Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Health & Fitness

ಗಣಿಭಾದಿತ ಪ್ರದೇಶದ ಜನರಿಗೆ ಉಚಿತ ಆರೋಗ್ಯ ಸೇವೆ

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ತಾಲ್ಲೂಕಿನ ಗಣಿಭಾದಿತ ಪ್ರದೇಶಗಳಲ್ಲಿನ ಜನರಿಗೆ ಉಚಿತ ಆರೋಗ್ಯ ಸೇವೆ ನೀಡುವ ಉದ್ದೇಶದಿಂದ ಸಂಚಾರಿ ಆರೋಗ್ಯ ಘಟಕ ಸಂಚರಿಸಲಿದೆ.

ಗಣಿಭಾದಿತ ಪ್ರದೇಶಗಳಲ್ಲಿ ಸಂಚಾರ ಮಾಡುವ ಸಂಚಾರಿ ಆರೋಗ್ಯ ಘಟಕ ಪ್ರತಿ ದಿನದ  ವೇಳಾಪಟ್ಟಿ ಅನ್ವಯ ಚಿತ್ರದುರ್ಗ ನಗರದಿಂದ ಹೊರಡಲಿದ್ದು, ಗಣಿಭಾದಿತ ಪ್ರದೇಶದ ಗ್ರಾಮಗಳಿಗೆ ಭೇಟಿ ನೀಡಿ, ಗ್ರಾಮೀಣ ಜನರಿಗೆ ಉಚಿತ ಆರೋಗ್ಯ ಸೇವೆ ನೀಡಲಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆಯಬಹುದಾಗಿದೆ.

ಸಂಚಾರಿ ಆರೋಗ್ಯ ಘಟಕದಲ್ಲಿ ವೈದ್ಯರು, ಶುಶ್ರೂಷಕರು, ಪ್ರಯೋಗಶಾಲಾ ತಂತ್ರಜ್ಞರು, ಔಷಧಿ ವಿತರಕರು ಕಾರ್ಯನಿರ್ವಹಿಸಲಿದ್ದು, ಸುಸಜ್ಜಿತ ವಾಹನ, ಆರೋಗ್ಯ ಉಪಕರಣಗಳು, ಔಷಧಿಗಳು ಲಭ್ಯ ಇರಲಿವೆ.
ಸಂಚಾರಿ ಆರೋಗ್ಯ ಘಟಕ ಒಂದು ವೇಳೆ ವೇಳಾಪಟ್ಟಿ ಪ್ರಕಾರ ಹಳ್ಳಿಗೆ ಬಾರದ ಇದ್ದ  ಪಕ್ಷದಲ್ಲಿ ಹಾಗೂ ಯಾವುದೇ ಸಿಬ್ಬಂದಿಗಳು ಹಣ ಕೇಳಿದ್ದಲ್ಲಿ ಚಿತ್ರದುರ್ಗ ತಾಲ್ಲೂಕು ಆರೋಗ್ಯಾಧಿಕಾರಿಗಳ ದೂರವಾಣಿ ಸಂಖ್ಯೆ 9448923532 ಗೆ ಕರೆ ಮಾಡಿ ತಿಳಿಸಲು ಸೂಚಿಸಿದೆ.

ಸಂಚಾರಿ ಆರೋಗ್ಯ ಘಟಕದ ವೇಳಾಪಟ್ಟಿ: ಮೊದಲನೇ ವಾರ: ಸೋಮವಾರ  ಬೆಳಿಗ್ಗೆ 10 ರಿಂದ 1 ರವರೆಗೆ ಕುರುಬರಹಳ್ಳಿ, ಮಧ್ಯಾಹ್ನ 2 ರಿಂದ ಸಂಜೆ 5 ರವರೆಗೆ ತಿರುಮಲಾಪುರ, ಮಂಗಳವಾರ ಬೆಳಿಗ್ಗೆ 10 ರಿಂದ 1 ರವರೆಗೆ ತುರೆಬೈಲು, ಮಧ್ಯಾಹ್ನ 2 ರಿಂದ 5 ರವರೆಗೆ ಬೊಮ್ಮೇನಹಳ್ಳಿ, ಬುಧವಾರ ಬೆಳಿಗ್ಗೆ  10 ರಿಂದ 1 ರವರೆಗೆ ವಿ.ಪಾಳ್ಯ, ಮಧ್ಯಾಹ್ನ 2 ರಿಂದ 5 ರವರೆಗೆ ನಲ್ಲಿಕಟ್ಟೆ,

