Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
National News

ಸಾಮಾಜಿಕ ಮಾಧ್ಯಮಗಳ ಸವಾಲು ಎದುರಿಸುತ್ತಿರುವ ಪತ್ರಿಕೋದ್ಯಮ: ಸಿ.ಎಸ್. ಷಡಾಕ್ಷರಿ

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸಾಮಾಜಿಕ ಜಾಲತಾಣಗಳು ಸಕ್ರೀಯವಾಗಿರುವ ಪ್ರಸ್ತುತ ದಿನಗಳಲ್ಲಿ
, ವಿಶ್ವಾಸಾರ್ಹಕ್ಕೆ ಪಾತ್ರವಾಗಿರುವ ಪತ್ರಿಕೋದ್ಯಮವು ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕಾದ ಪರಿಸ್ಥಿತಿ ಎದುರಾಗಿದೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ಹೇಳಿದರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (ಕೆ.ಯೂ.ಡಬ್ಲ್ಯೂ.ಜೆ) ವತಿಯಿಂದ ಪತ್ರಿಕೋದ್ಯಮ ಸೇವೆಗಾಗಿ ತುಮಕೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಹಿರಿಮೆಗೆ ಪಾತ್ರರಾದ ಪ್ರಜಾಪ್ರಗತಿದಿನಪತ್ರಿಕೆಯ ಸಂಪಾದಕ ಎಸ್.ನಾಗಣ್ಣ ಅವರಿಗೆ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಪತ್ರಿಕೋದ್ಯಮದಿಂದ ಸಮಾಜ ಬದಲಾವಣೆ ಸಾಧ್ಯವಿದೆ. ಸಮಾಜದ ಅಂಕು ಡೊಂಕುಗಳನ್ನು ತಿದ್ದುವ ಕಾಯಕವನ್ನು ಪತ್ರಿಕೆಗಳು ಉತ್ತಮ ಸೇವೆ ಸಲ್ಲಿಸಿಕೊಂಡು ಬಂದಿವೆ. ಮುದ್ರಣ ಮಾಧ್ಯಮಕ್ಕೀಗ ಭಾರೀ ಸವಾಲಿನ ದಿನಗಳು ಎದುರಾಗಿವೆ ಎಂದರು.

ಹಿರಿಯ ಪತ್ರಕರ್ತ ಎಸ್.ನಾಗಣ್ಣ ಅವರಿಗೆ ಸಂದಿರುವ ಈ ಗೌರವವು ಕನ್ನಡ ಪತ್ರಿಕೋದ್ಯಮಕ್ಕೆ ಸಂದ ಹಿರಿಮೆ ಎಂದೂ ಅವರು ವಿಶ್ಲೇಷಿಸಿದರು.



ನಾಗಣ್ಣ ಸೇವೆ ಅನನ್ಯ: ಮದನಗೌಡ
ಅಭಿನಂದನಾ ಮಾತುಗಳನ್ನಾಡಿದ ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿ ಎಚ್.ಬಿ. ಮದನಗೌಡ ಮಾತನಾಡಿ
, ಪತ್ರಿಕೋದ್ಯಮವು ಇಂದು ಸಮಾಜ ಸೇವಾ ಮನೋಭಾವದಿಂದ ದೂರ ಸರಿದು, ಉದ್ಯಮವಾಗಿ ಬದಲಾಗುತ್ತಿದೆ. ನಾಗಣ್ಣ ಅವರು ಪ್ರಜಾಪ್ರಗತಿ ಪತ್ರಿಕೆಯ ಮೂಲಕ ತುಮಕೂರಿಗೂ ಒಂದೊಳ್ಳೆಯ ಹೆಸರನ್ನು ದೊರಕಿಸಿಕೊಡುವುದರಲ್ಲಿ ಪ್ರಮುಖ ಪಾತ್ರ ವಹಿಸಿದವರು ಎಂದು ಅವರ ಹೋರಾಟದ ಸೇವೆಯನ್ನು ಸ್ಮರಿಸಿದರು.

