Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
National News

ರಂಗಭೂಮಿಗೆ ಭಾರತಿ ಕಲಾವಿದರ ಕೊಡುಗೆ ಅಪಾರ: ರಂಗಸ್ವಾಮಿ ಸಕ್ಕರ

 ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರಿನ ಸಾಹಿತ್ಯ
, ಸಂಗೀತ ,ಜಾನಪದ ಕಲೆ ಹಾಗೂ ರಂಗ ಕಲೆಗೆ  ತನ್ನದೇ ಆದ ಕೊಡುಗೆ  ನೀಡಿದೆ ಎಂದು ಕರ್ನಾಟಕ ಜಾನಪದ ಪರಿಷತ್ತು ತಾಲ್ಲೂಕು ಘಟಕದ ಅಧ್ಯಕ್ಷರಾದ ಎಸ್. ಜಿ .ರಂಗಸ್ವಾಮಿ ಸಕ್ಕರ, ಅಭಿಪ್ರಾಯಪಟ್ಟರು.

ನಗರದ ನೆಹರೂ ಮೈದಾನದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಆಯೋಜಿಸಿದ್ದ ಏಳನೆಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಹಿರಿಯೂರು ತಾಲ್ಲೂಕಿನ ಇತಿಹಾಸ ಮತ್ತು ಸಂಸ್ಕೃತಿ ಗೋಷ್ಠಿಯಲ್ಲಿ ರಂಗಭೂಮಿಗೆ ಹಿರಿಯೂರು ತಾಲ್ಲೂಕಿನ ಕೊಡುಗೆ ಕುರಿತು ಮಾತನಾಡಿದರು.

ಹಿರಿಯೂರಿನ ಸಾಂಸ್ಕೃತಿಕ ಅಸ್ಮಿತೆಗೆ ಜಾನಪದ ಕಲೆ, ಸಾಹಿತ್ಯ, ಸಂಗೀತ ಬೆಳಕು ನೀಡಿದ್ದು ರಂಗ ಕಲೆ ಪ್ರಮುಖ ಪಾತ್ರ ವಹಿಸಿದೆ. 1970ರ  ದಶಕದಲ್ಲಿ  ತೊರೆ ಓಬೇನಹಳ್ಳಿ  ಟಿ, ಪಾಂಡುರಂಗ ನಾಯಕ  ರವರು ಭಾರತಿ ಕಲಾವಿದರು ಎಂಬ ನಾಟಕ ಸಂಘವನ್ನು ಹುಟ್ಟು ಹಾಕಿದರು. ಇವರ ಜೊತೆಯಲ್ಲಿ ಲಕ್ಷ್ಮಣ್, ರಂಗೇನಹಳ್ಳಿ ಗಿರಿಯಣ್ಣ, ರಾಜಣ್ಣ ಶೆಟ್ಟಿ, ಬಿ.ವಿ. ಮಾಧವ, ಎಚ್.ಎನ್. ನರಸಿಂಹಯ್ಯ, ಹೆಚ್.ಆರ್. ಕಣ್ಣಪ್ಪ, ಎಲ್. ನಾರಾಯಣ ಚಾರ್ , ಜಿ. ಧನಂಜಯ ಕುಮಾರ್, ಕೆಂಚಪ್ಪ, ವಿ.ಎಚ್. ರಾಜು, ನಾಗೇನಹಳ್ಳಿ ತಿಮ್ಮಯ್ಯ, ಡಾ.ಎಂ. ಎನ್ . ಶ್ರೀಪತಿ, ಅಮೀರ್ ಖಾನ್ ಇತರರು ಜೊತೆಗೂಡಿ ಅಂಗುಲಿಮಾಲ, ವಾತ್ಸಲ್ಯ, ಸಿಂಹಗಡ, ಅಣ್ಣ ತಂಗಿ, ಆದರ್ಶ ಪ್ರೇಮ, ರಕ್ತರಾತ್ರಿ , ರತ್ನ ಮಾಂಗಲ್ಯ ,ರಾಜ ವೀರ ಮದಕರಿ ನಾಯಕ, ಟಿಪ್ಪು ಸುಲ್ತಾನ್, ಎಚ್ಚಮನಾಯಕ ಹೀಗೆ ಹಲವಾರು ನಾಟಕಗಳನ್ನು ಹಿರಿಯೂರಿನ ವಿವಿಧ ಹಳ್ಳಿಗಳಲ್ಲಿ ಬೇರೆ ಬೇರೆ ತಾಲ್ಲೂಕುಗಳಲ್ಲಿ  ಅಭಿನಯಿಸಿದ್ದಾರೆ . ಬೆಳಗೆರೆಯ ಕೃಷ್ಣ ಶಾಸ್ತ್ರಿ ರವರು ಬರೆದಿರುವ ಹಳ್ಳಿ ಚಿತ್ರ ನಾಟಕ ರಾಜ್ಯಾದ್ಯಂತ ಪ್ರದರ್ಶನ ಕಂಡಿದೆ.

