Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
International News

ಹೃದಯ ಶುದ್ದವಾಗಿದ್ದರೆ ಜ್ಞಾನ ಶಾಶ್ವತವಾಗಿ ನೆಲೆಸುತ್ತದೆ

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
"ಹೃದಯ ವಿಶಾಲವಾಗಿದ್ದರೆ ಮಾತ್ರ ಅಲ್ಲಿ ನಿಜವಾದ ಜ್ಞಾನ ಹೊಮ್ಮುತ್ತದೆ " ಸ್ವಾಮಿ ವಿವೇಕಾನಂದ.......
ಜೊತೆಗೆ ಹೃದಯ ಅಥವಾ ಮನಸ್ಸು ಶುದ್ದವಾಗಿದ್ದರೆ ಜ್ಞಾನ ಅಲ್ಲಿ ಶಾಶ್ವತವಾಗಿ ನೆಲೆಸುತ್ತದೆ.....ಎಷ್ಟೊಂದು ಅರ್ಥಪೂರ್ಣ ಮತ್ತು ಅನುಭವದ ಮಾತು. ಇದು ಅಕ್ಷರಶಃ ಸತ್ಯವಾದ ಮಾತು......


ನೀವು ಯಾವುದೇ ಕ್ಷೇತ್ರದಲ್ಲಿರಲಿ, ಎಷ್ಟೇ ಪ್ರತಿಭಾವಂತರಾಗಿರಿ, ನಿಮ್ಮ ಹೃದಯ ವಿಶಾಲ ಮತ್ತು ಶುದ್ದವಾಗಿಲ್ಲದಿದ್ದರೆ ನೀವು ಎಷ್ಟೇ ಜನಪ್ರಿಯರಾಗಿರಿ, ಎಷ್ಟೇ ಶ್ರೀಮಂತರಾಗಿರಿ, ಎಷ್ಟೇ ದೊಡ್ಡ ಹುದ್ದೆಯಲ್ಲಿರಿ ನಿಮ್ಮ ಜ್ಞಾನ ಒಂದು ಮಿತಿಗೆ ಒಳಪಟ್ಟಿರುತ್ತದೆ. ಆ ಜ್ಞಾನ ಕೃತಕವಾಗಿರುತ್ತದೆಯೇ ಹೊರತು ಸಹಜವಾಗಿರುವುದಿಲ್ಲ. ಅದನ್ನು ಮೇಲ್ನೋಟಕ್ಕೆ ಗುರುತಿಸಲು ಸಾಧ್ಯವಾಗದೆ ಇರಬಹುದು. ಆದರೆ ನಿಜವಾದ ಪ್ರಜ್ಞಾವಂತ ಖಂಡಿತ ಗ್ರಹಿಸಬಲ್ಲ.....

ಸಾಹಿತ್ಯ, ಸಂಗೀತ, ನೃತ್ಯ, ಕಲೆ, ವಿಜ್ಞಾನ ಯಾವುದೇ ಇರಲಿ, ಸಂಕುಚಿತ ಮತ್ತು ಅಶುದ್ಧ ಮನೋಭಾವದ ವ್ಯಕ್ತಿಗಳ ಮನಸ್ಸು ಜ್ಞಾನದ ನೆಲೆಯಾಗಲು‌ಸಾಧ್ಯವಿಲ್ಲ. ಅದು ತೋರಿಕೆಯ ಒಣ ಪ್ರದರ್ಶನ ಮಾತ್ರ. ಉದಾಹರಣೆಗೆ ಸಾಹಿತ್ಯ ಕ್ಷೇತ್ರದ ಬಗ್ಗೆ ಹೇಳುವುದಾದರೆ.

ಸಾಹಿತ್ಯವೆಂಬ ಸಾಗರದಲ್ಲಿ ಈಜಾಡುತ್ತಾ, ಅಕ್ಷರಗಳನ್ನು - ಭಾವನೆಗಳನ್ನು ಅರಿಯುತ್ತಾ, ಓದುತ್ತಾ - ಬರೆಯುತ್ತಾ - ಗ್ರಹಿಸುತ್ತಾ, ಅನುಭವದಲ್ಲಿ ಮೂಡಿದ ಕೆಲವೇ ಹನಿಗಳಂತ ಒಂದು ಅನಿಸಿಕೆ ಯುವ ಸಾಹಿತ್ಯದ ಬರಹಗಾರರಿಗಾಗಿ..

