Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Entertainment News

ಕನ್ನಡ ಕೌಸ್ತುಭ ಕಲರವ, ಮಿಂದೆದ್ದ ಕನ್ನಡಾಭಿಮಾನಿಗಳು

ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ಕನ್ನಡ ರಾಜ್ಯೋತ್ಸವದ ಪ್ರಯುಕ್ತ ನಗರದ ಹೆಚ್ ಎಂ ಎಸ್ ಲೇಔಟ್ ನ ಕನ್ನಡ ಕೌಸ್ತುಭ ಪ್ರಕಾಶನದ ವತಿಯಿಂದ 'ಕನ್ನಡ ಕಲರವ' ಕಾರ್ಯಕ್ರಮ ತುಂಬಾ ಅರ್ಥಪೂರ್ಣವಾಗಿ ನೆರೆವೇರಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ಸಾಹಿತಿ ಬಿ.ತಿಪ್ಪಣ್ಣ ಮರಿಕುಂಟೆ ಅವರು ವಹಿಸಿ ಮಾತನಾಡಿ ಕನ್ನಡ ಭಾಷೆ ಅತ್ಯಂತ ಸುಂದರ ಭಾಷೆಯಾಗಿದ್ದು, ದಕ್ಷಿಣ ಭಾರತದ ಪ್ರಮುಖ ಭಾಷೆಗಳಲ್ಲಿ ಕನ್ನಡದ ಅಂಕಿಗಳು ಇರುವ ಏಕೈಕ ಭಾಷೆ ನಮ್ಮ ಕನ್ನಡ ಭಾಷೆಯೆಂಬುದು ನಾವೆಲ್ಲರೂ ಹೆಮ್ಮೆ ಪಡುವ ವಿಚಾರವಾಗಿದೆ.

ನಾವು ನೀವೆಲ್ಲರೂ ಕನ್ನಡವನ್ನ ಬದುಕಾಗಿಸಿಕೊಂಡು ಕನ್ನಡವನ್ನ ಜೀವಿಸಬೇಕು. ಸಾಹಿತ್ಯವನ್ನು ನಮ್ಮ ಪ್ರವೃತ್ತಿ ಆಗಿಸಿಕೊಂಡು ನಮ್ಮ ವೈಯಕ್ತಿಕ ಬದುಕಿಗೆ ಧಕ್ಕೆಯಾಗದಂತೆ ಎಚ್ಚರಿಕೆಯ ಹೆಜ್ಜೆ ಇಡಬೇಕು ಎಂದು ತಿಳಿಸಿದರು.

ಲೇಖಕಿ ಡಿ.ಶಬ್ರಿನಾ ಮಹಮದ್ ಅಲಿ ಪ್ರಾಸ್ತಾವಿಕವಾಗಿ ಮಾತನಾಡಿ, ನಮ್ಮ ನೆಲದ ಭಾಷೆ ಕನ್ನಡ ಗೌರವಿಸುವುದು,ಪ್ರೀತಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದರು.


ಕವಿಗೋಷ್ಠಿಯ ಆಶಯ ನುಡಿಗಳನ್ನಾಡಿದ ಮೋದೂರು ತೇಜ ಅವರು "ಕನ್ನಡ ನಾಡು ಬಹುತ್ವದಿಂದ ಕೂಡಿದೆ. ಇಲ್ಲಿ ನಾವೆಲ್ಲರೂ ಒಂದಾಗಿ ಸಹಬಾಳ್ವೆಯಿಂದ ಬದುಕಬೇಕು. ನಾವು ರಚಿಸುವ ಸಾಹಿತ್ಯ ಕೂಡ ಅದರ ತಳಹದಿಯಲ್ಲೆ ಇರಬೇಕು. ಅರ್ಥವಿಲ್ಲದ ನೂರು ಸಾಲುಗಳನ್ನು ಗೀಚುವುದಕ್ಕಿಂತ ಅರ್ಥ ನೀಡುವ ಒಂದು ಒಳ್ಳೆಯ ರೂಪಕವನ್ನು ರಚಿಸುವ ಕಡೆ ನಾವು ನ ಕೊಡಬೇಕು ಎಂದರು.

