E-PAPER
24 Nov 2026, 04:46:55 AM|
Gold₹12536/gGold24K ₹12,536/g - 22K ₹11,481/gTap for full details
Press ID & Credential Portal
Apply / Verify  ➔
Advertisement
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ದೊಡ್ಡಬಳ್ಳಾಪುರದಲ್ಲಿ ಮತ್ತೆ ಕಂಪಿಸಿದ ಭೂಮಿ

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ತೂಬಗೆರೆ ಹೋಬಳಿ  ಸುತ್ತಮುತ್ತು ಶುಕ್ರವಾರ ಬೆಳಗ್ಗೆ 3.0 ತೀವ್ರತೆಯ ಭೂಕಂಪ ದಾಖಲಾಗಿದ್ದು ಸ್ಥಳೀಯರಲ್ಲಿ ಆತಂಕ ಮೂಡಿಸಿತ್ತು. ಆದರೆ, ಭೂಕಂಪದ ತೀವ್ರತೆ ಕಡಿಮೆ ಇದ್ದರಿಂದ ಯಾವುದೇ ಪ್ರಾಣಾಪಾಯಗಳು ಕಂಡುಬಂದಿಲ್ಲ. ಇದರಿಂದ ಸಾರ್ವಜನಿಕರು ಭಯಪಡುವ ಅಗತ್ಯವಿಲ್ಲ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಪ್ರಕಟಣೆ ತಿಳಿಸಿದೆ.

ತಾಲ್ಲೂಕಿನ ತೂಬಗೆರೆ ಹೋಬಳಿ ಸುತ್ತಮುತ್ತಲಿನ ಗ್ರಾಮದಲ್ಲಿ ಶುಕ್ರವಾರ ಅ.23 ಬೆಳಿಗ್ಗೆ 9:49ಕ್ಕೆ 3.0 ತೀವ್ರತೆಯ ಭೂಕಂಪ ಸಂಭವಿಸಿದೆ. ಭೂಮಿ ಕಂಪಿಸಿದ ಕಾರಣ ಗ್ರಾಮಸ್ಥರಲ್ಲಿ ಆತಂಕದಿಂದ ಭಯ ಬೀತರಾಗಿದ್ದಾರೆ. ಈ ಭೂಕಂಪ ಕಾರನಾಳ, ನೆಲ್ಲುಗುದಿಗೆ, ಪಾಲ್ ಪಾಲ್ ದಿನ್ನೆ, ಲಘುಮೇನಹಳ್ಳಿಯಲ್ಲಿ ಪ್ರಬಲವಾಗಿ ಕಂಪಿಸಿದೆ.

  ಲಘುಮೇನಹಳ್ಳಿ ನಿವಾಸಿ ಶ್ರೀನಿವಾಸ್ ಮಾತನಾಡಿ ನನಗೆ ಆದ ಅನುಭವ ಅತಿ ಭಯಂಕರವಾಗಿತ್ತು ಮನೆ ಎಲ್ಲಾ ಒಂದೊಮ್ಮೆ ಅಲುಗಾಡಿದ ರೀತಿ ಮನೆಯ ವಸ್ತುಗಳು ಎರಡು ಸೆಕೆಂಡಿನಲ್ಲಿ ದೊಡ್ಡ ಶಬ್ದ ದೊಂದಿಗೆ ಅಲುಗಾಡಿ ಯಥಾ ಸ್ಥಾನಕ್ಕೆ ಬಂದುನಿಂತಿತು ಎಂದು  ತಿಳಿಸಿದರು.

ಭೂಕಂಪದ ಕೇಂದ್ರಬಿಂದು 13.368° ಉತ್ತರ ಅಕ್ಷಾಂಶ ಹಾಗೂ 77.563° ಪೂರ್ವ ರೇಖಾಂಶದಲ್ಲಿದ್ದು, ಭೂಮಿಯ ಮೇಲ್ಮೈಯಿಂದ ಸುಮಾರು 10 ಕಿ.ಮೀ. ಆಳವರೆವಿಗೂ  ಕಂಪನವಾಗಿರುವುದು ದಾಖಲಾಗಿದೆ.

