Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
National News

ಪ್ರಚಾರದಲ್ಲಿ ನೀತಿ - ಸಂಸ್ಕಾರ – ಸಂಸ್ಕೃತಿ ಅಳಿವಿನ ಅಂಚಿನಲ್ಲಿವೆ

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಪ್ರಚಾರ.........ಪ್ರಚಾರವೆಂಬುದರ ಅವಶ್ಯಕತೆ ಯಾವುದಕ್ಕಾಗಿ ಮತ್ತು ಯಾರಿಗಾಗಿ, ದಯವಿಟ್ಟು ಗಂಭೀರವಾಗಿ ಯೋಚಿಸಿ.....

ಭರ್ಜರಿಯಾಗಿ ಉಪ ಚುನಾವಣೆಯ ಪ್ರಚಾರವೇನೋ ನಡೆಯಿತು, ನಡೆಯುತ್ತಲೇ ಇದೆ, ಮುಂದೆ ನಡೆಯುತ್ತಲೂ ಇರುತ್ತದೆ....

ಕಾಂಗ್ರೆಸ್ ಪರವಾಗಿ ಘಟಾನುಘಟಿ ಸ್ಟಾರ್ ನಾಯಕರು, ಬಿಜೆಪಿ ಪರವಾಗಿ ಘಟಾನುಘಟಿ ಸ್ಟಾರ್ ಪ್ರಚಾರಕರು, ಜೆಡಿಎಸ್ ಪರವಾಗಿ ಘಟಾನುಘಟಿ ಸ್ಟಾರ್ ನಾಯಕರು, ಹೀಗೆ ಒಂದೊಂದು ಪಕ್ಷದ ಪರವಾಗಿ ಘಟಾನುಘಟಿ ಸ್ಟಾರ್ ಪ್ರಚಾರಕರು ಪ್ರಚಾರ ಮಾಡಿದ್ದಾರೆ......

ಅದರ ಯಥಾವತ್ತು ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಅಥವಾ ಮತ್ಯಾವುದೋ ಸಂಪರ್ಕ ಸಾಧನಗಳ ಮುಖಾಂತರ ರಾಜ್ಯಾದ್ಯಂತ, ದೇಶಾದ್ಯಂತ, ವಿಶ್ವದಾದ್ಯಂತ ಪ್ರಚಾರವಾಗುತ್ತಿದೆ.......

ಅವರ ಪ್ರಚಾರ ಅವರ ಪಕ್ಷಗಳು, ಅಭ್ಯರ್ಥಿಗಳು, ಚಿಹ್ನೆಗಳ ಬಗ್ಗೆ ಮಾತ್ರ. ಆದರೆ ನಮ್ಮ ಭವಿಷ್ಯದ ಮುಂದಿನ ಪೀಳಿಗೆಯ ಮಕ್ಕಳಿಗಾಗಿ, ಮಾನವ ಸಮಾಜದ ಮುಂದುವರಿಕೆಗಾಗಿ ಈ ವಿಷಯಗಳ ಬಗ್ಗೆ ಪ್ರಚಾರ ಮಾಡುವವರು ಯಾರು......

ಪ್ರೀತಿಯ ಬಗ್ಗೆ ಯಾರೂ ಪ್ರಚಾರ ಮಾಡಲಿಲ್ಲ, ಪ್ರೀತಿ ವಿರಹದಿಂದ ಬಳಲುತ್ತಿದೆ..... ನಮ್ಮ ಮಕ್ಕಳಿಗಾಗಿ ಸ್ನೇಹದ ಬಗ್ಗೆ ಯಾರೂ ಪ್ರಚಾರ ಮಾಡಲಿಲ್ಲ, ಸ್ನೇಹ ಸೊರಗುತ್ತಿದೆ.....

 

ಕರುಣೆಯ ಬಗ್ಗೆ ಯಾರೂ ಪ್ರಚಾರ ಮಾಡಲಿಲ್ಲ, ಕರುಣೆ ಕೊರಗುತ್ತಿದೆ...... ತ್ಯಾಗದ ಬಗ್ಗೆ ಯಾರೂ ಪ್ರಚಾರ ಮಾಡಲಿಲ್ಲ, ತ್ಯಾಗ ದುಃಖಿಸುತ್ತಿದೆ...... ಕ್ಷಮೆಯ ಬಗ್ಗೆ ಯಾರು ಪ್ರಚಾರ ಮಾಡಲಿಲ್ಲ, ಕ್ಷಮೆ ಮರುಗುತ್ತಿದೆ.....

