Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
National News

ನಗರ, ಗ್ರಾಮೀಣ ಪತ್ರಕರ್ತರಿಗೆ ಆರೋಗ್ಯ ವಿಮೆ, ನಿವೇಶನ ಹಂಚಿಕೆ –ಡಿಸಿಎಂ ಡಿ.ಕೆ.ಶಿವಕುಮಾರ್

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸಮಾಜದ ಅಂಕು-ಡೊಂಕುಗಳನ್ನು, ಟೀಕೆ ಟಿಪ್ಪಣಿಗಳ ಮೂಲಕ ತಿದ್ದಿ - ತೀಡಿ ಜನರಿಗೆ ತಲುಪಿಸುವಲ್ಲಿ ಮಾಧ್ಯಮಗಳ ಪಾತ್ರ ಮಹತ್ತರವಾದದ್ದು ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.

ಇಂದು ಕರ್ನಾಟಕ ಮಾಧ್ಯಮ ಅಕಾಡೆಮಿಯ ವತಿಯಿಂದ ಭಾರತೀಯ ವಿಜ್ಞಾನ ಸಂಸ್ಥೆಯ ಜಿ.ಎನ್. ಟಾಟಾ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ 2023 ಮತ್ತು 2024ನೇ ಸಾಲಿನ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿ, ಪ್ರಜಾಪ್ರಭುತ್ವದಲ್ಲಿ ನಾಲ್ಕನೇ ಅಂಗವಾಗಿರುವ ಮಾಧ್ಯಮ ರಂಗಕ್ಕೆ ಬಹಳ ದೊಡ್ಡ ಜವಬ್ದಾರಿ ಇದೆ. ತಮ್ಮ ಬರವಣಿಗೆ, ವರದಿಗಳ ಮೂಲಕ ಜನರಿಗೆ ತಲುಪಿಸುವ ಮಾಧ್ಯಮಗಳು ಜನಸೇವೆ ದೇಶಸೇವೆ ಮಾಡುತ್ತಿರುವುದು ವಿಶೇಷ. ಮಾಧ್ಯಮದವರ ಪರಿಶ್ರಮ ಮತ್ತು ಅವರ ಕುಟುಂಬಸ್ಥರ ತ್ಯಾಗದಿಂದ ಪತ್ರಕರ್ತರು ಪ್ರಶಸ್ತಿಗೆ ಭಾಜನರಾಗಿರುವುದು ಸಂತಸದ ಸಂಗತಿ ಎಂದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮೂಲಕ ಪತ್ರಕರ್ತರಿಗೆ ಟಿಯೇಸ್ಸಾರ್, ಮೊಹರೆ ಹಣಮಂತರಾಯ, ಅಭಿವೃದ್ಧಿ ಪತ್ರಿಕೋದ್ಯಮ, ಪರಿಸರ ಪತ್ರಿಕೋದ್ಯಮ, ರಘುರಾಮಶೆಟ್ಟಿ ವಡ್ಡರ್ಸೆ ಹಾಗೂ ಚಲನಚಿತ್ರೋದ್ಯಮಿಗಳಿಗೆ ಚಲನಚಿತ್ರ ಪ್ರಶಸ್ತಿ, ಚಲನಚಿತ್ರಗಳಿಗೆ ಸಹಾಯಧನಗಳನ್ನು ನೀಡಲಾಗುತ್ತಿದೆ. ಗ್ರಾಮೀಣ ಪತ್ರಕರ್ತರ ಬಸ್ ಪಾಸ್ ನೀಡುವ ಸೌಲಭ್ಯವನ್ನು 2024-25ನೇ ಸಾಲಿನ ಬಜೆಟ್ನಲ್ಲಿ ಘೋಷಿಲಾಗಿದ್ದು, ಇದು ಈಗಾಗಲೇ ಕಾರ್ಯಗತಗೊಂಡಿದೆ. ಪತ್ರಕರ್ತರಿಗೆ ಆರೋಗ್ಯ ವಿಮೆ ಸೌಲಭ್ಯ ಹಾಗೂ ಅರ್ಹ ಪತ್ರಕರ್ತರಿಗೆ ನಿವೇಶನ ಹಂಚಿಕೆಯನ್ನು ಮುಂಬರುವ ದಿನಗಳಲ್ಲಿ ನೀಡಲಾಗುವುದು ಎಂದು ಭರವಸೆ ನೀಡಿದರು.