1948ರಲ್ಲಿ ಸಿ.ಎಸ್ ವೆಂಕಟೇಶಯ್ಯ ರವರು ವಿಜಯ ಕಲಾವಿದರು ಎಂಬ ತಂಡವನ್ನು ಕಟ್ಟಿದರು ಎಂ.ಎಸ್. ಅವಧಾನಿ, ಕೆ.ವಿ.ರಾಮಚಂದ್ರರಾವ್, ಜೊತೆಗೂಡಿ ಜಗಜ್ಯೋತಿ ಬಸವೇಶ್ವರ ಎಚ್ಚಮ ನಾಯಕ ಹಳ್ಳಿ ಚಿತ್ರ . ತ್ರಿವೇಣಿ ಮುಂತಾದ ನಾಟಕಗಳನ್ನು ಅಭಿನಯಿಸಿದರು.

ತರುವಾಯ ತಾಲ್ಲೂಕಿನ ವೃತ್ತಿ ಕಲಾವಿದರು ವೃತ್ತಿ ಕಲಾವಿದರ ಸಂಘವನ್ನು ಕಟ್ಟಿ ಹಲವಾರು ನಾಟಕಗಳನ್ನು ಅಭಿನಯಿಸಿದ್ದಾರೆ. ಜಯಮ್ಮ, ಹನುಮಕ್ಕ, ಭಾಗ್ಯಶ್ರೀವಿಮಾಲಾಕ್ಷಿಜಯಲಕ್ಷ್ಮಿ, ಭಾರತಿ ,ಭುವನೇಶ್ವರಿ, ರಾಜೇಶ್ವರಿ ,ನಗೀನ, ನಿರ್ಮಲ, ಮಮತಾ, ಅಂಬಿಕಾ ಇನ್ನೂ ಮುಂತಾದವರು ವೃತ್ತಿ  ರಂಗಭೂಮಿಯಲ್ಲಿ ಕೆಲಸ ಮಾಡಿದ್ದಾರೆ .

ಇವರ ಜೊತೆಯಲ್ಲಿ ಇನ್ನೂ ಹಲವಾರು ಸಂಘ ಸಂಸ್ಥೆಗಳು ಸಹ ಕೆಲಸ ಮಾಡಿವೆ. ಮುಖ್ಯವಾಗಿ ಲಾವಣ್ಯ ಕಲಾ ವೃಂದ, ಫ್ರೆಂಡ್ಸ್ ಕಲಾ ವೃಂದ , ದುರ್ಗಿಗುಡಿ ಕಲಾಸಂಘ, ಸೊಂಡೆಕೆರೆ ಮಂಜುನಾಥ ನಾಟ್ಯ ಕಲಾ ಸಂಘ, ಸಂಪದ ಕಲಾಸಂಘ, ಹೀಗೆ ಹಲವಾರು ಸಂಘ ಸಂಸ್ಥೆಗಳು ಹಿರಿಯೂರಿನ ರಂಗಭೂಮಿಗೆ ತನ್ನದೇ ಆದ ಕೊಡುಗೆಯನ್ನು ನೀಡಿವೆ.

ಎನ್.ಎಸ್.ಎಸ್. ಘಟಕದ ರಾಜ್ಯ ಪ್ರಶಸ್ತಿ ಪುರಸ್ಕೃತ ಡಾ.ಡಿ. ಧರಣೇಂದ್ರಯ್ಯ ಮಾತನಾಡಿ ಹಿರಿಯೂರು ತಾಲ್ಲೂಕು ಜಾನಪದ ಕಲೆ ರಂಗಭೂಮಿಗೆ ಮಾತ್ರವಲ್ಲದೇ ರಾಜಕೀಯ ಶಕ್ತಿಯಾಗಿ ಕೆಲಸ ಮಾಡಿದೆ. ವಿ.ಮಸಿಯಪ್ಪ, ಬಿ. ಎಲ್. ಗೌಡ್ರು, ಮಸ್ಕಲ್ ರಾಮಯ್ಯ, ಹೆಚ್.ಏಕಾಂತಯ್ಯ , ಕೆ.ಎಚ್. ರಂಗನಾಥ್ಡಿ. ಮಂಜುನಾಥ್, ಡಿ. ಸುಧಾಕರ್ ಪೂರ್ಣಿಮಾ ಶ್ರೀನಿವಾಸ್ಹೀಗೆ ಹಲವಾರು ರಾಜಕಾರಣಿಗಳಿಗೆ ರಾಜಕೀಯ ಶಕ್ತಿಯನ್ನು  ನೀಡಿದೆ ಎಂದು ಹೇಳಿದರು.

