E-PAPER
24 Nov 2026, 03:53:33 AM|
Gold₹12536/gGold24K ₹12,536/g - 22K ₹11,481/gTap for full details
Press ID & Credential Portal
Apply / Verify  ➔
Advertisement
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
International News

ಭತ್ತದ ರಾಶಿಯ ರೈತ, ಚಿನ್ನದ ಅಂಬಾರಿಯ ರಾಜ, ದಸರಾ ಉದ್ಘಾಟನೆಯ ರಾಜಕೀಯ

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಭತ್ತದ ರಾಶಿಯ ರೈತ
, ಚಿನ್ನದ ಅಂಬಾರಿಯ ರಾಜ, ದಸರಾ ಉದ್ಘಾಟನೆಯ ರಾಜಕೀಯ........ದಸರಾ ಉದ್ಘಾಟನೆ ಮಾಡುವವರ ಬಗ್ಗೆ ವಾದ ವಿವಾದಗಳು ಸಾಕಷ್ಟು ಕಾವೇರಿ ಇರುವಾಗ, ಕಾವೇರಿಯ ತಟದ ಕಾಯಕ ಜೀವಿ, ಉಳುವ ಯೋಗಿ ಮಣ್ಣಿನ ಮಗನೊಬ್ಬನ ಸ್ವಗತ.......

ನಾನು ರಾಜನಲ್ಲ, ನಾನೊಬ್ಬ ಸಾಮಾನ್ಯ ಕೃಷಿಕ, ನನಗೆ ಅರಮನೆ ಇಲ್ಲ, ನನಗಿರುವುದು ಹೆಂಚಿನ ಮನೆ, ನಾನು ಆನೆಯ ಮೇಲೆ ಕುಳಿತು ಓಡಾಡುವವನಲ್ಲ, ಎತ್ತಿನ ಗಾಡಿಯಲ್ಲಿ ಕಬ್ಬು ಸಾಗಿಸುವವನು ನಾನು, ಸಿಂಹಾಸನ ಮೇಲೆ ಕುಳಿತುಕೊಳ್ಳುವವ ನಾನಲ್ಲ, ಹುಲ್ಲು ಹಾಸಿನ ಮೇಲೆ ಮಲಗುವವ ನಾನು,

ಛತ್ರ ಚಾಮರ ಬೀಸಣಿಕೆಯ ತಂಪು ಗಾಳಿ ನನಗಿಲ್ಲ, ಬಿಸಿಲಿನ ಝಳದಲ್ಲಿ, ಗಾಳಿಯ ರಭಸಕ್ಕೆ ಭತ್ತದ ರಾಶಿಯ ಹೊಟ್ಟು ತೂರುವವನು ನಾನು, ಭಕ್ಷ್ಯ ಭೋಜನ ತಿನ್ನುವವನಲ್ಲ, ರಾಗಿ, ರೊಟ್ಟಿ, ಜೋಳ, ಮೆಣಸಿನಕಾಯಿ, ಸೊಪ್ಪು, ಗೊಜ್ಜು ತಿನ್ನುವವನು ನಾನು,

ಆಳು ಕಾಳು, ಸೇವಕ, ಸೈನಿಕರು ನನಗಿಲ್ಲ, ನನಗೆ ನಾನೇ ಕಾಲಾಳು, ಮೈತುಂಬ ವೈಭವೋಪೇತ ಬಟ್ಟೆ ತೊಡಲು ನಾನು ಅರಸನಲ್ಲ, ಪಂಚೆ, ಜುಬ್ಬ ಕೆಲವೊಮ್ಮೆ ಬರಿಮೈ ಫಕೀರ ನಾನು, ಸುಗಂಧ ದ್ರವ್ಯಗಳ ವಾಸನೆ ನನಗಿಲ್ಲ, ನನಗಿರುವುದು ನನ್ನದೇ ಬೆವರಿನ ಘಮಲು, ಈ ಮಣ್ಣಿನ ಸುವಾಸನೆ, 

