Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News

ಹಳೇ ವಿದ್ಯಾರ್ಥಿಗಳಿಂದ ಗುರುವಂದನಾ ಕಾರ್ಯಕ್ರಮ

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ತಾಲ್ಲೂಕಿನ ಸಾಸಲು ಹೋಬಳಿ ಹೊಸಹಳ್ಳಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಹಳೇ ವಿದ್ಯಾರ್ಥಿಗಳಿಂದ ಗುರುವಂದನಾ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು.


1994 -1995 ನೇ ಸಾಲಿನ ಎಸ್ ಎಸ್ ಎಲ್ ಸಿ ವಿದ್ಯಾಭ್ಯಾಸ ಮಾಡುತ್ತಿದ್ದ ಹಳೇಯ ವಿದ್ಯಾರ್ಥಿಗಳು ಒಟ್ಟಿಗೆ ಸೇರಿ ಅರ್ಥಪೂರ್ಣವಾಗಿ ಗುರುವಂದನಾ ಹಾಗೂ  ಸ್ನೇಹ ಸಮ್ಮಿಲನ ದೂಂದಿಗೆ ಕುಶಾಲ ಕ್ಷೇಮ  ವಿಚಾರಣೆಯಾಂದಿಗೆ ಹಳೆಯ ಸವಿನೆನಪು ಮಾಡಿಕೊಂಡರು. ನಂತರ ವಿದ್ಯಾರ್ಥಿಗಳು 30 ವರ್ಷಗಳ ಬಳಿಕ ತಾವು ಓದಿದ ಶಾಲೆಯಲ್ಲಿ ಸೇರಿ ತಮ್ಮ ಶಿಕ್ಷಕರಿಗೆ ಗೌರವವನ್ನು ಸಲ್ಲಿಸಿದ್ದಾರೆ.

ಗುರುಗಳನ್ನು ಬೆಳ್ಳಿ ರಥದ ಮೂಲಕ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿಸಿ ಕಾರ್ಯಕ್ರಮದಲ್ಲಿ ಗುರುಗಳಿಗೆ ಸಕಲ ಗೌರವಗಳನ್ನು ಸಲ್ಲಿಸುತ್ತ ಗುರುಗಳ ಪಾದಪೂಜೆ ಮಾಡಿ, ಶಿಕ್ಷಕರನ್ನು ಪೂರ್ಣ ಕುಂಭ ಸ್ವಾಗತ ದೊಂದಿಗೆ ವೇದಿಕೆಗೆ ಕರೆತರಲಾಯಿತು.

ಇನ್ನು ವಿವಿಧ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಹಳೇ ವಿದ್ಯಾರ್ಥಿಗಳು ಒಂದೇ ಕಡೆ  ಸೇರಿರುವುದರಿಂದ ಅತೀವ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ

 ಬಾಲ್ಯದಲ್ಲಿ ತುಂಟತನ, ಅಜ್ಞಾನ, ಅಶಿಸ್ತಿನಿಂದ ಇರುವ ಮಕ್ಕಳನ್ನು ಒಂದು ಹತೋಟಿಗೆ ತಂದು ವಿದ್ಯೆ ಕಲಿಸುವ ಎಲ್ಲ ಗುರುಗಳಿಗೂ ನಮನಗಳನ್ನು ಸಲ್ಲಿಸಿದರು.

ಶಾಲೆಯಲ್ಲಿ ಸಾವಿರಾರು ವಿದ್ಯಾರ್ಥಿಗಳು ವ್ಯಾಸಂಗ ಮಾಡಿ ತೆರಳಿದ್ದಾರೆ. ಆದರೆ ಎಲ್ಲಾ ವಿದ್ಯಾರ್ಥಿಗಳು ಸುಸಂಸ್ಕೃತ ವಿದ್ಯಾರ್ಥಿಗಳಾಗಿರುವುದು ಶಿಕ್ಷಕರಾದ ನಮಗೆ ಹೆಮ್ಮೆ ವಿಷಯವಾಗಿದೆ. ಎಲ್ಲಿಯಾದರೂ ಸಿಕ್ಕಾಗ ನಮ್ಮ ಶಿಷ್ಯರ ಪಡೆ ಅಂತ ಹೆಮ್ಮೆಯಿಂದ ಹೇಳಬಹುದಾಗಿದೆ. ಈ ಶಾಲೆಯಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ಶಾಲೆಯ ಅಭಿವೃದ್ಧಿಗೆ ಸಹಕಾರ ನೀಡುತ್ತಾ ಬಂದಿದ್ದಾರೆ. ಇದೇ ಅವರು ಓದಿದ ಶಾಲೆಗೆ ನೀಡುವ ಗೌರವವಾಗಿದೆ ಎಂದು ಶಿಕ್ಷಕರು ಹೇಳಿದರು.

