Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Entertainment News

ಹುಲಕಡಿ ವೀರಭದ್ರಸ್ವಾಮಿ ಸ್ವಾಮಿ ರಥೋತ್ಸವ

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ದೊಡ್ಡಬಳ್ಳಾಪುರ ತಾಲ್ಲೂಕಿನ
,ದೊಡ್ಡ ಬೆಳವಂಗಲ ಹೋಬಳಿ ಹಣಬೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಲುಕಡಿ ಬೆಟ್ಟದ ವೀರಭದ್ರಸ್ವಾಮಿ ಕ್ಷೇತ್ರದಲ್ಲಿ ಕ್ಷೇತ್ರಾಭಿವೃದ್ಧಿ ಟ್ರಸ್ಟ್ ವತಿಯಿಂದ ರಥಸಪ್ತಮಿ ಅಂಗವಾಗಿ ಜ‌.5 ರಂದು ವೀರಭದ್ರಸ್ವಾಮಿ ಹಾಗು ಪ್ರಸನ್ನ ಭದ್ರಕಾಳಮ್ಮ 44 ನೇ ವಾರ್ಷಿಕ ಮಹಾ  ರಥೋತ್ಸವವನ್ನು ನೆರವೇರಿಸಲಾಯಿತು.

 ಹುಲುಕಡಿ  ವೀರಭದ್ರ ಸ್ವಾಮಿಯ ರಥೋತ್ಸವಕ್ಕೆ ರಾಜ್ಯದ ನಾನಾ ಭಾಗಗಳಿಂದ ಆಗಮಿಸಿದ ಭಕ್ತರು ರಥಕ್ಕೆ  ಬಾಳೆಹಣ್ಣು ದವನ ಅರ್ಪಿಸಿ ಧನ್ಯತೆ  ಮೆರದರು.

ಈ ಜಾತ್ರಾ ಮಹೋತ್ಸವದಲ್ಲಿ  ಕಲಾ ತಂಡಗಳಿಂದ ಸಾಂಸ್ಕೃತಿ ಕಾರ್ಯಕ್ರಮಗಳು ನೆಡೆದವು ಡೂಳ್ಳು ಕುಣಿತ ವೀರಗಾಸೆ ಕಂಸಾಳೆ ಜಾತ್ರೆಗೆ ವಿಶೇಷ ಆಕರ್ಷಣೆಯಾಗಿತ್ತು  ರಥೋತ್ಸವದ ಅಂಗವಾಗಿ ಮುಂಜಾನೆಯಿಂದ ರುದ್ರಾಭಿಷೇಕ ರಥೋತ್ಸವದ ಅಂಗವಾಗಿ ಹವನ ಹೋಮ ವಿಶೇಷ ಪೂಜಾ ಕಾರ್ಯಕ್ರಮಗಳು ನೆಡೆಸಲಾಯಿತು.

ಪೂರ್ವ ಇತಿಹಾಸ ಹೊಂದಿರುವ ಪ್ರಸಿದ್ದ ಹುಲುಕಡಿ ಬೆಟ್ಟದ ಮೇಲಿನ ವೀರಭದ್ರಸ್ವಾಮಿ ದೇವಾಲಯಕ್ಕೆ ಬೇಟಿ ನೀಡಿ ಶ್ರೀ ಸ್ವಾಮಿಯ ದರ್ಶನ ಪಡೆದರು.

ಈ ಕಾರ್ಯದಲ್ಲಿ ದೊಡ್ಡ ಗುಣಿ ಶಾಖಾಮಠದ ಶ್ರೀ ರೇವಣ ಸಿದ್ದೇಶ್ವೇರ  ಶಿವಾಚಾರ್ಯ ಸ್ವಾಮೀಜಿ  ದಿವ್ಯ ಸಾನಿಧ್ಯ ದಲ್ಲಿ ಆಶೀರ್ವಾಚನ ನೀಡಿದರು.