ತಲೆಯ ಮೇಲೆ ವಜ್ರಖಚಿತ ಕಿರೀಟ ನನಗಿಲ್ಲ, ಟವಲು ಸುತ್ತಿ, ರುಮಾಲು ಕಟ್ಟಿ ಎಲ್ಲಾ ಕಾಲಕ್ಕೂ ಸಲ್ಲುವ ಕಿರೀಟ ಈ ನನ್ನ ವಸ್ತ್ರ, ಟಿವಿ ಪತ್ರಿಕೆಗಳಲ್ಲಿ ಮಹಾರಾಜರು, ಸ್ವಾಮಿಗಳು, ಬುದ್ದಿಗಳು, ಧಣಿಗಳು ಎನ್ನುವ ಹೆಸರಿಲ್ಲ ನನಗೆ, ಹೆಂಡತಿ ಕರೆಯುವ ಏನ್ರೀ, ಮಗಳು ಕರೆಯುವ ಅಪ್ಪ, ಗೆಳೆಯರು ಕರೆಯುವ ಲೇ ಎನ್ನುವುದೇ ನನ್ನ ಗುರುತು,

ಸರ್ವ ಋತುವಿನ ಹವಾ ನಿಯಂತ್ರಣ ವಾತಾವರಣ ನನಗಿಲ್ಲ, ಬೇಸಿಗೆ, ಚಳಿ, ಮಳೆ, ಗಾಳಿಗಳೇ ನನಗೆ ಅಪ್ಯಾಯಮಾನ, ಯಾವುದೇ ಉತ್ಸವ, ಸಂಭ್ರಮ, ಹಬ್ಬ, ಮಹೋತ್ಸವಗಳ, ಜನಜಂಗುಳಿಯ ನೂಕಾಟ, ಕರ್ಕಶ ಧ್ವನಿಗಳು ಕೇಳಿಸುವುದಿಲ್ಲ ನನಗೆ, ಈ ಬೆಳದಿಂಗಳಲ್ಲಿ ತೋಟದ ಮನೆಯ ರಾತ್ರಿಯ ನೀರವ ಮೌನದ ಏಕಾಂತವೇ ನನ್ನ ಧ್ಯಾನ, ದಸರಾ ಅಂಬಾರಿಯ ಮೇಲೆ ಸವಾರಿ ಮಾಡುವವರು ನೀವು, ಪ್ರಕೃತಿಯೇ ಸವಾರಿ ಮಾಡಲು ಹೆಗಲು ನೀಡುವವರು ನಾವು,

ವೇದಘೋಷಗಳ ಮಧ್ಯೆ, ಹೋಮ ಹವನಗಳ ನಡುವೆ, ಧೂಪದ ಹೊಗೆಯ ಮಬ್ಬಿನಲಿ ಪೂಜೆ ಮಾಡುವವರು ನೀವು, ಪ್ರಕೃತಿಯ ಎಲ್ಲಾ ಶಬ್ದ ತರಂಗಗಳಿಗೆ ಕಿವಿಯಾಗುವವರು ನಾವು, ನಿಮ್ಮ ಬಗ್ಗೆ ಮಾತನಾಡುವವರು ಕೋಟ್ಯಂತರ ಮಂದಿ ಸದಾ ನಿಮ್ಮ ಸುತ್ತಲೂ, ನಮ್ಮ ಬಗ್ಗೆ ನಮ್ಮದೇ ಮಾತು ನಮ್ಮ ಆತ್ಮಸಾಕ್ಷಿ, ನಾನು ಏಕಾಂಗಿ, ಚೆನ್ನಾಗಿ ತಿಂದುಂಡವರ ಆದ್ಯತೆಗಳೇ ಬೇರೆ, ಶ್ರಮಜೀವಿಗಳ ಅವಶ್ಯಕತೆಗಳೇ ಬೇರೆ,