ವಿದ್ಯೆಗೆ ವಿನಯವೇ ಭೂಷಣ. ಅಕ್ಷರಗಳಲ್ಲ.. ಮನದ ಸಹಜ ಭಾವನೆಗಳಿಗೆ ಅಕ್ಷರ ರೂಪ ಕೊಟ್ಟಾಗ, ಒಂದಷ್ಟು ಗಟ್ಟಿಯಾದ ಸಾಹಿತ್ಯ ಸೃಷ್ಟಿಯಾಗುತ್ತದೆ. ಅಕ್ಷರಗಳಲ್ಲಿಯೇ ಭಾವನೆಗಳನ್ನು ಕಲ್ಪಿಸಿಕೊಂಡು ಮೂಡಿಸಿದಾಗ, ಕೃತಕವಾದ ಬಾಲಿಶ ಸಾಹಿತ್ಯ ರಚನೆಯಾಗುವ ಸಾಧ್ಯತೆಯಿದೆ.
ಇವುಗಳ ನಡುವಿನ ವ್ಯತ್ಯಾಸಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ನಮಗೆ ಇದು ಗೋಚರಿಸುತ್ತದೆ. ಬರಹಗಾರರು ಅರಿಯಬೇಕಾದ ಬಹುಮುಖ್ಯ ಅಂಶವಿದು. ಸಾಹಿತ್ಯದ ಬಗ್ಗೆ ಮಾತನಾಡುವಾಗ ಗಟ್ಟಿ ಸಾಹಿತ್ಯ - ಜನಪ್ರಿಯ ಸಾಹಿತ್ಯ - ಜೊಳ್ಳು ಸಾಹಿತ್ಯ ಎಂದು ಗುರುತಿಸುವುದು ಇದೇ ದೃಷ್ಟಿಕೋನದಲ್ಲಿ. ಸಿನಿಮಾಗಳಲ್ಲಿ ಬಳಸಲ್ಪಡುವ ಬಹುತೇಕ ಸಾಹಿತ್ಯ ( ಕೆಲವೊಂದು ಹೊರತು ಪಡಿಸಿ)
, ಸಂಗೀತ ಸಂಯೋಜನೆಯ ನಂತರ ಅದರ ಭಾವನೆಗಳಿಗೆ ತಕ್ಕಂತೆ ಅಕ್ಷರ ಜೋಡಿಸುವುದು, ಕೆಲವು ಭಾವಗೀತೆಗಳು, ಒಂದಷ್ಟು ಜನ ಕ್ರೇಜಿಯಾಗಿ ಸಾಹಿತ್ಯದಲ್ಲಿ ತೊಡಗಿಸಿಕೊಳ್ಳುವುದು, ಯಾರೋ ಎಲ್ಲೋ ಬರೆದ ಅಥವಾ ಎಂದೋ ಓದಿದ ಸಾಹಿತ್ಯವನ್ನು ಬರೆಯುವ ಕಲಿಯುವ ಆಸೆಯಿಂದ ವಾಕ್ಯ ರಚಿಸುವುದು. ಬರೆಯುವಾಗಲೇ ಮಹತ್ವಾಕಾಂಕ್ಷೆಯ ಮತ್ತು ಪ್ರಶಸ್ತಿ ಸನ್ಮಾನಗಳ ಗುಂಗಿನಲ್ಲಿ ಬರೆಯುವುದು, ಇತರರ ಮೆಚ್ಚುಗೆಗಾಗಿ ಅಕ್ಷರಗಳನ್ನು ಮೂಡಿಸುವುದುಮುಂತಾದವು ಅಕ್ಷರದಿಂದ ಭಾವನೆಗಳನ್ನು ಮೂಡಿಸುವ ಸಾಹಿತ್ಯಕ್ಕೆ ಉದಾಹರಣೆಗಳು.

ಅದೇ ರೀತಿ ರನ್ನ, ಪೊನ್ನ, ಪಂಪ, ಲಕ್ಷ್ಮೀಶ, ಕುಮಾರವ್ಯಾಸ, ರಾಘವಾಂಕ, ಕುವೆಂಪು, ಕಾರಂತ, ಬೇಂದ್ರೆ, ಮಾಸ್ತಿ, ಅಡಿಗ, ಬೈರಪ್ಪ, ಚಿತ್ತಾಲ, ತೇಜಸ್ವಿ, ದೇವನೂರು, ಲಂಕೇಶ್, ಅಲ್ಲಮ, ಬಸವಣ್ಣ, ಅಕ್ಕಮಹಾದೇವಿ ಮುಂತಾದವರ ಸಾಹಿತ್ಯ, ಭಾವನೆಗಳಿಗೆ ಅಕ್ಷರ ರೂಪ ಕೊಡುವುದಕ್ಕೆ ಉದಾಹರಣೆಗಳು. ಅವರುಗಳು ತಮ್ಮ ಬದುಕಿನ ಅನುಭವದ - ಅರಿವಿನ - ಗ್ರಹಿಕೆಯ ವಿಷಯಗಳನ್ನು ಅಂತರಾಳದ ಭಾವನೆಗಳಿಗೆ ಅಕ್ಷರದ ರೂಪ ನೀಡುತ್ತಾರೆ.
ಅದು ನಿಜವಾದ ಸಾಹಿತ್ಯಾಸಕ್ತರಿಗೆ ಗಾಡವಾದ ಅನುಭವ ನೀಡುತ್ತದೆ. ಅವರ ಚಿಂತನೆಗಳಲ್ಲಿ
, ನಿರೂಪಣೆಯಲ್ಲಿ, ವಿಷಯಗಳಲ್ಲಿ, ಸಾಹಿತ್ಯದ ಪ್ರಕಾರಗಳಲ್ಲಿ ಭಿನ್ನತೆ ಇರಬಹುದು. ಆದರೆ ಅನುಭವ ಸಾಹಿತ್ಯ ಅದಾಗಿರುತ್ತದೆ.

