Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
National News

ಸಾಧನೆ ಮಾಡುವುದು ಪ್ರಶಸ್ತಿಗಲ್ಲ ಆತ್ಮ ತೃಪ್ತಿಗೆ- ಡಾ.ಬಸವ ಕುಮಾರ ಸ್ವಾಮೀಜಿ

ಸಾಧನೆ ಮಾಡುವುದು ಪ್ರಶಸ್ತಿಗಲ್ಲ ಆತ್ಮ ತೃಪ್ತಿಗೆ- ಡಾ.ಬಸವ ಕುಮಾರ ಸ್ವಾಮೀಜಿ
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ
:
ಸಾಧನೆ ಮಾಡುವುದು ಪ್ರಶಸ್ತಿಗಲ್ಲ ನಮ್ಮ ಆತ್ಮ ತೃಪ್ತಿಗೆ, ಸಾಧಕರ ಸಾಧನೆ ನಮ್ಮೆಲ್ಲರಿಗೂ ಪ್ರೇರಣೆಯಾಗಲಿ ಎಂದು ಡಾ.ಬಸವ ಕುಮಾರ ಸ್ವಾಮೀಜಿ ಹೇಳಿದರು.


ಚಿತ್ರದುರ್ಗದ ಬಾಪೂಜಿ ಸಮೂಹ ಸಂಸ್ಥೆಗಳ ಆವರಣದಲ್ಲಿ ಪ್ರಥಮ್ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ , ವಿಜಯ ಕಿರಣ ಪರಿಸರ ಸಂಸ್ಥೆ ಹಾಗೂ ವಿಶ್ವ ಕನ್ನಡ ಕಲಾ ಸಂಸ್ಥೆಯ ಸಹಭಾಗಿತ್ವದಲ್ಲಿ  ಹಮ್ಮಿಕೊಳ್ಳಲಾಗಿದ್ದ ಸಾದುನೋತ್ಸವ ಸಾಧಕರ ಸಮ್ಮಿಲನ ಕಾರ್ಯಕ್ರಮ ಉದ್ಘಾಟಿಸಿ ಶ್ರೀಗಳು ಮಾತನಾಡಿದರು.

 ಸಾಧಕರ ಸಾಧನೆಯ ಹಾದಿ ಕಲ್ಲು ಮುಳ್ಳುಗಳಿಂದ ಕೂಡಿರುತ್ತದೆ. ಸಾಧನೆಯ ಹಾದಿಗೆ ಬೇಕಾಗಿರುವುದು ಕಠಿಣ ಪರಿಶ್ರಮ ನಿರಂತರ ಪ್ರಯತ್ನ. ಸಾಧನೋತ್ಸವ  ಕಾರ್ಯಕ್ರಮದಲ್ಲಿರುವ ಸಾಧಕರು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದಿದ್ದಾರೆ. ಇವರ ಸಾಧನೆಗೆ ಗೌರವ ಸಲ್ಲಿಸುತ್ತಿರುವ ಪ್ರಥಮ್ ಶಿಕ್ಷಣ ಸಂಸ್ಥೆ ವಿಜಯ ಕಿರಣ ಪರಿಸರ ಸಂಸ್ಥೆ ಹಾಗೂ ವಿಶ್ವ ಕನ್ನಡ ಕಲಾ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದು ಡಾ.ಬಸವಕುಮಾರ ಸ್ವಾಮೀಜಿ ತಿಳಿಸಿದರು.

 ಪ್ರತಿಯೊಬ್ಬರಿಗೂ ಗೆಲ್ಲುವ ಇಚ್ಛೆ ಇರುತ್ತದೆ. ಆದರೆ ಬಹಳ ಕಡಿಮೆ ಜನರಿಗೆ ಸಿದ್ಧರಾಗುವ ಇಚ್ಛೆ ಇರುತ್ತದೆ. ಜೀವನದಲ್ಲಿ ಕಠಿಣ ಪರಿಶ್ರಮಕ್ಕೆ ಒಂದೇ ದಾರಿ ಇರುತ್ತದೆ ಅದು ಹೆಚ್ಚಾಗಿ ಯಶಸ್ಸಿನ ಹಾದಿಗೆ ಕಾರಣವಾಗುತ್ತದೆ. ನಾಡಿನ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ವಿವಿಧ ಪ್ರಶಸ್ತಿಗಳನ್ನು ನೀಡಿ ಅವರಿಗೆ ಪ್ರೋತ್ಸಾಹಿಸುವುದರ ಮೂಲಕ ಅವರ ಸಾಧನೆಗೆ ಸ್ಫೂರ್ತಿಯಾಗೋಣ ಸಾಧಕರ ಸಾಧನೆಗಳೇ ನಮ್ಮೆಲ್ಲರಿಗೂ ಪ್ರೇರಣೆಯಾಗಲಿ  ಎಂದರು.

