Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
National News

ಕಪ್ಪು ಪಟ್ಟಿ ಪ್ರದರ್ಶನ, ಗರಂ ಆದ ಡಿಸಿಎಂ ಶಿವಕುಮಾರ್

ಚಂದ್ರವಳ್ಳಿ ನ್ಯೂಸ್, ದಾವಣಗೆರೆ:
ನೀವು ಗೋಬ್ಯಾಕ್ ಎಂದರೆ ನನಗೆ ಕಮ್​​ಬ್ಯಾಕ್ ಎಂದು ಕರೆಯುವವರು ಹೆಚ್ಚಿದ್ದಾರೆ ಎಂದು ಸೇವಾಲಾಲ್ ಜಯಂತಿ ವೇದಿಕೆಯ ಭಾಷಣದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಗರಂ ಆದರು.


ನ್ಯಾಮತಿ ತಾಲೂಕಿನ ಸೂರಗೊಂಡನಕೊಪ್ಪದ ಭಾಯಾಗಡ್​​ನಲ್ಲಿ ನಡೆದ ಸೇವಾಲಾಲ್ ಜಯತಿಯ ವೇದಿಕೆಯಲ್ಲಿ ಮಾತನಾಡಿದ ಅವರು, ಸರ್ಕಾರ ಸಾವಿರ ದಿನ ಪೂರೈಸಿದ ದಿನವೇ, ಸಂತ ಸೇವಾಲಾಲ್ ಜಯಂತೋತ್ಸವದಲ್ಲಿ ಭಾಗಿಯಾಗಿದ್ದು ನನ್ನ ಪುಣ್ಯ. ಪ್ರೀತಿಯಿಂದ ಗೋ ಬ್ಯಾಕ್, ಗೋ ಬ್ಯಾಕ್ ಎಂದು ಹೇಳಿದ್ದಾರೆ. ವೇದಿಕೆ ಮೇಲೆ ಇರುವ ರಾಜೀವ್, ರೇಣುಕಾಚಾರ್ಯ, ಬಿ.ವೈ. ರಾಘವೇಂದ್ರ ನನ್ನನ್ನು ಕಮ್​ಬ್ಯಾಕ್ ಮಾಡಿದ್ರು ಎಂದು ಹಾಸ್ಯ ಚಟಾಕಿ ಹಾರಿಸಿದರು.

ನೂರು ಜನ ನನ್ನ ವಿರುದ್ಧ ಕಿರಿಚಾಡಬಹುದು ಅಂತಹವರಿಗೆ ಈ ಡಿಕೆ ಶಿವಕುಮಾರ್ ಜಗ್ಗೋ ಮಗ ಅಲ್ಲ. ಡಿಕೆಶಿ ಮಾತ್ರ ನಿಮ್ಮ ಪರವಾಗಿ ನಿಂತು ಹೋರಾಟ ಮಾಡಿದವನು. ಅಂಬೇಡ್ಕರ್ ಹೇಳಿದಂತೆ ಇತಿಹಾಸ ಮೆರೆತವನು ಇತಿಹಾಸ ಸೃಷ್ಟಿಸಲಾರ. ಧಾರ್ಮಿಕ ಕಾರ್ಯಕ್ರಮದಲ್ಲಿ ರಾಜಕೀಯ ಮಾಡೋದು ಬಿಡಬೇಕು. ನೀವ್ಯಾರೋ ಗೋ ಬ್ಯಾಕ್ ಅಂದ್ರು ಜಗ್ಗೋ ಮಗ ನಾನಲ್ಲ. ರಾಜಕೀಯವನ್ನು ಚುನಾವಣೆ ಸಂದರ್ಭದಲ್ಲಿ ಮಾಡೋಣ ಎಂದು ಡಿ.ಕೆ ಶಿವಕುಮಾರ್ ಹೇಳಿದರು.