ಪರಿಶ್ರಮದ ಸಂಘಜೀವಿ:
ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ
, ಸಿದ್ಧಗಂಗಾ ಮಠದ ಡಾ.ಶಿವಕುಮಾರಸ್ವಾಮೀಜಿ ಅವರು ನಾಗಣ್ಣ ಅವರ ಬದುಕಿನ ಪ್ರೇರಣೆ. ಜಿಲ್ಲಾ ಮಟ್ಟದ ಪತ್ರಿಕೆ ಸಂಪಾದಕರಾಗಿ ತನ್ನ ಪರಿಶ್ರಮ ಮತ್ತು ಬದ್ಧತೆಯಿಂದ ಅದೇ ಪತ್ರಿಕೆಯನ್ನು ರಾಜ್ಯ ಮಟ್ಟದ ಪತ್ರಿಕೆಯನ್ನಾಗಿ ರೂಪಿಸಿ ಅದಕ್ಕೆ ಸಂಪಾದಕರಾಗಿದ್ದಾರೆ. ರಾಜ್ಯ ಸಮ್ಮೇಳನ ಸಂದರ್ಭದಲ್ಲಿ ಅವರ ಸೇವೆ ಶ್ಲಾಘನೀಯ ಎಂದರು.


ನಾಗಣ್ಣ ಸೇವೆ ಸ್ಮರಣೆ:
ಕಾರ್ಯನಿರತ ಪತ್ರಕರ್ತರ ರಾಷ್ಟ್ರೀಯ ಮಂಡಳಿ (ಐಎ್ಡಬ್ಲ್ಯೂಜೆ) ಅಧ್ಯಕ್ಷ ಬಿ.ವಿ. ಮಲ್ಲಿಕಾರ್ಜುನಯ್ಯ ಮಾತನಾಡಿ
, ಶ್ರಮದಿಂದ ಪತ್ರಿಕೋದ್ಯಮ ಮಾಡಿಕೊಂಡು ಬಂದ ನಾಗಣ್ಣ, ಸಂಘದ ಜೊತೆಗೂ ಅವಿನಾಭಾವ ಸಂಬಂದ ಹೊಂದಿದ್ದಾರೆ ಎಂದರು. ಹಿರಿಯ ಪತ್ರಕರ್ತ ಎಸ್.ಕೆ.ಶೇಷಚಂದ್ರಿಕಾ ಅವರು ಮಾತನಾಡಿ, ಸುಖದ ಕಾಲದಲ್ಲಿ ನಾಗಣ್ಣ ಪತ್ರಿಕೋದ್ಯಮ ಮಾಡಿದ್ದಕ್ಕಿಂತ ಹೆಚ್ಚು ಸವಾಲಿನ ವಿರುದ್ದ ಈಜಿದ್ದು ಹೆಚ್ಚು. ಗ್ರಾಮೀಣ ಪತ್ರಿಕೋದ್ಯಮಕ್ಕೆ ಶಕ್ತಿ ನೀಡುವ ಕೆಲಸವನ್ನು ಅವರು ಸತತವಾಗಿ, ಪರಿಶ್ರಮದಿಂದ ಮಾಡಿಕೊಂಡು ಬಂದಿದ್ದಾರೆ ಎಂದರು.

ಪತ್ರಿಕಾ ವಿತರಕರ ಸಂಘದ ಅಧ್ಯಕ್ಷ ಕೆ.ಶಂಭುಲಿಂಗ ನಾಗಣ್ಣ ಅವರ ಪತ್ರಿಕೋದ್ಯಮದ ಸೇವೆ ಮತ್ತು ಅವರ ಕಾರ್ಯಕ್ಷಮತೆಯನ್ನು ಕೊಂಡಾಡಿದರು.