ಗುರುವಾರ ಬೆಳಿಗ್ಗೆ 10 ರಿಂದ 1 ರವರೆಗೆ ಹುಲ್ಲೂರು, ಮಧ್ಯಾಹ್ನ 2 ರಿಂದ 5 ರವರೆಗೆ ಬೆಟ್ಟದ ನಾಗೇನಹಳ್ಳಿ, ಶುಕ್ರವಾರ ಬೆಳಿಗ್ಗೆ 10 ರಿಂದ 1 ರವರೆಗೆ ಮಳಲಿ, ಮಧ್ಯಾಹ್ನ 2 ರಿಂದ 5 ರವರೆಗೆ  ಬೊಮ್ಮವ್ವನಾಗ್ತಿಹಳ್ಳಿ, ಶನಿವಾರ ಬೆಳಿಗ್ಗೆ 10 ರಿಂದ 1 ರವರೆಗೆ ಚಿಕ್ಕೇನಹಳ್ಳಿ, ಮಧ್ಯಾಹ್ನ 2 ರಿಂದ 5 ರವರೆಗೆ ಕೋಣನೂರು ಗ್ರಾಮಗಳಲ್ಲಿ ಸಂಚಾರಿ ಆರೋಗ್ಯ ಘಟಕ ಸಂಚರಿಸಲಿದೆ.

ಎರಡನೇ ವಾರ: ಸೋಮವಾರ  ಬೆಳಿಗ್ಗೆ 10 ರಿಂದ 1 ರವರೆಗೆ ಹಳಿಯೂರು, ಮಧ್ಯಾಹ್ನ 2 ರಿಂದ ಸಂಜೆ 5 ರವರೆಗೆ ಕಡ್ಲೇಗುದ್ದು, ಮಂಗಳವಾರ ಬೆಳಿಗ್ಗೆ 10 ರಿಂದ 1 ಮೇಗಳಹಳ್ಳಿ, ಮಧ್ಯಾಹ್ನ 2 ರಿಂದ 5 ರವರೆಗೆ ಹುಣಸೆಕಟ್ಟೆ, ಬುಧವಾರ ಬೆಳಿಗ್ಗೆ  10 ರಿಂದ 1 ರವರೆಗೆ ಆಲಘಟ್ಟ, ಮಧ್ಯಾಹ್ನ 2 ರಿಂದ 5 ರವರೆಗೆ ದೊಡ್ಡಿಗನಾಳು, ಗುರುವಾರ ಬೆಳಿಗ್ಗೆ 10 ರಿಂದ 1 ರವರೆಗೆ ಪಳಕಿಹಳ್ಳಿ, ಮಧ್ಯಾಹ್ನ 2 ರಿಂದ 5 ರವರೆಗೆ ಬೆಟ್ಟದ ಸಿದ್ದಾಪುರ,

ಶುಕ್ರವಾರ ಬೆಳಿಗ್ಗೆ 10 ರಿಂದ 1 ರವರೆಗೆ ಡಿ.ಮದಕರಿಪುರ, ಮಧ್ಯಾಹ್ನ 2 ರಿಂದ 5 ರವರೆಗೆ  ಚಿಕ್ಕಾಲಘಟ್ಟ, ಶನಿವಾರ ಬೆಳಿಗ್ಗೆ 10 ರಿಂದ 1 ರವರೆಗೆ ಚಿಕ್ಕಗುಂಟನೂರು, ಹಳುವುದರ ಗ್ರಾಮಗಳಲ್ಲಿ ಸಂಚಾರ ಆರೋಗ್ಯ ಘಟಕ ಸಂಚರಿಸಲಿದೆ.
ಮೂರನೇ ವಾರ: ಸೋಮವಾರ  ಬೆಳಿಗ್ಗೆ 10 ರಿಂದ 1 ರವರೆಗೆ ಓಬಳಾಪುರ, ಮಧ್ಯಾಹ್ನ 2 ರಿಂದ ಸಂಜೆ 5 ರವರೆಗೆ ಕೊಳಹಾಳು, ಮಂಗಳವಾರ ಬೆಳಿಗ್ಗೆ 10 ರಿಂದ 1 ಚಿಕ್ಕಪುರ, ಮಧ್ಯಾಹ್ನ 2 ರಿಂದ 5 ರವರೆಗೆ ಕೊಡಗವಳ್ಳಿ, ಬುಧವಾರ ಬೆಳಿಗ್ಗೆ  10 ರಿಂದ 1 ರವರೆಗೆ ವಡ್ಡರಸಿದ್ದವ್ವನಹಳ್ಳಿ, ಮಧ್ಯಾಹ್ನ 2 ರಿಂದ 5 ರವರೆಗೆ ದ್ಯಾಮವ್ವನಹಳ್ಳಿ, ಗುರುವಾರ ಬೆಳಿಗ್ಗೆ 10 ರಿಂದ 1 ರವರೆಗೆ ಸಾದರಹಳ್ಳಿ, ಮಧ್ಯಾಹ್ನ 2 ರಿಂದ 5 ರವರೆಗೆ ಮಾನಂಗಿ,

