Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Entertainment News

ಶ್ರದ್ದಾ ಭಕ್ತಿಯಿಂದ ನಡೆದ ಗುಟ್ಟೆ ನರಸಿಂಹಸ್ವಾಮಿ ರಥೋತ್ಸವ

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಸಾಸಲು ಹೋಬಳಿ ಗುಟ್ಟೆ(ಕಾಮೇನಹಳ್ಳಿ) ಲಕ್ಷ್ಮೀನರಸಿಂಹಸ್ವಾಮಿ ಕ್ಷೇತ್ರದಲ್ಲಿ ದ್ವಿತೀಯ ವರ್ಷದ ಲಕ್ಷ್ಮೀನರಸಿಂಹಸ್ವಾಮಿ ರಥೋತ್ಸವ ಶ್ರದ್ಧಾ ಭಕ್ತಿಗಳಿಂದ ನಡೆಯಿತು. 

ಜಾತ್ರಾ ಮಹೋತ್ಸವದಲ್ಲಿ ಗಂಗಾಪೂಜೆ ಅಂಕುರಾರ್ಪಣೆ, ಪುಣ್ಯಾಹ ಪಂಚಗವ್ಯ ರಕ್ಷಾಬಂಧನ , ಶೋಡಶೋಪಚಾರ ಪೂಜೆ, ಧ್ವಜಾರೋಹಣ ಸಂಕಲ್ಪಗಣಹೋಮ ನೃಸಿಂಹ ಹೋಮ, ಸುದರ್ಶನ ಹೋಮ, ಪ್ರಪ್ರಥಮ ಸಂಕಲ್ಪ ಹಾಗೂ ಪೂಜಾ ಕೈಂಕರ್ಯ ನಡೆಸಲಾಯಿತು. ಸಾವಿರಾರು ಮಂದಿ ಭಕ್ತರು ರಥೋತ್ಸವದಲ್ಲಿ ಭಾಗಿಯಾದರು. ಇದೇ ಸಂದರ್ಭದಲ್ಲಿ ನೂತನವಾಗಿ ನಿರ್ಮಿಸಿರುವ ರಥಕ್ಕೆ ದಶಶಾಂತಿ ಹೋಮಗಳನ್ನು ನೆರವೇರಿಸಲಾಯಿತು.

ವೀರಗಾಸೆ, ನಂದಿಧ್ವಜ, ಡೊಳ್ಳುಕುಣಿತ, ಗಾರುಡಿಗೊಂಬೆ, ತಮಟೆ, ಸೋಮನ ಕುಣಿತ, ಚಿಟ್ಟಿಮೇಳ ಇನ್ನಿತರೆ ಕಲಾವಿದರು ಭಾಗವಹಿಸಿದ್ದರು. ದೇವಾಲಯದಲ್ಲಿ ವಿಶೇಷ ಅಲಂಕಾರ, ಪೂಜೆ ನೆರವೇರಿಸಿ, ಭಕ್ತರಿಗೆ ಪಾನಕ ಸೇವೆ, ಅನ್ನ ಸಂತರ್ಪಣೆ ಆಯೋಜಿಸಲಾಗಿತ್ತು.

