Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Health & Fitness

ಸಿಟ್ಟು, ಅಹಂಕಾರ, ದ್ವೇಷ, ಅತಿಯಾಸೆ ಆರೋಗ್ಯಕ್ಕೆ ಹಾನಿಕಾರಕ- ಡಾ. ಶಿವಕುಮಾರ್

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಸಿಟ್ಟು, ಅಹಂಕಾರ, ದ್ವೇಷ, ಅತಿಯಾಸೆ ಬಿಟ್ಟು, ಇರುಷ್ಟರಲ್ಲಿ ಸಂತೃಪ್ತಿಯಿಂದ ಜೀವನ ಸಾಗಿಸುವ, ಅಗಾಧ ಐಶ್ವರ್ಯ ಇದ್ದರೂ ಸರಳವಾದ ಬದುಕನ್ನ ನಡೆಸುವಂಥದ್ದು ಒತ್ತಡ ಮುಕ್ತ ಬದುಕಿಗೆ ರಹದಾರಿ. ಆಸೆಯಿಂದ ಕೂಡಿದ ಜೀವನ  ನಿರಾಶೆಗೆ ಕೊನೆಗೆ ಅದು ಸಾವನ್ನ ಬಯಸುತ್ತದೆ. ಅದರಿಂದ ಹೊರತಾದ ಜೀವನ ಸಾಗಿಸುವುದರಿಂದ ಮಾನಸಿಕ ನೆಮ್ಮದಿಗೆ ಕಾರಣವಾಗುತ್ತದೆ ಎಂದು ಆಯುಷ್ ಇಲಾಖೆಯ ಡಾ. ಶಿವಕುಮಾರ್ ಅವರು ಅಭಿಪ್ರಾಯಪಟ್ಟರು.

ಅವರು ಚಿತ್ರದುರ್ಗ ನಗರದ ರೋಟರಿ ಬಾಲ ಭವನದಲ್ಲಿ ಇಂದು ಮುಂಜಾನೆ ಚಿತ್ರದುರ್ಗ ಯೋಗಾಸನ ಕ್ರೀಡಾ ಮತ್ತು ಸಂಸ್ಕೃತಿಕ ಸಂಸ್ಥೆ ವತಿಯಿಂದ ಮಾನಸಿಕ ಒತ್ತಡ ಮತ್ತು ಪರಿಹಾರ  ವಿಷಯ ಕುರಿತ ಗೋಷ್ಠಿಯಲ್ಲಿ ಪ್ರಧಾನ ಭಾಷಣ ಮಾಡಿದ ಅವರು ನಾವು ಯಾವುದೋ ಒಂದು ಕೆಲಸವನ್ನು ಹಮ್ಮಿಕೊಂಡು ಅದರಲ್ಲಿ ಯಶಸ್ವಿ ಆಗದೇ ಇದ್ದಾಗ ನಿರಾಶರಾಗುತ್ತೇವೆ.ಮರಳಿ ಪ್ರಯತ್ನ ಮಾಡಿದಾಗ ಅದರಲ್ಲಿ ಸಂತೃಪ್ತಿ ಯಶಸ್ಸು ಸಿಕ್ಕೇ  ಸಿಗುತ್ತದೆ. ನಾವು ಪ್ರತಿ ಸಾರಿ ಗೆದ್ದೇ ಗೆಲ್ಲಬೇಕು ಎಂಬ ಹಠದ ಪರಿಸ್ಥಿತಿಗೆ ಹೋಗದೆ ,ಹೊಂದಾಣಿಕೆ ಮಾಡಿಕೊಳ್ಳಬೇಕು. ಹಾಗೆ ನಾವು ನಿರ್ವಹಿಸುತ್ತಿರುವ ಕೆಲಸದಲ್ಲಿ ಪರಿಣತಿಯನ್ನು ಪಡೆಯುತ್ತಾ ಪಡೆಯುತ್ತಾ ದಿನವೂ ಹೊಸದನ್ನ ಕಲಿಯುತ್ತಾ ಸಾಗುತ್ತಿರಬೇಕು. ನಿತ್ಯ ಮನಸ್ಸಿಗೆ ಹೊಸ ಹೊಸ ವಿಚಾರಗಳನ್ನು ತುಂಬುತ್ತಾ ಉದಾಹರಣೆಗೆ ಸಂಗೀತ ಕೇಳುವುದು, ಪುಸ್ತಕ ಓದುವುದು ,ಮನರಂಜನೆ,ಯೋಗ,ಸಮಾಜ ಸೇವೆ, ಒಳ್ಳೆಯ ಸ್ನೇಹಿತರ,ಹಿತೈಷಿಗಳ ಒಡನಾಟ, ಮಕ್ಕಳೊಂದಿಗೆ ಆಟ ಇಂತಹ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿಗ ಮಾನಸಿಕ ಒತ್ತಡವನ್ನು ಕಡಿಮೆ ಮಾಡಿಕೊಳ್ಳಬಹುದಾಗಿದೆ.

