Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Health & Fitness

ರಕ್ತದಾನ ಮಹತ್ವದ ಅರಿತು ರಕ್ತದಾನಕ್ಕೆ ಮುಂದಾಗಿ

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಇಲ್ಲಿನ ಲಯನ್ಸ್‌ಕ್ಲಬ್‌ಆಫ್‌ದೊಡ್ಡಬಳ್ಳಾಪುರ ಆರ್.ಎಲ್.ಜಾಲಪ್ಪ ಇನ್ಸ್‌ಟಿಟ್ಯೂಷನ್ಸ್‌ಹಾಗೂ ಆರ್.ಎಲ್.ಜಾಲಪ್ಪ ಸಮೂಹ ಶಿಕ್ಷಣ ಸಂಸ್ಥೆಗಳ ನೇತೃತ್ವದಲ್ಲಿ ಶನಿವಾರ ಸ್ವಯಂಪ್ರೇರಿತ ಮೆಗಾ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.

ಆರ್.ಎಲ್.ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯದ ಎಲೆಕ್ಟ್ರಾನಿಕ್ಸ್‌ಕಮ್ಯೂನಿಕೇಶನ್‌ವಿಭಾಗದ ಸಭಾಂಗಣ ಹಾಗೂ ಶ್ರೀ ದೇವರಾಜ ಅರಸ್‌ಅಂತಾರಾಷ್ಟ್ರೀಯ ವಸತಿ ಶಾಲೆಯ ಸಭಾಂಗಣದಲ್ಲಿ ನಡೆದ ಶಿಬಿರದಲ್ಲಿ ಲಯನ್ಸ್‌ರಕ್ತನಿಧಿ ಹಾಗೂ ಕೋಲಾರದ ಜಾಲಪ್ಪ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆಯ ರಕ್ತನಿಧಿಗಳ ಮೂಲಕ ರಕ್ತ ಸಂಗ್ರಹ ಮಾಡಲಾಯಿತು.

ಲಯನ್ಸ್‌ಜಿಲ್ಲೆ 317ಎಫ್‌ನ ರಕ್ತನಿಧಿ ಸಂಯೋಜಕ ಚಿನ್ನಪ್ಪ ಥಾಮಸ್‌ಶಿಬಿರ ಉದ್ಘಾಟಿಸಿ ಮಾತನಾಡಿ, ದಾನಗಳಲ್ಲಿ ಸರ್ವಶ್ರೇಷ್ಠ ಎನಿಸಿರುವ ರಕ್ತದಾನವು ಜೀವದಾನಕ್ಕೆ ಸಮಾನವಾದದ್ದು. ಜಗತ್ತು ಎಷ್ಟೇ ಮುಂದುವರೆದರೂ, ವೈಜ್ಞಾನಿಕವಾಗಿ ಪ್ರಗತಿ ಹೊಂದುತ್ತಿದ್ದರೂ ಈವರೆಗೆ ಒಂದೇ ಒಂದು ಹನಿ ರಕ್ತವನ್ನು ಕೃತಕವಾಗಿ ಸೃಷ್ಟಿಸಲು ಸಾಧ್ಯವಾಗಿಲ್ಲ.

ದಿನೇ ದಿನೇ ಹೆಚ್ಚುತ್ತಿರುವ ರಕ್ತದ ಬೇಡಿಕೆಗೆ ಪೂರಕವಾಗಿ ದಾನಿಗಳ ಸಂಖ್ಯೆ ಹೆಚ್ಚಬೇಕು. ಅಂತಾರಾಷ್ಟ್ರೀಯ ಲಯನ್ಸ್‌ಸಂಸ್ಥೆ ಈ ಹಂತದಲ್ಲಿ ತನ್ನದೇ ಆದ ಮಹತ್ವ ಪಡೆದಿದೆ ಎಂದು ತಿಳಿಸಿದರು.

ಲಯನ್ಸ್‌ಸಂಸ್ಥೆಯ ದೀಪಕ್‌ಸುಮನ್‌ಮಾತನಾಡಿ, ಯುವಜನತೆಯಲ್ಲಿ ರಕ್ತದಾನದ ಬಗ್ಗೆ ಜಾಗೃತಿ ಮೂಡುತ್ತಿರುವುದು ಆಶಾದಾಯಕ ಬೆಳವಣಿಗೆ, ಕಾಲೇಜುಗಳಲ್ಲಿ, ಸಂಘ-ಸಂಸ್ಥೆಗಳಲ್ಲಿ ಇಂತಹ ಶಿಬಿರಗಳು ನಡೆಯುವುದರಿಂದ ಹಲವರ ಜೀವರಕ್ಷಣೆಗೆ ಸಹಕಾರಿಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಲಯನ್ಸ್‌ಜಿಇಟಿ ಸಂಯೋಜಕ ಎಂ.ಆರ್.ಶ್ರೀನಿವಾಸ್, ಆರ್.ಎಲ್.ಜಾಲಪ್ಪ ಲಯನ್ಸ್‌ಕ್ಲಬ್‌ಅಧ್ಯಕ್ಷ ಜೆ.ಆರ್.ರಾಕೇಶ್, ಮಧುಮೇಹ ವಿಭಾಗದ ಜಿಲ್ಲಾ ಸಂಯೋಜಕ ಎಲ್.ಎನ್.ಪ್ರದೀಪ್‌ಕುಮಾರ್, ನಿಕಟಪೂರ್ವ ಅಧ್ಯಕ್ಷ ಡಾ.ಶ್ರೀನಿವಾಸರೆಡ್ಡಿ, ಉಪಾಧ್ಯಕ್ಷ ಪ್ರೊ.ಕೆ.ಆರ್.ರವಿಕಿರಣ್, ಕಾರ್ಯದರ್ಶಿ ಕೆ.ಸಿ.ನಾಗರಾಜ್,

