Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
International News

ಬೂಕರ್ ಪ್ರಶಸ್ತಿ ಪುರಸ್ಕೃತ ಬಾನುಮುಷ್ತಾಕ್ ಗೆ ತರಳಬಾಳು ಶ್ರೀಗಳ ಅಭಿನಂದನೆ

ಚಂದ್ರವಳ್ಳಿ ನ್ಯೂಸ್, ಸಿರಿಗೆರೆ:
 ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ ಭಾಜನರಾಗಿರುವ ಕನ್ನಡದ ಲೇಖಕಿ ಬಾನುಮುಷ್ತಾಕ್ ಅವರನ್ನು ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ಅಭಿನಂದಿಸಿದ್ದಾರೆ.

ಹೃದಯದೀಪ” (Heart Lamp) ಕಥಾ ಸಂಕಲನದ ಅನುವಾದಕ್ಕೆ ಈ ಪ್ರಶಸ್ತಿ ಲಭಿಸಿರುವುದು ಕನ್ನಡ ಸಣ್ಣಕಥೆಗಳ ಪ್ರಕಾರಕ್ಕೆ ಸಂದ ಗೌರವವಾಗಿದೆ. ಲೇಖಕಿ ಬಾನುಮುಷ್ತಾಕ್ ಪತ್ರಕರ್ತೆಯಾಗಿ, ನ್ಯಾಯವಾದಿಯಾಗಿ, ರೈತರ ಪರ ಧ್ವನಿಯಾಗಿದ್ದಾರೆ.ಮಠದ ವಾರ್ಷಿಕ ಕಾರ್ಯಕ್ರಮವಾದ ತರಳಬಾಳು ಹುಣ್ಣಿಮೆ ಮಹೋತ್ಸವವು 2001ರಲ್ಲಿ ಅರಸೀಕೆರೆ ಪಟ್ಟಣದಲ್ಲಿ ಜರುಗಿದಾಗ "ಮಹಿಳೆ ಮತ್ತು ಅಸ್ತಿತ್ವ" ಕುರಿತು ಉಪನ್ಯಾಸ ನೀಡಿದ್ದರು.

1990ರಲ್ಲಿ ಸಿರಿಗೆರೆಯಲ್ಲಿ ಜರುಗಿದ ಚಿತ್ರದುರ್ಗ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಹ ಭಾಗವಹಿಸಿರುವುದನ್ನು ಶ್ರೀಗಳು ಸ್ಮರಿಸಿಕೊಂಡರು. 1990 ಡಿಸೆಂಬರ್ 8,9,10 ರಂದು ಮೂರು ದಿನಗಳ ಕಾಲ ಸಿರಿಗೆರೆಯಲ್ಲಿ ಸಾಹಿತ್ಯ ಸಮ್ಮೇಳನ. ಅದು ಜಿಲ್ಲಾ ಸಮ್ಮೇಳನವಾಗಿದ್ದರೂ ಅಖಿಲ ಭಾರತ ಸಮ್ಮೇಳನಕ್ಕೇನೂ ಕಡಿಮೆ ಇರಲಿಲ್ಲ. ಆ ಸಮ್ಮೇಳನದಲ್ಲಿ ಭಾಗವಹಿಸಿದ್ದವರ ಪಟ್ಟಿ ಕೇಳಿದರೆ ಅಚ್ಚರಿ ಮೂಡಿಸುತ್ತದೆ. ಡಾ. ಜಿ ಎಸ್ ಶಿವರುದ್ರಪ್ಪ, ಪ್ರೊ. ಸಿದ್ಧಲಿಂಗಯ್ಯ, ಡಾ. ಎಂ.ಚಿದಾನಂದ ಮೂರ್ತಿ, ಡಾ. ಗಿರಡ್ಡಿ ಗೋವಿಂದ ರಾಜು, ಡಾ. ಓ ಎಲ್ ಎನ್, ಡಾ. ಬಸವರಾಜ್ ಕಲ್ಗುಡಿ, ಡಿ ಎಸ್ ನಾಗಭೂಷಣ, ಎಚ್ ಎಸ್ ರಾಘವೇಂದ್ರ ರಾವ್, ಟಿ ಪಿ ಅಶೋಕ್, ಡಾ. ಎಚ್.ಎಸ್.ವಿ, ಡಾ.ರಾಜಶೇಖರಪ್ಪ, ಡಾ.ತೆಲಗಾವಿ, ಒಬ್ಬರೇ ಇಬ್ಬರೇ ಹೆಸರಾಂತ ಸಾಹಿತಿಗಳು, ಕವಿಗಳು, ವಿಮರ್ಶಕರ ದೊಡ್ಡ ದಂಡೇ ಅಲ್ಲಿಗೆ ಆಗಮಿಸಿತ್ತು.

