ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ತಾಲ್ಲೂಕಿನ ಹಿರೇಗುಂಟನೂರು ಗ್ರಾಮದ ಜ್ಯೋತಿ ಗಂಡ ದ್ಯಾಮೇಶ್(23) ಹಾಗೂ ಮಗು ಲಿಖಿತ್ ಕುಮಾರ್ (2) ಕಾಣೆಯಾದ ಕುರಿತು ಸೆ.21ರಂದು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿದೆ.
ಕಾಣೆಯಾದ ಜ್ಯೋತಿ 5 ಅಡಿ ಎತ್ತರ, ಗೋದಿ ಬಣ್ಣ, ಕಪ್ಪು ಕೂದಲು, ತೆಳ್ಳನೆಯ ಮೈ ಕಟ್ಟು ಹೊಂದಿದ್ದಾಳೆ. ಕನ್ನಡ ಭಾಷೆ ಮಾತನಾಡುತ್ತಾಳೆ. ಮನೆಯಿಂದ ಹೋಗುವಾಗ ನೀಲಿ ಬಣ್ಣದ ಚೂಡಿದಾರ ಧರಿಸಿರುತ್ತಾಳೆ.
ಗುರುತು ಪತ್ತೆಯಾದವರು ಗ್ರಾಮಾಂತರ ಪೊಲೀಸ್ ಠಾಣೆ ನಿರೀಕ್ಷಕರ ಸಂಖ್ಯೆ 948083131, ಚಿತ್ರದುರ್ಗ ಪೊಲೀಸ್ ಉಪಧೀಕ್ಷಕರ ಸಂಖ್ಯೆ 9480803148 08194-2224304, ಜಿಲ್ಲಾ ಕಂಟ್ರೋಲ್ ರೂಂ ಸಂಖ್ಯೆ 08194-222782 ಹಾಗೂ ಮಹಿಳಾ ಪೊಲೀಸ್ ವನಿತಾಬಾಯಿ ಅವರ ಸಂಖ್ಯೆ 9538313206 ಗೆ ಕರೆ ಮಾಡುವಂತೆ ಪ್ರಕಟಣೆ ತಿಳಿಸಿದೆ.