ಖಜಾಂಚಿ ಎಸ್.ರವಿಕುಮಾರ್, ಮಾಜಿ ಕಾರ್ಯದರ್ಶಿ ಮುಕೇಶ್‌, ಅರುಂಧತಿ ರಾಕೇಶ್, ಡಾ.ಶಿವಪ್ರಸಾದ್, ಜಿಯಾವುಲ್ಲಾಖಾನ್, ವಸತಿ ಶಾಲೆ ಪ್ರಾಂಶುಪಾಲ ಧನಂಜಯ್, ಲಯನ್ಸ್‌ಕ್ಲಬ್ ಆಫ್ ಆರ್ಯಭಟ ಅಧ್ಯಕ್ಷ ಅಮಿತ್, ಆರ್.ಎಲ್.ಜಾಲಪ್ಪ ಸಮೂಹ ಶಿಕ್ಷಣ ಸಂಸ್ಥೆಗಳ ವಿವಿಧ ಶೈಕ್ಷಣಿಕ ಘಟಕಗಳ ಮುಖ್ಯಸ್ಥರು ಉಪಸ್ಥಿತರಿದ್ದರು. ರಕ್ತದಾನಿಗಳಿಗೆ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು.

 

 

 

 

Advertisement

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಖಾಸಗಿ ವಿವಿಗಳು ಲಾಭಕೋರ ವ್ಯಾಪಾರಿ ಸಂಸ್ಥೆಗಳಲ್ಲ: ಸುಪ್ರೀಂ ಕೋರ್ಟ್ ಖಡಕ್ ಎಚ್ಚರಿಕೆ ಪಿಎಸ್‌ಐಗೆ ಕಪಾಳಮೋಕ್ಷ: ಎಸ್‌ಐ ಸವಿತಾ ಪಾಟೀಲ್ ಬಳಿ ವಿಡಿಯೋ ಮೂಲಕ ಕ್ಷಮೆ ಕೋರಿದ ಶಾಸಕ ಸುರೇಶ್ ಗೌಡ ಪುತ್ರಿ ಐಶ್ವರ್ಯಾ ಗೌಡಸರ್ಕಾರಿ ಬಸ್ ಗ್ಲಾಸ್ ಒಡೆದು ಕರ್ತವ್ಯಕ್ಕೆ ಅಡ್ಡಿ; 15 ಬಿಜೆಪಿ ಕಾರ್ಯಕರ್ತರ ವಿರುದ್ಧ ಎಫ್‌ಐಆರ್ ಕಾಡು ಹಂದಿ ಬೇಟೆ: ವನ್ಯಜೀವಿ ಕಾಯ್ದೆಯಡಿ ಪೊಲೀಸರೇ ನೇರ ದೂರು ದಾಖಲಿಸುವುದು ಕಾನೂನುಬಾಹಿರ-ಹೈಕೋರ್ಟ್ಬೆಳ್ಳಂಬೆಳಗ್ಗೆ ಲೋಕಾಯುಕ್ತ ಕದನ: 8 ಸರ್ಕಾರಿ ಅಧಿಕಾರಿಗಳ ಮನೆ ಹಾಗೂ ಕಚೇರಿಗಳ ಮೇಲೆ ಏಕಕಾಲಕ್ಕೆ ದಾಳಿ200 ರೂ. ಆಸೆಗೆ ಬಿದ್ದು 9.30 ಲಕ್ಷ ರೂ. ಕಳೆದುಕೊಂಡ ಯುವತಿ: 'ವರ್ಕ್ ಫ್ರಮ್ ಹೋಮ್' ಸೈಬರ್ ವಂಚನೆ ಬಯಲುಸಾಮಾನ್ಯ ಜನರಿಗೆ ಬೆಲೆ ಏರಿಕೆ ಬಿಸಿ: ದಿಢೀರ್ ಹೆಚ್ಚಾದ ಅಕ್ಕಿ ದರ, ಒಂದೇ ತಿಂಗಳಲ್ಲಿ ಎರಡನೇ ಬಾರಿ ಏರಿಕೆಉತ್ತರ ಪ್ರದೇಶ, ಉತ್ತರಾಖಂಡ ರಾಜ್ಯಸಭಾ ಚುನಾವಣೆ ಹಾಗೂ ಬಂಗಾಳ ಉಪಚುನಾವಣೆ ಘೋಷಣೆ ಸಚಿವ ಶಿವಲಿಂಗೇಗೌಡರ ವಿವಾದಾತ್ಮಕ ಹೇಳಿಕೆ: ಲೋಕಾಯುಕ್ತಕ್ಕೆ ದೂರು ದಾಖಲು, ರಾಜೀನಾಮೆಗೆ ಆಗ್ರಹಬೆಂಗಳೂರು ವಿಮಾನ ನಿಲ್ದಾಣದಲ್ಲಿ 28 ಕೋಟಿ ಮೌಲ್ಯದ ಹೈಡ್ರೋಪೋನಿಕ್ ಗಾಂಜಾ ಹಾಗೂ ಚಿನ್ನ ವಶ, 6 ಜನರ ಬಂಧನ