Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News

ಹಾಲು ಉತ್ಪಾದಕರಿಗೆ ನೀಡುವ ಬೆಂಬಲ ಬೆಲೆ ಹೆಚ್ಚಳಕ್ಕೆ ರೈತ ಸಂಘ ಆಗ್ರಹ

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಬೆಂಗಳೂರು ಹಾಲು ಉತ್ಪಾದಕರ ಸಹಕಾರ ಸಂಘದಿಂದ  ಹಾಲು ಉತ್ಪಾದಕರಿಗೆ ನೀಡುವ ಬೆಂಬಲ ಬೆಲೆಯನ್ನು ಕೂಡಲೇ ಹೆಚ್ಚಳ ಮಾಡಬೇಕು. 10 ರೂ ಹೆಚ್ಚಳ ಮಾಡಿ ಪ್ರತಿ ಲೀಟರ್ ಹಾಲಿಗೆ ಕನಿಷ್ಠ   50 ನಿಗದಿ ಪಡಿಸಬೇಕು ಎಂದು  ಕರ್ನಾಟಕ ರಾಜ್ಯ ರೈತ ಸಂಘದ   ಆಗ್ರಹಿಸಿದೆ.

 ನಗರ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿ ಗೋಷ್ಠಿಯಲ್ಲಿ ಜಿಲ್ಲಾ ರೈತ ಸಂಘದ ಅಧ್ಯಕ್ಷ ಪ್ರಸನ್ನ  ಮಾತನಾಡಿ 2026ರ ಸಂಕ್ರಾಂತಿ ಹಬ್ಬದ ವೇಳೆಗೆ ಹಾಲಿನ ಧರ ಹೆಚ್ಚಳವಾಗುತ್ತೆ ಎಂಬ ನಿರೀಕ್ಷೆಯಲ್ಲಿದ್ದೆವು. ಅದರೆ ಸರ್ಕಾರ ಇದರ ಬಗ್ಗೆ ಕ್ರಮ ತೆಗೆದುಕೊಂಡಿಲ್ಲ. ಬರುವ ಯುಗಾದಿ ವೇಳೆಗೆ ಧನಾತ್ಮಕ ಪ್ರತಿಕ್ರಿಯೆ ಬಾರದೆ ಹೋದರೆ  ರಾಜ್ಯಾಧ್ಯಂತ ಉಗ್ರ ಹೋರಾಟ ರೂಪಿಸಲಾಗುವುದು.

ಮೇವು ಹಿಂಡಿ ಬೂಸಾ ಸೇರಿದಂತೆ ಇತ್ಯಾದಿ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಗಣನೀಯವಾಗಿ ಏರಿಕೆಯಾಗುತ್ತಿದೆ. ಇನ್ನೇನು ಬೇಸಿಗೆ  ಸಮೀಪಿಸುತ್ತಿದ್ದು ರಾಸುಗಳ ಮೇವುಹವಣಿಕೆ  ಸವಾಲಿನ ಕೆಲಸವಾಗುತ್ತದೆ ಹಾಗು ಬೇಸಿಗೆಯಲ್ಲಿ ರಾಸುಗಳ ಅರೋಗ್ಯ ದಲ್ಲಿ  ಸಮಸ್ಯೆಗಳು ಎದುರಾಗಬಹುದು. ಈ ಸಮಯದಲ್ಲಿ ಹಾಲು ಕಡಿಮೆಯಾಗಬಹುದು.ಈ ನಿಟ್ಪಿನಲ್ಲಿ ರೈತರಿಗೆ ಬೆಂಬಲ ಬೆಲೆ ಅನಿವಾರ್ಯ. ಹಾಗಾಗಿ ಈ ಬೇಡಿಕೆಗಳಿಗೆ ಅದ್ಯತೆ  ನೀಡಿ ಪರಿಗಣನೆ ತೆಗೆದುಕೊಂಡು ಒಕ್ಕೂಟ-ಒಕ್ಕೂಟಗಳ ನಡುವೆ ಸಾಕಷ್ಟು ವ್ಯತ್ಯಾಸವಿದ್ದು  ಏಕರೂಪದ ನೀತಿಯನ್ನು ಜಾರಿಗೆ ತರುವುದರ ಮೂಲಕ ರೈತರಿಗೆ ಪ್ರೋತ್ಸಾಹ ನೀಡಿ ರೈತರ ಸಮಸ್ಯೆ ಬಗೆಹರಿಸಬೇಕು ಎಂದರು.

 ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುತ್ತೇಗೌಡ  ಮಾತನಾಡಿ ಬೇಸಿಗೆ ಆರಂಭವಾಗುತ್ತಿದ್ದಂತೆ ಪ್ರತಿ ವರ್ಷ ಬಮೂಲ್ ವತಿಯಿಂದ ಹೆಚ್ಚುವರಿ ಪ್ರತಿ ಲೀಟರ್‌ಗೆ ಸುಮಾರು 3 ರೂಪಾಯಿವರೆಗೂ ಪ್ರೋತ್ಸಾಹಧನ ನೀಡಲಾಗುತ್ತಿತ್ತು. ಆದರೆ ಈ ಬಾರಿ ಅದನ್ನು ನೀಡಿಲ್ಲ. ಜಾನುವಾರುಗಳ ಆಹಾರದ ಬೆಲೆ ಕೂಡ ಏರಿಕೆಯಾಗಿದೆ. ನಮ್ಮ ಸಮಸ್ಯೆಗಳನ್ನು ಯಾಕೆ ಒಕ್ಕೂಟ ಗಣನೆಗೆ ತೆಗೆದುಕೊಳ್ಳುತ್ತಿಲ್ಲ?.

ಆಧುನಿಕ ತಂತ್ರಜ್ಞಾನಕ್ಕೆ ನಮ್ಮ ವಿರೋಧವಿಲ್ಲ. ಆದರೆ ಪಾರದರ್ಶಕವಾಗಿ ತಂತ್ರಾಂಶವನ್ನು ಎಲ್ಲಾ ಒಕ್ಕೂಟಗಳು  ಅಳವಡಿಸಿಕೊಳ್ಳಬೇಕು. ಸರಕಾರ ಪ್ರಣಾಳಿಕೆಯಲ್ಲಿ ಹೇಳಿದಂತೆ ಹಾಲಿನ ಪ್ರೋತ್ಸಾಹ ಧನವನ್ನು 10 ರೂ.ಗೆ ಹೆಚ್ಚಿಸಬೇಕು. ಈಗಾಗಲೇ ಸರಕಾರ ಅಧಿಕಾರಕ್ಕೆ ಬಂದು 2.5 ವರ್ಷ ಕಳೆದಿದೆ. ಯಾವಾಗ ನೀಡುತ್ತೀರಿ. ಈ ಬಾರಿಯ ಬಜೆಟ್ ನಲ್ಲಿ ಘೋಷಣೆ ಮಾಡಬೇಕು. ಈಗಾಗಲೇ ಹೈನೋದ್ಯಮದಿಂದ ರೈತರು ಹೊರಗುಳಿಯುತ್ತಿದ್ದಾರೆ. ಹಿಂಡಿ, ಬೂಸ ಬೆಲೆ ಹೆಚ್ಚಾಗಿದೆ. ರೈತರು ಹಾಲು ಕರೆದು ಒಕ್ಕೂಟದ ಅಧಿಕಾರಿಗಳನ್ನು, ಸಿಬ್ಬಂದಿಗಳನ್ನು, ಜನಪ್ರತಿನಿಧಿಗಳನ್ನು ಸಾಕು ವಂತಾಗಿದೆ ಎಂದು ಕಿಡಿಕಾರಿದರು.

ರಾಗಿ ಖರೀದಿ ಕೇಂದ್ರ ಆರಂಬಿಸಿ:
ರೈತರು ನವಂಬರ್ ಡಿಸೆಂಬರ್ ನಲ್ಲಿ ರಾಗಿ ಕಟಾವು ಮಾಡಿ ರಾಗಿ ಶೇಖರಣೆ ಮಾಡಲು ಜಾಗವಿಲ್ಲ ಹಾಗು ಯುಗಾದಿ ಹಬ್ಬ ಮಾಡಲು ಹಣವಿಲ್ಲದೆ ಖರೀದಿ ಕೇಂದ್ರ ವಿಳಂಬ ಖಂಡನೀಯ  ತಾಲ್ಲೂಕಿನಲ್ಲಿ 12 ಸಾವಿರಕ್ಕೂ ಹೆಚ್ಚು ರೈತರು ನೋಂದಣಿ ಮಾಡಿಸಿ ಲಾಗಿದ್ದು ಕೂಡಲೆ ಖರೀದಿ ಕೇಂದ್ರ ಪ್ರಾರಂಭಿಸಬೇಕು ಎಂದು ಒತ್ತಾಯಿಸಿದರು.