ಇತ್ತೀಚೆಗೆ ಹೆಚ್ಚಾಗುತ್ತಿರುವ ಸುಳ್ಳು ಸುದ್ದಿಗಳನ್ನು ನಿಯಂತ್ರಿಸುವುದು ಎಲ್ಲರ ಕರ್ತವ್ಯವಾಗಿದೆ. ಆಧುನಿಕ ಪತ್ರಿಕೋದ್ಯಮ ಶಿಕ್ಷಣ ನೀಡುವ ಪತ್ರಿಕೋದ್ಯಮ ಇನ್ಸಿಟಿಟ್ಯೂಟ್ನ್ನು ಪ್ರಾರಂಭಿಸುವುದಾಗಿ ತಿಳಿಸಿದರು.
ಇದೇ ಸಮಯದಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿಯು ಹೊರತಂದ 2023 ಮತ್ತು 2024ನೇ ಸಾಲಿನ ವಾರ್ಷಿಕ ಪ್ರಶಸ್ತಿ ಪುರಸ್ಕøತರ ಪುಸ್ತಕವನ್ನು ಬಿಡುಗಡೆ ಮಾಡಿದರು.

ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷರಾದ ಆಯೇಶಾ ಖಾನಂ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಮಾಧ್ಯಮ ಅಕಾಡೆಮಿಯಿಂದ ಮಹಿಳಾ ಬಜೆಟ್, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಇಂಟರ್ನ್ಶಿಪ್ ಕಾರ್ಯಾಗಾರ, ಪತ್ರಕರ್ತರಿಗೆ ವಾರ್ಷಿಕ ಪ್ರಶಸ್ತಿ ಮುಂತಾದ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದೆ. ಜೀವಮಾನ ಹಾಗೂ ವಾರ್ಷಿಕ ಪ್ರಶಸ್ತಿ ಮೊತ್ತವನ್ನು ಕಳೆದ ಬಾರಿಗಿಂತ ಬಾರಿ ದುಪ್ಪಟ್ಟುಗೊಳಿಸಲಾಗಿದೆ. ಪತ್ರಕರ್ತರಿಗೆ ಹೊಸ ತಂತ್ರಜ್ಞಾನದ ಬಳಕೆಯಿಂದ ಮುನ್ನೆಡೆಯಲು ಕಾರ್ಯಕ್ರಮಗಳನ್ನು ರೂಪಿಸಲಾಗುವುದು. ಸಮಸಮಾಜದ ಮುಖ್ಯಮಂತ್ರಿಗಳ ಕನಸನ್ನು ನನಸಾಗಿಸಲು ಪ್ರಯತ್ನಿಸಲಾಗುವುದು. ಅಕಾಡೆಮಿಯು ಸ್ತ್ರೀ ಸಬಲೀಕರಣ, ಸುಳ್ಳು ಸುದ್ದಿ ನಿಯಂತ್ರಣ, ಪತ್ರಕರ್ತರ ಕಲ್ಯಾಣ ಯೋಜನೆಗಳನ್ನು ಜಾರಿ ಮಾಡುವ ಮೂಲಕ ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿದೆ. ಬಹುತೇಕ ಪತ್ರಿಕೋದ್ಯಮ ಕಾಲೇಜುಗಳು ಮುಚ್ಚಿ ಹೋಗಿದ್ದು, ಕ್ಷೇತ್ರವನ್ನು ಹಾಗೂ ಪತ್ರಕರ್ತರನ್ನು ಮುನ್ನೆಲೆಗೆ ತರಲು ಅಕಾಡೆಮಿಯು ಪ್ರಯತ್ನಿಸುತ್ತಿದೆ ಎಂದರು.

