Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News

ಬುಡಗ ಜಂಗಮ‌ಅಲೆಮಾರಿ ಕುಟುಂಬಗಳಿಗೆ ದಿನಸಿ ಕಿಟ್ ವಿತರಣೆ:ಮಾತಾಜೀ ತ್ಯಾಗಮಯೀ.

ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದಿಂದ ಪ್ರತಿ ತಿಂಗಳು ಚಳ್ಳಕೆರೆ ತಾಲೂಕಿನ ಅಲೆಮಾರಿ ಕುಟುಂಬಗಳಿಗೆ ದಿನಬಳಕೆಯ ವಸ್ತುಗಳನ್ನು ವಿತರಣೆ ಮಾಡಲಾಗುತ್ತದೆ ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಅಧ್ಯಕ್ಷರಾದ ಪೂಜ್ಯ ಮಾತಾಜೀ ತ್ಯಾಗಮಯೀ ತಿಳಿಸಿದರು. 

ನಗರದ ಹೊರವಲಯದ ಭರಮಸಾಗರ ರಸ್ತೆಯ ಮೈರಾಡ್ ಕಾಲೋನಿಯ ಬುಡಗ ಜಂಗಮ‌ಅಲೆಮಾರಿ ಕುಟುಂಬಗಳಿಗೆ ದಿನಸಿ ಕಿಟ್ ಮತ್ತು ಪಾತ್ರೆ-ತಟ್ಟೆ-ಲೋಟ ವಿತರಿಸಿ  ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.


ಬುಡಗ ಜಂಗಮ‌ಅಲೆಮಾರಿಗಳ ಮುಖಂಡ ಬಲರಾಮ ಮಾತನಾಡಿ ದಾನದಿಂದ ಮನುಷ್ಯ ಧನ್ಯತೆಯನ್ನು ಪಡೆಯುತ್ತಾನೆ. ಇಂತಹ ಪವಿತ್ರವಾದ ಕಾರ್ಯಕ್ರಮವನ್ನು ನಗರದ ಶ್ರೀಶಾರದಾಶ್ರಮವು ಮಾಡುತ್ತಿರುವುದು ನಮ್ಮಂತಹ ಅಲೆಮಾರಿ ಕುಟುಂಬಗಳಿಗೆ ಉಪಯೋಗವಾಗುತ್ತಿದ್ದು ನೆಮ್ಮದಿಯ ಜೀವನ ನಡೆಸಲು ಸಹಾಯವಾಗುತ್ತಿದೆ ಎಂದು ಕೃತಜ್ಞತೆ ಸಲ್ಲಿಸಿದರು.

ಸಮಾಜ ಸೇವಕ ಮತ್ತು ಶ್ರೀಶಾರದಾಶ್ರಮದ ಸದ್ಭಕ್ತ ಯತೀಶ್ ಎಂ ಸಿದ್ದಾಪುರ ಮಾತನಾಡಿ ಸ್ವಾಮಿ ವಿವೇಕಾನಂದರು ತಿಳಿಸಿದಂತೆ ಇಂದು ಬುಡಗ ಜಂಗಮ‌ಅಲೆಮಾರಿ ಕುಟುಂಬಗಳಿಗೆ ದಿನಬಳಕೆಯ ವಸ್ತುಗಳ ವಿತರಣೆಯ ಮೂಲಕ "ಜೀವ ಸೇವೆಯೇ ಈಶ ಸೇವೆ"ಯ ಸಿದ್ಧಾಂತವನ್ನು ಶ್ರೀಶಾರದಾಶ್ರಮವು ಅನುಸರಿಸಿ ಅನುಷ್ಠಾನಕ್ಕೆ ತರುತ್ತಿರುವುದು ಉತ್ತಮ ಬೆಳವಣಿಗೆ ಎಂದು ಶ್ಲಾಘಿಸಿದರು.


ದಿನಸಿ ಕಿಟ್ ಗಳ ವಿತರಣಾ ಸಮಾರಂಭದಲ್ಲಿ ಎಚ್ ಲಕ್ಷ್ಮೀದೇವಮ್ಮ, ಎಂ ಗೀತಾ ನಾಗರಾಜ್, ಪಿ.ಎಸ್.ಮಾಣಿಕ್ಯ, ಸತ್ಯನಾರಾಯಣ, ಗೀತಾ ಪ್ರಕಾಶ್, ಅಂಬುಜಾ, ವಿದ್ಯಾ, ಕವಿತಾ, ಸರಸ್ವತಿ, ಸಂತೋಷ್, ಚೆನ್ನಕೇಶವ, ಹೃತಿಕ್, ಭಾವನಾ, ರಾಘವೇಂದ್ರ, ಡಾ.ಭೂಮಿಕ ಸೇರಿದಂತೆ ಬುಡಗ ಜಂಗಮ‌ನಿವಾಸಿಗಳು ಉಪಸ್ಥಿತರಿದ್ದರು.

 

 

Advertisement

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಸಾಪ ಮಾಜಿ ಜಿಲ್ಲಾಧ್ಯಕ್ಷ, ಶಿಕ್ಷಣತಜ್ಞ ಡಾ. ಕೆ.ಎಂ. ವೀರೇಶ್ ಹೃದಯಾಘಾತದಿಂದ ನಿಧನದುರ್ಗಕ್ಕೆ ಹರಿದು ಬಂದ ಭದ್ರೆ- ಸೆ.24ರಂದು ಮುಖ್ಯಮಂತ್ರಿಗಳಿಂದ ಗಂಗಾಪೂಜೆ,  ಬೃಹತ್ ಸಾರ್ವಜನಿಕ ಸಮಾರಂಭಆರ್.ಎಲ್ ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ 22ನೇ ಘಟಿಕೋತ್ಸವ ಮತ್ತು ಪದವಿ ಪ್ರದಾನ ಕಾರ್ಯಕ್ರಮನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ ಬೈಕ್ ಸವಾರ ಸಾವುಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಸಭೆ ಹೋರಾಟಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಾತಿನಿಧ್ಯ ಕಡಿಮೆ- ಚಿಕ್ಕಪ್ಪನಹಳ್ಳಿ ಷಣ್ಮುಖಕುಂಚಿಟಿಗ ನೌಕರರ ಸಂಘಕ್ಕೆ ಸದಸ್ಯರಾಗಿ: ಎಸ್.ಕೆ ಲಕ್ಷ್ಮಣ್ಚಳವಳಿ ನೆನಪಾಗಿ ಉಳಿದ ‘ತೆಂಕ-ಬಡಗ’ಅಂತಾರಾಷ್ಟ್ರೀಯ ಶಾಂತಿ ದಿನ – ಮನದ ದ್ವೇಷ ಕರಗಿದಾಗಲೇ ಜಗದ ಶಾಂತಿ ಅರಳುವುದು!ಗಣಪತಿ ಮೆರವಣಿಗೆ ವೇಳೆ ಗಲಾಟೆ 7 ಯುವಕರ ವಿರುದ್ಧ ಸುಮೋಟೋ ಪ್ರಕರಣ ದಾಖಲು