Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
International News

ಅಬ್ ಕಿ ಬಾರ್ ಟ್ರಂಪ್ ಕಿ ಸರ್ಕಾರ್

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
" ಅಬ್ ಕಿ ಬಾರ್ ಟ್ರಂಪ್ ಕಿ ಸರ್ಕಾರ್ "
ಹೀಗೆ 2020 ರ ಅಮೆರಿಕಾದ ಅಧ್ಯಕ್ಷೀಯ  ಚುನಾವಣೆಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಆಗಿನ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪರವಾಗಿ ಅಮೆರಿಕದಲ್ಲಿಯೇ ಒಂದು ಚುನಾವಣಾ ಭಾಷಣ ಮಾಡಿದರು. ಮೂಲಭೂತವಾಗಿ ಈ ಭಾಷಣ ಭಾರತದ ಅಲಿಪ್ತ ನೀತಿಗೆ ವಿರುದ್ಧವಾಗಿತ್ತು.

ಹಾಗೆಯೇ ಭಾರತದಂತ ಜಗತ್ತಿನ ಬಹುದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದ ಪ್ರಧಾನಿ ಇನ್ನೊಂದು ರಾಷ್ಟ್ರದ ಚುನಾವಣೆಯಲ್ಲಿ ಒಬ್ಬ ಅಭ್ಯರ್ಥಿಯ ಪರವಾಗಿ ಪ್ರಚಾರ ಮಾಡುವುದು ಉತ್ತಮ ನಡೆಯಾಗಿರಲಿಲ್ಲ. ಜೊತೆಗೆ ಇದು ಮೋದಿಯವರ  ವಿದೇಶಾಂಗ ನೀತಿಯ ದೂರದೃಷ್ಟಿತ್ವ ಮತ್ತು ಗ್ರಹಿಕೆಯ ಕೊರತೆಯಲ್ಲಿನ ತಪ್ಪು ತೀರ್ಮಾನವಾಗಿತ್ತು. ಈಗ ಅದು ನಿಜವಾಗಿದೆ.

ಕೊನೆಗೂ ಆ ಚುನಾವಣೆಯಲ್ಲಿ ಟ್ರಂಪ್ ಸೋತು ಜೋ ಬೈಡನ್ ಅಧ್ಯಕ್ಷರಾಗುತ್ತಾರೆ. ಅಲ್ಲಿಂದಲೇ ಭಾರತ ಅಮೆರಿಕಾದ ನಡುವಿನ ಸಂಬಂಧ ಸ್ವಲ್ಪ ಮಟ್ಟಿಗೆ ಕುಸಿಯತೊಡಗಿತು.

ವಾಸ್ತವವಾಗಿ ಅಮೆರಿಕಾದ ಅಧ್ಯಕ್ಷರಲ್ಲಿಯೇ ಅತ್ಯಂತ ಕೆಳಮಟ್ಟದ ನೈತಿಕತೆಯನ್ನು ಹೊಂದಿರುವವರು ಡೊನಾಲ್ಡ್ ಟ್ರಂಪ್. ಅಮೆರಿಕಾದ ಘನತೆಯನ್ನು ಮಣ್ಣು ಪಾಲು ಮಾಡುತ್ತಿರುವವರು. ಅಮೆರಿಕಾದ ಶ್ರೇಷ್ಠತೆಯನ್ನು ಪ್ರಶ್ನಿಸುವಂತೆ ಮಾಡುತ್ತಿರುವವರು. ಅಮೆರಿಕಾದ ನಾಯಕತ್ವವನ್ನು, ವಿಶ್ವದ ದೊಡ್ಡಣ್ಣ ಎಂಬ ಬಿರುದನ್ನು ಕಳೆದುಕೊಳ್ಳುವಂತೆ ಮಾಡುತ್ತಿರುವವರು. ಅಂತಹ ವ್ಯಕ್ತಿಯನ್ನು ನರೇಂದ್ರ ಮೋದಿಯವರು ಬೆಂಬಲಿಸಿದ್ದು ಸರಿ ಅನಿಸಲಿಲ್ಲ.

