Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Entertainment News

ಎಸ್ ಜೆಎಂ ಪಾಲಿಟೆಕ್ನ್ ನಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಇಂದಿನ ಪೀಳಿಗೆಗೆ ಹಿಂದಿನ ಸುಧಾರಕರ ಸಾಮಾಜಿಕ ಕಾಳಜಿಯ ಆಶಯಗಳೇನು  ಎನ್ನುವುದನ್ನು ತಿಳಿಸಬೇಕಿದೆ. ಕೇವಲ ಅಂಕ ಗಳಿಸುವ ನಿಟ್ಟಿನಲ್ಲಿ ಮಕ್ಕಳನ್ನ ಪ್ರೇರೇಪಿಸಿ ಉಳಿದ ವಿಚಾರಗಳನ್ನು ಗೌಣ ಮಾಡಿದಲ್ಲಿ ಅವರಿಗೆ ನಮ್ಮ ಹಿಂದಿನವರು ಸುಭದ್ರ ಸಮಾಜ ಕಟ್ಟಲು ಪಟ್ಟ ಶ್ರಮ ಏನೂ ಎನ್ನುವುದನ್ನು ಅರ್ಥೈಸಿ ಆ ಮಾರ್ಗದಲ್ಲಿ ಸಾಗಲು ನಾವು ಪ್ರೇರಣೆ ನೀಡಬೇಕೆಂದು
, ಅಂತಹ ಸಾಲಿನಲ್ಲಿ ಬರುವ  ಡಾ. ಬಿ. ಆರ್. ಅಂಬೇಡ್ಕರ್ ಅವರು ಸರ್ವರು  ಆದರಿಸಬಹುದಾದ ಸಂವಿಧಾನ  ನೀಡಿರುವ ಅವರ ವ್ಯಕ್ತಿತ್ವವನ್ನು ನಾವು ಸ್ಮರಿಸುತ್ತ ಸಾಗಬೇಕಿದೆ ಎಂದು ಶ್ರೀ ಜಗದ್ಗುರು ಮಲ್ಲಿಕಾರ್ಜುನ ಮುರುಘರಾಜೇಂದ್ರ ಪಾಲಿಟೆಕ್ನಿಕ್ ಪ್ರಾಧ್ಯಾಪಕ ಗಂಗಾಧರ್ ಅಭಿಪ್ರಾಯಪಟ್ಟರು.

ಅವರು ನಗರದ ಶ್ರೀ ಜಗದ್ಗುರು ಮಲ್ಲಿಕಾರ್ಜುನ ಮುರುಘರಾಜೇಂದ್ರ ಪಾಲಿಟೆಕ್ನಿಕ್ ನಲ್ಲಿ ಏರ್ಪಡಿಸಿದ್ದ  ಅಂಬೇಡ್ಕರ್ ಅವರ 134ನೇಜಯಂತಿ ಏರ್ಪಡಿಸಿದ್ದ ಸಂದರ್ಭದಲ್ಲಿ ಸಂವಿಧಾನ ಶಿಲ್ಪಿಗೆ ಪುಷ್ಪ ನಮನ ಸಲ್ಲಿಸಿ ಮಾತನಾಡಿ ನಾವು ಮಕ್ಕಳನ್ನು ಸಾಂಸ್ಕೃತಿಕವಾಗಿ ಹದಗೊಳಿಸಿ ಅವರಿಗೆ ಬೇರೆ ಬೇರೆ ವಿಚಾರಗಳ ಕಡೆಗೆ ಗಮನ ಹರಿಸಲು ಸಹಕಾರ ನೀಡಿದರೆ  ಓದಿನೊಂದಿಗೆ ಹಲವು ವಿಚಾರಗಳ ಮನನ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ನಮ್ಮ ಮಕ್ಕಳಿಗೆ ಅಂಬೇಡ್ಕರ್ ಅವರು  ಮಾದರಿಯಾಗಬೇಕೆಂದು ಸಲಹೆ ಮಾಡಿದರು.

ಪ್ರಾಧ್ಯಾಪಕ ಗೋವಿಂದರಾಜ್ ಮಾತನಾಡಿ, ಅಂಬೇಡ್ಕರ್ ಕೇವಲ ಆರ್ಥಿಕ ತಜ್ಞರಾಗಿರದೆ, ತತ್ವಜ್ಞಾನಿ, ರಾಜಕೀಯ ಮುತ್ಸದ್ದಿ, ನ್ಯಾಯವಾದಿ ,ಪ್ರಗತಿಪರ ಚಿಂತಕ ಹೀಗೆ ವಿಶೇಷ ಗುಣಗಳ ಗಣಿ ಆಗಿದ್ದವರು. ಸಮಾನತೆ ಅನ್ನುವುದು ಕೇವಲ ಒಂದು ಜನಾಂಗಕ್ಕೆ ಅಲ್ಲ, ಯಾರು ಹಿಂದುಳಿದಿದ್ದಾರೆ ಅವರೆಲ್ಲರಿಗೂ ಸಾಮಾಜಿಕ ನ್ಯಾಯ ಸಿಗಬೇಕೆಂದು  ಪ್ರತಿಪಾದಿಸಿದವರು ಅಂಬೇಡ್ಕರ್ ರವರಾಗಿದ್ದರು ಎಂದು ತಿಳಿಸಿದರು.