ಈಗ ಬೂಕರ್ ಪ್ರಶಸ್ತಿಯಿಂದ ಭಾರಿ ಸುದ್ದಿಯಲ್ಲಿರುವ ಬಾನುಮುಷ್ತಾಕ್ ಸಹ ಈ ಸಮ್ಮೇಳನಕ್ಕೆ ಆಗಮಿಸಿದ್ದರು. ಅವರ ಮೊದಲ ಕಥಾ ಸಂಕಲನ ಹೆಜ್ಜೆ ಮೂಡಿದ ಹಾದಿಕೃತಿ ಲೋಕಾರ್ಪಣೆಗೊಂಡದ್ದು ಇದೇ ವೇದಿಕೆಯಲ್ಲಿ. ನ್ಯಾಯವಾದಿಯಾಗಿ, ಪತ್ರಕರ್ತೆಯಾಗಿ, ಸಾಮಾಜಿಕ ಹೋರಾಟಗರ್ತಿಯಾಗಿ, ಅನ್ನದಾತನ ಬೆನ್ನೆಲುಬಾಗಿರುವ ಬಾನುಮುಷ್ತಾಕ್ ತಮ್ಮ ಸೃಜನಶೀಲ ಶಕ್ತಿಯಿಂದ ಧ್ವನಿಯಿಲ್ಲದವರಿಗೆ ಧ್ವನಿಯಾಗಿದ್ದಾರೆ. ಕನ್ನಡ ಭಾಷೆಗೆ ಎರಡು ಸಾವಿರ ವರ್ಷಗಳ ಸುದೀರ್ಘ ಇತಿಹಾಸ. ಹಾಗೆಯೇ ವಚನ ಸಾಹಿತ್ಯದ ಮೂಲಕ ಅಸ್ಮಿತೆಯನ್ನು ಹೊಂದಿರುವ ಕನ್ನಡ ಸಾಹಿತ್ಯ. ರಾಜಕೀಯ ಕಾರಣಕ್ಕಾದರೂ ಶಾಸ್ತ್ರೀಯ ಭಾಷೆಯ ಸ್ಥಾನ ಪಡೆದಿರುವ ಕನ್ನಡ. "ಕುರಿತೋದದೆಯಂ ಕಾವ್ಯ ಪ್ರಯೋಗ ಪರಿಣಿತ ಮತಿಗಳ್" ಎನಿಸಿಕೊಂಡ ಅಭಿಜಾತ ಪ್ರತಿಭೆಗಳ ನಾಡು ಈ ಕರ್ನಾಟಕ.

ಈ ನೆಲದ ಒಡಲಲ್ಲಿ ಆರ್ದ್ರಗೊಂಡ ಹೃದಯಗಳ ಅಭಿವ್ಯಕ್ತಿ ಕಾವ್ಯವಾಗಿ, ಕಥೆಗಳಾಗಿ, ನಾಟಕಗಳಾಗಿ, ಕಾದಂಬರಿಗಳಾಗಿ ಹೊರಹೊಮ್ಮಿವೆ. ಅದಕ್ಕೆ ಜ್ಞಾನಪೀಠ, ಸರಸ್ವತಿ ಸಮ್ಮಾನ ಗಳು ಕನ್ನಡ ದೇವಿಯ ಮಕುಟದಲ್ಲಿ ಶೋಭಾಯಮಾನವಾಗಿವೆ. ಅಂತಹ ಮತ್ತೊಂದು ಶೋಭಾಯಮಾನಕ್ಕೆ ಕಾರಣರಾದವರು ಕನ್ನಡಕ್ಕೆ ಜಾಗತಿಕ ಮನ್ನಣೆಗೆ ಕಾರಣರಾದವರು ಬಾನು ಮುಷ್ತಾಕ್ ಅವರು ಏಳು ಕೋಟಿ ಕನ್ನಡಿಗರ ಎದೆಯಲ್ಲಿ ಕನ್ನಡದ ಡಿಂಡಿಮ ನುಡಿಸಿ, ಎಚ್ಚರಗೊಳಿಸಿರು. ಕನ್ನಡ ಹೃದಯದ ಭಾಷೆ ಎಂಬುದನ್ನು ಸಾಬೀತು ಪಡಿಸಿವರು.