ಇದೀಗ ಎರಡನೇ ಬಾರಿ ಅಮೆರಿಕಾದ ಅಧ್ಯಕ್ಷರಾದ ನಂತರ ಡೊನಾಲ್ಡ್ ಟ್ರಂಪ್ ಅವರ ಅನೇಕ ಕಾರ್ಯ ವಿಧಾನ, ಅದರಲ್ಲೂ ಮುಖ್ಯವಾಗಿ ಭಾರತದೊಂದಿಗೆ ಅವರ ವ್ಯವಹಾರ ಮತ್ತು ಸಂವಹನ ತುಂಬಾ ಕೆಟ್ಟದಾಗಿದೆ. ವಿಶ್ವದ ಬಲಿಷ್ಠ ದೇಶದ ಅಧ್ಯಕ್ಷರು ಮಾತನಾಡಬಾರದ ರೀತಿಯಲ್ಲಿ, ಆಡಬಾರದ ಮಾತುಗಳನ್ನು, ಹೇಳಬಾರದ ಶೈಲಿಯಲ್ಲಿ ಹೇಳುತ್ತಿದ್ದಾರೆ. ಹೌದು, ಭಾರತದಂತ ದೇಶದೊಂದಿಗೆ ವ್ಯವಹರಿಸುವಾಗ ಅಮೆರಿಕಾದ ಅಧ್ಯಕ್ಷರು ಒಂದಷ್ಟು ಸಂಯಮವನ್ನು, ಪ್ರಬುದ್ಧತೆಯನ್ನು ಪ್ರದರ್ಶಿಸಬೇಕು. ಭಾರತ ವಿಶ್ವದ ಇತರ ದೇಶಗಳಂತಲ್ಲ. ಭಾರತವು ತನ್ನದೇ ಆದ ಘನತೆಯನ್ನು ಹೊಂದಿದೆ, ವೈವಿಧ್ಯತೆಯನ್ನು ಹೊಂದಿದೆ, ಮೌಲ್ಯಗಳನ್ನು ಹೊಂದಿದೆ. ಅದನ್ನು ಗೌರವಿಸಬೇಕಾಗಿರುತ್ತದೆ.

ಆರ್ಥಿಕವಾಗಿ, ಸೈನಿಕವಾಗಿ ಅಮೆರಿಕ ಎಷ್ಟೇ ಬಲಿಷ್ಠವಾಗಿರಬಹುದು. ಆದರೆ ಭಾರತದ ಅಲಿಪ್ತ ವಿದೇಶಾಂಗ ನೀತಿ ವಿಶ್ವದ ಶಾಂತಿ ಸೌಹಾರ್ದತೆಗೆ ಬಲವಾದ ಅಡಿಪಾಯವನ್ನು ಹಾಕಿದೆ. ಜಾಗತಿಕವಾಗಿ ಭಾರತ ಹಿಂದಿನಿಂದಲೂ ಯಾವುದೇ ಆಕ್ರಮಣಕಾರಿ ಮನೋಭಾವ ತೋರದೇ ಸದಾ ಹಿಂಸೆಯ ವಿರುದ್ಧವಾಗಿ ಹೋರಾಡುತ್ತಲೇ ಇದೆ. ಅದನ್ನು ಟ್ರಂಪ್ ಗಮನಿಸಿದಂತೆ ಕಾಣುತ್ತಿಲ್ಲ. ಭಯೋತ್ಪಾದನಾ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವ ಪಾಕಿಸ್ತಾನಕ್ಕೆ ನೀಡುತ್ತಿರುವ ಬೆಂಬಲ ಅಮೇರಿಕಾದ ವಿದೇಶಾಂಗ ನೀತಿಯ ಸೂಕ್ತವಲ್ಲ.

