Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
National News

ತುಮಕೂರು- ಚಿತ್ರದುರ್ಗ-ದಾವಣಗೆರೆ ನೇರ ರೈಲು ಮಾರ್ಗ ಕಾಮಗಾರಿ ಕುರಿತು ದನಿ ಎತ್ತಿದ ಕಾರಜೋಳ

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ತುಮಕೂರು-ಚಿತ್ರದುರ್ಗ-ದಾವಣಗೆರೆ ನೇರ ರೈಲು ಮಾರ್ಗದ ಪ್ರಗತಿ ಕುರಿತಂತೆ ಸಂಸತ್ತಿನಲ್ಲಿ ಸಂಸದ ಗೋವಿಂದ ಕಾರಜೋಳ ಅವರು ರೈಲ್ವೆ ಸಚಿವರಿಗೆ ಪ್ರಶ್ನೆ ಕೇಳಿದ್ದಾರೆ. ಈ ಮಾರ್ಗದ ಭೂ-ಸ್ವಾಧೀನ, ಅರಣ್ಯ ತೀರುವಳಿ ಹಾಗೂ ಬಾಕಿ ಇರುವ ವಿಷಯಗಳ ಕುರಿತು ರೈಲ್ವೆ ಇಲಾಖೆ ರಾಜ್ಯ ಸರ್ಕಾರದೊಂದಿಗೆ ಸಭೆಗಳನ್ನೇನ್ನಾದರೂ ಆಯೋಜಿಸುತ್ತಿದೆಯಾ ?

  ಅದೇ ರೀತಿ ೨೦೨೪-೨೫ ನೇ ಸಾಲಿನ  ರೈಲ್ವೆ ಬಜೆಟ್‌ನಲ್ಲಿ ಕರ್ನಾಟಕಕ್ಕೆ ಯಾವುದಾದರೂ ಹೊಸ ಯೋಜನೆಗಳನ್ನೇನಾದರೂ ಘೋಷಣೆ ಮಾಡಲಾಗಿದೆಯಾ ?

ಈ ಬಗ್ಗೆ ಮಾಹಿತಿ ನೀಡಿ ಎಂದು ಕೇಳಿದ್ದಾರೆ. ಇದಕ್ಕೆ ಉತ್ತರಿಸಿರುವ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ರವರು ಬಜೆಟ್‌ನಲ್ಲಿ ರಾಜ್ಯವಾರು ಬಜೆಟ್ ಹಂಚಿಕೆ ಮಾಡುವುದಿಲ್ಲ, ಬದಲಾಗಿ ರೈಲ್ವೆ ವಲಯವಾರು ಅನುದಾನ ಹಂಚಿಕೆ ಮಾಡಲಾಗುತ್ತದೆ. ಕರ್ನಾಟಕ ರಾಜ್ಯವು ನೈರುತ್ಯ ರೈಲ್ವೆ ವಲಯದಿಂದ ಆವರಿಸಿಕೊಂಡಿದ್ದು,

೨೦೨೪-೨೫ ನೇ ಸಾಲು ಸೇರಿದಂತೆ ಕಳೆದ ಮೂರು ವರ್ಷಗಳಲ್ಲಿ ನೈರುತ್ಯ ರೈಲ್ವೆ ವಲಯಕ್ಕೆ ೧೯ ಹೊಸ ಮಾರ್ಗ, ೩೭ ಡಬ್ಲಿಂಗ್ ಯೋಜನೆಗಳನ್ನು ಸೇರಿದಂತೆ ಒಟ್ಟು ೫೬ ಹೊಸ ಯೋಜನೆಗಳ ೬೧೫೯ ಕಿ.ಮೀ ಉದ್ದದ ಮಾರ್ಗಗಳನ್ನು ಮಂಜೂರು ಮಾಡಲಾಗಿದೆ.

