Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
International News

ಹೊಸದುರ್ಗ, ಕಡೂರು, ಬಾಗೇಪಲ್ಲಿಯಲ್ಲಿ ನಬಾರ್ಡ್ ಜೀವಾ ಯೋಜನೆ ಅನುಷ್ಠಾನ: ಉಮಾ

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ನಬಾರ್ಡ್ ರಾಜ್ಯಕ್ಕಾಗಿ 2025-26ನೇ ಸಾಲಿನಲ್ಲಿ 4.47 ಲಕ್ಷ ಕೋಟಿ ರೂ.ಗಳ ಆದ್ಯತಾ ವಲಯದ ಸಾಲ ಸಾಮರ್ಥ್ಯ ಯೋಜನೆ ರೂಪಿಸಿದೆ. ಇದು 2024-25ನೇ ಸಾಲಿನಲ್ಲಿ ಮಾಡಿದ ಅಂದಾಜಿಗಿಂತ ಶೇ.12.55 ರಷ್ಟು ಅಧಿಕವಾಗಿದೆ ಎಂದು ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತೆ ಉಮಾ ಮಹದೇವನ್ ತಿಳಿಸಿದರು.
ಇಂದು ನಬಾರ್ಡ್‍ನ ಪ್ರಾದೇಶಿಕ ಕಚೇರಿಯ ಸಭಾಂಗಣದಲ್ಲಿ ನಬಾರ್ಡ್ ಆಯೋಜಿಸಿದ್ದ ರಾಜ್ಯ ಸಾಲ ಗೋಷ್ಠಿವಿಚಾರ ಸಂಕಿರಣ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ರಾಜ್ಯದ ಗ್ರಾಮೀಣ ಜೀವನೋಪಾಯಗಳನ್ನು ಬಲಪಡಿಸುವುದರ ಜೊತೆಗೆ ಕೃಷಿಯ ಸಾಮಥ್ರ್ಯ, ಆರ್ಥಿಕ ಬಲವನ್ನು ಹೆಚ್ಚಿಸಲು ನಬಾರ್ಡ್ ತೋರಿದ ನಿರಂತರ ಬದ್ಧತೆಯನ್ನು ಶ್ಲಾಘಿಸಿದರು.

ರಾಜ್ಯವು ಹಿಂದಿನಿಂದಲೂ ಒಂದು ಕ್ರಿಯಾಶೀಲ ರಾಜ್ಯವಾಗಿದ್ದು, ತನ್ನ ಕೃಷಿ ಬೇರುಗಳನ್ನು ಕೈಗಾರಿಕಾ ಪ್ರಗತಿಯೊಂದಿಗೆ ಸಮತೋಲನಗೊಳಿಸುತ್ತಿದೆ. ಕೃಷಿಯು ಮಹ್ವದ ಆಧಾರ ಸ್ತಂಭವಾಗಿ ಉಳಿದಿದ್ದರೂ, ಇಂದಿನ ಗ್ರಾಮೀಣ ಪರಿವರ್ತನೆಯು ತಂತ್ರಜ್ಞಾನ ಅಳವಡಿಕೆ, ಮೂಲಸೌಕರ್ಯ ವಿಸ್ತರಣೆ, ಹವಾಮಾನ ಸೂಕ್ಷ್ಮ ಕಾರ್ಯಾಚರಣೆಗಳು ಮತ್ತು ಕೃಷಿಯೇತರ ಉದ್ಯೋಗವಕಾಶಗಳಿಂದ ಪ್ರೇರಿತವಾಗಿದೆ ಎಂದರು.

ಮೂಲ ಸೌಕರ್ಯದ ಸೃಷ್ಟಿಗೆ ಸಾರ್ವಜನಿಕ ಹೂಡಿಕೆಗಳು ಸಾಲದ ಪ್ರಯೋಜನವನ್ನು ಪಡೆದುಕೊಳ್ಳುವ ಸಾಮರ್ಥ್ಯ ಹೆಚ್ಚಿಸಲು ಪ್ರಮುಖ ಉತ್ಪ್ರೇರಕವಾಗಿರುವುದರಿಂದ ಗ್ರಾಮೀಣ ಸಂಪರ್ಕ, ನೀರಾವರಿ ಮೂಲಸೌಕರ್ಯ, ಮಾರುಕಟ್ಟೆ ಮತ್ತು ಉಗ್ರಾಣ ಸೌಲಭ್ಯಗಳು, ಆರೋಗ್ಯ ಮತ್ತು ನೈರ್ಮಲ್ಯ, ಕುಡಿಯುವ ನೀರಿನ ಸರಬರಾಜು ಇತ್ಯಾದಿ ಗ್ರಾಮೀಣ ಮೂಲಸೌಕರ್ಯಗಳನ್ನು ಸ್ಥಾಪಿಸುವ ಮೂಲಕ ಅಂದಾಜು ಸಾಲ ಸಾಮಥ್ರ್ಯವನ್ನು ಬಳಸಿಕೊಳ್ಳಲು ರಾಜ್ಯವು ಸುಸಜ್ಜಿತವಾಗಿದೆ ಎಂದರು.

