Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News

ದನಗಳ ಜಾತ್ರೆಯಲ್ಲಿ 18 ಲಕ್ಷಕ್ಕೆ ಮಾರಾಟವಾದ 'ಹಳ್ಳಿಕಾರ್​​​​' ತಳಿಯ ಹೋರಿಗಳು

ಚಂದ್ರವಳ್ಳಿ ನ್ಯೂಸ್, ತುಮಕೂರು:
ತುಮಕೂರಿನ ಸಿದ್ದಗಂಗಾ ಮಠದಲ್ಲಿ ಪ್ರತಿವರ್ಷ ನಡೆಯುವ ದನಗಳ ಜಾತ್ರೆಯಲ್ಲಿ 'ಹಳ್ಳಿಕಾರ್​​​​' ತಳಿಯ ಹೋರಿಗಳು ನಾಲ್ಕು ಲಕ್ಷ ರೂಪಾಯಿಂದ 18 ಲಕ್ಷ ರೂಪಾಯಿವರೆಗೂ ಮಾರಾಟವಾಗುತ್ತಿರುವುದು ವಿಶೇಷವಾಗಿದ್ದು ಎಲ್ಲರ ಗಮನ ಸೆಳೆಯುತ್ತಿದೆ.


ಸಿದ್ದಗಂಗಾ ಮಠದ ಜಾನುವಾರುಗಳ ಜಾತ್ರೆಗೆ ಸಾವಿರಾರು ಹೋರಿಗಳನ್ನು ರೈತರು ತಂದಿದ್ದಾರೆ. ತುಮಕೂರು, ಹಾಸನ, ರಾಮನಗರ, ಬೆಂಗಳೂರು ಗ್ರಾಮಾಂತರ, ಚಿತ್ರದುರ್ಗ ಜಿಲ್ಲೆಗಳ ರೈತರು ಹಳ್ಳಿಕಾರ್​ ತಳಿಯ ಹೋರಿಗಳನ್ನು ತಂದು ಮಾರಾಟಕ್ಕೆ ಇಟ್ಟಿದ್ದರು.

ವಿವಿಧ ಕಡೆಗಳಿಂದ ರೈತರು ಕೂಡ ಹೋರಿಗಳನ್ನು ಖರೀದಿಸಲು ಮುಂದಾಗುತ್ತಿದ್ದಾರೆ. ರೈತ ಮಧು ಎಂಬುವರು ಈ ಕುರಿತು ಮಾತನಾಡಿ, ಈ ಭಾಗದಲ್ಲಿ ಹಳ್ಳಿಕಾರ್ ತಳಿಯ ಹೋರಿಗಳನ್ನು ರೈತರು ಬಳಸುತ್ತಾರೆ. ನೆಲಮಂಗಲ, ತುಮಕೂರಿನಲ್ಲಿ ನಮ್ಮ ಹಳ್ಳಿಕಾರ್ ತಳಿಯೇ ಪ್ರಸಿದ್ಧ. ಹೀಗಾಗಿ ಅನೇಕ ವರ್ಷಗಳಿಂದ ನಾವು ಇವುಗಳನ್ನು ಸಾಕಿ ಸಿದ್ದಗಂಗಾ ಜಾತ್ರೆಗೆ ತರುತ್ತೇವೆ. ಈ ಬಾರಿ 8 ಜೊತೆ ಹಳ್ಳಿಕಾರ್ ಹೋರಿಗಳನ್ನು ತೆಗೆದುಕೊಂಡು ಬಂದಿದ್ದೇವೆ.

ಮೂರುವರೆ ಲಕ್ಷ ರೂ. ಮೌಲ್ಯದ ಹೋರಿಗಳು ಸೇರಿದಂತೆ ಸುಮಾರು 18 ಲಕ್ಷ ರೂ.ಗಳವರೆಗಿನ ಹೋರಿಗಳನ್ನು ಕೂಡ ನಾವು ಸಾಕುತ್ತಿದ್ದೇವೆ. ಹೋರಿಗಳನ್ನು ಅವುಗಳ ಹಲ್ಲುಗಳು ಇರುವ ಮಾನದಂಡ ಹಾಗೂ ಅವುಗಳ ಆರೋಗ್ಯಪೂರ್ಣ ಮೈಕಟ್ಟಿನಿಂದ ದರ ನಿಗದಿಪಡಿಸಲಾಗುತ್ತದೆ.

ಕಳೆದ ವರ್ಷ 15 ಲಕ್ಷ ರೂ.ಗಳಿಗೆ ಹಳ್ಳಿಕಾರ್​​ ತಳಿಗಳ ಹೋರಿಗಳನ್ನು ಮಾರಾಟ ಮಾಡಿದ್ದೆ, ರಾಜ್ಯದಲ್ಲಿಯೇ ಅತಿ ಹೆಚ್ಚು ಮೌಲ್ಯದ ಹೋರಿಗಳು ಎಂದು ಪರಿಗಣಿಸಲಾಗಿತ್ತು. ಪ್ರಸ್ತುತ ದಿನಮಾನಗಳಲ್ಲಿ ಹಳ್ಳಿಕಾರ್​ ತಳಿ ಹೋರಿಗಳ ಸಾಕಾಣಿಕೆ ಕ್ಷೀಣಿಸುತ್ತಿದೆ. ಆದರೆ ಇನ್ನೊಂದೆಡೆ ಅವುಗಳ ಬೇಡಿಕೆ ಹೆಚ್ಚಾಗುತ್ತಿರುವುದು ಗಮನಾರ್ಹ ಅಂಶವಾಗಿದೆ" ಎಂದರು.