ಶುಕ್ರವಾರ ಬೆಳಿಗ್ಗೆ 10 ರಿಂದ 1 ರವರೆಗೆ ಕಾಟೀಹಳ್ಳಿ, ಮಧ್ಯಾಹ್ನ 2 ರಿಂದ 5 ರವರೆಗೆ  ಐನಹಳ್ಳಿ, ಶನಿವಾರ ಬೆಳಿಗ್ಗೆ 10 ರಿಂದ 1 ರವರೆಗೆ ಹಳೇರಂಗಾಪುರ, ಮಧ್ಯಾಹ್ನ 2 ರಿಂದ 5 ರವರೆಗೆ ವಿಜಾಪುರ ಗ್ರಾಮಗಳಲ್ಲಿ ಸಂಚಾರಿ ಆರೋಗ್ಯ ಘಟಕ ಸಂಚರಿಸಲಿದೆ.

ನಾಲ್ಕನೇ ವಾರ: ಸೋಮವಾರ  ಬೆಳಿಗ್ಗೆ 10 ರಿಂದ 1 ರವರೆಗೆ ಚಿಕ್ಕಬೆನ್ನೂರು, ಮಧ್ಯಾಹ್ನ 2 ರಿಂದ ಸಂಜೆ 5 ರವರೆಗೆ ಹಿರೆಬೆನ್ನೂರು, ಮಂಗಳವಾರ ಬೆಳಿಗ್ಗೆ 10 ರಿಂದ 1 ಲಿಂಗವ್ವನಾಗ್ತಿಹಳ್ಳಿ, ಮಧ್ಯಾಹ್ನ 2 ರಿಂದ 5 ರವರೆಗೆ ಚಿಳಂಗಿ, ಬುಧವಾರ ಬೆಳಿಗ್ಗೆ  10 ರಿಂದ 1 ರವರೆಗೆ ಜಮ್ಮನಹಳ್ಳಿ, ಮಧ್ಯಾಹ್ನ 2 ರಿಂದ 5 ರವರೆಗೆ ಗೌರಮ್ಮನಹಳ್ಳಿ,

ಗುರುವಾರ ಬೆಳಿಗ್ಗೆ 10 ರಿಂದ 1 ರವರೆಗೆ ಹೊಸರಂಗಾಪುರ, ಓಬವ್ವನಾಗ್ತಿಹಳ್ಳಿ, ಮಧ್ಯಾಹ್ನ 2 ರಿಂದ 5 ರವರೆಗೆ ಕಲ್ಕುಂಟೆ, ಶುಕ್ರವಾರ ಬೆಳಿಗ್ಗೆ 10 ರಿಂದ 1 ರವರೆಗೆ ಕೆ.ಬಳ್ಳಕಟ್ಟೆ, ಎನ್.ಬಳ್ಳಕಟ್ಟೆ, ಮಧ್ಯಾಹ್ನ 2 ರಿಂದ 5 ರವರೆಗೆ  ಶೀಗೆಹಳ್ಳಿ, ಶನಿವಾರ ಬೆಳಿಗ್ಗೆ 10 ರಿಂದ 1 ರವರೆಗೆ ಸಿಂಗಾಪುರ ಗ್ರಾಮದಲ್ಲಿ ಸಂಚಾರಿ ಆರೋಗ್ಯ ಘಟಕ ಸಂಚರಿಸಲಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಜಿ.ಪಿ.ರೇಣುಪ್ರಸಾದ್ ತಿಳಿಸಿದ್ದಾರೆ.