ಸಭ್ಯತೆಯ ಬಗ್ಗೆ ಯಾರೂ ಪ್ರಚಾರ ಮಾಡಲಿಲ್ಲ, ಸಭ್ಯತೆಯ ಮನ ನೋಯುತ್ತಿದೆ...... ಸಹಕಾರದ ಬಗ್ಗೆ ಯಾರೂ ಪ್ರಚಾರ ಮಾಡಲಿಲ್ಲ, ಸಹಕಾರ ಸಂಕಟಪಡುತ್ತಿದೆ......
ಸಮನ್ವಯದ ಬಗ್ಗೆ ಯಾರೂ ಪ್ರಚಾರ ಮಾಡಲಿಲ್ಲ
, ಸಮನ್ವಯ ನಾಶವಾಗುತ್ತಿದೆ..... ಸಂಬಂಧಗಳ ಪಾವಿತ್ರ್ಯತೆ ಬಗ್ಗೆ ಯಾರೂ ಪ್ರಚಾರ ಮಾಡುತ್ತಿಲ್ಲ, ಸಂಬಂಧಗಳು ವ್ಯಾಪಾರಿಕರಣವಾಗುತ್ತಿದೆ......ನ್ಯಾಯದ ಬಗ್ಗೆ ಪ್ರಚಾರ ಮಾಡುವವರು ಯಾರೂ ಇಲ್ಲ, ನ್ಯಾಯ ಅಳುತ್ತಿದೆ........,

ನೀತಿ - ಸಂಸ್ಕಾರ - ಸಂಸ್ಕೃತಿಗಳ ಬಗ್ಗೆ ಪ್ರಚಾರ ಮಾಡುವವರು ಯಾರೂ ಇಲ್ಲ,

ಅವು ಅಳಿವಿನ ಅಂಚಿನಲ್ಲಿವೆ....ಪ್ರಾಮಾಣಿಕತೆಯ ಬಗ್ಗೆ ಪ್ರಚಾರ ಮಾಡುವವರು ಯಾರೂ ಇಲ್ಲ, ಪ್ರಾಮಾಣಿಕತೆ ಮರೆಯಾಗುತ್ತಿದೆ..... ಶಿಸ್ತಿನ ಬಗ್ಗೆ ಪ್ರಚಾರ ಮಾಡುವವರು ಯಾರೂ ಇಲ್ಲ, ಶಿಸ್ತು ಮಾಯವಾಗುತ್ತಿದೆ.....

ಸಂಯಮದ ಬಗ್ಗೆ ಪ್ರಚಾರ ಮಾಡುವವರು ಯಾರೂ ಇಲ್ಲ, ಸಂಮಯ ಇಲ್ಲವಾಗುತ್ತಿದೆ.......ಮನುಷ್ಯರ ಶೀಲ - ಚಾರಿತ್ರ್ಯದ ಬಗ್ಗೆ ಪ್ರಚಾರ ಮಾಡುವವರು ಯಾರೂ ಇಲ್ಲ, ಶೀಲ ಸಮಸ್ಯೆಯಾಗುತ್ತಿದೆ.....

ನೈತಿಕತೆಯ ಬಗ್ಗೆ ಪ್ರಚಾರ ಮಾಡುವವರು ಯಾರೂ ಇಲ್ಲ, ನೈತಿಕತೆ ನಿರ್ನಾಮವಾಗುತ್ತಿದೆ.....ಜಾತಿಗಳ ಬಗ್ಗೆ ಪ್ರಚಾರವಾಗುತ್ತದೆ, ಧರ್ಮಗಳ ಬಗ್ಗೆ ಪ್ರಚಾರ ಮಾಡುತ್ತಾರೆ, ಎಲ್ಲಾ ವಸ್ತುಗಳ ಬಗ್ಗೆ ಪ್ರಚಾರ ಮಾಡುತ್ತಾರೆ, ಆದರೆ ಮಾನವೀಯ ಮೌಲ್ಯಗಳ ಬಗ್ಗೆ ಪ್ರಚಾರ ಮಾಡುವವರು ಯಾರೂ ಇಲ್ಲ.....

ಪ್ರತಿಯೊಬ್ಬರಿಗೂ ಅತ್ಯಂತ ಅವಶ್ಯಕವಾದ, ಮನುಷ್ಯರ ಮೂಲಭೂತ ಭಾವನೆಗಳಾದ ಮಾನವೀಯ ಮೌಲ್ಯಗಳೆಂಬ ಜೀವ ದ್ರವ್ಯಗಳ ಬಗ್ಗೆ ಯಾರಿಗೂ ಕಾಳಜಿ ಇಲ್ಲ.....

