Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Entertainment News

ಅಲಂಕಾರಿಕ ತೋಟ/ಕುಂಡಗಳಲ್ಲಿ ಬೆಳೆದ ಗಿಡಗಳ ಸ್ಪರ್ಧೆ, ಫಲಪುಷ್ಪ ಪ್ರದರ್ಶನಕ್ಕೆ ಅರ್ಜಿ ಆಹ್ವಾನ

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ತೋಟಗಾರಿಕೆ ಇಲಾಖೆ ವತಿಯಿಂದ 2025ನೇ ಜನವರಿಯಲ್ಲಿ ಗಣರಾಜ್ಯೋತ್ಸವದ ಅಂಗವಾಗಿ 217ನೇ ಫಲಪುಷ್ಪ ಪ್ರದರ್ಶನವನ್ನು ಬೆಂಗಳೂರಿನ ಲಾಲ್‍ಬಾಗ್‍ನಲ್ಲಿ ಹಮ್ಮಿಕೊಳ್ಳಲಾಗಿದೆ.


ಪ್ರದರ್ಶನದ ಪ್ರಯುಕ್ತ ಸರ್ಕಾರಿ/ ಖಾಸಗಿ ಅಲಂಕಾರಿಕ ತೋಟಗಾರಿಕಾ ಆಸಕ್ತರು ತಮ್ಮ ಮನೆ, ಕಚೇರಿ ಅಥವಾ ಸಂಸ್ಥೆಗಳ ವ್ಯಾಪ್ತಿಯಲ್ಲಿ ಅಲಂಕಾರಿಕ ತೋಟಗಳು, ತಾರಸಿ, ಕೈತೋಟಗಳು, ತರಕಾರಿ, ಔಷಧಿ ಗಿಡಗಳು, ಕುಂಡಗಳಲ್ಲಿ ಬೆಳೆದ ವಿವಿಧ ಜಾತಿಯ ಗಿಡಗಳು, ಇಕೆಬಾನ, ಜಾನೂರ್, ಥಾಯ್ ಆರ್ಟ್ ಮತ್ತು ಪೂರಕ ಕಲೆಗಳಿಗೆ ಸಂಬಂಧಿಸಿದಂತೆ ಸ್ಪರ್ಧೆಗಳನ್ನು 2025 ರ ಜನವರಿ 18 ರಂದು ಹಮ್ಮಿಕೊಳ್ಳಲಾಗಿದೆ.

ಇಕೆಬಾನ, ಜಾನೂರ್, ಥಾಯ್ ಆರ್ಟ್, ತರಕಾರಿ ಕೆತ್ತನೆ ಮತ್ತು ಇತರೆ ಪೂರಕ ಕಲೆಗಳಿಗೆ ಸಂಬಂಧಿಸಿದಂತೆ ಆಸಕ್ತರು, ಪ್ರದರ್ಶಕರಿಂದ ಅರ್ಜಿಗಳನ್ನು 2025 ಜನವರಿ 6 ರಿಂದ 10 ರವರೆಗೆ ಸ್ವೀಕರಿಸಲಾಗುವುದು. ಅರ್ಜಿಗಳನ್ನು, ತೋಟಗಾರಿಕಾ ಜಂಟಿ ನಿರ್ದೇಶಕರು (ಯೋಜನೆ) ಲಾಲ್‍ಬಾಗ್‍ನ ಬೆಂಗಳೂರು ಕಚೇರಿಯಲ್ಲಿ ಬೆಳಿಗ್ಗೆ 10 ರಿಂದ 5 ಗಂಟೆಯವರೆಗೆ ಅರ್ಜಿಗಳನ್ನು ಪಡೆಯಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ಹೆಚ್.ಟಿ.ಗೀತಾ ಮೊಬೈಲ್ ಸಂಖ್ಯೆ: 9008433076 ಅಥವಾ ಕುಮಾರಿ ತಾರಕೇಶ್ವರಿ ಕೆ.ಆರ್. ಮೊಬೈಲ್ ಸಂಖ್ಯೆ: 8497048733,  ಪುಷ್ಪಲತಾ ಎಂ. ಮೊಬೈಲ್ ಸಂಖ್ಯೆ: 8904592122 ಇವರನ್ನು ಸಂಪರ್ಕಿಸುವುದು.