೦೧.೦೪.೨೦೨೪ ರ ವರದಿಯಂತೆ ೨೧ ಹೊಸ ಮಾರ್ಗ ಹಾಗೂ ೧೦ ಡಬ್ಲಿಂಗ್ ಸೇರಿದಂತೆ ೩೮೪೦ ಕಿ.ಮೀ ಉದ್ದದ ರೂ.೪೭,೦೧೬ ಕೋಟಿ ಮೊತ್ತದ ವಿವಿಧ ಯೋಜನೆಗಳು ವಿವಿಧ ಹಂತದಲ್ಲಿ ಪ್ರಗತಿಯಲ್ಲಿವೆ.

ಇದರಲ್ಲಿ ಈಗಾಗಲೇ ೧೩೦೨ ಕಿ.ಮೀ ಉದ್ದದ ಮಾರ್ಗವನ್ನು ಪೂರ್ಣಗೊಳಿಸಲು  ರೂ.೧೭,೩೮೩ ಕೋಟಿ ಹಣ ಖರ್ಚು ಮಾಡಲಾಗಿದೆ ಎಂದಿದ್ದಾರೆ. 

  ೨೦೦೯ ರಿಂದ ೨೦೧೪ ರವರೆಗಿನ ಯು.ಪಿ.ಎ. ಆಡಳಿತಾವಧಿಯಲ್ಲಿ ೮೩೫ ಕೋಟಿ ಅನುದಾನ ನೈರುತ್ಯ ರೈಲ್ವೆ ವಲಯಕ್ಕೆ ಹಂಚಿಕೆಯಾಗಿದ್ದರೆ, ೨೦೨೪-೨೫ ಒಂದೇ ವರ್ಷದಲ್ಲಿ ಮೋದಿಜಿ ನೇತೃತ್ವದ ಸರ್ಕಾರ ರೂ,,೫೫೯ ಕೋಟಿ ಅನುದಾನ ಹಂಚಿಕೆ ಮಾಡುವ ಮೂಲಕ ಹತ್ತು ಪಟ್ಟು ಅನುದಾನವನ್ನು ಹೆಚ್ಚು ಹಂಚಿಕೆ ಮಾಡಿದೆ ಎಂದಿದ್ದಾರೆ.

೨೦೦೯ ರಿಂದ ೨೦೧೪ ರವರೆಗೆ ೫೬೫ ರೈಲ್ವೆ ಮಾರ್ಗ ನಿರ್ಮಾಣಗೊಂಡಿದ್ದರೆ, ೨೦೧೪ ರಿಂದ ೨೦೨೪ ರವರೆಗೆ ೧,೬೩೩ ಕಿ.ಮೀ ನೂತನ ಮಾರ್ಗ ನಿರ್ಮಾಣವಾಗಿದೆ.

      ತುಮಕೂರು-ದಾವಣಗೆರೆ ೧೯೧ ಕಿ.ಮೀ ಉದ್ದದ ನೇರ ರೈಲು ಮಾರ್ಗಕ್ಕೆ ಈಗಾಗಲೇ ಮಾರ್ಚ್ ೨೦೨೪ ರವರೆಗೆ ರೂ.೩೫೯.೩೨ ಕೋಟಿ ಅನುದಾನ ಖುರ್ಚು ಮಾಡಲಾಗಿದ್ದು, ೨೦೨೪-೨೫ ನೇ ಸಾಲಿಗೆ ೧೫೦ ಕೋಟಿ ಅನುದಾನವನ್ನು ಬಜೆಟ್‌ನಲ್ಲಿ ಒದಗಿಸಲಾಗಿದೆ. ಸುಮಾರು ೮೭೫ ಹೆಕ್ಟೇರ್ ಭೂ-ಸ್ವಾಧೀನವಾಗಿದ್ದು, ಭೂ-ಸ್ವಾದೀನವಾಗಿರುವ ಕಡೆ ಈಗಾಗಲೇ ಟೆಂಡೆರ್ ಕರೆದು ಕಾಮಗಾರಿ ಪ್ರಾರಂಭಿಸಲಾಗಿದೆ ಎಂದಿದ್ದಾರೆ.