ಎಲ್ಲಾ ಇಲ್ಲವುಗಳ ನಡುವೆ ಈ ಪದಗಳ, ಭಾವಗಳ ವಿರುದ್ಧ ಪದಗಳು, ಭಾವಗಳು ಈ ಸಮಾಜದಲ್ಲಿ ಮಾನ್ಯತೆ ಪಡೆಯುತ್ತಿವೆ. ಅದಕ್ಕೆ ಎಲ್ಲಾ ಕ್ಷೇತ್ರಗಳ ಎಲ್ಲರೂ ತಮ್ಮ ಕೈಲಾದಷ್ಟು ಕೊಡುಗೆ ನೀಡುತ್ತಿದ್ದಾರೆ.......

ಈಗಲಾದರೂ ಎಚ್ಚೆತ್ತುಕೊಂಡು ಚುನಾವಣಾ ಪ್ರಚಾರಕ್ಕಿಂತ ಮಾನವೀಯ ಮೌಲ್ಯಗಳ ಪ್ರಚಾರ - ಪ್ರಸಾರ ಈ ಸಮಾಜದ ಪ್ರಮುಖ ಆದ್ಯತೆಯಾಗಲಿ. ಇಲ್ಲದಿದ್ದರೆ ಮುಂದಿನ ಭವಿಷ್ಯ ಕರಾಳವಾಗಲಿದೆ........

ಒಂದು ಸಣ್ಣ ಚುನಾವಣಗೆ ಇಷ್ಟೊಂದು ಮಹತ್ವ ನೀಡಿ, ನಿಜವಾದ ಮಾನವೀಯ ಮೌಲ್ಯಗಳನ್ನು ನಿರ್ಲಕ್ಷಿಸಿದರೆ, ಮುಂದೆ ಭಾರಿ ಬೆಲೆ ತೆರಬೇಕಾಗುತ್ತದೆ ಎಚ್ಚರ ಎಂದು ಮನವಿ ಮಾಡಿಕೊಳ್ಳುತ್ತಾ......
ಲೇಖನ:ವಿವೇಕಾನಂದ. ಎಚ್. ಕೆ. 9844013068.........

 

 

Advertisement

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಸಾಪ ಮಾಜಿ ಜಿಲ್ಲಾಧ್ಯಕ್ಷ, ಶಿಕ್ಷಣತಜ್ಞ ಡಾ. ಕೆ.ಎಂ. ವೀರೇಶ್ ಹೃದಯಾಘಾತದಿಂದ ನಿಧನದುರ್ಗಕ್ಕೆ ಹರಿದು ಬಂದ ಭದ್ರೆ- ಸೆ.24ರಂದು ಮುಖ್ಯಮಂತ್ರಿಗಳಿಂದ ಗಂಗಾಪೂಜೆ,  ಬೃಹತ್ ಸಾರ್ವಜನಿಕ ಸಮಾರಂಭಆರ್.ಎಲ್ ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ 22ನೇ ಘಟಿಕೋತ್ಸವ ಮತ್ತು ಪದವಿ ಪ್ರದಾನ ಕಾರ್ಯಕ್ರಮನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ ಬೈಕ್ ಸವಾರ ಸಾವುಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಸಭೆ ಹೋರಾಟಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಾತಿನಿಧ್ಯ ಕಡಿಮೆ- ಚಿಕ್ಕಪ್ಪನಹಳ್ಳಿ ಷಣ್ಮುಖಕುಂಚಿಟಿಗ ನೌಕರರ ಸಂಘಕ್ಕೆ ಸದಸ್ಯರಾಗಿ: ಎಸ್.ಕೆ ಲಕ್ಷ್ಮಣ್ಚಳವಳಿ ನೆನಪಾಗಿ ಉಳಿದ ‘ತೆಂಕ-ಬಡಗ’ಅಂತಾರಾಷ್ಟ್ರೀಯ ಶಾಂತಿ ದಿನ – ಮನದ ದ್ವೇಷ ಕರಗಿದಾಗಲೇ ಜಗದ ಶಾಂತಿ ಅರಳುವುದು!ಗಣಪತಿ ಮೆರವಣಿಗೆ ವೇಳೆ ಗಲಾಟೆ 7 ಯುವಕರ ವಿರುದ್ಧ ಸುಮೋಟೋ ಪ್ರಕರಣ ದಾಖಲು