 ಹಾಗೆ ನಾವು ಇಂದು ಮಕ್ಕಳಿಗೆ ಅಂಕಗಳಿಕೆ ಶಿಕ್ಷಣ ಕೊಡಿಸುವ ಬದಲಿಗೆ ಕೌಶಲ್ಯಾಭಿವೃದ್ಧಿ ಶಿಕ್ಷಣಕ್ಕೆ ಹೆಚ್ಚು ಮಹತ್ವ ಕೊಟ್ಟರೆ ವಿದ್ಯಾರ್ಥಿಗಳಿಂದ ಸಾಮಾನ್ಯ ಜ್ಞಾನದ ಮೂಲಕ ತಮ್ಮ ಅರಿವನ್ನು ವಿಸ್ತಾರ ಮಾಡಿಕೊಳ್ಳಲು ಅವಕಾಶವಾಗುತ್ತದೆ. ಹಾಗೆ ನೋಡಿದಾಗ ನಮ್ಮಲ್ಲಿ ಬಡವರು, ಕಾರ್ಮಿಕರು, ಭಿಕ್ಷೆ ಬೇಡುವವರು ಹಾಗೂ ಮಧ್ಯಮ ವರ್ಗದವರು ಅವರು ಎಂದೂ ಸಹ ಆತ್ಮಹತ್ಯೆಯಂತಹ  ಯೋಚನೆ ಮಾಡುವುದಿಲ್ಲ. ಅವರು ಇದ್ದುದ್ದರಲ್ಲಿಯೇ ಜೀವನ ಸಾಗಿಸುವ ಸಂತೃಪ್ತಭಾವ ಅದರಲ್ಲಿಯೇ ಬದುಕನ್ನು ಕಂಡುಕೊಳ್ಳುವ ತವಕದಲ್ಲಿರುತ್ತಾರೆ. ಅತಿ ಆಸೆ ಅವರಿಂದ ದೂರವಿರುತ್ತದೆ. ನೀವು ಇತ್ತೀಚೆಗೆ ನೋಡಿರಬಹುದು. ಅತಿ ಆಸೆಗಳುಳ್ಳವರು ಆತ್ಮಹತ್ಯೆಯಂತಹ ಕೃತ್ಯಕ್ಕೆ ಒಳಗಾಗಿ ತಮ್ಮ ಬದುಕನ್ನ ಹಾಳು ಮಾಡಿಕೊಳ್ಳುತ್ತಿದ್ದಾರೆ.

ನಾವು ಬೇರೆಯವರನ್ನು  ತಿದ್ದುವ ಕೆಲಸಕ್ಕೆ ಕೈ ಹಾಕದೆ ನಮ್ಮನ್ನು ನಾವು ತಿದ್ದಿಕೊಳ್ಳುವ ಪ್ರಯತ್ನದಲ್ಲಿ ಸಾಗಿದರೆ ನೆಮ್ಮದಿ ಸದಾ ಇರುತ್ತದೆ ಎಂದರು. ಅದಕ್ಕೆ ಬಸವಣ್ಣ  ಹೇಳಿದ್ದು ಲೋಕದ ಡೋಂಕ ನೀವೇಕೆ ತ್ತಿದ್ದುವಿರಿ ಎಂದು  ಮೊದಲು ನಮ್ಮನ್ನು ನಾವು ಸುದಾರಿಸಿಕೊಳ್ಳುವ  ಪ್ರಯತ್ನ ಮಾಡಿದರೆ ಅನೇಕ ಸಮಸ್ಯೆಗಳು ಕಡಿಮೆಯಾಗುತ್ತವೆ ಎಂದು ಹೇಳಿದರು.

ಕೋಕಿಲಾ ಎಂ.ಜೆ ವಚನ ಗೀತೆ ಪ್ರಾರ್ಥಿಸಿದರು. ಯೋಗಾಚಾರ್ಯ ಎಲ್.ಎಸ್. ಚಿನ್ಮಯಾಂದ ಕಾರ್ಯಕ್ರಮದ ರೂಪುರೇಷೆ ಹಾಗೂ ಪ್ರಾಸ್ತಾವಿಕವಾಗಿ ಮಾತನಾಡಿದರು.