೨೦೨೩ ನೇ ಸಾಲಿನ ವಾರ್ಷಿಕ ಪ್ರಶಸ್ತಿ ಪುರಸ್ಕೃತರು:
ಸುಶೀಲೇಂದ್ರ ಟಿ. ನಾಯಕ್, ಎಸ್. ದೊರೈರಾಜ್ ಆಲ್‌ಫ್ರೆಡ್ ಟೆನಿಸನ್,  ಕೆ.ಎಂ. ಮನು ಅಯ್ಯಪ್ಪ, ಡಾ. ವಿಲಾಸ್ ನಾಂದೋಡ್ಕರ್, ಶ್ರೀ ಸಿದ್ದಯ್ಯ ಹಿರೇಮಠ, ಮನೋಜ ಪಾಟೀಲ, ಮಧು ಜವಳಿ, ಎ.ಎಲ್. ತಾರಾನಾಥ್, ಆರ್. ಜಯಪ್ರಕಾಶ್, ಇಬ್ರಾಹಿಂ ಅಡ್ಕಸ್ಥಳ, ನೆಹಾಲ್ ಕಿದ್ವಾಯಿ, ಭಾವನಾ ನಾಗಯ್ಯ, ಹನುಮಾನ್ ಸಿಂಗ್ ಜಮಾದಾರ್, ಶಿವಮೂರ್ತಿ ಜಿ. ಗುರುಮಠ, ಸಿರಾಜ್ ಬಿಸರಳ್ಳಿ, ಪ್ರೊ. ಉಷರಾಣಿ ಎನ್., ಎಂ. ವಾಸುದೇವ ಹೊಳ್ಳ, ಮಾಲತಿ ಭಟ್, ಸಿ.ಹೆಂಜಾರಪ್ಪ ಹರಿಯಬ್ಬೆ, ಶಿವಕುಮಾರ್ ಬೆಳ್ಳಿತಟ್ಟೆ, ಶಶಿಕಾಂತ್ ಎಸ್. ಶೆಂಬೆಳ್ಳಿ,

ಆನಂದ ಪರಮೇಶ್ವರ ಬೈದನಮನೆ, ದಿನೇಶ್ ಎಂ.ಆರ್., ಕೆ. ಮಲ್ಲಿಕಾರ್ಜುನ ಸಾಣಾಪೂರ, ಪುಂಡಲೀಕ ಭೀ, ಬಾಳೋಜಿ, ಅನ್ನು ಮಂಗಳೂರು (ಹೆಚ್. ಪುಂಡಲೀಕ ಪೈ), ರೋಹಿಣಿ ಸ್ವಾಮಿ, ಮುನೀರ್ ಅಹ್ಮದ್ ಆಜಾದ್ ಹಾಗೂ ಡಾ. ಕೆ. ಜೈಮುನಿ.

 ೨೦೨೪ನೇ ಸಾಲಿನ ವಾರ್ಷಿಕ ಪ್ರಶಸ್ತಿ ಪುರಸ್ಕೃತರು:
ಡಾ. ಎ.ಎಸ್. ಬಾಲಸುಬ್ರಹ್ಮಣ್ಯ, ಸುಭಾಷ್ ಹೂಗಾರ, ಯು.ಕೆ. ಕುಮಾರನಾಥ್, ಆರ್.ಕೆ. ಜೋಶಿ, ಆರುಂಡಿ ಶ್ರೀನಿವಾಸಮೂರ್ತಿ, ಭಾನು ಪ್ರಕಾಶ್ ಚಂದ್ರ, ರಮೇಶ್ ಜಹಗೀರದಾರ, ಬಿ. ದಿನೇಶ್ ಗೌಡಗೆರೆ, ಹೆಚ್.ಎಸ್. ಹರೀಶ್, ಅಶ್ವಿನಿ ಎಂ. ಶ್ರೀಪಾದ, ಬನ್ಸಿ ಕಾಳಪ್ಪ, ಜಿ. ಜಯಂತ್, ಡಿ.ಎನ್. ಶಾಂಭವಿ ನಾಗರಾಜ್, ಸೋಮಶೇಖರ ಕಿಲಾರಿ, ಅನೀಸ್ ನಿಸಾರ್ ಹಮೀದ್, ಹೃಷಿಕೇಶ ಬಹದ್ದೂರ ದೇಸಾಯಿ, ಟಿ. ಗುರುರಾಜ್, ಸಿದ್ದಪ್ಪ ಗೋಪಾಲ ಕಾಳೋಜಿ, ಪ್ರಕಾಶ ಎಸ್. ಶೇಟ್, ರವೀಶ್ ಹೆಚ್.ಎಸ್., ಮಹೇಶ ವಿ. ಶಟಗಾರ, ನಿರುಪಮಾ ಕೆ.ಎಸ್., ಡಿ.ಸಿ. ಮಹೇಶ್, ಶರಣಯ್ಯ ಬಿ. ಒಡೆಯರ್, ರಿಜ್ವಾನ್ ಎಂ.ಕೆ., ಮನುಜಾ ವೀರಪ್ಪ, ವಿಖಾರ್ ಅಹ್ಮದ್ ಸಯೀದ್, ಹಾಬಿ ರಮೇಶ್ ಜೆ., ನಾರಾಯಣ ಸ್ವಾಮಿ, ಹಾಗೂ ಎಂ.ವಿ. ಸಂದೀಪ್ ಸಾಗರ್.