ನಮ್ಮ ಏರಿಯಾದಲ್ಲಿ ಹೆಚ್ಚಾಗಿ ಹಳ್ಳಿಕಾರ್​ ತಳಿಯೇ ಕಾಣಿಸುತ್ತೆ. ರಾಮನಗರ, ಚನ್ನಪಟ್ಟಣ, ಮದ್ದೂರು, ಮಾಗಡಿ, ಸಿದ್ದಲಿಂಗ ಜಾತ್ರೆ, ಸಪಲ್ಲಮ್ಮ ಜಾತ್ರೆ, ಘಾಟಿ ಜಾತ್ರೆ, ಎಲ್ಲ ಕಡೆಯೂ ಹಳ್ಳಿಕಾರ್​ ತಳಿಗೆ ಬೇಡಿಕೆ ಇದೆ. ಹಿರಿಯರ ಕಾಲದಿಂದಲೂ ಹಳ್ಳಿಕಾರ ಹೋರಿಗಳನ್ನೇ ಬಳಸಲಾಗುತ್ತಿದೆ. ವ್ಯವಸಾಯದ ಆರಂಭಕ್ಕೆ, ಶೋಕಿಗಾಗಿ, ಕೆಲವರು ಶ್ರೀಮಂತರು ಮನೆಯ ಮುಂದೆ ಕಟ್ಟಲು ಈ ಹಳ್ಳಿಕಾರ್​ ತಳಿಯ ಹೋರಿಗಳನ್ನು ಬಳಸುತ್ತಾರೆ. ಈ ಬಾರಿ ಜಾತ್ರೆಗೆ ನಾಟಿ ಹಸು, ಸೀಮೆ ಹಸು, ರಾಸು ಹಸು, ಹಳ್ಳಿಕಾರು ಹೋರಿ ಸೇರಿ ಎಲ್ಲ ತಳಿಯ ಆಕಳುಗಳನ್ನು ತರಲಾಗಿದೆ. ಲೆಕ್ಕ ಹಾಕಲಾಗದಷ್ಟು ಸಾವಿರಾರು ಜೊತೆ ಜಾನುವಾರುಗಳು ಈ ಬಾರಿ ಜಾತ್ರೆ ಬಂದಿವೆ ಎಂದು ರೈತ ರಾಮಾಂಜನಪ್ಪ ತಿಳಿಸಿದರು.

 

Advertisement

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಸಾಪ ಮಾಜಿ ಜಿಲ್ಲಾಧ್ಯಕ್ಷ, ಶಿಕ್ಷಣತಜ್ಞ ಡಾ. ಕೆ.ಎಂ. ವೀರೇಶ್ ಹೃದಯಾಘಾತದಿಂದ ನಿಧನದುರ್ಗಕ್ಕೆ ಹರಿದು ಬಂದ ಭದ್ರೆ- ಸೆ.24ರಂದು ಮುಖ್ಯಮಂತ್ರಿಗಳಿಂದ ಗಂಗಾಪೂಜೆ,  ಬೃಹತ್ ಸಾರ್ವಜನಿಕ ಸಮಾರಂಭಆರ್.ಎಲ್ ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ 22ನೇ ಘಟಿಕೋತ್ಸವ ಮತ್ತು ಪದವಿ ಪ್ರದಾನ ಕಾರ್ಯಕ್ರಮನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ ಬೈಕ್ ಸವಾರ ಸಾವುಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಸಭೆ ಹೋರಾಟಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಾತಿನಿಧ್ಯ ಕಡಿಮೆ- ಚಿಕ್ಕಪ್ಪನಹಳ್ಳಿ ಷಣ್ಮುಖಕುಂಚಿಟಿಗ ನೌಕರರ ಸಂಘಕ್ಕೆ ಸದಸ್ಯರಾಗಿ: ಎಸ್.ಕೆ ಲಕ್ಷ್ಮಣ್ಚಳವಳಿ ನೆನಪಾಗಿ ಉಳಿದ ‘ತೆಂಕ-ಬಡಗ’ಅಂತಾರಾಷ್ಟ್ರೀಯ ಶಾಂತಿ ದಿನ – ಮನದ ದ್ವೇಷ ಕರಗಿದಾಗಲೇ ಜಗದ ಶಾಂತಿ ಅರಳುವುದು!ಗಣಪತಿ ಮೆರವಣಿಗೆ ವೇಳೆ ಗಲಾಟೆ 7 ಯುವಕರ ವಿರುದ್ಧ ಸುಮೋಟೋ ಪ್ರಕರಣ ದಾಖಲು