Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
National News

91 ಲಕ್ಷ ಹೆಸರುಗಳ ಡಿಲೀಟ್ –ಭದ್ರತಾ ವ್ಯವಸ್ಥೆಯ ವೈಫಲ್ಯವಾ?

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
91
ಲಕ್ಷ ಹೆಸರುಗಳ ಡಿಲೀಟ್ ಭದ್ರತೆಯ ಬಿರುಕುಗಳಾ ಅಥವಾ ಭದ್ರತಾ ವ್ಯವಸ್ಥೆಯ ವೈಫಲ್ಯವಾ ?  91 ಲಕ್ಷ ಕೇವಲ ಅಂಕಿಗಳೆಲ್ಲ ಈ ದೇಶದ ಭದ್ರತಾ ವ್ಯವಸ್ಥೆಯ ಪ್ರಶ್ನೆಯಾಗಿದೆ.

ಪಶ್ಚಿಮ ಬಂಗಾಳದಲ್ಲಿ ಮತದಾರರ ಪಟ್ಟಿಯಿಂದ ಬರೋಬ್ಬರಿ 91 ಲಕ್ಷ ಹೆಸರುಗಳನ್ನು ತೆಗೆದುಹಾಕಲಾಗಿದೆ ಎಂಬ ಸಂಗತಿ ದೇಶದ ಗಮನ ಸೆಳೆದಿದೆ. ಇದು ಕೇವಲ ರಾಜಕೀಯ ಚರ್ಚೆಯ ವಿಷಯವೇ, ಅಥವಾ ದೇಶದ ಭದ್ರತಾ ವ್ಯವಸ್ಥೆಯಲ್ಲಿರುವ ಗಂಭೀರ ಪ್ರಶ್ನೆಗಳನ್ನು ಎಬ್ಬಿಸುವ ಘಟನೆಯೇ ಎಂಬುದನ್ನು ಸಮಗ್ರವಾಗಿ ಅವಲೋಕನ ಮಾಡಬೇಕಾಗಿದೆ.

91 ಲಕ್ಷ ಹೆಸರುಗಳು ಒಂದೇ ಸಾರಿ ಪಟ್ಟಿಯಿಂದ ಅಳಿಸಲ್ಪಟ್ಟಿದ್ದರೆ, ಅವುಗಳ ಹಿಂದೆ ಇರುವ ಸತ್ಯ ಏನು? ಇಷ್ಟು ದೊಡ್ಡ ಸಂಖ್ಯೆಯ ಜನರು ಯಾರು? ಅವರು ನಿಜವಾದ ಮತದಾರರೇ? ಅಥವಾ ವ್ಯವಸ್ಥೆಯ ದೋಷಗಳಿಂದ ಸೇರಿಕೊಂಡ ಹೆಸರುಗಳೇ? ಇಲ್ಲವೇ ಅನಧಿಕೃತವಾಗಿ ದೇಶಕ್ಕೆ ನುಸುಳಿದವರ ಗುರುತುಗಳೇ?.

ದೇಶದಲ್ಲಿ ಬಿಗಿಯಾದ ಗಡಿ ಭದ್ರತೆ ಇದೆ ಎಂದು ನಾವು ನಂಬುತ್ತೇವೆ. ಆದರೆ ಇಂತಹ ದೊಡ್ಡ ಪ್ರಮಾಣದ ಅನುಮಾನಗಳು ಎದುರಾಗುತ್ತಿದ್ದರೆ, ಭದ್ರತಾ ವ್ಯವಸ್ಥೆ ಎಷ್ಟು ಪರಿಣಾಮಕಾರಿಯಾಗಿದೆ ಎಂಬ ಪ್ರಶ್ನೆ ಸಹಜವಾಗಿ ಉದ್ಭವಿಸುತ್ತದೆ. ಇಷ್ಟು ಕಟ್ಟುನಿಟ್ಟಿನ ಬಂದೋಬಸ್ತು ಇರುವಾಗಲೂ, ಯಾರಾದರೂ ಸುಲಭವಾಗಿ ದೇಶದೊಳಗೆ ಪ್ರವೇಶಿಸುವ ಸಾಧ್ಯತೆ ಹೇಗೆ  ಇದು ಕೇವಲ ನಿರ್ಲಕ್ಷ್ಯವೇ, ಅಥವಾ ವ್ಯವಸ್ಥೆಯಲ್ಲಿರುವ ದೊಡ್ಡ ಬಿರುಕುಗಳ ಸೂಚನೆಯೇ?.

ಇನ್ನೊಂದು ಗಂಭೀರ ಪ್ರಶ್ನೆ ಏನೆಂದರೆ, ಈ ಘಟನೆ ಒಂದು ರಾಜ್ಯಕ್ಕೆ ಮಾತ್ರ ಸೀಮಿತವೇ? ಅಥವಾ ದೇಶದ ಇತರ ಭಾಗಗಳಲ್ಲಿಯೂ ಇಂತಹ ಸಮಸ್ಯೆಗಳು ಅಡಗಿಕೊಂಡಿವೆಯೇ? ಇನ್ನೂ ಎಷ್ಟು ಅನುಮಾನಾಸ್ಪದ ಹೆಸರುಗಳು ವ್ಯವಸ್ಥೆಯೊಳಗೆ ಉಳಿದಿರಬಹುದು? ಅವುಗಳನ್ನು ಗುರುತಿಸುವ ಮತ್ತು ಪರಿಶೀಲಿಸುವ ವ್ಯವಸ್ಥೆ ಸಾಕಷ್ಟು ಬಲವಾಗಿದೆಯೇ?.