ಮರೆಯಲಾಗದ ದಿನ:
ಕೆಯುಡಬ್ಲೂಜೆ ಗೌರವ ಸ್ವೀಕರಿಸಿ ಮಾತನಾಡಿದ ಎಸ್.ನಾಗಣ್ಣ
, ನನ್ನ ಬದುಕಿನಲ್ಲಿ ಕೆಯುಡಬ್ಲೂಜೆ ಅಭಿನಂದನೆ ಕೂಡ ಮರೆಯಲಾಗದ ದಿನ. ಇಂಥದೊಂದು ಅವಕಾಶ ಕಲ್ಪಿಸಿ ಬರಮಾಡಿಕೊಂಡ ತಗಡೂರು ಮತ್ತು ಪದಾಧಿಕಾರಿಗಳಿಗೆ ಧನ್ಯವಾದಗಳು. ಶೇಷಣ್ಣ ಮತ್ತು ಮದನಗೌಡರು ಸೇರಿದಂತೆ ಹಲವರು ನನ್ನ ಬಗ್ಗೆ ಗುಣಗಾನ ಮಾಡಿದ್ದೀರಿ. ಅವರಿಗೂ ಅಭಾರಿಯಾಗಿರುವೆ. ಪತ್ರಿಕೋದ್ಯಮಕ್ಕೆ ಎಷ್ಟೇ ಪೈಪೋಟಿ ಬರಲಿ, ಅದನ್ನು ಎದುರುಸಿಕೊಂಡು, ನಮ್ಮ ವೃತ್ತಿ ಗೌರವವನ್ನು ಕಾಪಾಡಿಕೊಳ್ಳಲು ಸಂಘಟಿತ ಪ್ರಯತ್ನ ನಡೆಸೋಣ ಎಂದರು.

ಗಿರೀಶ್ ಲಿಂಗಣ್ಣಗೆ ಸನ್ಮಾನ:
ಇದೇ ಸಂದರ್ಭದಲ್ಲಿ ಸಂಶೋಧನಾತ್ಮಕ ಮತ್ತು ವೈಜ್ಞಾನಿಕ ವರದಿಗಳಿಗಾಗಿ ಕೆಯೂಡಬ್ಲ್ಯೂಜೆಯಲ್ಲಿ ದತ್ತಿ ನಿಧಿ ಪ್ರಶಸ್ತಿ ಸ್ಥಾಪನೆ ಮಾಡಿರುವ ಅಂಕಣಕಾರ ಗಿರೀಶ್ ಲಿಂಗಣ್ಣ ಅವರನ್ನೂ ಸಂಘದ ವತಿಯಿಂದ ಸನ್ಮಾನಿಸಲಾಯಿತು. ಹಿರಿಯ ಪತ್ರಕರ್ತ ಎಚ್.ಎನ್.ಮಲ್ಲೇಶ್ ಅವರಿಗೆ ಪ್ರಜಾಪ್ರಗತಿ ದತ್ತಿ ನಿಧಿಯನ್ನು ಪ್ರದಾನ ಮಾಡಲಾಯಿತು.


ಹಿರಿಯರ ಉಪಸ್ಥಿತಿ:
ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತರಾದ ಈಶ್ವರ ದೈ ತೋಟ
, ಕಂ.ಕ.ಮೂರ್ತಿ, ಕೆಯೂಡಬ್ಲ್ಯೂಜೆ ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ, ಕಾರ್ಯದರ್ಶಿ ನಿಂಗಪ್ಪ ಚಾವಡಿ, ತುಮಕೂರು ಜಿಲ್ಲಾ ಘಟಕ ಅಧ್ಯಕ್ಷ ಚಿ.ನಿ.ಪುರುಷೋತ್ತಮ, ಪ್ರಧಾನ ಕಾರ್ಯದರ್ಶಿ ರಘುರಾಮ್, ಹಲವು ಜಿಲ್ಲೆಯಿಂದ ಬಂದಿದ್ದ ಸಂಘದ ಪದಾಧಿಕಾರಿಗಳು, ಗಣ್ಯರು ಭಾಗವಹಿಸಿದ್ದರು. ಬೆಂಗಳೂರು ನಗರ ಘಟಕದ ಪ್ರಧಾನ ಕಾರ್ಯದರ್ಶಿ ನರೇಂದ್ರ ಪಾರೆಕಟ್ ವಂದನಾರ್ಪಣೆ ಮಾಡಿದರು.