ನೀವು ಎಷ್ಟೇ ಗೋ ಬ್ಯಾಕ್ ಎಂದರೂ ವೆಲ್ಕಂ, ಕಮ್ ಬ್ಯಾಕ್ ಅನ್ನೋರೇ ಇಲ್ಲಿ ಜಾಸ್ತಿ ಇದ್ದಾರೆ. ನಿಮ್ಮ‌ಸಮಾಜಕ್ಕೆ ಅನ್ಯಾಯ ಆದಾಗ ಡಿಕೆಶಿ ಒಬ್ಬರೇ ನಿಮ್ಮ‌ಪರ ನಿಂತು ಹೋರಾಟ ಮಾಡಿದವನು. ರಾಜಕೀಯದಲ್ಲಿ ಧರ್ಮ ಇರಬೇಕೇ ಹೊರೆತು ಧರ್ಮದಲ್ಲಿ ರಾಜಕೀಯ ಇರಬಾರದು. ರಾಜೀವ್ ನನ್ನ ಆತ್ಮೀಯ ಸ್ನೇಹಿತ ಅವರ ಸ್ನೇಹಿತರು ನೀವು. ಹೋರಾಟ ಮಾಡೋದು ತಪ್ಪು ಅಂತ ಹೇಳಲ್ಲ. ಆದರೆ, ಧಾರ್ಮಿಕ ಕಾರ್ಯಕ್ರಮದಲ್ಲಿ ರಾಜಕೀಯ ಮಾಡೋದು ತಪ್ಪು ಎಂದು ಅವರು ಗುಡುಗಿದರು.‌

ಕಪ್ಪು ಬಟ್ಟೆ ಪ್ರದರ್ಶಿಸಿದ ಮಾಲಾಧಾರಿಗಳು:
ಒಳ ಮೀಸಲಾತಿ ಜಾರಿಗೊಳಿಸಿದ್ದಕ್ಕಾಗಿ ಡಿಸಿಎಂ ಡಿಕೆ ಶಿವಕುಮಾರ್ ಅವರ ವಿರುದ್ಧ ಸಂತ ಸೇವಾಲಾಲ್ ಜಯಂತೋತ್ಸವದಲ್ಲಿ ಮಾಲಾಧಾರಿಗಳು ಕಪ್ಪು ಬಟ್ಟೆ ಪ್ರದರ್ಶಿಸಿದರು.
ಕಪ್ಪು ಬಟ್ಟೆ ಪ್ರದರ್ಶನ ಮಾಡಿದ ಸೇವಾಲಾಲ್ ಮಾಲಾಧಾರಿಗಳ ಕೂರಿಸಲು ಪೊಲೀಸರು ಹರಸಾಹಸ‌ಪಡಬೇಕಾಯಿತು. ಅಲ್ಲದೇ ಎಸ್​ಪಿ ಶೇಖರ್ ಹೆಚ್ ತೆಕ್ಕಣ್ಣನವರ್ ಅವರು ಸ್ವತಃ ಆಗಮಿಸಿ ಶಾಂತಿ ಕಾಪಾಡುವಂತೆ ಮನವಿ ಮಾಡಿದರು.
ಸರ್ಕಾರ ಒಳ ಮೀಸಲಾತಿ ಜಾರಿಗೊಳಿಸಿದ್ದಕ್ಕಾಗಿ ಆಕ್ರೋಶ ಹೊರ ಹಾಕುತ್ತಿರುವ ಲಂಬಾಣಿ ಸಮುದಾಯದ ಕೆಲ ಮುಖಂಡರು ಪೊಲೀಸರ ಹಾಗೂ ಸೇವಾಲಾಲ್ ಮಾಲಾಧಾರಿಗಳ ನಡುವೆ ವಾಗ್ವಾದ ನಡೆಯಿತು.


ಡೆಪ್ಯೂಟಿ ಸ್ಪೀಕರ್ ರುದ್ರಪ್ಪ ಲಮಾಣಿ ಅವರಿಗೆ ವೇದಿಕೆಯಿಂದ ಕೆಳಗೆ ಇಳಿಯುವಂತೆ ಯುವಕನೊಬ್ಬ ಧಮ್ಕಿ ಹಾಕಿದ ಘಟನೆಯೂ ನಡೆಯಿತು.

ನಮ್ಮ ಪಕ್ಷ ನ್ಯಾಯ ಕೊಡಿಸಿದೆ:
ಸೇವಾಲಾಲ್ ಜಯಂತಿಯಲ್ಲಿ ನಡೆದ ಘಟನೆ ಬಗ್ಗೆ ಮಾತನಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್​
, ಇದು ರಾಜಕೀಯ ಕಾರ್ಯಕ್ರಮ ಅಲ್ಲ, ಧಾರ್ಮಿಕ ಕಾರ್ಯಕ್ರಮ. ನಮ್ಮ ಪಕ್ಷ ಎಲ್ಲ ಸಮುದಾಯದವರಿಗೂ ನ್ಯಾಯ ಕೊಡಿಸಿದೆ.
ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ ಎಲ್ಲಾ ಸಮಾಜಗಳಿಗೆ 6
, 6, 5 ರಂತೆ (ಮೀಸಲಾತಿ) ನ್ಯಾಯ ಕೊಡಿಸಿದ್ದೇವೆ. ಇದನ್ನು ಬಿಜೆಪಿ ಹಾಗೂ ಮಾಜಿ ಶಾಸಕ ರಾಜುಗೆ ತಡೆದುಕೊಳ್ಳಲು ಆಗ್ತಿಲ್ಲ. ನೂರು ಜನರಿಂದ ಹೀಗೆ ಮಾಡಿಸಿದ್ದಾರೆ. ನಾವು ನೂರು ಜನ್ರ ಕಿರಿಚಾಟದಿಂದ ಹೆದರಬೇಕಾಗುತ್ತಾ?.

