Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News

ಕೋಡಿಹಳ್ಳಿ ಬಸವೇಶ್ವರ ಸ್ವಾಮಿ ದೇವಾಲಯ ಲೋಕಾರ್ಪಣೆ

ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ತಳಕು ಹೋಬಳಿಯ ಕೋಡಿಹಳ್ಳಿ ಗ್ರಾಮದಲ್ಲಿ ನಡೆದ ಎರಡು ದಿನಗಳ ಕಾರ್ಯಕ್ರಮದಲ್ಲಿ ಗ್ರಾಮಿಣ ಜಾನಪದ ಶೈಲಿಯ ತಮಟೆ ನಗಾರಿ ವಿವಿಧ ಜಾನಪದ ಕಲಾ ತಂಡಗಳೊಂದಿಗೆ ಶ್ರೀ ಬಸವೇಶ್ವರ ಸ್ವಾಮಿ ವಿಗ್ರಹ ಪ್ರತಿಷ್ಠಾಪನೆ, ಶ್ರೀ ನಾಗಸುಬ್ರಮಣ್ಯ ಶಿಲಾ ವಿಗ್ರಹ ಹಾಗೂ ಧ್ವಜ ಸ್ತಂಭ ಹಾಗೂ ಶಿಖರ ಕಳಸ ಪ್ರತಿಷ್ಟಾಪನೆ ಕಾರ್ಯಕ್ರಮವು ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನಡೆಯಿತು.

ನೂತನ ದೇವಸ್ಥಾನಕ್ಕೆ ವಿವಿಧ  ಹೂವಿನ ಹಾರಗಳಿಂದ ಶೃಂಗಾರ ಮಾಡಲಾಯಿತು. ಬಣ್ಣ ಬಣ್ಣದ ಕೇಸರಿ ಬಾವುಟಗಳು ಪೆಂಡಾಲ್ ನಿಂದ ಅಲಂಕೃತ ಮಾಡಲಾಗಿತ್ತು. ಮಹಾ ಮಂಗಳಾರತಿ ನೆರವೇರಿಸಿ ಗ್ರಾಮಸ್ಥರು ಹಾಗೂ ಮುಖಂಡರು ಶ್ರೀ ಶರಣ ಬಸವೇಶ್ವರ ಸ್ವಾಮಿ ವಿಗ್ರಹ ಪ್ರತಿಷ್ಠಾಪನೆಗೆ ಚಾಲನೆ ನೀಡಿದರು.

ಭವ್ಯ ಮೆರವಣಿಗೆ- ವಿವಿಧ ರೀತಿಯ ನೃತ್ಯಗಳು ಡೊಳ್ಳು ಕುಣಿತ, ಹೂವು ದವನ ಹಣ್ಣು ಕಾಯಿ ಸ್ವಾಮಿಗೆ ಭಕ್ತರು ಸಮರ್ಪಿಸಿದರು. ಮಂಗಳ ವಾದ್ಯಗಳೊಂದಿಗೆ ಶ್ರೀಮದ್ ಉಜ್ಜೆಯನಿ ಸದ್ಧರ್ಮ ಸಿಂಹಾಸನಾಧೀಶ್ವರ 1008 ಜಗದ್ಗುರು ಸ್ಥಿರ ಗುರುತು ಪೀಠಾಧ್ಯಕ್ಷರಾದ ಶ್ರೀ ತ್ರಿಲೋಚನ ರಾಜದೇಶಿಕೆಂದ್ರ ಶಿವಾಚಾರ್ಯ ಮಹಾ ಭಗವತ್ಪಾದರು ಇವರ ಅಮೃತ ಹಸ್ತದಿಂದ ಕಳಸ ಪ್ರತಿಷ್ಟಾಪನೆ ಹಾಗೂ ಪ್ರವಚನ ಮಾಡಲಾಯಿತು.