ಹಿರಿಯೂರು ತಾಲ್ಲೂಕಿನ ನೀರಾವರಿಯ ಚಿಂತನ-ಮಂಥನ ಕುರಿತು ರಾಜ್ಯ ವಿಭಾಗಿಯ ರೈತ ಸಂಘದ ಉಪಾಧ್ಯಕ್ಷ ಕೆ.ಸಿ.ಹೊರಕೇರಪ್ಪ  ಮಾತನಾಡಿದರು.  ಹಾಗೆಯೇ ತಾಲ್ಲೂಕಿನ ಬುಡಕಟ್ಟು ಸಂಸ್ಕೃತಿಯ ವೈಶಿಷ್ಟತೆ ಕುರಿತು  ಉಪನ್ಯಾಸಕರಾದ ಜಿ.ಡಿ.ಚಿತ್ತಣ್ಣ ಮಾತನಾಡಿದರು.


ಗೋಷ್ಠಿಯ ಅಧ್ಯಕ್ಷತೆ ಸಾಹಿತಿ ಜಿ.ಪರಮೇಶ್ವರಪ್ಪ ವಹಿಸಿದ್ದರು. ಕಾರ್ಯಕ್ರಮದಲ್ಲಿ ಸಮ್ಮೇಳನ ಅಧ್ಯಕ್ಷ ಎಂ.ಜಿ.ರಂಗಸ್ವಾಮಿ, ಕಸಾಪ ಕೋಶಾಧ್ಯಕ್ಷ ಜಿ. ಪ್ರೇಮಕುಮಾರ್, ಆರನಕಟ್ಟೆ ಶಿವಕುಮಾರ್, ಜೆ.ನಿಜಲಿಂಗಪ್ಪ, ಹರ್ತಿಕೋಟೆ ಮಹಾಸ್ವಾಮಿ, ಚಮನ್ ಶರೀಫ್, ಶಿಕ್ಷಕರಾದ ರಾಧ, ಕೆ.ಜಿ. ಹನುಮಂತರಾಯಪ್ಪ ಹಾಗೂ ಇತರರು ಉಪಸ್ಥಿತರಿದ್ದರು.

 

 

Advertisement

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಸಾಪ ಮಾಜಿ ಜಿಲ್ಲಾಧ್ಯಕ್ಷ, ಶಿಕ್ಷಣತಜ್ಞ ಡಾ. ಕೆ.ಎಂ. ವೀರೇಶ್ ಹೃದಯಾಘಾತದಿಂದ ನಿಧನದುರ್ಗಕ್ಕೆ ಹರಿದು ಬಂದ ಭದ್ರೆ- ಸೆ.24ರಂದು ಮುಖ್ಯಮಂತ್ರಿಗಳಿಂದ ಗಂಗಾಪೂಜೆ,  ಬೃಹತ್ ಸಾರ್ವಜನಿಕ ಸಮಾರಂಭಆರ್.ಎಲ್ ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ 22ನೇ ಘಟಿಕೋತ್ಸವ ಮತ್ತು ಪದವಿ ಪ್ರದಾನ ಕಾರ್ಯಕ್ರಮನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ ಬೈಕ್ ಸವಾರ ಸಾವುಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಸಭೆ ಹೋರಾಟಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಾತಿನಿಧ್ಯ ಕಡಿಮೆ- ಚಿಕ್ಕಪ್ಪನಹಳ್ಳಿ ಷಣ್ಮುಖಕುಂಚಿಟಿಗ ನೌಕರರ ಸಂಘಕ್ಕೆ ಸದಸ್ಯರಾಗಿ: ಎಸ್.ಕೆ ಲಕ್ಷ್ಮಣ್ಚಳವಳಿ ನೆನಪಾಗಿ ಉಳಿದ ‘ತೆಂಕ-ಬಡಗ’ಅಂತಾರಾಷ್ಟ್ರೀಯ ಶಾಂತಿ ದಿನ – ಮನದ ದ್ವೇಷ ಕರಗಿದಾಗಲೇ ಜಗದ ಶಾಂತಿ ಅರಳುವುದು!ಗಣಪತಿ ಮೆರವಣಿಗೆ ವೇಳೆ ಗಲಾಟೆ 7 ಯುವಕರ ವಿರುದ್ಧ ಸುಮೋಟೋ ಪ್ರಕರಣ ದಾಖಲು