ಹಾಗು ಸುಮಾರು 9:01:59ಕ್ಕೆ ಭೂಕಂಪ ಸಂಭವಿಸಿದ್ದು, ಇದರ ಕೇಂದ್ರ ಬಿಂದು ದೊಡ್ಡಬಳ್ಳಾಪುರ ತಾಲೂಕಿನ ತೂಬಗೆರೆ ಗ್ರಾಪಂ ವ್ಯಾಪ್ತಿಯ ತಿಮ್ಮೋಜನಹಳ್ಳಿ ಗ್ರಾಮದ ಉತ್ತರಕ್ಕೆ ಸುಮಾರು 0.5 ಕಿ.ಮೀ. ದೂರದಲ್ಲಿ ಭೂಮಿ ಮೇಲ್ಮ್ಯಯಿಂದ ಸುಮಾರು 10 ಕೀ ಲೋ ಆಳದಲ್ಲಿ ಭೂಮಿ ಕಂಪಿಸಿದೆ ಎಂದು ಕೇಂದ್ರದಲ್ಲಿ ವರದಿಯಾಗಿದೆ.

 ಮತ್ತೆ ಕಂಪಿಸಿದ ಭೂಮಿ: ಆ. 24 ದೊಡ್ಡಬಳ್ಳಾಪುರ ಮತ್ತು ಗೌರಿಬಿದನೂರು ವ್ಯಾಪ್ತಿಯ ಗ್ರಾಮಗಳಲ್ಲಿ ಮಧ್ಯರಾತ್ರಿ 03 ಗಂಟೆ 01 ನಿಮಿಷ ದಲ್ಲಿ  42 ಸೆಕೆಂಡುಗಳಲ್ಲಿ  ಭೂಮಿ.ಕಂಪಿಸಿದ  ಕಾರಣ ಮಧ್ಯರಾತ್ರಿ ಕಂಪನದಿಂದ ಗ್ರಾಮಸ್ಥರು  ಬೆಚ್ಚಿ ಬಿದ್ದ ಮನೆಯಿಂದ ಹೊರಗೆ ಹೋಡಿ ಬಂದು ಭಯ ಭೀತರಾಗಿರುವುದು ಕಂಡುಬಂದಿದೆ.

ದೊಡ್ಡಬಳ್ಳಾಪುರ  ತಾಲ್ಲೂಕಿನ ಆರೂಢಿ ಹಾಗೂ  ಗೌರಿಬಿದನೂರು ತಾಲ್ಲೂಕಿನ ವೀರಮ್ಮನಹಳ್ಳಿ   ಅಲಿಪುರ ದ ದಾಸರಹಳ್ಳಿಯಲ್ಲಿ ಆ. 24 ರಂದು ಮುಂಜಾನೆ  3:29ನಿಮಿಷಕ್ಕೆ ಕೋಟಾಲದಿನ್ನೆ  ಸುತ್ತಮುತ್ತಲಿನ   ಪ್ರದೇಶದಲ್ಲಿ   ಮುಂಜಾನೆ ಲಘು ಭೂಕಂಪ ಸಂಭವಿಸಿದೆ.

ರಿಕ್ಟರ್ ಮಾಪಕದಲ್ಲಿ 2.9 ತೀವ್ರತೆಯ ವ ಕಂಪನ ದಾಖಲಾಗಿದೆ. ಮುಂಜಾನೆ 3 ಗಂಟೆ 29 ನಿಮಿಷ 42 ಸೆಕೆಂಡ್‌ಗೆ ಮತ್ತೆ ಭೂಕಂಪ  ಸಂಭವಿಸಿದೆ ಎಂದು ಭೂಕಂಪನದ ದತ್ತಾಂಶ  ತಿಳಿಸಿದೆ. ಭೂಕಂಪದ ಕೇಂದ್ರಬಿಂದು 13.497 ಅಕ್ಷಾಂಶ ಹಾಗು 77.420 ರೇಖಾಂಶದಲ್ಲಿದ್ದು, ಭೂಮಿಯ ಮೇಲ್ಮೈ ಯಿಂದ 5 ಸುಮಾರು ಕಿಲೋಮೀಟರ್ ಆಳದಲ್ಲಿ ಕಂಪನ ದಾಖಲಾಗಿದೆ ಎಂದು ದತ್ತಾಂಶದಲ್ಲಿ ಉಲ್ಲೇಖಿಸಲಾಗಿದೆ. ಆದರೆ ಈ ಘಟನೆಯಿಂದ ಯಾವುದೇ ಹಾನಿ ಹಾಗಿಲ್ಲ.