ನಬಾರ್ಡ್ ಜೀವಾ ಯೋಜನೆಯಡಿ ಕರ್ನಾಟಕದಲ್ಲಿ ಪ್ರಾಯೋಗಿಕವಾಗಿ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ ಸಿದ್ದನಗೌಡನಹಳ್ಳಿ, ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕಿನ ಬುಕ್ಕಾಸಾಗರದಲ್ಲಿ, ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲ್ಲೂಕಿನ ಕಾಮಾರವರಿಪಲ್ಲಿಯಲ್ಲಿ ಯೋಜನೆಯನ್ನು  ಅನುಷ್ಠಾನಗೊಳಿಸಿದೆ.  ಈ ಕಾರ್ಯಕ್ರಮವು ಕೃಷಿ ಪರಿಸರ ಪರಿವರ್ತನೆಯ ವಿಧಾನವಾಗಿದೆ ಎಂದರು.

ನಬಾರ್ಡ್ ಗ್ರಾಮೀಣ ಮಹಿಳೆಯರ ಅಭ್ಯುದಯಕ್ಕಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು, ಮಹಿಳೆಯರು ಎಲ್ಲಾ ಕ್ಷೇತ್ರದಲ್ಲೂ ಮುಂದೆ ಇದ್ದಾರೆ. ಸರ್ಕಾರವು ಸಹ ಗೃಹಲಕ್ಷ್ಮಿ ಯೋಜನೆಯಡಿ  ಮಹಿಳೆಯರಿಗೆ ಮಾಹೆಯಾನ 2 ಸಾವಿರ ನೀಡುತ್ತಿದೆ. ಅಲ್ಲದೆ ಉಚಿತ ಬಸ್ ಸೌಲಭ್ಯವನ್ನು ಕಲ್ಪಿಸಿದೆ.  ಇದರಿಂದ ಗ್ರಾಮೀಣ ಭಾಗದ ಮಹಿಳೆಯರಿಗೆ ಹೆಚ್ಚಿನ ಉಪಯೋಗವಾಗುತ್ತಿದೆ. ಇಂದು ಮಹಿಳೆಯರು ಬ್ಯಾಂಕಿನಲ್ಲೂ ಸಹ ಉನ್ನತ ಹುದ್ದೆಗಳನ್ನು ಅಲಂಕರಿಸಿರುವುದಕ್ಕೆ ಅಭಿನಂದನೆ ಸಲ್ಲಿಸಿದರು.

ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಧಿ (ಆರ್‍ಐಡಿಎಫ್) ಮೂಲಕ ಗ್ರಾಮೀಣ ಮೂಲ ಸೌಕರ್ಯಗಳ ಸೃಷ್ಟಿಗೆ ಆರ್ಥಿಕ ನೆರವು ನೀಡುವ ಮೂಲಕ ನಬಾರ್ಡ್ ಗ್ರಾಮೀಣ ಮೂಲ ಸೌಕರ್ಯ ಸೃಷ್ಟಿಸುವಲ್ಲಿ ರಾಜ್ಯ ಸರ್ಕಾರದ ಪರಿಶ್ರಮಗಳಿಗೆ ಪೂರಕವಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಜೀವಾಯೋಜನೆಯ ಕಿರುಚಿತ್ರ, ಸ್ಟೇಟ್ ಫೋಕಸ್ ಪೇಪರ್ 2025-26, ಫೈನಾನ್‍ಷಿಯಲ್ ಇನ್‍ಕ್ಲುಷನ್ ಅನ್‍ಲಾಕಿಂಗ್ ಸಕ್ಸಸ್ ಇನ್ ಕರ್ನಾಟಕಹಾಗೂ ಮಾರ್ಕೆಟಿಂಗ್ ಇನಿಟಿಯೇಟಿವ್ಸ್ ಆಫ್ ನಬಾರ್ಡ್ ಇನ್ ಕರ್ನಾಟಕ ಪುಸ್ತಕ ಬಿಡುಗಡೆ ಮಾಡಿದರು.