" ಭಾರತ ಸತ್ತ ಆರ್ಥಿಕತೆಯನ್ನು ಹೊಂದಿದೆ " ಎಂಬರ್ಥದ ಮಾತನ್ನು ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಇರಬಹುದು ಭಾರತದ ಆರ್ಥಿಕತೆ  ಅಮೆರಿಕಾದ ಆರ್ಥಿಕತೆಗೆ ಹೋಲಿಕೆ ಮಾಡಿದಾಗ ತೀರ ಚಿಕ್ಕದಿರಬಹುದು. ಭಾರತ ಮತ್ತು ಅಮೆರಿಕಾದೊಂದಿಗಿನ ವಾಣಿಜ್ಯ ವ್ಯವಹಾರಗಳು ತುಂಬಾ ದೊಡ್ಡದಲ್ಲದೇ ಇರಬಹುದು. ಆದರೆ ಭಾರತ ಮತ್ತು ಅಮೆರಿಕಾದ ನಡುವಿನ ಪ್ರಜಾಪ್ರಭುತ್ವದ ಮೌಲ್ಯಗಳು, ಸ್ವಾತಂತ್ರ್ಯ, ಸಮಾನತೆಯ, ದೃಷ್ಟಿಕೋನಗಳು ಮತ್ತು ಇಲ್ಲಿನ, ಅಲ್ಲಿನ ಜನರ ನಡುವಿನ ಸಾಂಸ್ಕೃತಿಕ, ಶೈಕ್ಷಣಿಕ ಒಡನಾಟಗಳು, ವಿಶ್ವದ ಇತರ ಯಾವುದೇ ದೇಶಗಳಿಗಿಂತ ಅತ್ಯುತ್ತಮ ಬಾಂಧವ್ಯವನ್ನು ಹೊಂದಿದೆ. ಅದನ್ನು ಡೊನಾಲ್ಡ್ ಟ್ರಂಪ್ ಅರ್ಥ ಮಾಡಿಕೊಳ್ಳಬೇಕಿದೆ. ತಮ್ಮ ಮಾತಿನ ಮೇಲೆ ನಿಯಂತ್ರಣ ಹೇರಿಕೊಳ್ಳಬೇಕಿದೆ.

ಹಾಗೆಯೇ ಮೋದಿಯವರು ಸಹ ಭಾರತದ ವಿದೇಶಾಂಗ ನೀತಿಯನ್ನು ಇನ್ನಷ್ಟು ಆಳವಾಗಿ, ವಿಶಾಲವಾಗಿ, ತೂಕವಾಗಿ ರೂಪಿಸಬೇಕಿದೆ. ತಮಗೆ ಅನುಕೂಲಕರವಾದ, ತಮ್ಮೊಂದಿಗೆ ಆತ್ಮೀಯವಾಗಿರುವ ವ್ಯಕ್ತಿಯೊಂದಿಗೆ, ವೈಯಕ್ತಿಕವಾಗಿ ವ್ಯವಹರಿಸಬೇಕೆ ಹೊರತು ದೇಶದ ನೀತಿಯೊಂದಿಗೆ ಅದರ ಹಿತಾಸಕ್ತಿಯನ್ನು ಬಲಿ ಕೊಡಬಾರದು. ವೈಯಕ್ತಿಕ ಸ್ನೇಹವೇ ಬೇರೆ, ದೇಶದ ಮೂಲ ನೀತಿ ನಿಯಮಗಳೆ ಬೇರೆ. ಅದನ್ನು ಸದಾ ಗಮನದಲ್ಲಿಟ್ಟುಕೊಂಡಿರಬೇಕು.

ಡೊನಾಲ್ಡ್ ಟ್ರಂಪ್ ಒಂದು ರೀತಿ ಜೂಜಾಟದ ಜೋಕರ್ ನಂತೆ. ತನಗೆ ಈ ಕ್ಷಣದ ಲಾಭಗಳೇನಿದೆಯೋ ಆ ರೀತಿ ತಮ್ಮ ವಿದೇಶಾಂಗ ನೀತಿಯನ್ನು ರೂಪಿಸಿಕೊಳ್ಳುತ್ತಿದ್ದಾರೆ. ಅವರು ಖಂಡಿತ ವಿಶ್ವಾಸಾರ್ಹವಲ್ಲ. ಜೊತೆಗೆ ಅಮೆರಿಕಾಗೂ ಕೂಡ ಈ ವ್ಯಕ್ತಿ ಅಪಾಯಕಾರಿಯಾಗಬಹುದು.