Advertisement

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಚಿತ್ರದುರ್ಗ: 25,000 ರೂ. ಲಂಚ ಪಡೆಯುತ್ತಿದ್ದ ಉಪವಿಭಾಗಾಧಿಕಾರಿ ಕಚೇರಿಯ ಪ್ರಥಮ ದರ್ಜೆ ಸಹಾಯಕ ಲೋಕಾಯುಕ್ತ ಬಲೆಗೆಪಶ್ಚಿಮಘಟ್ಟ ಸಂರಕ್ಷಣೆ: ಕಸ್ತೂರಿ ರಂಗನ್ ವರದಿ ಸ್ಯಾಟಲೈಟ್ ಮ್ಯಾಪಿಂಗ್ ಒಪ್ಪಲು ಸಾಧ್ಯವಿಲ್ಲ; ಬಿ.ಕೆ.ಹರಿಪ್ರಸಾದ್ಸೌಜನ್ಯಾ ಅತ್ಯಾಚಾರ ಹಾಗೂ ಕೊಲೆ ಪ್ರಕರಣ: ಮರುತನಿಖೆಗೆ ಸುಪ್ರೀಂ ಕೋರ್ಟ್ ಆದೇಶಶಾಸಕ ಎಸ್. ಸುರೇಶ್ ಕುಮಾರ್ ಅವರು "ಸಜ್ಜನ" ಎಂಬ ಮುಖವಾಡ ಧರಿಸಿದ ದುರ್ಜನಸರ್ಕಾರದ ಅನುದಾನಕ್ಕೆ ಕಾಯದೆ ಸ್ವಂತ ಖರ್ಚಿನಲ್ಲಿ ಕಾಲುವೆ ದುರಸ್ತಿಗೆ ಮುಂದಾದ ಎಚ್.ಡಿ. ರೇವಣ್ಣಹೈಕೋರ್ಟ್‌ನಿಂದ ಕೆಪಿಎಸ್‌ಸಿ ಪಶುವೈದ್ಯಾಧಿಕಾರಿ ನೇಮಕಾತಿ ಹಗರಣಕ್ಕೆ ಎಸ್‌ಐಟಿ ತನಿಖೆಗೆ ಆದೇಶಆಲಮಟ್ಟಿ ಜಲಾಶಯ ಎತ್ತರ ಹೆಚ್ಚಳ: ಯುಕೆಪಿ ಹಂತ-3ರ ಭೂಸ್ವಾಧೀನ ಪ್ರಕ್ರಿಯೆಗೆ ಚುರುಕುವ್ಯಾಪಕ ಭ್ರಷ್ಟಾಚಾರ: ಕಾಮಗಾರಿಗಳ ಶ್ವೇತಪತ್ರ ಹೊರಡಿಸಲು ಆಂಜನೇಯ ಆಗ್ರಹ‘ಗೌರವಯುತ ಲಂಚ’: ಕಾಂಗ್ರೆಸ್ ಸರ್ಕಾರದ ಹೊಸ 'ಪ್ರಜಾಸೇವಾ ಶುಲ್ಕ' ಎಂದು ಆರ್. ಅಶೋಕ್ಸ್ವಪಕ್ಷೀಯರ ಆಕ್ರೋಶವೇ ಕಾಂಗ್ರೆಸ್ ಸರ್ಕಾರದ ವೈಫಲ್ಯಕ್ಕೆ ಸಾಕ್ಷಿ: ಆರ್. ಅಶೋಕ್ ವಾಗ್ದಾಳಿ