ತಾಯಿ ತಂದೆ ನಂತರ ಗುರುವೇ ಮುಖ್ಯ ಎಂಬ ಶ್ರದ್ಧಾಪೂರ್ವಕ ನಂಬಿಕೆ ವಿದ್ಯಾರ್ಥಿಗಳಲ್ಲಿ ಇದೆ. ಜೀವನದಲ್ಲಿ ಎಷ್ಟೇ ಮುಂದುವರಿದರೂ ಅದರ ಹಿಂದೆ ಗುರುವಿನ ಪಾತ್ರ ಇದ್ದೇ ಇರುತ್ತದೆ. ಗುರುಗಳಿಂದ ಬೆತ್ತದ ಏಟು ಬಿದ್ದಿದ್ದರಿಂದ ಇವತ್ತು ಸಮಾಜದಲ್ಲಿ ಒಳ್ಳೆಯ ಪ್ರಜೆಗಳಾಗಿ ರೂಪಗೊಂಡಿದ್ದೇವೆ. ಪಾಠ ಕಲಿಸಿ ಜೀವನದ ಮೌಲ್ಯ ಕಲಿಸಿಕೊಟ್ಟ ಗುರುಗಳನ್ನು ಸ್ಮರಿಸಿ ಗುರುವಂದನೆ ಸಲ್ಲಿಸುವುದು ನಮ್ಮ ಎಲ್ಲರ ಜವಾಬ್ದಾರಿಯಾಗಿದೆ ಎಂದು ಹಳೆಯ ವಿದ್ಯಾರ್ಥಿಗಳು ತಮ್ಮ ಅನಿಸಿಕೆಯನ್ನು ಹಂಚಿಕೊಂಡರು.

ನಂತರ ಹಳೇ ವಿದ್ಯಾರ್ಥಿ ನರಸಪ್ಪ ಮಾತನಾಡಿ, ನಾನು ಈ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುವಾಗ ಕೂಲಿ ಕೆಲಸ ಮಾಡುತ್ತಿದ್ದೆ. ಗುರುಗಳ ಮಾರ್ಗದರ್ಶನದಿಂದ ಈಗ ಸಿಂಚನ ಎಕ್ಸ್ಪೋರ್ಟ್ ಎಂಬ 2 ಸ್ವಂತ ಕಂಪನಿ ಮಾಡಿ.. ಸುಮಾರು 500 ರಿಂದ 600 ಜನಕ್ಕೆ ಉದ್ಯೋಗವನ್ನು ಕಲ್ಪಿಸಿಕೊಟ್ಟಿರುತ್ತೇನೆ. ಇದಕ್ಕೆಲ್ಲಾ ಈ ನಮ್ಮ ಶಿಕ್ಷಕರಿಂದಲೇ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮುಖ್ಯೋಪಾಧ್ಯಾಯ ರಾಧಾಮಣಿ ಮತ್ತು ಇತರ ಶಿಕ್ಷಕರು, ಹಳೇ ವಿದ್ಯಾರ್ಥಿ ನರಸಪ್ಪ, ಕೆ ವೆಂಕಟರಮಣಪ್ಪ , ಕೆ ಎಸ್ ಮಂಜುನಾಥಚಾರಿ, ಕೆ ಚಿತ್ತಯ್ಯ, ರಮೇಶ ಎಂ, ಪ್ರಸ್ತುತ ಉಮೇಶ, ಗಾಯಿತ್ರಮ್ಮ, ಸಿದ್ದರಾಜು, ಕೃಷ್ಣಪ್ಪ, ಚಿನ್ನಪ್ಪಯ್ಯ ಗೋವಿಂದಪ್ಪ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.

 

 

Advertisement

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಸಾಪ ಮಾಜಿ ಜಿಲ್ಲಾಧ್ಯಕ್ಷ, ಶಿಕ್ಷಣತಜ್ಞ ಡಾ. ಕೆ.ಎಂ. ವೀರೇಶ್ ಹೃದಯಾಘಾತದಿಂದ ನಿಧನದುರ್ಗಕ್ಕೆ ಹರಿದು ಬಂದ ಭದ್ರೆ- ಸೆ.24ರಂದು ಮುಖ್ಯಮಂತ್ರಿಗಳಿಂದ ಗಂಗಾಪೂಜೆ,  ಬೃಹತ್ ಸಾರ್ವಜನಿಕ ಸಮಾರಂಭಆರ್.ಎಲ್ ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ 22ನೇ ಘಟಿಕೋತ್ಸವ ಮತ್ತು ಪದವಿ ಪ್ರದಾನ ಕಾರ್ಯಕ್ರಮನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ ಬೈಕ್ ಸವಾರ ಸಾವುಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಸಭೆ ಹೋರಾಟಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಾತಿನಿಧ್ಯ ಕಡಿಮೆ- ಚಿಕ್ಕಪ್ಪನಹಳ್ಳಿ ಷಣ್ಮುಖಕುಂಚಿಟಿಗ ನೌಕರರ ಸಂಘಕ್ಕೆ ಸದಸ್ಯರಾಗಿ: ಎಸ್.ಕೆ ಲಕ್ಷ್ಮಣ್ಚಳವಳಿ ನೆನಪಾಗಿ ಉಳಿದ ‘ತೆಂಕ-ಬಡಗ’ಅಂತಾರಾಷ್ಟ್ರೀಯ ಶಾಂತಿ ದಿನ – ಮನದ ದ್ವೇಷ ಕರಗಿದಾಗಲೇ ಜಗದ ಶಾಂತಿ ಅರಳುವುದು!ಗಣಪತಿ ಮೆರವಣಿಗೆ ವೇಳೆ ಗಲಾಟೆ 7 ಯುವಕರ ವಿರುದ್ಧ ಸುಮೋಟೋ ಪ್ರಕರಣ ದಾಖಲು