ಪಚ್ಚಾರಲಹಳ್ಳಿ, ಕಾಮೇನಹಳ್ಳಿ, ಆರೂಢಿ, ದೊಡ್ಡಗುಂಡಪ್ಪನಾಯಕನಹಳ್ಳಿ, ಚಿಕ್ಕ ಗುಂಡಪ್ಪನಾಯಕನಹಳ್ಳಿ, ಸಿಂಗ್ರಯ್ಯನಪಾಳ್ಯ, ಕಲ್ಲಕುಂಟೆ ಗರಿಕೇನಹಳ್ಳಿ, ವಡ್ಡನಹಳ್ಳಿ ಕೊಟ್ಟಗೆಮಾಚೇನಹಳ್ಳಿ, ಬನವತಿ, ದಡಘಟ್ಟಮೊಡಗು, ಗೌಡನಕುಂಟೆ, ಕರೇಕಲ್ಲಹಳ್ಳಿ, ಹಾರೋಹಳ್ಳಿ ಅಂಗದವೀರನಹಳ್ಳಿ, ಸೋಮಶೆಟ್ಟಿಹಳ್ಳಿ, ನಾಚಕುಂಟೆ, ತರಿದಾಳು, ನಾಗತೇನಹಳ್ಳಿ, ಇಂದಿರಾನಗರ, ಬೇವಿನಹಳ್ಳಿ, ಕುಕ್ಕಲಹಳ್ಳಿ, ಉಜ್ಜನಿ, ಸಾಸಲು ಹಾಗೂ ಇತರ ಗ್ರಾಮಸ್ಥರಿಂದ ದೀಪಾರತಿಗಳು ನಡೆದವು.

ಜಲಧಿ ಕಾಯಕ್ರಮ, ಬಾಳೆಮರ ಅಂಬು ಹಾಕುವ ಮುಖೇನ ಶಾಂತಿ ಸಂಪನ್ನ, ಹೋಳಿ ಹಬ್ಬದ ಪ್ರಯುಕ್ತ ಬಣ್ಣದ ಓಕುಳಿ ನಡೆಯಿತು. ಶ್ರೀ ಗುಟ್ಟೆಲಕ್ಷ್ಮೀನರಸಿಂಹಸ್ವಾಮಿ ನಾಟಕ ಮಂಡಲಿ ವತಿಯಿಂದ ಕುರುಕ್ಷೇತ್ರ ಪೌರಾಣಿಕ ನಾಟಕ ಪ್ರದರ್ಶನ ನಡೆಯಿತು.

 

Advertisement

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಸಾಪ ಮಾಜಿ ಜಿಲ್ಲಾಧ್ಯಕ್ಷ, ಶಿಕ್ಷಣತಜ್ಞ ಡಾ. ಕೆ.ಎಂ. ವೀರೇಶ್ ಹೃದಯಾಘಾತದಿಂದ ನಿಧನದುರ್ಗಕ್ಕೆ ಹರಿದು ಬಂದ ಭದ್ರೆ- ಸೆ.24ರಂದು ಮುಖ್ಯಮಂತ್ರಿಗಳಿಂದ ಗಂಗಾಪೂಜೆ,  ಬೃಹತ್ ಸಾರ್ವಜನಿಕ ಸಮಾರಂಭಆರ್.ಎಲ್ ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ 22ನೇ ಘಟಿಕೋತ್ಸವ ಮತ್ತು ಪದವಿ ಪ್ರದಾನ ಕಾರ್ಯಕ್ರಮನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ ಬೈಕ್ ಸವಾರ ಸಾವುಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಸಭೆ ಹೋರಾಟಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಾತಿನಿಧ್ಯ ಕಡಿಮೆ- ಚಿಕ್ಕಪ್ಪನಹಳ್ಳಿ ಷಣ್ಮುಖಕುಂಚಿಟಿಗ ನೌಕರರ ಸಂಘಕ್ಕೆ ಸದಸ್ಯರಾಗಿ: ಎಸ್.ಕೆ ಲಕ್ಷ್ಮಣ್ಚಳವಳಿ ನೆನಪಾಗಿ ಉಳಿದ ‘ತೆಂಕ-ಬಡಗ’ಅಂತಾರಾಷ್ಟ್ರೀಯ ಶಾಂತಿ ದಿನ – ಮನದ ದ್ವೇಷ ಕರಗಿದಾಗಲೇ ಜಗದ ಶಾಂತಿ ಅರಳುವುದು!ಗಣಪತಿ ಮೆರವಣಿಗೆ ವೇಳೆ ಗಲಾಟೆ 7 ಯುವಕರ ವಿರುದ್ಧ ಸುಮೋಟೋ ಪ್ರಕರಣ ದಾಖಲು