 ಈ ಸಂದರ್ಭದಲ್ಲಿ ನಗರದ ವಿವಿಧ ಬಡಾವಣೆಯ ಯೋಗ ತರಬೇತುದಾರರು , ಯೋಗ ವಿದ್ಯಾರ್ಥಿಗಳು, ಸಾರ್ವಜನಿಕರು ಭಾಗವಹಿಸಿದ್ದರು.

 

 

Advertisement

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಖಾಸಗಿ ವಿವಿಗಳು ಲಾಭಕೋರ ವ್ಯಾಪಾರಿ ಸಂಸ್ಥೆಗಳಲ್ಲ: ಸುಪ್ರೀಂ ಕೋರ್ಟ್ ಖಡಕ್ ಎಚ್ಚರಿಕೆ ಪಿಎಸ್‌ಐಗೆ ಕಪಾಳಮೋಕ್ಷ: ಎಸ್‌ಐ ಸವಿತಾ ಪಾಟೀಲ್ ಬಳಿ ವಿಡಿಯೋ ಮೂಲಕ ಕ್ಷಮೆ ಕೋರಿದ ಶಾಸಕ ಸುರೇಶ್ ಗೌಡ ಪುತ್ರಿ ಐಶ್ವರ್ಯಾ ಗೌಡಸರ್ಕಾರಿ ಬಸ್ ಗ್ಲಾಸ್ ಒಡೆದು ಕರ್ತವ್ಯಕ್ಕೆ ಅಡ್ಡಿ; 15 ಬಿಜೆಪಿ ಕಾರ್ಯಕರ್ತರ ವಿರುದ್ಧ ಎಫ್‌ಐಆರ್ ಕಾಡು ಹಂದಿ ಬೇಟೆ: ವನ್ಯಜೀವಿ ಕಾಯ್ದೆಯಡಿ ಪೊಲೀಸರೇ ನೇರ ದೂರು ದಾಖಲಿಸುವುದು ಕಾನೂನುಬಾಹಿರ-ಹೈಕೋರ್ಟ್ಬೆಳ್ಳಂಬೆಳಗ್ಗೆ ಲೋಕಾಯುಕ್ತ ಕದನ: 8 ಸರ್ಕಾರಿ ಅಧಿಕಾರಿಗಳ ಮನೆ ಹಾಗೂ ಕಚೇರಿಗಳ ಮೇಲೆ ಏಕಕಾಲಕ್ಕೆ ದಾಳಿ200 ರೂ. ಆಸೆಗೆ ಬಿದ್ದು 9.30 ಲಕ್ಷ ರೂ. ಕಳೆದುಕೊಂಡ ಯುವತಿ: 'ವರ್ಕ್ ಫ್ರಮ್ ಹೋಮ್' ಸೈಬರ್ ವಂಚನೆ ಬಯಲುಸಾಮಾನ್ಯ ಜನರಿಗೆ ಬೆಲೆ ಏರಿಕೆ ಬಿಸಿ: ದಿಢೀರ್ ಹೆಚ್ಚಾದ ಅಕ್ಕಿ ದರ, ಒಂದೇ ತಿಂಗಳಲ್ಲಿ ಎರಡನೇ ಬಾರಿ ಏರಿಕೆಉತ್ತರ ಪ್ರದೇಶ, ಉತ್ತರಾಖಂಡ ರಾಜ್ಯಸಭಾ ಚುನಾವಣೆ ಹಾಗೂ ಬಂಗಾಳ ಉಪಚುನಾವಣೆ ಘೋಷಣೆ ಸಚಿವ ಶಿವಲಿಂಗೇಗೌಡರ ವಿವಾದಾತ್ಮಕ ಹೇಳಿಕೆ: ಲೋಕಾಯುಕ್ತಕ್ಕೆ ದೂರು ದಾಖಲು, ರಾಜೀನಾಮೆಗೆ ಆಗ್ರಹಬೆಂಗಳೂರು ವಿಮಾನ ನಿಲ್ದಾಣದಲ್ಲಿ 28 ಕೋಟಿ ಮೌಲ್ಯದ ಹೈಡ್ರೋಪೋನಿಕ್ ಗಾಂಜಾ ಹಾಗೂ ಚಿನ್ನ ವಶ, 6 ಜನರ ಬಂಧನ