ನಾಗಣ್ಣ, ಲಿಂಗಣ್ಣ ಸೇರಿ ನಾಲ್ವರಿಗೆ ಕೆಯುಡಬ್ಲೂಜೆ ಸನ್ಮಾನ-
ಹಿರಿಯ ಪತ್ರಕರ್ತರಾದ ಎಸ್.ನಾಗಣ್ಣ ಮತ್ತು ಅಂಕಣಗಾರ ಗಿರೀಶ್ ಲಿಂಗಣ್ಣ ಅವರು ಕೆಯುಡಬ್ಲೂಜೆಯಲ್ಲಿ ದತ್ತಿನಿಧಿ ಪ್ರಶಸ್ತಿ ಸ್ಥಾಪಿಸಿದ್ದಾರೆ. ಗ್ರಂಥಾಲಯ ಸ್ಥಾಪನೆಗೆ ಸಹಕಾರ ನೀಡಿರುವ ಸಿ.ಎಸ್.ಷಡಾಕ್ಷರಿ. ಕಸಾಪ ಗೌರವ ಕಾರ್ಯದರ್ಶಿಯಾಗಿರುವ ಎಚ್.ಬಿ.ಮದನಗೌಡ ಅವರನ್ನು ಕೆಯುಡಬ್ಲೂಜೆ ವತಿಯಿಂದ ಗೌರವಿಸಿ ಅಭಿನಂದಿಸಲಾಯಿತು.


 

Advertisement

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಸಾಪ ಮಾಜಿ ಜಿಲ್ಲಾಧ್ಯಕ್ಷ, ಶಿಕ್ಷಣತಜ್ಞ ಡಾ. ಕೆ.ಎಂ. ವೀರೇಶ್ ಹೃದಯಾಘಾತದಿಂದ ನಿಧನದುರ್ಗಕ್ಕೆ ಹರಿದು ಬಂದ ಭದ್ರೆ- ಸೆ.24ರಂದು ಮುಖ್ಯಮಂತ್ರಿಗಳಿಂದ ಗಂಗಾಪೂಜೆ,  ಬೃಹತ್ ಸಾರ್ವಜನಿಕ ಸಮಾರಂಭಆರ್.ಎಲ್ ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ 22ನೇ ಘಟಿಕೋತ್ಸವ ಮತ್ತು ಪದವಿ ಪ್ರದಾನ ಕಾರ್ಯಕ್ರಮನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ ಬೈಕ್ ಸವಾರ ಸಾವುಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಸಭೆ ಹೋರಾಟಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಾತಿನಿಧ್ಯ ಕಡಿಮೆ- ಚಿಕ್ಕಪ್ಪನಹಳ್ಳಿ ಷಣ್ಮುಖಕುಂಚಿಟಿಗ ನೌಕರರ ಸಂಘಕ್ಕೆ ಸದಸ್ಯರಾಗಿ: ಎಸ್.ಕೆ ಲಕ್ಷ್ಮಣ್ಚಳವಳಿ ನೆನಪಾಗಿ ಉಳಿದ ‘ತೆಂಕ-ಬಡಗ’ಅಂತಾರಾಷ್ಟ್ರೀಯ ಶಾಂತಿ ದಿನ – ಮನದ ದ್ವೇಷ ಕರಗಿದಾಗಲೇ ಜಗದ ಶಾಂತಿ ಅರಳುವುದು!ಗಣಪತಿ ಮೆರವಣಿಗೆ ವೇಳೆ ಗಲಾಟೆ 7 ಯುವಕರ ವಿರುದ್ಧ ಸುಮೋಟೋ ಪ್ರಕರಣ ದಾಖಲು