ತಾಲೂಕು ರೈತ ಸಂಘದ ಅಧ್ಯಕ್ಷ ಸೇರಿದಂತೆ ಹಲವು ಮುಖಂಡರು ಮಾತನಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸರ್ಕಾ ರ ಅಧಿಕಾರಕ್ಕೆ ಬಂದರೆ ಹಾಲಿಗೆ ₹7 ಬೆಂಬಲ ಬೆಲೆ ನೀಡುವುದಾಗಿ ಹೇಳಿದ್ದರು. ಅದನ್ನು ಈಡೇರಿಸಬೇಕು. ಗ್ಯಾರಂಟಿ ಭಾಗ್ಯಗಳ ಜೊತೆಗೆ ರೈತರ ಹಿತಾಸಕ್ತಿ ಕಾಪಾಡಲೂ ಆದ್ಯತೆ ನೀಡಬೇಕು. ರೈತರಿಂದ ₹35ಕ್ಕೆ ಖರೀದಿ ಮಾಡಿ ₹50ಕ್ಕೆ ಮಾರಾಟ ಮಾಡುತ್ತಿದೆ. ಇಷ್ಟು ದೊಡ್ಡ ಅಂತರ ಅವೈಜ್ಞಾನಿಕ ನೀತಿ ಸರಿಯಿಲ್ಲ.

ಕೇಂದ್ರ ಬಜೆಟ್ ಅನ್ಯಾಯ:
ಕೇಂದ್ರ ಬಜೆಟ್- 26 ರಲ್ಲಿ ರೈತರ ಪರವಾದ ಯೋಜನೆಗಳು ಪ್ರಕಟಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಸುದ್ದಿ ಗೋಷ್ಠಿಯಲ್ಲಿ ಉಪಾಧ್ಯಕ್ಷ ಬಚ್ಚೇಗೌಡ, ರೈತ ಮುಖಂಡರಾದ ಮುನಿನಾರಾಯಪ್ಪ, ವಾಸುದೇವ್, ಬಚ್ಚಹಳ್ಳಿ ಸತೀಶ್‌, ಶಿವರಾಜು, ತಿಮ್ಮಣ್ಣ ಕುಮಾ‌ರ್, ಮುರುಳಿ, ಸೇರಿದಂತೆ ಅನೇಕರು ಹಾಜರಿದ್ದರು.

 

Advertisement

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಸಾಪ ಮಾಜಿ ಜಿಲ್ಲಾಧ್ಯಕ್ಷ, ಶಿಕ್ಷಣತಜ್ಞ ಡಾ. ಕೆ.ಎಂ. ವೀರೇಶ್ ಹೃದಯಾಘಾತದಿಂದ ನಿಧನದುರ್ಗಕ್ಕೆ ಹರಿದು ಬಂದ ಭದ್ರೆ- ಸೆ.24ರಂದು ಮುಖ್ಯಮಂತ್ರಿಗಳಿಂದ ಗಂಗಾಪೂಜೆ,  ಬೃಹತ್ ಸಾರ್ವಜನಿಕ ಸಮಾರಂಭಆರ್.ಎಲ್ ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ 22ನೇ ಘಟಿಕೋತ್ಸವ ಮತ್ತು ಪದವಿ ಪ್ರದಾನ ಕಾರ್ಯಕ್ರಮನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ ಬೈಕ್ ಸವಾರ ಸಾವುಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಸಭೆ ಹೋರಾಟಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಾತಿನಿಧ್ಯ ಕಡಿಮೆ- ಚಿಕ್ಕಪ್ಪನಹಳ್ಳಿ ಷಣ್ಮುಖಕುಂಚಿಟಿಗ ನೌಕರರ ಸಂಘಕ್ಕೆ ಸದಸ್ಯರಾಗಿ: ಎಸ್.ಕೆ ಲಕ್ಷ್ಮಣ್ಚಳವಳಿ ನೆನಪಾಗಿ ಉಳಿದ ‘ತೆಂಕ-ಬಡಗ’ಅಂತಾರಾಷ್ಟ್ರೀಯ ಶಾಂತಿ ದಿನ – ಮನದ ದ್ವೇಷ ಕರಗಿದಾಗಲೇ ಜಗದ ಶಾಂತಿ ಅರಳುವುದು!ಗಣಪತಿ ಮೆರವಣಿಗೆ ವೇಳೆ ಗಲಾಟೆ 7 ಯುವಕರ ವಿರುದ್ಧ ಸುಮೋಟೋ ಪ್ರಕರಣ ದಾಖಲು