ಕಾಲೇಜಿನ ಅಧೀಕ್ಷಕ ಸಿ.ಎನ್. ಮೋಹನ್ ಮಾತನಾಡಿ ಅಂಬೇಡ್ಕರ್ ಅವರು ಚಿಂತನೆಗಳು ಒಂದು ವರ್ಗ, ಜಾತಿ ,ಧರ್ಮಕ್ಕೆ ಸೀಮಿತವಾದದಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ  ಬದುಕುವ ಎಲ್ಲರಿಗೂ ಅನ್ವಯವಾಗುತ್ತವೆ ಎಂದು ಅಭಿಪ್ರಾಯಪಟ್ಟರು.

ಗ್ರಂಥಪಾಲಕ ವೀರಯ್ಯ .ಎಂ, ಜಿ. ಕೊಟ್ರಪ್ಪ, ಲಿಂಗರಾಜು ಟಿ.ಎನ್., ರುದ್ರಮೂರ್ತಿ ಎಂ.ಜೆ. ಮಾತನಾಡಿ ಶ್ರೇಣಿಕೃತ ವ್ಯವಸ್ಥೆಯಲ್ಲಿ ಉಚ್ಛ, ನೀಚ ಎಂಬ ತರತಮ ಭಾವನೆಯಿಂದ  ನೊಂದು ಬೆಂದವರಿಗಾಗಿ  ಬೆಳಕಾಗಿ ಬಂದವರು ಅಂಬೇಡ್ಕರ್ ಅವರು.  ಅವರ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ.ಎಂದು ಅವರ ಕಾರ್ಯಗಳನ್ನು ಸ್ಮರಿಸಿಕೊಂಡರು.

ಯಾವುದೇ ಸಮಾಜ ಸುಧಾರಕರ ಜಯಂತಿ,ಸ್ಮರಣೆ ಇತರ ಕಾರ್ಯಕ್ರಮ ಕೇವಲ ಶಿಷ್ಟಾಚಾರ ರೂಪದಲ್ಲಿರದೆ ಅವನ್ನ ಎಲ್ಲರೂ ಭಾವನಾತ್ಮಕವಾಗಿ ಶ್ರದ್ದೆ, ನಿಷ್ಠೆಯಿಂದ  ಆಚರಿಸಿದಾಗ ಅದಕ್ಕೊಂದು ಅರ್ಥ ಬರುತ್ತದೆ. ಕೇವಲ ಸಾಂಕೇತಿಕ ಆಗಬಾರದು ಎಂದು ಹೇಳಿದರು. ಈ ಸಂದರ್ಭದಲ್ಲಿ ವಿಭಾಗದ ಮುಖ್ಯಸ್ಥರಾದ ವಿ. ಟಿ .ರವಿ,ಸಿ.ಮಲ್ಲಿಕಾರ್ಜುನ, ಹಾಗೂ ಜಿ.ಎಸ್. ಗುರುನಾಥ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

 

Advertisement

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಸಾಪ ಮಾಜಿ ಜಿಲ್ಲಾಧ್ಯಕ್ಷ, ಶಿಕ್ಷಣತಜ್ಞ ಡಾ. ಕೆ.ಎಂ. ವೀರೇಶ್ ಹೃದಯಾಘಾತದಿಂದ ನಿಧನದುರ್ಗಕ್ಕೆ ಹರಿದು ಬಂದ ಭದ್ರೆ- ಸೆ.24ರಂದು ಮುಖ್ಯಮಂತ್ರಿಗಳಿಂದ ಗಂಗಾಪೂಜೆ,  ಬೃಹತ್ ಸಾರ್ವಜನಿಕ ಸಮಾರಂಭಆರ್.ಎಲ್ ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ 22ನೇ ಘಟಿಕೋತ್ಸವ ಮತ್ತು ಪದವಿ ಪ್ರದಾನ ಕಾರ್ಯಕ್ರಮನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ ಬೈಕ್ ಸವಾರ ಸಾವುಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಸಭೆ ಹೋರಾಟಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಾತಿನಿಧ್ಯ ಕಡಿಮೆ- ಚಿಕ್ಕಪ್ಪನಹಳ್ಳಿ ಷಣ್ಮುಖಕುಂಚಿಟಿಗ ನೌಕರರ ಸಂಘಕ್ಕೆ ಸದಸ್ಯರಾಗಿ: ಎಸ್.ಕೆ ಲಕ್ಷ್ಮಣ್ಚಳವಳಿ ನೆನಪಾಗಿ ಉಳಿದ ‘ತೆಂಕ-ಬಡಗ’ಅಂತಾರಾಷ್ಟ್ರೀಯ ಶಾಂತಿ ದಿನ – ಮನದ ದ್ವೇಷ ಕರಗಿದಾಗಲೇ ಜಗದ ಶಾಂತಿ ಅರಳುವುದು!ಗಣಪತಿ ಮೆರವಣಿಗೆ ವೇಳೆ ಗಲಾಟೆ 7 ಯುವಕರ ವಿರುದ್ಧ ಸುಮೋಟೋ ಪ್ರಕರಣ ದಾಖಲು