ಈ ಲಂಬಾಣಿ ಜನಾಂಗ ಶೇ.90% ರಷ್ಟು ಒಳ್ಳೆಯವರೇ. ಉಳಿದ 10% ರಷ್ಟು ಜನ ಈ ರೀತಿ ಇರುತ್ತಾರೆ. ಈ ಸಮುದಾಯದೊಂದಿಗೆ ನಾವು ಇದ್ದೇವೆ. ಇವರನ್ನು ಎಸ್​ಸಿಗೆ ಸೇರಿಸಿದ್ದೇ ನಮ್ಮ ಕಾಂಗ್ರೆಸ್ ಸರ್ಕಾರ. ಅಭಿವೃದ್ಧಿ ನಿಗಮ ನೀಡಿದ್ದು ನಮ್ಮ ಪಕ್ಷ. 1 ಕೋಟಿ 11 ಲಕ್ಷ ಜನರಿಗೆ ಭೂಮಿ ಪಟ್ಟ ಕೊಟ್ಟಿದ್ದು ನಮ್ಮ ಸರ್ಕಾರ. ಹಾಡಿ ಹಟ್ಟಿ ತಾಂಡಾ ಅಭಿವೃದ್ಧಿ ಮಾಡಿದ್ದು ನಾವು. ಇವರ ಪರ ನಾವು ಯಾವಾಗಲೂ ಇರುತ್ತೇವೆ. ದೆಹಲಿ ಭೇಟಿ ಬಗ್ಗೆ ಮಾತನಾಡಿ, ಕಾಲವೇ ಉತ್ತರ ಕೊಡಲಿದೆ ಎಂದು ಡಿಕೆಶಿ ನಗು ಬೀರಿದರು.

 

 

Advertisement

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಸಾಪ ಮಾಜಿ ಜಿಲ್ಲಾಧ್ಯಕ್ಷ, ಶಿಕ್ಷಣತಜ್ಞ ಡಾ. ಕೆ.ಎಂ. ವೀರೇಶ್ ಹೃದಯಾಘಾತದಿಂದ ನಿಧನದುರ್ಗಕ್ಕೆ ಹರಿದು ಬಂದ ಭದ್ರೆ- ಸೆ.24ರಂದು ಮುಖ್ಯಮಂತ್ರಿಗಳಿಂದ ಗಂಗಾಪೂಜೆ,  ಬೃಹತ್ ಸಾರ್ವಜನಿಕ ಸಮಾರಂಭಆರ್.ಎಲ್ ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ 22ನೇ ಘಟಿಕೋತ್ಸವ ಮತ್ತು ಪದವಿ ಪ್ರದಾನ ಕಾರ್ಯಕ್ರಮನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ ಬೈಕ್ ಸವಾರ ಸಾವುಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಸಭೆ ಹೋರಾಟಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಾತಿನಿಧ್ಯ ಕಡಿಮೆ- ಚಿಕ್ಕಪ್ಪನಹಳ್ಳಿ ಷಣ್ಮುಖಕುಂಚಿಟಿಗ ನೌಕರರ ಸಂಘಕ್ಕೆ ಸದಸ್ಯರಾಗಿ: ಎಸ್.ಕೆ ಲಕ್ಷ್ಮಣ್ಚಳವಳಿ ನೆನಪಾಗಿ ಉಳಿದ ‘ತೆಂಕ-ಬಡಗ’ಅಂತಾರಾಷ್ಟ್ರೀಯ ಶಾಂತಿ ದಿನ – ಮನದ ದ್ವೇಷ ಕರಗಿದಾಗಲೇ ಜಗದ ಶಾಂತಿ ಅರಳುವುದು!ಗಣಪತಿ ಮೆರವಣಿಗೆ ವೇಳೆ ಗಲಾಟೆ 7 ಯುವಕರ ವಿರುದ್ಧ ಸುಮೋಟೋ ಪ್ರಕರಣ ದಾಖಲು