 

Advertisement

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಖಾಸಗಿ ವಿವಿಗಳು ಲಾಭಕೋರ ವ್ಯಾಪಾರಿ ಸಂಸ್ಥೆಗಳಲ್ಲ: ಸುಪ್ರೀಂ ಕೋರ್ಟ್ ಖಡಕ್ ಎಚ್ಚರಿಕೆ ಪಿಎಸ್‌ಐಗೆ ಕಪಾಳಮೋಕ್ಷ: ಎಸ್‌ಐ ಸವಿತಾ ಪಾಟೀಲ್ ಬಳಿ ವಿಡಿಯೋ ಮೂಲಕ ಕ್ಷಮೆ ಕೋರಿದ ಶಾಸಕ ಸುರೇಶ್ ಗೌಡ ಪುತ್ರಿ ಐಶ್ವರ್ಯಾ ಗೌಡಸರ್ಕಾರಿ ಬಸ್ ಗ್ಲಾಸ್ ಒಡೆದು ಕರ್ತವ್ಯಕ್ಕೆ ಅಡ್ಡಿ; 15 ಬಿಜೆಪಿ ಕಾರ್ಯಕರ್ತರ ವಿರುದ್ಧ ಎಫ್‌ಐಆರ್ ಕಾಡು ಹಂದಿ ಬೇಟೆ: ವನ್ಯಜೀವಿ ಕಾಯ್ದೆಯಡಿ ಪೊಲೀಸರೇ ನೇರ ದೂರು ದಾಖಲಿಸುವುದು ಕಾನೂನುಬಾಹಿರ-ಹೈಕೋರ್ಟ್ಬೆಳ್ಳಂಬೆಳಗ್ಗೆ ಲೋಕಾಯುಕ್ತ ಕದನ: 8 ಸರ್ಕಾರಿ ಅಧಿಕಾರಿಗಳ ಮನೆ ಹಾಗೂ ಕಚೇರಿಗಳ ಮೇಲೆ ಏಕಕಾಲಕ್ಕೆ ದಾಳಿ200 ರೂ. ಆಸೆಗೆ ಬಿದ್ದು 9.30 ಲಕ್ಷ ರೂ. ಕಳೆದುಕೊಂಡ ಯುವತಿ: 'ವರ್ಕ್ ಫ್ರಮ್ ಹೋಮ್' ಸೈಬರ್ ವಂಚನೆ ಬಯಲುಸಾಮಾನ್ಯ ಜನರಿಗೆ ಬೆಲೆ ಏರಿಕೆ ಬಿಸಿ: ದಿಢೀರ್ ಹೆಚ್ಚಾದ ಅಕ್ಕಿ ದರ, ಒಂದೇ ತಿಂಗಳಲ್ಲಿ ಎರಡನೇ ಬಾರಿ ಏರಿಕೆಉತ್ತರ ಪ್ರದೇಶ, ಉತ್ತರಾಖಂಡ ರಾಜ್ಯಸಭಾ ಚುನಾವಣೆ ಹಾಗೂ ಬಂಗಾಳ ಉಪಚುನಾವಣೆ ಘೋಷಣೆ ಸಚಿವ ಶಿವಲಿಂಗೇಗೌಡರ ವಿವಾದಾತ್ಮಕ ಹೇಳಿಕೆ: ಲೋಕಾಯುಕ್ತಕ್ಕೆ ದೂರು ದಾಖಲು, ರಾಜೀನಾಮೆಗೆ ಆಗ್ರಹಬೆಂಗಳೂರು ವಿಮಾನ ನಿಲ್ದಾಣದಲ್ಲಿ 28 ಕೋಟಿ ಮೌಲ್ಯದ ಹೈಡ್ರೋಪೋನಿಕ್ ಗಾಂಜಾ ಹಾಗೂ ಚಿನ್ನ ವಶ, 6 ಜನರ ಬಂಧನ