 ೨೦೨೩ ನೇ ಸಾಲಿನ ಕರ್ನಾಟಕ ಮಾಧ್ಯಮ ಅಕಾಡೆಮಿ ವಿವಿಧ ದತ್ತಿ ಪ್ರಶಸಿ ಪುರಸ್ಕೃತರು:
ಅಭಿಮಾನಿ ದತ್ತಿ ಪ್ರಶಸ್ತಿಗೆ ಕನ್ನಡಮ್ಮ ಪತ್ರಿಕೆಯ ಕೆವೈಸಿ ಆಪ್ ಡೇಟ್ ಮಾಡಲು ಮುಗಿಬಿದ್ದ ಜನ, ಬೆಳ್ಳಂಬೆಳಿಗ್ಗೆ ಕ್ಯೂ ವರದಿಗಾಗಿ ರವಿ ಕುಮಾರ ಚನ್ನಬಸಪ್ಪ ಕಗ್ಗಣ್ಣವರ ಅವರು ಹಾಗೂ  ವಿಜಯ ಕರ್ನಾಟಕ ಪತ್ರಿಕೆಯ ಬಲೆಯೊಳಗೆ ಬುದ್ದಿವಂತರು" ವರದಿಗಾಗಿ ವಿಜಯ್ ಕೋಟ್ಯಾನ್ ಪಡು ಆಯ್ಕೆಯಾಗಿದ್ದಾರೆ.