    “ನಮ್ಮ ಆಡುಗೆ ಮನೆಯಲ್ಲಿ ಸರ್ಜಾ ಮೇಲೆ ಜೋಡಿಸಿದ್ದ ಪಾತ್ರೆ ಹಾಗು ಸಾಮಾನುಗಳು ಕೆಳಗೆ ಬಿದ್ದಿದ್ದು ಕಂಡುಬಂದಿದೆ ಅದರೆ ಕೆಳಗೆ ಬೀಳುವಾಗ ಶಬ್ದವಾಯಿತು ಅದರೆ ಭೂಕಂಪ ಎಂಬುದು ತಿಳಿದೆ ಬೆಕ್ಕು ಇಲ್ಲಿ ಇಡಿಯಲು ಹೋಗಿ ಕೆಳಗೆ ಬಿದ್ದಿದೆ ಎಂದು ನಾವು ತಿಳಿದುಕೊಂಡೆವು”.
ಚಲುವ ರಾಜ್, ಲಗುಮೇನಹಳ್ಳಿ.

“ನಾನು ಮನೆಯ ಮುಂದೆ ನಿಂತಿರುವಾಗ ಕಾಲುಗಳು ಆಲುಗಾಡಿದಂತಾಯಿತು ಅದರೆ ಎನು ಎಂಬುದು ತಿಳಿಯಲಿಲ್ಲ. ಅದರೆ ಮಾದ್ಯಮದ ಮುಖಾಂತರ ತಿಳಿದಾಗ ನನಗೆ ಗೊಚರವಾಯಿತು ಆಗ ಇದು ಭೂಕಂಪ ಎಂದು ತಿಳಿಯಿತು”.                 ಸುಬ್ರಮಣಿ, ಸ್ಥಳಿಯ ತೂಬಗೆರೆ.

 

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮೂರು ಕರಡಿಗಳೊಂದಿಗೆ ಹೋರಾಡಿ ಪ್ರಾಣ ಉಳಿಸಿಕೊಂಡ ರೈತ; ತಲೆಗೆ ಗಂಭೀರ ಗಾಯ, ಸ್ಥಿತಿ ಚಿಂತಾಜನಕ!ಹಿರಿಯೂರಿನಲ್ಲಿ ಪುಂಗಿ ಊದಿ ಹೋದ ಸಿಎಂ: ಗೋವಿಂದ ಕಾರಜೋಳ ಕಿಡಿಸಂಭ್ರದಿಂದ ನಡೆದ ತುಳಸಿ ಹಬ್ಬದ ಆಚರಣೆಭೀಕರ ರಸ್ತೆ ಅಪಘಾತ: ದೇಗುಲ ದರ್ಶನ ಮುಗಿಸಿ ಮರಳುತ್ತಿದ್ದ ಒಂದೇ ಕುಟುಂಬದ 9 ಮಂದಿ ದುರ್ಮರಣಹಿರಿಯೂರು ಉಪಚುನಾವಣೆ: ಅಮಿತ್ ಶಾ ಅಂಗಳಕ್ಕೆ ಅಭ್ಯರ್ಥಿ ಆಯ್ಕೆ ಚೆಂಡುಡಿ.ಕೆ. ಶಿವಕುಮಾರ್ ಔತಣಕೂಟ ವಿವಾದ: ಬಿ.ವೈ ವಿಜಯೇಂದ್ರ ಅಸಮಾಧಾನಕ್ಕೆ ಜನಾರ್ದನ ರೆಡ್ಡಿ ತಿರುಗೇಟುಭಾರತ್ ಜೋಡೋ ಯೋಜನೆಯಲ್ಲಿ ಪಕ್ಷಪಾತ ಆರೋಪ: ಸರ್ಕಾರದ ವಿರುದ್ಧ ಆರ್. ಅಶೋಕ್ ವಾಗ್ದಾಳಿ6ನೇ ದಿನಕ್ಕೆ ಕಾಲಿಟ್ಟ ಆಶಾ ಕಾರ್ಯಕರ್ತೆಯರ ಅಹೋರಾತ್ರಿ ಧರಣಿ: ಪ್ರತಿಭಟನೆ ಮತ್ತಷ್ಟು ತೀವ್ರಅಶ್ಲೀಲ ವಿಡಿಯೋ ಪ್ರಕರಣ: ಪ್ರಜ್ವಲ್ ರೇವಣ್ಣ ಕಡ್ಡಾಯ ಜಾಮೀನಿಗೆ ಹೈಕೋರ್ಟ್ ಅಸ್ತು!ರೌಡಿಗಳಿಗೆ ಖಾಕಿ ಶಾಕ್: 30ಕ್ಕೂ ಹೆಚ್ಚು ಕಡೆ ಏಕಕಾಲಕ್ಕೆ ದಾಳಿ, ಆರ್ಥಿಕ ಮೂಲಗಳಿಗೂ ಕತ್ತರಿ!