ಮುಖ್ಯ ಅತಿಥಿ ರಾಜುಕವಿ ಸೂಲೇನಹಳ್ಳಿ, "ಕನ್ನಡ ನಾಡು ನುಡಿಗಾಗಿ ನಮ್ಮಿಂದಾದ ಸೇವೆ ಮಾಡಬೇಕು. ೨೫೦೦ ವರ್ಷಗಳ ಇತಿಹಾಸ ಇರುವ ಕನ್ನಡ ಭಾಷೆ ಬಳಸುವ ಮೂಲಕ ಉಳಿಸಿಕೊಂಡು ಹೋಗಬೇಕು ಎಂದು ತಿಳಿಸಿದರು.  ಅತಿಥಿ ಮನುಶ್ರೀ ಸಿದ್ದಾಪುರ ಮಾತನಾಡಿ ಕವಿಗಳಾದ ನಾವು ನಮ್ಮ ನಮ್ಮ ಕವಿತೆಗಳಿಂದ ಗುರುತಿಸಿಕೊಳ್ಳಬೇಕು, ಅದು ನಮ್ಮ ಕಾವ್ಯ ಕಟ್ಟುವಿಕೆಗೆ ಬಲ ನೀಡುತ್ತದೆ ಎಂದು ತಿಳಿಸಿದರು.


ಕಾರ್ಯಕ್ರಮದಲ್ಲಿ ತಿಪ್ಪೇರುದ್ರಪ್ಪ ಟಿ.ಚಳ್ಳಕೆರೆ, ಪಾಲಯ್ಯ ಜಿ ಕೋನಸಾಗರ, ನಾಗರಾಜ ಬೆಳಗಟ್ಟ, ಕೂಡ್ಲಹಳ್ಳಿ ಜಗದೀಶ್ ಹಿರಿಯೂರು, ಜಯಮಾರುತಿ ಟಿ.ಹೆಚ್, ಚಳ್ಳಕೆರೆ, ಹಾಲೇಶ್ ಕೆ.ಜಿ,ಚಳ್ಳಕೆರೆ, ಹರ್ಷವರ್ಧನ ಎಂ.ಟಿ, ಚಿಕ್ಕಗೊಂಡನಹಳ್ಳಿ, ಬಸವರಾಜ್ ಜಿ.ಶಿರೇಕೊಳ, ವಿಜಯಲಕ್ಷ್ಮಿ. ಜಿ.ಚಳ್ಳಕೆರೆ, ಜಯಪ್ರಕಾಶ್. ಹೆಚ್, ಚಿತ್ರದುರ್ಗ, ಚನ್ನಕೇಶವ.ಎ, ಚಳ್ಳಕೆರೆ, ಯತೀಶ ಎಂ.ಸಿದ್ದಾಪುರ, ಪ್ರಕಾಶ್ ಮದಕರಿ, ಚಳ್ಳಕೆರೆ ,ವಿಜಯಗುರು, ಚಳ್ಳಕೆರೆ,

ಕ್ಲಾಸಿಕ್ ಚಂದ್ರಶೇಖರ್, ಅರುಣ್ ಕುಮಾರ್,ಚಳ್ಳಕೆರೆ, ಪ್ರಜ್ವಲ ತೆಲಗಿ, ಚಳ್ಳಕೆರೆ ಕೆಂಚರಾಜ್.ಡಿ ಚಳ್ಳಕೆರೆ, ಯೋಗೇಶ್ವರಿ ಚಳ್ಳಕೆರೆ, ಬಿ‌.ಶಿವರಾಜ್ ನಾಯಕ ಚಿಕ್ಕಉಳ್ಳಾರ್ತಿ, ಮಮತ.ಆರ್ ಚಿತ್ರದುರ್ಗ, ಟಿ.ಶಿವಮೂರ್ತಿ ಕೋಡಿಹಳ್ಳಿ, ಮಂಜುನಾಥ ಕೆ.ಎಂ ಸೋಮಗುದ್ದು, ಸಬ್ರಿನ್ ತಾಜ್ ಚಳ್ಳಕೆರೆ, ಮೀನಾಕ್ಷಿ.ಪಿ, ಸೈಯದ್ ಮಹಬೂಬ್ ಮೊಳಕಾಲ್ಮುರು(ಮೊಸೈಮ), ಹರ್ಷಿತ ಎಂ,