ಆಂದೋಲನಾ ಪ್ರಶಸ್ತಿಗೆ ಬಾಗಲಕೋಟೆಯ ಸಂಜೆ ದರ್ಶನ್ಪತ್ರಿಕೆಮೈಸೂರು ದಿಗಂತ ದತ್ತಿ ಪ್ರಶಸ್ತಿಗೆ ಕನ್ನಡಪ್ರಭ ಪತ್ರಿಕೆಯ ಕೆರೆನೀರು ಹೊರಕ್ಕೆ ಹಾಕುತ್ತಿರುವ ಗ್ರಾಮಸ್ಥರುವರದಿಗಾಗಿ ಹುಬ್ಬಳ್ಳಿಯ ಶಿವಾನಂದ ಗೊಂಬಿ, ಡಾ. ಬಿ.ಆರ್. ಅಂಬೇಡ್ಕರ್ ಮೂಕನಾಯಕ ಪ್ರಶಸ್ತಿಗಾಗಿ ಕಲಬುರಗಿಯ ಕೆ. ನೀಲಾ, ಮಾಧ್ಯಮ ಮಹಾಸಾಧಕ ಸಿ.ವಿ. ರಾಜಗೋಪಾಲ್ ದತ್ತಿ ಪ್ರಶಸ್ತಿಗೆ ಚಿತ್ರದುರ್ಗ ಕನ್ನಡಪ್ರಭದ ಕ.ಮ. ರವಿಶಂಕರ್, ಅಭಿಮನ್ಯು ಪ್ರಶಸ್ತಿಗೆ ಮಂಗಳೂರು ಪ್ರಜಾವಾಣಿ ಪತ್ರಿಕೆಯ ಬೀಡಿಯಿಂದ ಕಮರಿದ ಕನಸುವರದಿಗಾಗಿ ಸಂಧ್ಯಾ ಹೆಗಡೆ, ಪ್ರಜಾ ಪಂದೇಶ ದತ್ತಿ ಪ್ರಶಸ್ತಿಗೆ ಮೈಸೂರು ಡೆಕ್ಕನ್ ಹೆರಾಲ್ಡ್ ಪತ್ರಿಕೆಯ Manual Scavenging Stinking Truth ವರದಿಗಾಗಿ ಶಿಲ್ಪ ಪಿ., ಕರ್ನಾಟಕ ಕಾರ್ಯನಿರತ ಪತ್ರಕರ್ತ ಸಂಘದ ಕೆಯುಡಬ್ಲ್ಯುಜೆ ದತ್ತಿ ಪ್ರಶಸ್ತಿಗೆ ಹಿರಿಯ ಪತ್ರಕರ್ತರಾದ ವಿ. ವೆಂಕಟೇಶಹಾಗೂ ಕೃಷಿಯಲ್ಲಿ ಅತ್ಯುತ್ತಮ ವರದಿ, ಲೇಖನ, ಅಂಕಣ ಬರಹಗಾರರಿಗೆ ನೀಡುವ ಬಸವರಾಜ ದೊಡ್ಡಮನಿ ದತ್ತಿ ಪ್ರಶಸ್ತಿಗೆ  ಹೆಚ್.ಪಿ. ಪುಣ್ಯವತಿ ಅವರುಗಳು ಆಯ್ಕೆಯಾಗಿದ್ದಾರೆ.