ಶ್ರೀ ಜಗದ್ಗುರು ದೇಶಿಕೇಂದ್ರ ಮಹಾ ಭಗವತ್ಪಾದರು ಮಾತನಾಡಿ ಎಲ್ಲ ಸಮುದಾಯದವರು ದೇವಸ್ಥಾನ ಲೋಕಾರ್ಪಣೆಯಲ್ಲಿ ಪಾಲ್ಗೊಂಡು  ಯಶಸ್ವಿಗೊಳಿಸಿದರು. ಶರಣ ಬಸವೇಶ್ವರ ಸ್ವಾಮಿ ಗ್ರಾಮದ ಎಲ್ಲ ಸದ್ಭಕ್ತರಿಗೆ ಒಳ್ಳೆಯ ಆಯುಷ್ ಆರೋಗ್ಯ ನೀಡಿ ಕಾಪಾಡಲಿ ಹಾಗೆ ಒಳ್ಳೆಯ ಮಳೆ ಬೆಳೆ ಸಮೃದ್ಧಿಯಾಗಲಿ ಎಂದು ಶುಭ ಹಾರೈಸಿದರು.

ಮೆರವಣಿಗೆಯಲ್ಲಿ ವೀರಗಾಸೆ ನೃತ್ಯ ಪ್ರದರ್ಶನವು ಸದ್ಭಕ್ತರು, ನೋಡುಗರ ಮನಸೂರೆಗೊಳ್ಳುವಂತೆ ಮಾಡಿದ್ದು ಅತ್ಯಂತ ವಿಶೇಷವಾಗಿತ್ತು.

ಈ ಸಂದರ್ಭದಲ್ಲಿ ವಾಲ್ಮೀಕಿ ಯುವಕ ಸಂಘ, ವೇಮನ ರೆಡ್ಡಿ ಸಂಘ, ಡಾ. ಬಿ.ಆರ್ ಅಂಬೇಡ್ಕರ್ ಯುವಕ ಸಂಘ, ವಿವಿಧ ಮಹಿಳಾ ಸಂಘಟನೆಗಳ ಎಲ್ಲ ಪದಾಧಿಕಾರಿಗಳು ಹಾಗೂ ಸದಸ್ಯರು, ಯುವಕರು ಮತ್ತು ಗ್ರಾಮದ ಮುಖಂಡರಾದ ದೊಡ್ಡ ಓಬಯ್ಯ, ಜಿ.ತಿಪ್ಪೇಸ್ವಾಮಿ, ಮಂಜಣ್ಣ, ರಾಜಣ್ಣ, ಸಣ್ಣ ತಿಪ್ಪಯ್ಯ,ವೆಂಕಟ ರೆಡ್ಡಿ, ಶಿವಾರೆಡ್ಡಿ, ಪ್ರೇಮ ಮೂರ್ತಿ, ಹನುಮಂತ ರೆಡ್ಡಿ, ನಿಂಗರೆಡ್ಡಿ, ಡಾ.ಮುನಿಸ್ವಾಮಿ ರೆಡ್ಡಿಸೋಮಶೇಖರ್ ರೆಡ್ಡಿ, ಬಾಲಯ್ಯ, ಒಬಣ್ಣ, ಬಸಯ್ಯ, ಪಾಲಯ್ಯ,ಗೋಪಣ್ಣ ರೈತರಾದ  ನಾಗರಾಜ್, ತಿಪ್ಪೇಸ್ವಾಮಿ, ಸೋಮಶೇಖರ್,