ಕನಾಟಕ ಪ್ರಾದೇಶಿಕ ಕಚೇರಿಯ ನಬಾರ್ಡ್‍ ಮುಖ್ಯ ವ್ಯವಸ್ಥಾಪಕ ಕೆವಿಎಸ್‍ಎಸ್‍ಎಲ್‍ವಿ ಪ್ರಸಾದ್ ರಾವ್ ಮಾತನಾಡಿ, ಕರ್ನಾಟಕದಲ್ಲಿ ಆದ್ಯವಲಯದ ಸಾಲಕ್ಕಾಗಿ ರೂಪಿಸಿರುವ ಅಂದಾಜು ರೂ.4.47 ಲಕ್ಷ ಕೋಟಿ ರೂ.ಗಳ ಸಾಲ ಸಾಮರ್ಥ್ಯದಲ್ಲಿ  ಕೃಷಿಯ ಪಾಲು ರೂ.2.04 ಲಕ್ಷ ಕೋಟಿ, ಎಂಎಸ್‍ಎಂಇ ಪಾಲು ರೂ.1.88 ಲಕ್ಷ ಕೋಟಿ ಮತ್ತು ಇತರ ಆದ್ಯತೆಯ ವಲಯದ ಚಟುವಟಿಕೆಗಳ ಪಾಲು ರೂ. 0.56 ಲಕ್ಷ ಕೋಟಿ ಎಂದು ನಿಗಧಿಪಡಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಆರ್‍ಬಿಐನ ಪ್ರಾದೇಶಿಕ ನಿರ್ದೇಶಕಿ ಸೋನಾಲಿ ಸೇನ್ ಗುಪ್ತಾ, ಎಸ್‍ಬಿಐನ ಚೀಫ್ ಜನರಲ್ ಮ್ಯಾನೇಜರ್ ಜೂಹಿ ಸ್ಮಿತಾ ಸಿನ್ಹಾ, ಕೆನರಾ ಬ್ಯಾಂಕ್ ಇ.ಡಿ ಭವೇಂದ್ರ ಕುಮಾರ್, ಕರ್ನಾಟಕದ ಎಸ್‍ಎಲ್‍ಬಿಸಿಯ ಸಂಚಾಲಕ ಎಂ.ಭಾಸ್ಕರ ಚಕ್ರವರ್ತಿ, ರಾಜ್ಯ ಸರ್ಕಾರದ ಮತ್ತು ಬ್ಯಾಂಕ್ ಸಂಸ್ಥೆಗಳ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

 

 

Advertisement

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಚಿತ್ರದುರ್ಗ: 25,000 ರೂ. ಲಂಚ ಪಡೆಯುತ್ತಿದ್ದ ಉಪವಿಭಾಗಾಧಿಕಾರಿ ಕಚೇರಿಯ ಪ್ರಥಮ ದರ್ಜೆ ಸಹಾಯಕ ಲೋಕಾಯುಕ್ತ ಬಲೆಗೆಪಶ್ಚಿಮಘಟ್ಟ ಸಂರಕ್ಷಣೆ: ಕಸ್ತೂರಿ ರಂಗನ್ ವರದಿ ಸ್ಯಾಟಲೈಟ್ ಮ್ಯಾಪಿಂಗ್ ಒಪ್ಪಲು ಸಾಧ್ಯವಿಲ್ಲ; ಬಿ.ಕೆ.ಹರಿಪ್ರಸಾದ್ಸೌಜನ್ಯಾ ಅತ್ಯಾಚಾರ ಹಾಗೂ ಕೊಲೆ ಪ್ರಕರಣ: ಮರುತನಿಖೆಗೆ ಸುಪ್ರೀಂ ಕೋರ್ಟ್ ಆದೇಶಶಾಸಕ ಎಸ್. ಸುರೇಶ್ ಕುಮಾರ್ ಅವರು "ಸಜ್ಜನ" ಎಂಬ ಮುಖವಾಡ ಧರಿಸಿದ ದುರ್ಜನಸರ್ಕಾರದ ಅನುದಾನಕ್ಕೆ ಕಾಯದೆ ಸ್ವಂತ ಖರ್ಚಿನಲ್ಲಿ ಕಾಲುವೆ ದುರಸ್ತಿಗೆ ಮುಂದಾದ ಎಚ್.ಡಿ. ರೇವಣ್ಣಹೈಕೋರ್ಟ್‌ನಿಂದ ಕೆಪಿಎಸ್‌ಸಿ ಪಶುವೈದ್ಯಾಧಿಕಾರಿ ನೇಮಕಾತಿ ಹಗರಣಕ್ಕೆ ಎಸ್‌ಐಟಿ ತನಿಖೆಗೆ ಆದೇಶಆಲಮಟ್ಟಿ ಜಲಾಶಯ ಎತ್ತರ ಹೆಚ್ಚಳ: ಯುಕೆಪಿ ಹಂತ-3ರ ಭೂಸ್ವಾಧೀನ ಪ್ರಕ್ರಿಯೆಗೆ ಚುರುಕುವ್ಯಾಪಕ ಭ್ರಷ್ಟಾಚಾರ: ಕಾಮಗಾರಿಗಳ ಶ್ವೇತಪತ್ರ ಹೊರಡಿಸಲು ಆಂಜನೇಯ ಆಗ್ರಹ‘ಗೌರವಯುತ ಲಂಚ’: ಕಾಂಗ್ರೆಸ್ ಸರ್ಕಾರದ ಹೊಸ 'ಪ್ರಜಾಸೇವಾ ಶುಲ್ಕ' ಎಂದು ಆರ್. ಅಶೋಕ್ಸ್ವಪಕ್ಷೀಯರ ಆಕ್ರೋಶವೇ ಕಾಂಗ್ರೆಸ್ ಸರ್ಕಾರದ ವೈಫಲ್ಯಕ್ಕೆ ಸಾಕ್ಷಿ: ಆರ್. ಅಶೋಕ್ ವಾಗ್ದಾಳಿ