೨೦೨೪ನೇ ಸಾಲಿನ ಕರ್ನಾಟಕ ಮಾಧ್ಯಮ ಅಕಾಡೆಮಿ ವಿವಿಧ ದತ್ತಿ ಪ್ರಶಸ್ತಿ ಪುರಸ್ಕೃತರು:
ಅಭಿಮಾನಿ ದತ್ತಿ ಪ್ರಶಸ್ತಿಗೆ ಕೋಲಾರ ಹಾಗೂ ಚಿಕ್ಕಬಳ್ಳಾಪುರ ಪ್ರಜಾವಾಣಿ ಪತ್ರಿಕೆಯ ಕೆರೆ ಒಡಲಿಗೆ ಬೆಂಗಳೂರಿನ ಚರಂಡಿ ನೀರು - ತರಕಾರಿ ಗುಣಮಟ್ಟ ಕುಸಿತ, ಅವಳಿ ವ್ಯಾಲಿಯಲ್ಲಿ ಅಪಾಯ ವರದಿಗಾಗಿ ಓಂಕಾರ ಮೂರ್ತಿ ಮತ್ತು ಡಿ.ಎಂ.ಕುರ್ಕೆ ಪ್ರಶಾಂತ್, ಅಂದೋಲನ ಪ್ರಶಸ್ತಿಗೆ ಹೊಸಪೇಟೆಯ ಹೊಸಪೇಟೆ ಟೈಮ್ಸ್ ಪತ್ರಿಕೆ, ಮೈಸೂರು ದಿಗಂತ ದತ್ತಿ ಪ್ರಶಸ್ತಿಗೆ ರಿಪಬ್ಲಿಕ್ ಕನ್ನಡದ ೬ ವರ್ಷಗಳಿಂದ ಪಿಂಚಣಿ ಬರದೆ ಪರದಾಟ, ೫೦ ವರ್ಷದ ವಿಶೇಷ ಚೇತನ ನರಿಯಂಬಾಡಿ ಕಂಗಾಲು ವರದಿಗೆ ಬಿ.ಕೆ. ದೇವಯ್ಯ (ಅನು ಕಾರ್ಯಪ್ಪ), ಮತ್ತು ಸುವರ್ಣ ನ್ಯೂಸ್‌ನ ವಿಶೇಷ ಚೇತನ ವ್ಯಕ್ತಿಗಳಿಗೆ ನಿವೇಶನ ಹಂಚಿಕೆ ಬಗ್ಗೆ ಸರಣಿ ಸುದ್ದಿ ವರದಿಗಾಗಿ ನಂದೀಶ್ ಮಲ್ಲೇನಹಳ್ಳಿ, ಅರಗಿಣಿ ಪ್ರಶಸ್ತಿಗೆ ಎಸ್. ಶ್ಯಾಮ್ ಪ್ರಸಾದ್, ಡಾ ಬಿ.ಆರ್. ಅಂಬೇಡ್ಕರ್ ಮೂಕನಾಯಕ ಪ್ರಶಸ್ತಿಗೆ  ರಹಮತ್ ತರೀಕೆರೆ, ಪ್ರಜಾಸಂದೇಶ ದತ್ತಿ ಪ್ರಶಸ್ತಿಗೆ ಕೊಪ್ಪಳ ವಾರ್ತಾ ಭಾರತಿ ಪತ್ರಿಕೆಯ ಕೊಪ್ಪಳ ಜಿಲ್ಲೆಯಲ್ಲಿ ಆಳವಾಗಿ ಬೇರೂರಿರುವ ಅಸ್ಕೃಶ್ಯತೆ ವರದಿಗಾಗಿ ಮೊಹಮ್ಮದ್ ಅಖೀಲ್ ಉಡೇವು, ಅಭಿಮನ್ಯು ಪ್ರಶಸ್ತಿಗೆ ಕಲಬುರಗಿ ಪ್ರಜಾವಾಣಿ ಪತ್ರಿಕೆಯ ಕುಲುಮೆ ಕಳಚಿದ ಕಮ್ಮಾರರು ವರದಿಗಾಗಿ ಶ್ರೀ ಪ್ರಭು ಬ. ಅಡವಿಹಾಳ, ಕರ್ನಾಟಕ ಕಾರ್ಯನಿರತ ಪತ್ರಕರ್ತ ಸಂಘದ ಕೆಯುಡಬ್ಲ್ಯೂಜೆ ದತ್ತಿ ಪ್ರಶಸ್ತಿಗೆ ಹೆಚ್.ಎಸ್. ಸುಧೀಂದ್ರ ಕುಮಾರ್ ಹಾಗೂ  ಕೃಷಿಯಲ್ಲಿ ಅತ್ಯುತ್ತಮ ವರದಿ, ಲೇಖನ, ಅಂಕಣ ಬರಹಗಾರರಿಗೆ ನೀಡಲಾಗುವ ಬಸವರಾಜ ದೊಡ್ಡಮನಿ ದತ್ತಿ ಪ್ರಶಸ್ತಿಗೆ ಬೆಳಗಾವಿಯ ಕೀರ್ತನಾಕುಮಾರಿ ಕೆ. (ಕೀರ್ತಿಶೇಖರ ಕಾಸರಗೋಡು) ಮತ್ತು ಹಾಸನದ ವೆಂಕಟೇಶ್ ಆಯ್ಕೆಯಾಗಿದ್ದಾರೆ.

ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಅವರು ಮಾತನಾಡಿ, ಊಹಾ ಪತ್ರಿಕೋದ್ಯಮ, ಸಾಮಾಜಿಕ ಜಾಲತಾಣಗಳಿಂದ ಪತ್ರಿಕಾ ರಂಗಕ್ಕೆ ಧಕ್ಕೆ ಬರುತ್ತಿದೆ. ಮಾಧ್ಯಮದವರು ಹೊಸ ಹೊಸ ತಂತ್ರಜ್ಞಾನಗಳ ಬಳಕೆಯಿಂದ ಕ್ಷೇತ್ರಕ್ಕೆ ಮೆರಗು ನೀಡಬೇಕು. ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್ ಸೌಲಭ್ಯ ನೀಡಲಾಗುತ್ತಿದೆ. ಮುಂದುವರೆದು ಇವರಿಗೆ ಆರೋಗ್ಯ ವಿಮೆ ನೀಡಲು ಸಹ ಸರ್ಕಾರ ಬದ್ದವಾಗಿದೆ ಎಂದರು.