ಸರ್ಕಾರಕ್ಕೊಂದು ಚೇಷ್ಟೆ, ಅರಮನೆಗೊಂದು ಕುಚೇಷ್ಟೆ, ಸಾಮಾನ್ಯರಿಗೆ ಬದುಕೇ ಒಂದು ನಿಷ್ಠೆ, ಒಂದು ಕ್ಷಣದ ಉದ್ಘಾಟನೆಗೆ ಇಷ್ಟೆಲ್ಲಾ ರಂಪಾಟಗಳ ಗೊಡವೆ ನಮಗೇಕೆ, ನಮಗೆ ನಾವೇ ಚಕ್ರವರ್ತಿ, ಬೇಡ ನಮಗೆ ಹೆಸರಿನ ಕೀರ್ತಿಶನಿ..... ಲೇಖನ: ವಿವೇಕಾನಂದ. ಎಚ್. ಕೆ. 9663750451..

 

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮೂರು ಕರಡಿಗಳೊಂದಿಗೆ ಹೋರಾಡಿ ಪ್ರಾಣ ಉಳಿಸಿಕೊಂಡ ರೈತ; ತಲೆಗೆ ಗಂಭೀರ ಗಾಯ, ಸ್ಥಿತಿ ಚಿಂತಾಜನಕ!ಹಿರಿಯೂರಿನಲ್ಲಿ ಪುಂಗಿ ಊದಿ ಹೋದ ಸಿಎಂ: ಗೋವಿಂದ ಕಾರಜೋಳ ಕಿಡಿಸಂಭ್ರದಿಂದ ನಡೆದ ತುಳಸಿ ಹಬ್ಬದ ಆಚರಣೆಭೀಕರ ರಸ್ತೆ ಅಪಘಾತ: ದೇಗುಲ ದರ್ಶನ ಮುಗಿಸಿ ಮರಳುತ್ತಿದ್ದ ಒಂದೇ ಕುಟುಂಬದ 9 ಮಂದಿ ದುರ್ಮರಣಹಿರಿಯೂರು ಉಪಚುನಾವಣೆ: ಅಮಿತ್ ಶಾ ಅಂಗಳಕ್ಕೆ ಅಭ್ಯರ್ಥಿ ಆಯ್ಕೆ ಚೆಂಡುಡಿ.ಕೆ. ಶಿವಕುಮಾರ್ ಔತಣಕೂಟ ವಿವಾದ: ಬಿ.ವೈ ವಿಜಯೇಂದ್ರ ಅಸಮಾಧಾನಕ್ಕೆ ಜನಾರ್ದನ ರೆಡ್ಡಿ ತಿರುಗೇಟುಭಾರತ್ ಜೋಡೋ ಯೋಜನೆಯಲ್ಲಿ ಪಕ್ಷಪಾತ ಆರೋಪ: ಸರ್ಕಾರದ ವಿರುದ್ಧ ಆರ್. ಅಶೋಕ್ ವಾಗ್ದಾಳಿ6ನೇ ದಿನಕ್ಕೆ ಕಾಲಿಟ್ಟ ಆಶಾ ಕಾರ್ಯಕರ್ತೆಯರ ಅಹೋರಾತ್ರಿ ಧರಣಿ: ಪ್ರತಿಭಟನೆ ಮತ್ತಷ್ಟು ತೀವ್ರಅಶ್ಲೀಲ ವಿಡಿಯೋ ಪ್ರಕರಣ: ಪ್ರಜ್ವಲ್ ರೇವಣ್ಣ ಕಡ್ಡಾಯ ಜಾಮೀನಿಗೆ ಹೈಕೋರ್ಟ್ ಅಸ್ತು!ರೌಡಿಗಳಿಗೆ ಖಾಕಿ ಶಾಕ್: 30ಕ್ಕೂ ಹೆಚ್ಚು ಕಡೆ ಏಕಕಾಲಕ್ಕೆ ದಾಳಿ, ಆರ್ಥಿಕ ಮೂಲಗಳಿಗೂ ಕತ್ತರಿ!