 ಮುಖ್ಯ ಅತಿಥಿ ಡಾ. ಕೆ ಎಂ ವೀರೇಶ್ ಮಾತನಾಡಿ ಸಾಧನೆಗೈದ ಸಾಧಕರೆ ನಮ್ಮ ಆಸ್ತಿ. ಸಮಾಜದಲ್ಲಿರುವ ಸಾಧಕರನ್ನು ಗುರುತಿಸಿ ಅವರಿಗೆ ಬೆನ್ನು ತಟ್ಟುವುದರ ಮೂಲಕ ಅವರ ಸಾಧನೆಗೆ ಕಿವಿಯಾಗೋಣ ಇಂತಹ ಸಾಧಕರ ಸಾಧನೆ ಇಂದಿನ ಯುವ ಜನರಿಗೆ ಆದರ್ಶವಾಗಲಿ ಡಾ. ಬಸವಕುಮಾರ ಮಹಾಸ್ವಾಮಿಗಳು ಕಾರ್ಯಕ್ರಮಕ್ಕೆ ಆಗಮಿಸಿ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸುತ್ತಿರುವುದು ಸಾಧಕರ ಪುಣ್ಯ ಸಾಧಕರ ಸಾಧನೆ ಮನೆ ಮಾತಾಗಲಿ ಎಂದರು.

 ರಾಜ್ಯ ಪ್ರಶಸ್ತಿ ಪುರಸ್ಕೃತ ಮುಖ್ಯ ಶಿಕ್ಷಕ  ಡಾ. ಮಹೇಶ್ ಕಡ್ಲೆ ಗುದ್ದು ಪ್ರಾಸ್ತಾವಿಕವಾಗಿ ಮಾತನಾಡಿ ಸಾಧನೆ ಸಾಧಕನ ಸ್ವತ್ತೆ ಹೊರತು ಸೋಮಾರಿಯ ಸ್ವತ್ತಲ್ಲ ಸಾದದೇ ಮಾಡದೆ ಸತ್ತರೆ ಸಾವಿಗೂ ಅವಮಾನ ಎಂಬ ನುಡಿಯಂತೆ ಪ್ರತಿಯೊಬ್ಬರೂ ಜೀವನದಲ್ಲಿ ಸಾಧನೆ ಮಾಡಬೇಕು ಇಂತಹ ಸಾಧನೆಗೈದ ಸಾಧಕರಿಗೆ ಸಾಧನೋತ್ಸವ ಕಾರ್ಯಕ್ರಮವನ್ನು ಆಯೋಜಿಸಿ 

ಪ್ರಶಸ್ತಿ ನೀಡಿ ಗೌರವಿಸುತ್ತಿರುವ ವಿಶ್ವ ಕನ್ನಡ ಕಲಾ ಸಂಸ್ಥೆ ಚಿತ್ರದುರ್ಗ ಜಿಲ್ಲಾ ಘಟಕದ ಅಧ್ಯಕ್ಷ ಡಾ. ನವೀನ್ ಬಿ ಸಜ್ಜನ್, ಚುಟುಕು ಸಾಹಿತಿ ವಿನಾಯಕ, ವಿಜಯ ಕಿರಣ ಸಂಸ್ಥೆಯ ಕೊಲ್ಲೂರಪ್ಪ, ಪ್ರಥಮ್ ಸಂಸ್ಥೆಯ ನಂಜುಂಡೇಶ್ವರ, ವಿಶ್ವ ಕನ್ನಡ ಕಲಾ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಈ ರವೀಶ, ಡಾ.ನವೀನ್ ಮಸ್ಕಲ್, ಡಾ. ಬಸವರಾಜ್ ಹರ್ತಿ, ಜ್ಞಾನದೇವ ವಿಷನ್ ಪಿಯು ಕಾಲೇಜು ಪ್ರಾಂಶುಪಾಲರಿಗೆ ಅಭಿನಂದನೆಗಳು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶೈಲಜಾ ಬಾಬು ಮಾತನಾಡಿ ಸಾಧಕರಿಗೆ ಭಗವಂತನು ಇನ್ನಷ್ಟು ಸ್ಫೂರ್ತಿ ನೀಡಿ, ದೇಶಕ್ಕೆ ಕೀರ್ತಿ ತರುವಂತಾಗಲಿ  ಪ್ರತಿಯೊಬ್ಬರೂ ಸಮಾಜದ ಋಣವನ್ನು ತೀರಿಸುವ ಜವಾಬ್ದಾರಿ ಹೊಂದಿದ್ದು, ಈ ಮೂಲಕ ಬದುಕಿನಲ್ಲಿ ಯಶಸ್ಸು ಸಾಧಿಸಬಹುದು ಇಂತಹ ಸಾಧನೆ ಮಾಡಿದ ಸಾಧಕರು ಇಂದಿನ ಯುವಜನತೆಗೆ ಆದರ್ಶವಾಗಲಿ, ಸಮಾಜಕ್ಕೆ ಇನ್ನೂ ಹೆಚ್ಚಿನ ಕೊಡುಗೆ ಸಾಧಕರಿಂದ ಆಗಲಿ ಎಂದರು.