2023 ಹಾಗೂ 2024 ಜೀವಮಾನದ ಸಾಧನೆಯ ವಿಶೇಷ ಪ್ರಶಸ್ತಿಗೆ  ಕ್ರಮವಾಗಿ ಹಿರಿಯ ಪತ್ರಕರ್ತರಾದ .. ಶಿವಣ್ಣ ಹಾಗೂ ವಾರ್ತಾ ಭಾರತಿ ಸಂಪಾದಕರಾದ ಅಬ್ದು ಸಲಾಂ ಪುತ್ತಿಗೆ ಅವರಿಗೆ ನೀಡಲಾಯಿತು. 2023 ಹಾಗೂ24ನೇ ಸಾಲಿನ ವಾರ್ಷಿಕ ಪ್ರಶಸ್ತಿಗಳು, ಕರ್ನಾಟಕ ಮಾಧ್ಯಮ ಅಕಾಡೆಮಿ ದತ್ತಿ ಪ್ರಶಸ್ತಿಗಳಿಗೆ ಭಾಜನರಾದ ಪತ್ರಕರ್ತರಿಗೆ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳ ಕಾರ್ಯದರ್ಶಿ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕಾರ್ಯದರ್ಶಿ ಬಿ.ಬಿ. ಕಾವೇರಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತ ಹೇಮಂತ್ ಎಂ ನಿಂಬಾಳ್ಕರ್, ಕರ್ನಾಟಕ ಮಾಧ್ಯಮ ಅಕಾಡೆಮಿಯ ಕಾರ್ಯದರ್ಶಿ ಸಹನಾ ಎಂ. ಸೇರಿದಂತೆ ವಾರ್ತಾ ಇಲಾಖೆಯ ಹಿರಿಯ ಅಧಿಕಾರಿಗಳುಹಿರಿಯ ಪತ್ರಕರ್ತರು, ಗಣ್ಯರು, ಉಪಸ್ಥಿತರಿದ್ದರು.

 

 

Advertisement

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಸಾಪ ಮಾಜಿ ಜಿಲ್ಲಾಧ್ಯಕ್ಷ, ಶಿಕ್ಷಣತಜ್ಞ ಡಾ. ಕೆ.ಎಂ. ವೀರೇಶ್ ಹೃದಯಾಘಾತದಿಂದ ನಿಧನದುರ್ಗಕ್ಕೆ ಹರಿದು ಬಂದ ಭದ್ರೆ- ಸೆ.24ರಂದು ಮುಖ್ಯಮಂತ್ರಿಗಳಿಂದ ಗಂಗಾಪೂಜೆ,  ಬೃಹತ್ ಸಾರ್ವಜನಿಕ ಸಮಾರಂಭಆರ್.ಎಲ್ ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ 22ನೇ ಘಟಿಕೋತ್ಸವ ಮತ್ತು ಪದವಿ ಪ್ರದಾನ ಕಾರ್ಯಕ್ರಮನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ ಬೈಕ್ ಸವಾರ ಸಾವುಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಸಭೆ ಹೋರಾಟಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಾತಿನಿಧ್ಯ ಕಡಿಮೆ- ಚಿಕ್ಕಪ್ಪನಹಳ್ಳಿ ಷಣ್ಮುಖಕುಂಚಿಟಿಗ ನೌಕರರ ಸಂಘಕ್ಕೆ ಸದಸ್ಯರಾಗಿ: ಎಸ್.ಕೆ ಲಕ್ಷ್ಮಣ್ಚಳವಳಿ ನೆನಪಾಗಿ ಉಳಿದ ‘ತೆಂಕ-ಬಡಗ’ಅಂತಾರಾಷ್ಟ್ರೀಯ ಶಾಂತಿ ದಿನ – ಮನದ ದ್ವೇಷ ಕರಗಿದಾಗಲೇ ಜಗದ ಶಾಂತಿ ಅರಳುವುದು!ಗಣಪತಿ ಮೆರವಣಿಗೆ ವೇಳೆ ಗಲಾಟೆ 7 ಯುವಕರ ವಿರುದ್ಧ ಸುಮೋಟೋ ಪ್ರಕರಣ ದಾಖಲು