ಪಗಡಲಬಂಡೆ ನಾಗೇಂದ್ರಪ್ಪ, ಶಿವಲೀಲಾ, ಬಸವರಾಜು, ರಂಗಸ್ವಾಮಿ, ಕವಿತಾ ಕುಶ, ಅಮರೇಶಪ್ಪ, ವಿಹಾನ್ ಅಲಿ, ತೇಜ್ಮಿನ್, ಪ್ರಭಾಸ್, ಜೀವನ್, ಸಮ್ಮು ಇವರೆಲ್ಲಾ ಭಾಗವಹಿಸಿ ಕನ್ನಡ ಕಲರವ ಕಾರ್ಯಕ್ರಮ ಯಶಸ್ವಿಗೊಳಿಸಿದರು. ಕಾರ್ಯಕ್ರಮದ ನಿರೂಪಣೆ ಮಹಮದ್ ಅಲಿ, ಸ್ವಾಗತ ಇನಗಷಾ ಎ..ಎಸ್, ವಂದನಾರ್ಪಣೆ ಶಿಫಾ ಎಂ.ಎಸ್ ಮಾಡಿದರು.

Advertisement

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಸಾಪ ಮಾಜಿ ಜಿಲ್ಲಾಧ್ಯಕ್ಷ, ಶಿಕ್ಷಣತಜ್ಞ ಡಾ. ಕೆ.ಎಂ. ವೀರೇಶ್ ಹೃದಯಾಘಾತದಿಂದ ನಿಧನದುರ್ಗಕ್ಕೆ ಹರಿದು ಬಂದ ಭದ್ರೆ- ಸೆ.24ರಂದು ಮುಖ್ಯಮಂತ್ರಿಗಳಿಂದ ಗಂಗಾಪೂಜೆ,  ಬೃಹತ್ ಸಾರ್ವಜನಿಕ ಸಮಾರಂಭಆರ್.ಎಲ್ ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ 22ನೇ ಘಟಿಕೋತ್ಸವ ಮತ್ತು ಪದವಿ ಪ್ರದಾನ ಕಾರ್ಯಕ್ರಮನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ ಬೈಕ್ ಸವಾರ ಸಾವುಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಸಭೆ ಹೋರಾಟಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಾತಿನಿಧ್ಯ ಕಡಿಮೆ- ಚಿಕ್ಕಪ್ಪನಹಳ್ಳಿ ಷಣ್ಮುಖಕುಂಚಿಟಿಗ ನೌಕರರ ಸಂಘಕ್ಕೆ ಸದಸ್ಯರಾಗಿ: ಎಸ್.ಕೆ ಲಕ್ಷ್ಮಣ್ಚಳವಳಿ ನೆನಪಾಗಿ ಉಳಿದ ‘ತೆಂಕ-ಬಡಗ’ಅಂತಾರಾಷ್ಟ್ರೀಯ ಶಾಂತಿ ದಿನ – ಮನದ ದ್ವೇಷ ಕರಗಿದಾಗಲೇ ಜಗದ ಶಾಂತಿ ಅರಳುವುದು!ಗಣಪತಿ ಮೆರವಣಿಗೆ ವೇಳೆ ಗಲಾಟೆ 7 ಯುವಕರ ವಿರುದ್ಧ ಸುಮೋಟೋ ಪ್ರಕರಣ ದಾಖಲು