       ಯಾವುದೇ ರೈಲ್ವೆ ಯೋಜನೆಗಳು ತ್ವರಿತ ಗತಿಯಲ್ಲಿ ಪೂರ್ಣಗೊಳ್ಳಲು ಶೀಘ್ರವಾಗಿ ಭೂ-ಸ್ವಾಧೀನ ಮಾಡುವುದು, ಶೀಘ್ರವಾಗಿ ಅರಣ್ಯ ತೀರುವಳಿ ಮಾಡಿಕೊಡುವದು, ರಾಜ್ಯ ಸರ್ಕಾರ ತನ್ನ ಪಾಲಿನ ಅನುದಾನ ಹಂಚಿಕೆಯನ್ನು ತ್ವರಿತವಾಗಿ ಜಮ ಮಾಡುವುದು, ಭೂ-ಸ್ವಾಧೀನಗೊಂಡ ಸ್ಥಳದಲ್ಲಿನ ಯುಟಿಲಿಟೀಸ್‌ಗಳ ಸ್ಥಳಾಂತರ ಮಾಡುವುದು, ಯೋಜನೆ ಅನುಷ್ಟಾನದ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವುದು ಈ ಎಲ್ಲಾ ಅಂಶಗಳು ಯೋಜನೆಗಳು ಪೂರ್ಣಗೊಳ್ಳುವಿಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದಿದ್ದಾರೆ, ಇದಕ್ಕೆ ತುಮಕೂರು-ಚಿತ್ರದುರ್ಗ-ದಾವಣಗೆರೆ ನೇರ ರೈಲು ಮಾರ್ಗವೂ ಕೂಡ ಹೊರತಾಗಿಲ್ಲ ಎಂದು ಸಚಿವರು ತಿಳಿಸಿದ್ದಾರೆ.

 

Advertisement

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಸಾಪ ಮಾಜಿ ಜಿಲ್ಲಾಧ್ಯಕ್ಷ, ಶಿಕ್ಷಣತಜ್ಞ ಡಾ. ಕೆ.ಎಂ. ವೀರೇಶ್ ಹೃದಯಾಘಾತದಿಂದ ನಿಧನದುರ್ಗಕ್ಕೆ ಹರಿದು ಬಂದ ಭದ್ರೆ- ಸೆ.24ರಂದು ಮುಖ್ಯಮಂತ್ರಿಗಳಿಂದ ಗಂಗಾಪೂಜೆ,  ಬೃಹತ್ ಸಾರ್ವಜನಿಕ ಸಮಾರಂಭಆರ್.ಎಲ್ ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ 22ನೇ ಘಟಿಕೋತ್ಸವ ಮತ್ತು ಪದವಿ ಪ್ರದಾನ ಕಾರ್ಯಕ್ರಮನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ ಬೈಕ್ ಸವಾರ ಸಾವುಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಸಭೆ ಹೋರಾಟಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಾತಿನಿಧ್ಯ ಕಡಿಮೆ- ಚಿಕ್ಕಪ್ಪನಹಳ್ಳಿ ಷಣ್ಮುಖಕುಂಚಿಟಿಗ ನೌಕರರ ಸಂಘಕ್ಕೆ ಸದಸ್ಯರಾಗಿ: ಎಸ್.ಕೆ ಲಕ್ಷ್ಮಣ್ಚಳವಳಿ ನೆನಪಾಗಿ ಉಳಿದ ‘ತೆಂಕ-ಬಡಗ’ಅಂತಾರಾಷ್ಟ್ರೀಯ ಶಾಂತಿ ದಿನ – ಮನದ ದ್ವೇಷ ಕರಗಿದಾಗಲೇ ಜಗದ ಶಾಂತಿ ಅರಳುವುದು!ಗಣಪತಿ ಮೆರವಣಿಗೆ ವೇಳೆ ಗಲಾಟೆ 7 ಯುವಕರ ವಿರುದ್ಧ ಸುಮೋಟೋ ಪ್ರಕರಣ ದಾಖಲು