 ರಥೋತ್ಸವಕ್ಕೆ ಬಂದ ಭಕ್ತರಿಗೆ ಮಾಜಿ ಶಾಸಕ ವೆಂಕಟರಮಣಯ್ಯ ರವರಿಂದ  ಅನ್ನದಾನ, ಜೆಡಿಎಸ್ ರಾಜ್ಯ ಪ್ರದಾನ ಕಾರ್ಯದರ್ಶಿ ಹರೀಶ್ ಗೌಡ ಭಕ್ತಾಧಿಗಳಿಗೆ ದಣಿವು ತೀರಿಸಿ ಕೊಳ್ಳಲು ನೀರಿನ ಪೂರೈಕೆ ಬಮೂಲ್ ನಿರ್ದೇಶಕ ಬಿ. ಸಿ ಆನಂದ್ ರವರಿಂದ ಮಜ್ಜಿಗೆ ಪಾನಕ ವಿತರಣೆ ಮಾಡಲಾಗಿತ್ತು.

ರಥೋತ್ಸವ ನಂತರ ರಥಾಂಗ ಹೋಮ ಕಳಸ ಪೂಜೆ ಅಗ್ನಿಕುಂಡ ಪೂಜೆ ಉಯ್ಯಾಲೋತ್ಸವ ವೀರಭದ್ರ ವೇಷದ ವೀಲಗಾಸೆಯೊಂದಿಗೆ ಅಗ್ನಿಕುಂಡ ಹಾರುವುದು ಹಾಗು ಅಕ್ಕಿಪೂಜೆ  ಪ್ರಸನ್ನ ಭದ್ರಕಾಳಮ್ಮ ವೀರಭದ್ರಸ್ವಾಮಿ ಕಲ್ಯಾಣೋತ್ಸವ  ದೀಪಾರಾಧನೆ ನೆಡೆದವು. ರಥೋತ್ಸವ ಬಂದ ಭಕ್ತರು ಈ ವಿಶೇಷ ಕಾರ್ಯಕ್ರಮಗಳನ್ನು ಕಣ್ತುಂಬಿ ಕೊಂಡರು.

Advertisement

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಸಾಪ ಮಾಜಿ ಜಿಲ್ಲಾಧ್ಯಕ್ಷ, ಶಿಕ್ಷಣತಜ್ಞ ಡಾ. ಕೆ.ಎಂ. ವೀರೇಶ್ ಹೃದಯಾಘಾತದಿಂದ ನಿಧನದುರ್ಗಕ್ಕೆ ಹರಿದು ಬಂದ ಭದ್ರೆ- ಸೆ.24ರಂದು ಮುಖ್ಯಮಂತ್ರಿಗಳಿಂದ ಗಂಗಾಪೂಜೆ,  ಬೃಹತ್ ಸಾರ್ವಜನಿಕ ಸಮಾರಂಭಆರ್.ಎಲ್ ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ 22ನೇ ಘಟಿಕೋತ್ಸವ ಮತ್ತು ಪದವಿ ಪ್ರದಾನ ಕಾರ್ಯಕ್ರಮನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ ಬೈಕ್ ಸವಾರ ಸಾವುಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಸಭೆ ಹೋರಾಟಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಾತಿನಿಧ್ಯ ಕಡಿಮೆ- ಚಿಕ್ಕಪ್ಪನಹಳ್ಳಿ ಷಣ್ಮುಖಕುಂಚಿಟಿಗ ನೌಕರರ ಸಂಘಕ್ಕೆ ಸದಸ್ಯರಾಗಿ: ಎಸ್.ಕೆ ಲಕ್ಷ್ಮಣ್ಚಳವಳಿ ನೆನಪಾಗಿ ಉಳಿದ ‘ತೆಂಕ-ಬಡಗ’ಅಂತಾರಾಷ್ಟ್ರೀಯ ಶಾಂತಿ ದಿನ – ಮನದ ದ್ವೇಷ ಕರಗಿದಾಗಲೇ ಜಗದ ಶಾಂತಿ ಅರಳುವುದು!ಗಣಪತಿ ಮೆರವಣಿಗೆ ವೇಳೆ ಗಲಾಟೆ 7 ಯುವಕರ ವಿರುದ್ಧ ಸುಮೋಟೋ ಪ್ರಕರಣ ದಾಖಲು