ಕೆಲಮೊಮ್ಮೆ ಅಪರೂಪಕ್ಕೆ ಇದಕ್ಕೆ ವಿರುಧ್ಧವಾದ ರೀತಿಯ ರಚನೆಗಳೂ ಸೃಷ್ಟಿಯಾಗಬಹುದು. ಅಂದರೆ ಭಾವನೆಗಳಲ್ಲಿ ಅತ್ಯುತ್ತಮ ಗಾಢತೆ ಇದ್ದರೂ ಅಕ್ಷರಗಳಲ್ಲಿ ಅವು ಪೇಲವವಾಗಿ ಮೂಡಬಹುದು, ಹಾಗೆಯೇ ಅಕ್ಷರಗಳಿಂದಲೇ ಅತ್ಯುತ್ತಮ ಎನ್ನುವ ಭಾವನೆಗಳ ಸಾಹಿತ್ಯವೂ ರಚನೆಯಾಗಬಹುದು. ಕೆಲವು ಸಿನಿಮಾ ಹಾಡುಗಳಲ್ಲಿ ಇದು ಕಂಡುಬರುತ್ತದೆ.
ಆದರೆ ಇದು ಅತಿ ವಿರಳ. ಓದು ಮುಖ್ಯ. ಗ್ರಹಿಕೆ ಅತಿಮುಖ್ಯ. ಮಾನವೀಯ ಸ್ಪಂದನೆ ಎಲ್ಲಕ್ಕಿಂತ ಮುಖ್ಯ.


ಇದೊಂದು ಸಣ್ಣ ಮತ್ತು ಸರಳ ಅನಿಸಿಕೆ ಅಷ್ಟೆ. ಸಾಹಿತ್ಯದ ಆಳದಲ್ಲಿ ಅಗಾಧ ನಿಗೂಡತೆ ಮತ್ತು ಕ್ರಿಯಾತ್ಮಕತೆ ಅಡಗಿದೆ. ಅದನ್ನು ಇಷ್ಟೇ ಎಂದು ಭಾವನೆಗಳಲ್ಲಿ - ಅಕ್ಷರಗಳಲ್ಲಿ ಹಿಡಿದಿಡುವುದು ಅಸಾಧ್ಯ.

" ಭಾವನೆಗಳನ್ನು ವ್ಯಕ್ತಪಡಿಸುವ ಮಾಧ್ಯಮ ಭಾಷೆ.( ಮಾತನಾಡುವವರಿಗೆ) ಆ ಭಾಷೆಯಲ್ಲಿಯೇ ಮತ್ತೊಬ್ಬರ ಆತ್ಮವನ್ನೂ ಪ್ರವೇಶಿಸಬಹುದು. ಆ ಆತ್ಮದೊಂದಿಗೆ ಬೆರೆತು ಸಂವಾದವನ್ನೂ ನಡೆಸಬಹುದು. ಆ ಸಂವಾದದಲ್ಲಿ ಆತ್ಮದ ಐಕ್ಯವಾಗಬಹುದು. ಹಾಗೇ ಆತ್ಮಮಿಲನವಾದ ಸಂಬಂಧಗಳನ್ನು ಯಾರೂ ಬೇರ್ಪಡಿಸಲು ಸಾಧ್ಯವಿಲ್ಲ.