ಭದ್ರತೆ ಬಗ್ಗೆ ನಾವು ಮಾತನಾಡುತ್ತೇವೆ, ಆದರೆ ಅದು ಕೇವಲ ಭಾಷಣಗಳಲ್ಲಿ ಮಾತ್ರ ಸೀಮಿತವಾಗಿದೆಯೇ? ಕಾರ್ಯರೂಪದಲ್ಲಿ ಅದನ್ನು ಎಷ್ಟು ಪರಿಣಾಮಕಾರಿಯಾಗಿ ಜಾರಿಗೆ ತರುತ್ತಿದ್ದೇವೆ? ದೇಶ ಸುರಕ್ಷಿತವಾಗಿದೆ ಎಂಬ ಮಾತು ಹೇಳುವುದರಿಂದ ಮಾತ್ರ ಸಾಕಾಗುವುದೇ, ಅಥವಾ ಅದನ್ನು ಸಾಬೀತುಪಡಿಸುವ ಜವಾಬ್ದಾರಿ ಇನ್ನಷ್ಟು ಗಂಭೀರವಾಗಿದೆಯೇ?.

ಈ ವಿಷಯವನ್ನು ಯಾವುದೇ ರಾಜಕೀಯ ದೃಷ್ಟಿಕೋನದಿಂದ ನೋಡುವ ಅವಶ್ಯಕತೆ ಇಲ್ಲ. ಇದು ಯಾರ ವಿರುದ್ಧವೂ ಅಲ್ಲ, ಯಾರ ಪರವಾಗಿಯೂ ಅಲ್ಲ. ಇದು ಕೇವಲ ದೇಶದ ಭದ್ರತೆ ಮತ್ತು ಸಾರ್ವಭೌಮತ್ವದ ಪ್ರಶ್ನೆ.

ಒಟ್ಟಾರೆಯಾಗಿ, ಈ ಘಟನೆ ನಮ್ಮ ಮುಂದೆ ಒಂದು ನಗ್ನ ಸತ್ಯವನ್ನು ಇಡುತ್ತದೆ. ಭದ್ರತೆ ಎಂಬುದು ಕೇವಲ ಘೋಷಣೆಗಳಿಂದ ಬಲವಾಗುವುದಿಲ್ಲ. ಅದು ದೃಢವಾದ ಕ್ರಮಗಳಿಂದ, ಪಾರದರ್ಶಕ ವ್ಯವಸ್ಥೆಯಿಂದ ಮತ್ತು ಕಟ್ಟುನಿಟ್ಟಿನ ಜಾರಿಗೆ ಮೂಲಕ ಮಾತ್ರ ಸಾಧ್ಯವಾಗುತ್ತದೆ.



ಈ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರಗಳನ್ನು ಹುಡುಕುವುದು ಈಗ ಅತ್ಯಗತ್ಯವಾಗಿದೆ. ಏಕೆಂದರೆ ಭದ್ರತೆ ವಿಷಯದಲ್ಲಿ ಸಣ್ಣ ನಿರ್ಲಕ್ಷ್ಯವೂ ಭವಿಷ್ಯದಲ್ಲಿ ದೊಡ್ಡ ಅಪಾಯಕ್ಕೆ ಕಾರಣವಾಗಬಹುದು.....
ಲೇಖನ: ಕೆ.ಟಿ ಶ್ರೀನಿವಾಸ್, ಬೆಂಗಳೂರು.

Advertisement

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಸಾಪ ಮಾಜಿ ಜಿಲ್ಲಾಧ್ಯಕ್ಷ, ಶಿಕ್ಷಣತಜ್ಞ ಡಾ. ಕೆ.ಎಂ. ವೀರೇಶ್ ಹೃದಯಾಘಾತದಿಂದ ನಿಧನದುರ್ಗಕ್ಕೆ ಹರಿದು ಬಂದ ಭದ್ರೆ- ಸೆ.24ರಂದು ಮುಖ್ಯಮಂತ್ರಿಗಳಿಂದ ಗಂಗಾಪೂಜೆ,  ಬೃಹತ್ ಸಾರ್ವಜನಿಕ ಸಮಾರಂಭಆರ್.ಎಲ್ ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ 22ನೇ ಘಟಿಕೋತ್ಸವ ಮತ್ತು ಪದವಿ ಪ್ರದಾನ ಕಾರ್ಯಕ್ರಮನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ ಬೈಕ್ ಸವಾರ ಸಾವುಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಸಭೆ ಹೋರಾಟಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಾತಿನಿಧ್ಯ ಕಡಿಮೆ- ಚಿಕ್ಕಪ್ಪನಹಳ್ಳಿ ಷಣ್ಮುಖಕುಂಚಿಟಿಗ ನೌಕರರ ಸಂಘಕ್ಕೆ ಸದಸ್ಯರಾಗಿ: ಎಸ್.ಕೆ ಲಕ್ಷ್ಮಣ್ಚಳವಳಿ ನೆನಪಾಗಿ ಉಳಿದ ‘ತೆಂಕ-ಬಡಗ’ಅಂತಾರಾಷ್ಟ್ರೀಯ ಶಾಂತಿ ದಿನ – ಮನದ ದ್ವೇಷ ಕರಗಿದಾಗಲೇ ಜಗದ ಶಾಂತಿ ಅರಳುವುದು!ಗಣಪತಿ ಮೆರವಣಿಗೆ ವೇಳೆ ಗಲಾಟೆ 7 ಯುವಕರ ವಿರುದ್ಧ ಸುಮೋಟೋ ಪ್ರಕರಣ ದಾಖಲು