾಥೆಗಳನ್ನು ಮತ್ತು ಜಪಾನಿನ ಸಹಜ ಕೃಷಿಯ ಹರಿಕಾರರಾದ  ಮಸನೊಬು ಫುಕುವೋಕ ಅವರ ಸಹಜ ಕೃಷಿಯ ಅನುಭವಗಳ ಚಿತ್ರಗಳು ಹಾಗೂ ದೃಶ್ಯಗಳನ್ನು ರಾಘವವರು ರೈತರೊಂದಿಗೆ ಹಂಚಿಕೊಂಡರು.

ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ಕೃಷಿ ನಿರ್ದೇಶಕ ರಜನೀಕಾಂತ. ಆರ್ ಇವರು ರೈತರನ್ನು ಮತ್ತು ಆಗಮಿಸಿದ ಐಕಾಂತಿಕ ಸಮುದಾಯದ ಪ್ರಗತಿಪರ ಸಹಜ ಕೃಷಿಕರನ್ನು ಸ್ವಾಗತಿಸಿ ಪ್ರಸ್ತುತ ಸಹಜ ಜೀವನ ಮತ್ತು ಸಹಜ ಕೃಷಿಯ ಅನಿವಾರ್ಯತೆ ಕುರಿತು ಪ್ರಸ್ತಾವಿಕವಾಗಿ ಮಾತನಾಡಿದರು.

ಮೊದಲ ದಿನದ ಕಾರ್ಯಾಗಾರದಲ್ಲಿ ಐಕಾಂತಿಕ ಸಮುದಾಯದ ಅಭಿಷೇಕ್ಅವರು ದಿನ ನಿತ್ಯ ಜೀವನದಲ್ಲಿ ಬಳಸುವ ಪ್ಲಾಸ್ಟಿಕ್ ನಿಂದ ಆಗುವ ದುಷ್ಪರಿಣಾಮ ಕುರಿತು ಅರಿವು ಮೂಡಿಸುತ್ತಾ ಪರ್ಯಾಯ ಕ್ರಮಗಳ ಕುರಿತು ಮಾಹಿತಿ ನೀಡಿದರು.

ಪಾಂಡುರಂಗ ಅವರು ನೈಸರ್ಗಿಕ ಉಡುಪು ಹಾಗೂ ಬರಿಗಾಲಿನ ನಡಿಗೆಯಿಂದ ಆಗುವ ಅನುಕೂಲತೆಯನ್ನು ವಿವರಿಸಿದರು. ನಿರಂಜನ್ ಅವರು ಕೃಷಿಯು ಬೆಳೆದು ಬಂದ ಹಾದಿಯ ಕುರಿತು ವಿವರಿಸುತ್ತಾ ಭೂಗೋಳದಲ್ಲಿ ಮಣ್ಣು, ಸಸ್ಯರಾಶಿ, ಜೀವರಾಶಿ ಹಾಗೂ ಮೂರರ ಸಮತೋಲನ ವ್ಯವಸ್ಥೆ ಕುರಿತು ತಿಳಿಸಿದರು.

ಸುಜಿತ್ ಮತ್ತು ಪಾಂಡುರಂಗಚಾರಿ ಅವರು ಪ್ರಸ್ತುತ ಇರುವ ತೋಟವನ್ನು ಸಹಜ ಕೃಷಿ ಅಳವಡಿಸಿ ಉತ್ತಮಪಡಿಸುವ ವಿಚಾರಗಳನ್ನು ತಿಳಿಸಿದರು. ವೀರೇಶ್ ಅವರು ಸಜೀವ ಮಣ್ಣಿನ ಪ್ರಾಮುಖ್ಯತೆ ಕುರಿತು ರೈತರಲ್ಲಿ ವಿಷಯ ಪ್ರಸ್ತಾಪಿಸಿದರು.

ನಂತರ ರೈತರಲ್ಲಿ ಉದ್ಬವಿಸಿದ ವಿವಿಧ ಪ್ರಶ್ನೆ ಸಂದೇಹಗಳ ಬಗ್ಗೆ ಚರ್ಚಾ ಗೋಷ್ಠಿ ನಡೆಸಲಾಯುತು. ಕಾರ್ಯಗಾರಕ್ಕೆ ಹಾಜರಾದ ಆಸಕ್ತ 60 ಜನ ರೈತರಿಗೆ ಗಾಣದಿಂದ ತೆಗೆದ ಶುದ್ಧ ಕೊಬ್ಬರಿ ಎಣ್ಣೆ, ವಿಷಮುಕ್ತವಾಗಿ ಬೆಳೆದ ಕಂದು ಬಣ್ಣದ ಅಕ್ಕಿ, ಕೆಂಪಕ್ಕಿ ಮತ್ತು ಸಿರಿಧಾನ್ಯಗಳಿಂದ ತಯಾರಿಸಿದ ಸಾತ್ವಿಕ ಆಹಾರ, ರಾಗಿ ಅಂಬಲಿ ಮತ್ತು ಕಷಾಯವನ್ನು ನೀಡಲಾಯಿತು.

Advertisement

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಸಾಪ ಮಾಜಿ ಜಿಲ್ಲಾಧ್ಯಕ್ಷ, ಶಿಕ್ಷಣತಜ್ಞ ಡಾ. ಕೆ.ಎಂ. ವೀರೇಶ್ ಹೃದಯಾಘಾತದಿಂದ ನಿಧನದುರ್ಗಕ್ಕೆ ಹರಿದು ಬಂದ ಭದ್ರೆ- ಸೆ.24ರಂದು ಮುಖ್ಯಮಂತ್ರಿಗಳಿಂದ ಗಂಗಾಪೂಜೆ,  ಬೃಹತ್ ಸಾರ್ವಜನಿಕ ಸಮಾರಂಭಆರ್.ಎಲ್ ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ 22ನೇ ಘಟಿಕೋತ್ಸವ ಮತ್ತು ಪದವಿ ಪ್ರದಾನ ಕಾರ್ಯಕ್ರಮನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ ಬೈಕ್ ಸವಾರ ಸಾವುಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಸಭೆ ಹೋರಾಟಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಾತಿನಿಧ್ಯ ಕಡಿಮೆ- ಚಿಕ್ಕಪ್ಪನಹಳ್ಳಿ ಷಣ್ಮುಖಕುಂಚಿಟಿಗ ನೌಕರರ ಸಂಘಕ್ಕೆ ಸದಸ್ಯರಾಗಿ: ಎಸ್.ಕೆ ಲಕ್ಷ್ಮಣ್ಚಳವಳಿ ನೆನಪಾಗಿ ಉಳಿದ ‘ತೆಂಕ-ಬಡಗ’ಅಂತಾರಾಷ್ಟ್ರೀಯ ಶಾಂತಿ ದಿನ – ಮನದ ದ್ವೇಷ ಕರಗಿದಾಗಲೇ ಜಗದ ಶಾಂತಿ ಅರಳುವುದು!ಗಣಪತಿ ಮೆರವಣಿಗೆ ವೇಳೆ ಗಲಾಟೆ 7 ಯುವಕರ ವಿರುದ್ಧ ಸುಮೋಟೋ ಪ್ರಕರಣ ದಾಖಲು