ಶರಣ ಸಾಹಿತ್ಯ ಪರಿಷತ್ ಜಿಲ್ಲಾ ಕಾರ್ಯದರ್ಶಿ ಹುರಳಿ ಬಸವರಾಜ್ ಇವರು ಸಾಧನೆ ಮತ್ತು ಸಾಧಕರ ಬಗ್ಗೆ ಕುರಿತು ಉಪನ್ಯಾಸ ನೀಡಿದರು.

 ಕಾರ್ಯಕ್ರಮದಲ್ಲಿ 70ಕ್ಕಿಂತ ಹೆಚ್ಚಿನ ಸಾಧಕರಿಗೆ ಕರುನಾಡ ಶಿಕ್ಷಣ ರತ್ನ ಸಮಾಜ ರತ್ನ ಸೇವ ರತ್ನ ವೈದ್ಯಕೀಯ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇದೇ ಸಮಯದಲ್ಲಿ ವಿಶ್ವ ಕನ್ನಡ ಕಲಾ ಸಂಸ್ಥೆಯ ಅಧ್ಯಕ್ಷ ಮತ್ತು ಸಂಸ್ಥಾಪಕ ಈ ರವೀಶ ಅಕ್ಕರ ರವರು ತಮ್ಮ ಸಂಸ್ಥೆಯ ಮತ್ತೊಂದು ಜಿಲ್ಲಾ ಘಟಕ ಉದ್ಘಾಟಿಸಿ ಸಂಸ್ಥೆಯ ಪದಾಧಿಕಾರಿಗಳಿಗೆ ನೇಮಕಾತಿ ಆದೇಶ ನೀಡಿದರು.

 ಮುಖ್ಯ ಅತಿಥಿಗಳಾಗಿ ಈ ರವೀಶ, ಶಫಿವುಲ್ಲಾ, ಜ್ಞಾನದೇವ್, ಹಾಸ್ಯ ಸಾಹಿತಿ ಜಗನ್ನಾಥ, ವೀರೇಶ್ ಪಿಲ್ಲಹಳ್ಳಿ, ಪ್ರವೀಣ್ ಬೆಳಗೆರೆ, ಶಿಕ್ಷಕರಾದ ರಾಜೇಶ್, ಶ್ರೀನಿವಾಸ್, ಜಯಣ್ಣ, ಕೀರ್ತಿಕುಮಾರ್, ಡಾ ಲೋಲಾಕ್ಷಮ್ಮ, ಅನಿತಾ ವಿನಯ್, ಪೂರ್ಣಿಮಾ, ಬಿವಿ ನಾಥ್, ಮೃತ್ಯುಂಜಯ ಸ್ವಾಮಿ ಇತರರು ಹಾಜರಿದ್ದರು.

 

Advertisement

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಸಾಪ ಮಾಜಿ ಜಿಲ್ಲಾಧ್ಯಕ್ಷ, ಶಿಕ್ಷಣತಜ್ಞ ಡಾ. ಕೆ.ಎಂ. ವೀರೇಶ್ ಹೃದಯಾಘಾತದಿಂದ ನಿಧನದುರ್ಗಕ್ಕೆ ಹರಿದು ಬಂದ ಭದ್ರೆ- ಸೆ.24ರಂದು ಮುಖ್ಯಮಂತ್ರಿಗಳಿಂದ ಗಂಗಾಪೂಜೆ,  ಬೃಹತ್ ಸಾರ್ವಜನಿಕ ಸಮಾರಂಭಆರ್.ಎಲ್ ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ 22ನೇ ಘಟಿಕೋತ್ಸವ ಮತ್ತು ಪದವಿ ಪ್ರದಾನ ಕಾರ್ಯಕ್ರಮನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ ಬೈಕ್ ಸವಾರ ಸಾವುಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಸಭೆ ಹೋರಾಟಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಾತಿನಿಧ್ಯ ಕಡಿಮೆ- ಚಿಕ್ಕಪ್ಪನಹಳ್ಳಿ ಷಣ್ಮುಖಕುಂಚಿಟಿಗ ನೌಕರರ ಸಂಘಕ್ಕೆ ಸದಸ್ಯರಾಗಿ: ಎಸ್.ಕೆ ಲಕ್ಷ್ಮಣ್ಚಳವಳಿ ನೆನಪಾಗಿ ಉಳಿದ ‘ತೆಂಕ-ಬಡಗ’ಅಂತಾರಾಷ್ಟ್ರೀಯ ಶಾಂತಿ ದಿನ – ಮನದ ದ್ವೇಷ ಕರಗಿದಾಗಲೇ ಜಗದ ಶಾಂತಿ ಅರಳುವುದು!ಗಣಪತಿ ಮೆರವಣಿಗೆ ವೇಳೆ ಗಲಾಟೆ 7 ಯುವಕರ ವಿರುದ್ಧ ಸುಮೋಟೋ ಪ್ರಕರಣ ದಾಖಲು