ವಿವಿಧ ಅಲಂಕಾರಿಕ ತೋಟಗಳ ಸ್ಪರ್ಧೆ / ಕುಂಡಗಳಲ್ಲಿ ಬೆಳೆದ ಗಿಡಗಳ ಸ್ಪರ್ಧೆಗೆ ಅರ್ಜಿಗಳನ್ನು ಜನವರಿ 8 ರಿಂದ 15 ರವರೆಗೆ ಸ್ವೀಕರಿಸಲಾಗುವುದು. ಅರ್ಜಿಗಳನ್ನು ತೋಟಗಾರಿಕಾ ಜಂಟಿ ನಿರ್ದೇಶಕರು (ತೋಟದ ಬೆಳೆಗಳು) ಲಾಲ್‍ಬಾಗ್, ಬೆಂಗಳೂರು ಕಚೇರಿಯಲ್ಲಿ ಅರ್ಜಿಗಳನ್ನು ಬೆಳಿಗ್ಗೆ 10 ರಿಂದ 5 ಗಂಟೆಯವರೆಗೆ ಪಡೆಯಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಚುಂಚಯ್ಯ  ಮೊಬೈಲ್ ಸಂಖ್ಯೆ: 9916433061, ಎನ್.ಟಿ.ಸುಜಾತ ಮೊಬೈಲ್ ಸಂಖ್ಯೆ:


9901296270, ದೀಪಿಕ ಎಸ್.ಕೆ.  ಮೊಬೈಲ್ ಸಂಖ್ಯೆ: 7892100304 ಇವರನ್ನು ಸಂಪರ್ಕಿಸುವುದು.
ಮಳಿಗೆಗಳ ಹಂಚಿಕೆಗಾಗಿ 2024 ನೇ ಡಿಸೆಂಬರ್ 30 ರಿಂದ 2025 ನೇ ಜನವರಿ 4 ರವರೆಗೆ ಸ್ವೀಕರಿಸಲಾಗುವುದು. ಅರ್ಜಿಗಳನ್ನು ತೋಟಗಾರಿಕಾ ಜಂಟಿ ನಿರ್ದೇಶಕರು (ಹಣ್ಣುಗಳು) ಲಾಲ್‍ಬಾಗ್‍ನ, ಬೆಂಗಳೂರು ಕಚೇರಿಯಲ್ಲಿ ಅರ್ಜಿಗಳನ್ನು ಬೆಳಿಗ್ಗೆ 10 ರಿಂದ 5 ಗಂಟೆಯವರೆಗೆ ಪಡೆಯಬಹುದಾಗಿದೆ.


ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ: 9036986445, 9591304675, 9008094261ನ್ನು ಸಂಪರ್ಕಿಸುವಂತೆ ಲಾಲ್‍ಬಾಗ್‍ನ ಸಸ್ಯತೋಟದ ತೋಟಗಾರಿಕೆ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



Advertisement

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಸಾಪ ಮಾಜಿ ಜಿಲ್ಲಾಧ್ಯಕ್ಷ, ಶಿಕ್ಷಣತಜ್ಞ ಡಾ. ಕೆ.ಎಂ. ವೀರೇಶ್ ಹೃದಯಾಘಾತದಿಂದ ನಿಧನದುರ್ಗಕ್ಕೆ ಹರಿದು ಬಂದ ಭದ್ರೆ- ಸೆ.24ರಂದು ಮುಖ್ಯಮಂತ್ರಿಗಳಿಂದ ಗಂಗಾಪೂಜೆ,  ಬೃಹತ್ ಸಾರ್ವಜನಿಕ ಸಮಾರಂಭಆರ್.ಎಲ್ ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ 22ನೇ ಘಟಿಕೋತ್ಸವ ಮತ್ತು ಪದವಿ ಪ್ರದಾನ ಕಾರ್ಯಕ್ರಮನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ ಬೈಕ್ ಸವಾರ ಸಾವುಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಸಭೆ ಹೋರಾಟಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಾತಿನಿಧ್ಯ ಕಡಿಮೆ- ಚಿಕ್ಕಪ್ಪನಹಳ್ಳಿ ಷಣ್ಮುಖಕುಂಚಿಟಿಗ ನೌಕರರ ಸಂಘಕ್ಕೆ ಸದಸ್ಯರಾಗಿ: ಎಸ್.ಕೆ ಲಕ್ಷ್ಮಣ್ಚಳವಳಿ ನೆನಪಾಗಿ ಉಳಿದ ‘ತೆಂಕ-ಬಡಗ’ಅಂತಾರಾಷ್ಟ್ರೀಯ ಶಾಂತಿ ದಿನ – ಮನದ ದ್ವೇಷ ಕರಗಿದಾಗಲೇ ಜಗದ ಶಾಂತಿ ಅರಳುವುದು!ಗಣಪತಿ ಮೆರವಣಿಗೆ ವೇಳೆ ಗಲಾಟೆ 7 ಯುವಕರ ವಿರುದ್ಧ ಸುಮೋಟೋ ಪ್ರಕರಣ ದಾಖಲು