ಲಿಂಗಾರೆಡ್ಡಿಭೀಮರೆಡ್ಡಿ, ರುದ್ರಣ್ಣ, ಬಸವ ರೆಡ್ಡಿ, ಅಪ್ಪಾರೆಡ್ಡಿ, ಓಬಯ್ಯ, ಟಿ. ರಾಜಣ್ಣ, ಗ್ರಾಮ ಪಂಚಾಯಿತಿ ಸದಸ್ಯರಾದ ಎಸ್. ಟಿ. ರೇವಣ್ಣ, ಟಿ.ರಾಜಣ್ಣ, ದ್ರಾಕ್ಷಾಯಿಣಿ ನಾಗರಾಜ್, ಡಿ.ಓ ಲಕ್ಷ್ಮಿ , ಲಕ್ಷ್ಮೀದೇವಿ ತಿಪ್ಪೇಸ್ವಾಮಿ, ಸಣ್ಣ ನಾಗಯ್ಯ, ಎಂ.ಹೆಚ್ ತಿಪ್ಪೇಸ್ವಾಮಿ, ಪುಟ್ಟಣ್ಣ, ತಿಪ್ಪೇಸ್ವಾಮಿ, ಓಬಣ್ಣ, ಮಂಜಣ್ಣ, ಡಾ.ಮುನಿಸ್ವಾಮಿ ರೆಡ್ಡಿ, ವಿನಯ್ ಕುಮಾರ್ ಬಿ.ಎಂ, ಶಿವಕುಮಾರ್ ಭಾರಿ, ಮಲ್ಲಿಕಾರ್ಜುನಯ್ಯ.ಟಿ, ಲಿಂಗರಾಜ್.ಡಿ, ರುದ್ರಮುನಿ, ಮಂಜುನಾಥ್ ಎಂ.ಟಿ, ಭಿಮೇಶ್ ಶೆಟ್ಟಿ, ತಿಮ್ಮಶೆಟ್ಟಿ, ಶ್ರೀನಿವಾಸ್, ಮಂಜುನಾಥ್  ತಿಪ್ಪೇಸ್ವಾಮಿ, ಮುಂತಾದವರು ಉಪಸ್ಥಿತರಿದ್ದರು.

 

Advertisement

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಸಾಪ ಮಾಜಿ ಜಿಲ್ಲಾಧ್ಯಕ್ಷ, ಶಿಕ್ಷಣತಜ್ಞ ಡಾ. ಕೆ.ಎಂ. ವೀರೇಶ್ ಹೃದಯಾಘಾತದಿಂದ ನಿಧನದುರ್ಗಕ್ಕೆ ಹರಿದು ಬಂದ ಭದ್ರೆ- ಸೆ.24ರಂದು ಮುಖ್ಯಮಂತ್ರಿಗಳಿಂದ ಗಂಗಾಪೂಜೆ,  ಬೃಹತ್ ಸಾರ್ವಜನಿಕ ಸಮಾರಂಭಆರ್.ಎಲ್ ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ 22ನೇ ಘಟಿಕೋತ್ಸವ ಮತ್ತು ಪದವಿ ಪ್ರದಾನ ಕಾರ್ಯಕ್ರಮನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ ಬೈಕ್ ಸವಾರ ಸಾವುಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಸಭೆ ಹೋರಾಟಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಾತಿನಿಧ್ಯ ಕಡಿಮೆ- ಚಿಕ್ಕಪ್ಪನಹಳ್ಳಿ ಷಣ್ಮುಖಕುಂಚಿಟಿಗ ನೌಕರರ ಸಂಘಕ್ಕೆ ಸದಸ್ಯರಾಗಿ: ಎಸ್.ಕೆ ಲಕ್ಷ್ಮಣ್ಚಳವಳಿ ನೆನಪಾಗಿ ಉಳಿದ ‘ತೆಂಕ-ಬಡಗ’ಅಂತಾರಾಷ್ಟ್ರೀಯ ಶಾಂತಿ ದಿನ – ಮನದ ದ್ವೇಷ ಕರಗಿದಾಗಲೇ ಜಗದ ಶಾಂತಿ ಅರಳುವುದು!ಗಣಪತಿ ಮೆರವಣಿಗೆ ವೇಳೆ ಗಲಾಟೆ 7 ಯುವಕರ ವಿರುದ್ಧ ಸುಮೋಟೋ ಪ್ರಕರಣ ದಾಖಲು