ಅವರ ಅಂತಾರಾಷ್ಟ್ರೀಯ ತೆರಿಗೆ ನೀತಿ, ವೀಸಾ ನೀತಿ, ವಲಸಿಗರ ವಿರುದ್ದದ ಕಾರ್ಯಾಚರಣೆ, ವಿದೇಶಾಂಗ ವ್ಯವಹಾರಗಳು ಎಲ್ಲವೂ ಭವಿಷ್ಯದ ದೃಷ್ಟಿಯಿಂದ ಗುಣಮಟ್ಟವಿಲ್ಲದ ಕಳಪೆ ನಿರ್ಧಾರಗಳು. ದೊಡ್ಡಣ್ಣ ತಾನೇ ರೂಪಿಸಿದ ಬಲೆಯೊಳಗೆ ಸಿಲುಕಿ ಬಿಲದೊಳಗೆ ಅಡಗುವ ಪರಿಸ್ಥಿತಿಯನ್ನು ತಾವೇ ನಿರ್ಮಿಸಿಕೊಳ್ಳತ್ತಿದ್ದಾರೆ. ಮುಂದಿನ ಜಾಗತಿಕ ಬೆಳವಣಿಗೆ ಕೂತೂಹಲಕಾರಿಯಾಗಿದೆ......
ಲೇಖನ-ವಿವೇಕಾನಂದ. ಎಚ್. ಕೆ.
9663750451

 

 

 

Advertisement

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಚಿತ್ರದುರ್ಗ: 25,000 ರೂ. ಲಂಚ ಪಡೆಯುತ್ತಿದ್ದ ಉಪವಿಭಾಗಾಧಿಕಾರಿ ಕಚೇರಿಯ ಪ್ರಥಮ ದರ್ಜೆ ಸಹಾಯಕ ಲೋಕಾಯುಕ್ತ ಬಲೆಗೆಪಶ್ಚಿಮಘಟ್ಟ ಸಂರಕ್ಷಣೆ: ಕಸ್ತೂರಿ ರಂಗನ್ ವರದಿ ಸ್ಯಾಟಲೈಟ್ ಮ್ಯಾಪಿಂಗ್ ಒಪ್ಪಲು ಸಾಧ್ಯವಿಲ್ಲ; ಬಿ.ಕೆ.ಹರಿಪ್ರಸಾದ್ಸೌಜನ್ಯಾ ಅತ್ಯಾಚಾರ ಹಾಗೂ ಕೊಲೆ ಪ್ರಕರಣ: ಮರುತನಿಖೆಗೆ ಸುಪ್ರೀಂ ಕೋರ್ಟ್ ಆದೇಶಶಾಸಕ ಎಸ್. ಸುರೇಶ್ ಕುಮಾರ್ ಅವರು "ಸಜ್ಜನ" ಎಂಬ ಮುಖವಾಡ ಧರಿಸಿದ ದುರ್ಜನಸರ್ಕಾರದ ಅನುದಾನಕ್ಕೆ ಕಾಯದೆ ಸ್ವಂತ ಖರ್ಚಿನಲ್ಲಿ ಕಾಲುವೆ ದುರಸ್ತಿಗೆ ಮುಂದಾದ ಎಚ್.ಡಿ. ರೇವಣ್ಣಹೈಕೋರ್ಟ್‌ನಿಂದ ಕೆಪಿಎಸ್‌ಸಿ ಪಶುವೈದ್ಯಾಧಿಕಾರಿ ನೇಮಕಾತಿ ಹಗರಣಕ್ಕೆ ಎಸ್‌ಐಟಿ ತನಿಖೆಗೆ ಆದೇಶಆಲಮಟ್ಟಿ ಜಲಾಶಯ ಎತ್ತರ ಹೆಚ್ಚಳ: ಯುಕೆಪಿ ಹಂತ-3ರ ಭೂಸ್ವಾಧೀನ ಪ್ರಕ್ರಿಯೆಗೆ ಚುರುಕುವ್ಯಾಪಕ ಭ್ರಷ್ಟಾಚಾರ: ಕಾಮಗಾರಿಗಳ ಶ್ವೇತಪತ್ರ ಹೊರಡಿಸಲು ಆಂಜನೇಯ ಆಗ್ರಹ‘ಗೌರವಯುತ ಲಂಚ’: ಕಾಂಗ್ರೆಸ್ ಸರ್ಕಾರದ ಹೊಸ 'ಪ್ರಜಾಸೇವಾ ಶುಲ್ಕ' ಎಂದು ಆರ್. ಅಶೋಕ್ಸ್ವಪಕ್ಷೀಯರ ಆಕ್ರೋಶವೇ ಕಾಂಗ್ರೆಸ್ ಸರ್ಕಾರದ ವೈಫಲ್ಯಕ್ಕೆ ಸಾಕ್ಷಿ: ಆರ್. ಅಶೋಕ್ ವಾಗ್ದಾಳಿ