ಇದು ಅಕ್ಷರಗಳಲ್ಲಿ ಮೂಡಿದ ಭಾವನೆಯಲ್ಲ, ಒಡಲಾಳದ ಭಾವನೆಗಳಿಗೆ ನೀಡಿದ ಅಕ್ಷರ ರೂಪ. ಸಂಕುಚಿತ ಮನೋಭಾವದ, ಅಸಭ್ಯತೆಯ ಕುಹುಕ, ವ್ಯಂಗ್ಯ ಎಲ್ಲವೂ, ಹೇಳುವವನ ಯೋಗ್ಯತೆಯನ್ನು ತೋರಿಸುತ್ತದೆಯೇ ಹೊರತು ಕೇಳಿಸಿಕೊಂಡವನ ಯೋಗ್ಯತೆಯನ್ನಲ್ಲ ಎಂಬುದು ಸಹ ಇಲ್ಲಿ ಮುಖ್ಯವಾಗುತ್ತದೆ.. ಒಟ್ಟಿನಲ್ಲಿ ಯಾವುದೇ ಕ್ಷೇತ್ರದ ಜ್ಞಾನದ ಮೂಲ ಹೃದಯ ವೈಶಾಲ್ಯತೆ ಮತ್ತು ಶುದ್ಧತೆ ಎಂಬುದು ವಾಸ್ತವ ಸತ್ಯ. ಇದು ಎಲ್ಲರ ಮನದ ಮೂಲೆಯಲ್ಲಿ ಸದಾ ನೆನಪಾಗಿರಲಿ ಎಂದು ಆಶಿಸುತ್ತಾ.......
ಲೇಖನ
:ವಿವೇಕಾನಂದ. ಎಚ್. ಕೆ.

 

Advertisement

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಚಿತ್ರದುರ್ಗ: 25,000 ರೂ. ಲಂಚ ಪಡೆಯುತ್ತಿದ್ದ ಉಪವಿಭಾಗಾಧಿಕಾರಿ ಕಚೇರಿಯ ಪ್ರಥಮ ದರ್ಜೆ ಸಹಾಯಕ ಲೋಕಾಯುಕ್ತ ಬಲೆಗೆಪಶ್ಚಿಮಘಟ್ಟ ಸಂರಕ್ಷಣೆ: ಕಸ್ತೂರಿ ರಂಗನ್ ವರದಿ ಸ್ಯಾಟಲೈಟ್ ಮ್ಯಾಪಿಂಗ್ ಒಪ್ಪಲು ಸಾಧ್ಯವಿಲ್ಲ; ಬಿ.ಕೆ.ಹರಿಪ್ರಸಾದ್ಸೌಜನ್ಯಾ ಅತ್ಯಾಚಾರ ಹಾಗೂ ಕೊಲೆ ಪ್ರಕರಣ: ಮರುತನಿಖೆಗೆ ಸುಪ್ರೀಂ ಕೋರ್ಟ್ ಆದೇಶಶಾಸಕ ಎಸ್. ಸುರೇಶ್ ಕುಮಾರ್ ಅವರು "ಸಜ್ಜನ" ಎಂಬ ಮುಖವಾಡ ಧರಿಸಿದ ದುರ್ಜನಸರ್ಕಾರದ ಅನುದಾನಕ್ಕೆ ಕಾಯದೆ ಸ್ವಂತ ಖರ್ಚಿನಲ್ಲಿ ಕಾಲುವೆ ದುರಸ್ತಿಗೆ ಮುಂದಾದ ಎಚ್.ಡಿ. ರೇವಣ್ಣಹೈಕೋರ್ಟ್‌ನಿಂದ ಕೆಪಿಎಸ್‌ಸಿ ಪಶುವೈದ್ಯಾಧಿಕಾರಿ ನೇಮಕಾತಿ ಹಗರಣಕ್ಕೆ ಎಸ್‌ಐಟಿ ತನಿಖೆಗೆ ಆದೇಶಆಲಮಟ್ಟಿ ಜಲಾಶಯ ಎತ್ತರ ಹೆಚ್ಚಳ: ಯುಕೆಪಿ ಹಂತ-3ರ ಭೂಸ್ವಾಧೀನ ಪ್ರಕ್ರಿಯೆಗೆ ಚುರುಕುವ್ಯಾಪಕ ಭ್ರಷ್ಟಾಚಾರ: ಕಾಮಗಾರಿಗಳ ಶ್ವೇತಪತ್ರ ಹೊರಡಿಸಲು ಆಂಜನೇಯ ಆಗ್ರಹ‘ಗೌರವಯುತ ಲಂಚ’: ಕಾಂಗ್ರೆಸ್ ಸರ್ಕಾರದ ಹೊಸ 'ಪ್ರಜಾಸೇವಾ ಶುಲ್ಕ' ಎಂದು ಆರ್. ಅಶೋಕ್ಸ್ವಪಕ್ಷೀಯರ ಆಕ್ರೋಶವೇ ಕಾಂಗ್ರೆಸ್ ಸರ್ಕಾರದ ವೈಫಲ್ಯಕ್ಕೆ ಸಾಕ್ಷಿ: ಆರ್. ಅಶೋಕ್ ವಾಗ್ದಾಳಿ